ಕುಂದುವಾಡ ಕೆರೆ ಕಾಮಗಾರಿಯಲ್ಲೂ ಪರ್ಸಂಟೇಜ್‌ ದಂಧೆ

ನಾಲ್ಕು ವರ್ಷದಲ್ಲಿ ಬಿಜೆಪಿ ಒಂದಾದರೂ ಒಳ್ಳೆಯ ಕೆಲಸ ಮಾಡಿದ್ದರೆ ತೋರಿಸಲಿ

Team Udayavani, Apr 16, 2022, 11:32 AM IST

lake

ದಾವಣಗೆರೆ: ಕುಂದುವಾಡ ಕೆರೆ ಕಾಮಗಾರಿ ಗಮನಿಸಿದರೆ ಇಲ್ಲಿಯೂ 40 ಪರ್ಸೆಂಟೇಜ್‌ ದಂಧೆ ತಪ್ಪಿಲ್ಲ ಎಂದು ಕಾಣುತ್ತಿದೆ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ದೂರಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದುವಾಡ ಕೆರೆ ಅವ್ಯವಸ್ಥೆ ನೋಡಿ ನಿಜಕ್ಕೂ ಬೇಸರವಾಯಿತು.15 ಕೋಟಿ ಅನುದಾನದಲ್ಲಿ ಕೇವಲ ಎರಡು ಗುಂಡಿ ಅಗೆದಿದ್ದಾರೆ. ಕೆರೆಯ ಅಗಲ ಹಾಗೂ ಆಳ ಹೆಚ್ಚಿಸಲು ಪ್ರಾಮುಖ್ಯತೆ ಕೊಡದೆ ವಾಕ್‌ಪಾಥ್‌ ಹೆಚ್ಚಿಸಿದ್ದಾರೆ ಅಷ್ಟೇ. ಸ್ಟೋರೇಜ್‌ ಕೆಪಾಸಿಟಿ ಹೆಚ್ಚಳ ಮಾಡಿಲ್ಲ. ಇದನ್ನೆಲ್ಲ ಗಮನಿಸಿದರೆ ಇಲ್ಲಿಯೂ 40 ಪರ್ಸೆಂಟೇಜ್‌ ದಂಧೆ ತಪ್ಪಿಲ್ಲ ಎಂದು ಕಾಣುತ್ತಿದೆ ಎಂದು ದೂರಿದರು.

ಈಗಾಗಲೇ ಬೇಸಿಗೆ ಆರಂಭವಾಗಿದೆ. ಆದರೆ, ಕುಡಿಯುವ ನೀರಿನ ಪ್ರಮುಖ ಮೂಲ ಕುಂದವಾಡ ಕೆರೆಯಲ್ಲಿ ಕಾಮಗಾರಿ ವಿಳಂಬದಿಂದಾಗಿ ಜನ ತೊಂದರೆ ಅನುಭವಿಸುವಂತಾಗಿದೆ. ನಿತ್ಯ ವಾಯುವಿಹಾರಕ್ಕೆ ಬರುವವರಿಗೂ ಅನಾನುಕೂಲ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯವರು ಎಲ್ಲ ಕೆಲಸ ನಾವೇ ಮಾಡಿದ್ದೇವೆ ಎಂದು ಬೊಬ್ಬೆಹೊಡೆಯುತ್ತಾರೆ. ಅವರು ಯಾವ ಕೆಲಸ ಮಾಡಿದ್ದಾರೆ ಎಂಬುದನ್ನು ಬರೆದಿಡಲಿ. ನಾವು ಮಾಡಿರುವಂತಹ ಕೆಲಸಗಳೊಂದಿಗೆ ಬರುತ್ತೇವೆ. ಸುಮ್ಮನೆ ಏನೋ ಮಾತನಾಡುವುದಲ್ಲ. ನಾಲ್ಕು ವರ್ಷದಲ್ಲಿ ಯಾವುದಾದರೂ ಒಂದು ಒಳ್ಳೆಯ ಹೆಸರು ತರುವ ಕೆಲಸ ಮಾಡಿದ್ದಾರಾ ತೋರಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್‌ ಸರ್ಕಾರದ ಅವ ಧಿಯಲ್ಲಿನ ಕೆಲಸಗಳೇ ಇನ್ನೂ ಪೂರ್ಣಗೊಂಡಿಲ್ಲ. ನಮ್ಮ ಸರ್ಕಾರದಲ್ಲಿನ ಕೆಲಸಗಳನ್ನೇ ಪೂರ್ಣ ಮಾಡಲು ಆಗಿಲ್ಲ. ಜಲಸಿರಿ, ಯುಜಿಡಿ ಸಮಸ್ಯೆ, ಅಂಡರ್‌ ಗ್ರೌಂಡ್‌ ಕೇಬಲ್‌, ನೀರಿನ ಸಮಸ್ಯೆ ನೀಗಿಲ್ಲ. ರಸ್ತೆ ಹಾಳುಮಾಡುತ್ತಿದ್ದಾರೆ ಸ್ಮಾರ್ಟ್‌ ಸಿಟಿ ಕೆಲಸ ಎಂದು ಹಿಂದಿನ ಕಾಮಗಾರಿಗೆ ಬೋರ್ಡ್‌ ಹಾಕಿಸಿ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಹಿಂದೆ ದಾವಣಗೆರೆಯನ್ನು ನೋಡಿಹೋದವರು ನಮ್ಮೂರನ್ನು ಇದೇ ರೀತಿ ಅಭಿವೃದ್ಧಿ ಮಾಡಬೇಕು ಎನ್ನುತ್ತಿದ್ದರು. ಆದರೆ, ಇವಾಗ ದಾವಣಗೆರೆ ರಸ್ತೆ ಗುಂಡಿಗಳ ನಗರವಾಗಿದೆ. ನಮ್ಮ ಅ ಧಿಕಾರವಧಿಯಲ್ಲಿ ಎಲ್ಲಾ ಖಾತೆಗೂ ಸಮರ್ಪಕ ಅನುದಾನ ಹಂಚಿಕೆಮಾಡಿ ಕೆಲಸ ಮಾಡಲಾಗುತ್ತಿತ್ತು. ಬಿಜೆಪಿ ಸರ್ಕಾರ ಎಲ್ಲವನ್ನೂ ಹಾಳುಮಾಡಿದೆ. ಇಂದಿರಾ ಕ್ಯಾಂಟೀನ್‌ ಬಂದ್‌ ಮಾಡಲಾಗಿದೆ. ಅ ಧಿಕಾರಿಗಳ ಮೇಲೆ ನಿಯಂತ್ರಣವೇ ಇಲ್ಲ. ಚಾಟಿ ಹಿಡಿದವರೇ ಮೇಯಲು ಹೊರಟರೆ ಉಳಿದವರು ಯಾವ ದಾರಿ ಹಿಡಿಯಲು ಸಾಧ್ಯ ಎಂದು ಖಾರವಾಗಿ ಪ್ರಶ್ನಿಸಿದರು.

ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್‌. ಮಂಜುನಾಥ್‌ ಗಡಿಗುಡಾಳ್‌, ಸದಸ್ಯ ಎ. ನಾಗರಾಜ್‌, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಶೆಟ್ಟಿ, ಗಣೇಶ್‌ ಹುಲ್ಲುಮನಿ ಇತರರು ಇದ್ದರು.

ಟಾಪ್ ನ್ಯೂಸ್

ಮೇಜರ್‌ ಕ್ರೈಂ ಮಾನಿಟರಿಂಗ್‌ ಸೆಲ್‌ ಸ್ಥಾಪನೆ: ಕಮಿಷನರ್‌

ಮೇಜರ್‌ ಕ್ರೈಂ ಮಾನಿಟರಿಂಗ್‌ ಸೆಲ್‌ ಸ್ಥಾಪನೆ: ಕಮಿಷನರ್‌

ಸ್ವಂತ ಮನೆಯಲ್ಲೇ ಯುವತಿಯಿಂದ ಕಳವು

ಸ್ವಂತ ಮನೆಯಲ್ಲೇ ಯುವತಿಯಿಂದ ಕಳವು

ಮತ್ತೆ ಆರೆಂಜ್‌ ಅಲರ್ಟ್‌; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಮತ್ತೆ ಆರೆಂಜ್‌ ಅಲರ್ಟ್‌; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

6 ತಿಂಗಳಲ್ಲಿ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ನಡೆಸಲು ಜೋ ಬೈಡೆನ್‌ ಅವರಿಗೆ ಶಿಫಾರಸು

6 ತಿಂಗಳಲ್ಲಿ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ನಡೆಸಲು ಜೋ ಬೈಡೆನ್‌ ಅವರಿಗೆ ಶಿಫಾರಸು

ಅಂತ್ಯಸಂಸ್ಕಾರಕ್ಕೆ ತೆರಳಿ ಹಿಂದಿರುಗುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು

ಅಂತ್ಯಸಂಸ್ಕಾರಕ್ಕೆ ತೆರಳಿ ಹಿಂದಿರುಗುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು

ಕ್ಷೀರಭಾಗ್ಯ ಹಾಲಿನ ಪುಡಿ ಪ್ಯಾಕೆಟ್‌ ತ್ಯಾಜ್ಯವಾಗಿ ಪತ್ತೆ

ಕ್ಷೀರಭಾಗ್ಯ ಹಾಲಿನ ಪುಡಿ ಪ್ಯಾಕೆಟ್‌ ತ್ಯಾಜ್ಯವಾಗಿ ಪತ್ತೆ

ಮನೆಯಲ್ಲಿ ಮಲಗಿದ್ದಾಗ ಬೆಂಕಿ ತಗಲಿ ವ್ಯಕ್ತಿ ಸಾವು

ಮನೆಯಲ್ಲಿ ಮಲಗಿದ್ದಾಗ ಬೆಂಕಿ ತಗಲಿ ವ್ಯಕ್ತಿ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

renukacharya

ಸನಾತನ ಧರ್ಮ-ಸಂಸ್ಕೃತಿ ಉಳಿಸಿ ಬೆಳೆಸಿ

faculty

ಉದ್ಯಮಶೀಲತೆ ಬೆಳವಣಿಗೆಗೆ ಎನ್‌ಇಪಿ ಪೂರಕ

smm

ಎಸ್ಸೆಸ್ಸೆಂ ವಿರುದ್ಧ ಮಾತಾಡಲು ಮೇಯರ್‌ಗೆ ನೈತಿಕತೆ ಇಲ್ಲ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

mayor

ಎಸ್ಸೆಸ್ಸೆಂ ಹೇಳಿಕೆ ಹಾಸ್ಯಾಸ್ಪದ: ಮೇಯರ್‌

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

ಹೊಸ ಸೇರ್ಪಡೆ

ಮೇಜರ್‌ ಕ್ರೈಂ ಮಾನಿಟರಿಂಗ್‌ ಸೆಲ್‌ ಸ್ಥಾಪನೆ: ಕಮಿಷನರ್‌

ಮೇಜರ್‌ ಕ್ರೈಂ ಮಾನಿಟರಿಂಗ್‌ ಸೆಲ್‌ ಸ್ಥಾಪನೆ: ಕಮಿಷನರ್‌

ಸ್ವಂತ ಮನೆಯಲ್ಲೇ ಯುವತಿಯಿಂದ ಕಳವು

ಸ್ವಂತ ಮನೆಯಲ್ಲೇ ಯುವತಿಯಿಂದ ಕಳವು

ಮತ್ತೆ ಆರೆಂಜ್‌ ಅಲರ್ಟ್‌; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಮತ್ತೆ ಆರೆಂಜ್‌ ಅಲರ್ಟ್‌; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

6 ತಿಂಗಳಲ್ಲಿ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ನಡೆಸಲು ಜೋ ಬೈಡೆನ್‌ ಅವರಿಗೆ ಶಿಫಾರಸು

6 ತಿಂಗಳಲ್ಲಿ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ನಡೆಸಲು ಜೋ ಬೈಡೆನ್‌ ಅವರಿಗೆ ಶಿಫಾರಸು

ಅಂತ್ಯಸಂಸ್ಕಾರಕ್ಕೆ ತೆರಳಿ ಹಿಂದಿರುಗುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು

ಅಂತ್ಯಸಂಸ್ಕಾರಕ್ಕೆ ತೆರಳಿ ಹಿಂದಿರುಗುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.