ಮತ ಸಮರಕ್ಕೆ ನಾವ್‌ ರೆಡಿ


Team Udayavani, Mar 12, 2019, 9:45 AM IST

dvg-1.jpg

ದಾವಣಗೆರೆ: 17ನೇ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ ಬೆನ್ನಲ್ಲೆ ದಾವಣಗೆರೆ ಕ್ಷೇತ್ರದಲ್ಲೂ ನಡೆಯಲಿರುವ ಪ್ರಕ್ರಿಯೆಗೆ ಜಿಲ್ಲಾ ಚುನಾವಣಾ ಕಾರ್ಯಾಲಯ ಸಕಲ ಸಿದ್ಧತೆ ಕೈಗೊಂಡಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಸಿದ್ಧತೆ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ
ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಡಿಸಿ ಜಿ.ಎನ್‌. ಶಿವಮೂರ್ತಿ, ಜಿಲ್ಲೆಯಲ್ಲಿ ಏ. 23ರಂದು ನಡೆಯಲಿರುವ
ಚುನಾವಣೆಗೆ ಮಾ. 28ರಂದು ಅಧಿಸೂಚನೆ ಹೊರಡಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ಇದೆ.

ಏಪ್ರಿಲ್‌ 4 ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ಏ.5 ನಾಮಪತ್ರ ಪರಿಶೀಲನೆ, ಏ.8 ಉಮೇದುವಾರಿಕೆ ಹಿಂಪಡೆಯಲು ಕಡೇ ದಿನ. ಏಪ್ರಿಲ್‌ 23ರಂದು ಮತದಾನದ ನಂತರ ಮೇ 23ರಂದು ಮತಗಳ ಎಣಿಕೆ ನಡೆಯಲಿದೆ.

ಚುನಾವಣೆ ಶಾಂತಿಯುತವಾಗಿ ನಡೆಯಲು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಬ್ಬರಂತೆ ಸಹಾಯಕ ಚುನಾವಣಾಧಿಕಾರಿ ನೇಮಿಸಲಾಗಿದೆ ಎಂದರು.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮಾ. 10ರಿಂದಲೇ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ ರಾಜಕೀಯ ಪಕ್ಷಗಳು ಹಾಗೂ ಚುನಾಯಿತ ಪ್ರತಿನಿಧಿಗಳು ನೀತಿ ಸಂಹಿತೆ ಪಾಲಿಸಲು ಕೋರಿದ ಅವರು, ಯಾವುದೇ ರೀತಿಯಲ್ಲೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವಂತೆ ಜಿಲ್ಲೆಯ  ಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಕಳೆದ ಮಾ.10ರ ವರೆಗೆ ಜಿಲ್ಲೆಯಲ್ಲಿ 8,14,413 ಪುರುಷರು ಹಾಗೂ 7,96,874 ಮಹಿಳೆಯರು ಹಾಗೂ ಇತರರು ಸೇರಿ 16,11,965 ಮಂದಿ ಮತದಾನಕ್ಕೆ ನೋಂದಾಯಿಸಿದ್ದಾರೆ. 

ಮತದಾರರು ಎಪಿಕ್‌ ಕಾರ್ಡ್‌ ಹೊಂದಿದ ಮಾತ್ರಕ್ಕೆ ಮತ ಚಲಾಯಿಸಲು ಅರ್ಹರಲ್ಲ. ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯ ಎಂದು ಅವರು ಹೇಳಿದರು. ಜಿಲ್ಲೆಯಾದ್ಯಂತ ಚುನಾವಣಾ ಪ್ರಚಾರಕ್ಕಾಗಿ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್‌ಗಳನ್ನ ತೆರವುಗೊಳಿಸಲು ತಂಡ ರಚಿಸಲಾಗಿದೆ. ಸರ್ಕಾರಿ ವಾಹನಗಳನ್ನು ಅಧಿಗ್ರಹಿಸಿಕೊಳ್ಳಲಾಗಿದೆ. ಜಿಲ್ಲೆ ಯಲ್ಲಿನ ಸರ್ಕಾರಿ, ಅರೆ ಸರ್ಕಾರಿ, ನಿಗಮ ಮತ್ತು ಸಂಘ-ಸಂಸ್ಥೆಗಳಿಗೆ ಸಂಬಂಧಿಸಿದ ಪ್ರವಾಸಿ ಮಂದಿರ/ಅತಿಥಿ ಗೃಹ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು. ಸ್ವೀಪ್‌ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ ಸಿಇಓ ಎಚ್‌.ಬಸವರಾಜೇಂದ್ರ, ಎಡಿಸಿ ಪದ್ಮ ಬಸವಂತಪ್ಪ ಉಪಸ್ಥಿತರಿದ್ದರು.

ಈ ಕಾರ್ಯಗಳಿಗೆ ನಿರ್ಬಂಧ ಜನಪ್ರತಿನಿಧಿಗಳು ಯಾವುದೇ ಯೋಜನೆ ಶಂಕು ಸ್ಥಾಪನೆ ನೆರವೇರಿಸುವಂತಿಲ್ಲ. ವ್ಯಕ್ತಿ ಅಥವಾ ಸಮುದಾಯಕ್ಕೆ ಆರ್ಥಿಕ ನೆರವನ್ನು ಯಾವುದೇ ರೂಪದಲ್ಲಿ ಒದಗಿಸುವ ಆಶ್ವಾಸನೆಗೆ ಅವಕಾಶ ಇಲ್ಲ. ಶಾಸಕರು ಅಥವಾ ಇತರೆ ಯಾವುದೇ ಪ್ರಾಧಿಕಾರ ತನ್ನ ವಿವೇಚನಾಧಿಕಾರ ಬಳಸಿ, ನಗದು/ ವೆಚ್ಚ ಭರಿಸುವುದಾಗಿ ಭರವಸೆ ನೀಡಕೂಡದು. ಜನಪ್ರತಿನಿಧಿಗಳು ರಸ್ತೆ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಲು ಅವಕಾಶ ಇರುವುದಿಲ್ಲ. ಮತದಾರ ಅಥವಾ ಅಭ್ಯರ್ಥಿ ಆಗಿರದ ಹೊರತು ಕೇಂದ್ರ ಇಲ್ಲವೇ ರಾಜ್ಯದ ಸಚಿವರು ಯಾವುದೇ ಮತಗಟ್ಟೆ, ಮತ ಎಣಿಕಾ ಕೇಂದ್ರದೊಳಗೆ ಪ್ರವೇಶಿಸುವಂತಿಲ್ಲ.

ಧರ್ಮ, ಭಾಷೆ, ಜಾತಿ ಆಧರಿಸಿ ಮತಯಾಚಿಸಕೂಡದು. ದೇವಸ್ಥಾನ, ಚರ್ಚ್‌, ಮಸೀದಿ, ಇನ್ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಯಾವುದೇ ರಾಜಕೀಯ ಪಕ್ಷದ ಯೋಜನೆ, ಕಾರ್ಯಕ್ರಮ, ಪೂರ್ವಾಪರ ಹಿನ್ನೆಲೆ ಅಥವಾ ಕೆಲಸಗಳಿಗೆ ಮಾತ್ರ ಟೀಕೆ ಸಿಮೀತವಾಗಿರಬೇಕು. ಸಾರ್ವಜನಿಕ ಚಟುವಟಿಕೆಗೆ ಸಂಬಂಧಿಸಿದ ಯಾವುದೇ ವ್ಯಕ್ತಿ, ಪಕ್ಷದ ಕಾರ್ಯಕರ್ತರ ಖಾಸಗಿ ಜೀವನ ಗುರಿಯಾಗಿಟ್ಟುಕೊಂಡು ಚುನಾವಣಾ ಪ್ರಚಾರ ನಡೆಸುವಂತಿಲ್ಲ. ಯಾವುದೇ ಖಾಸಗಿ ವ್ಯಕ್ತಿಗೆ ಸಂಬಂಧಿಸಿದ ಆವರಣ, ಕಟ್ಟಡ, ಇತರೆಡೆ ಮೇಲೆ ಮಾಲೀಕರ ಲಿಖೀತ ಅನುಮತಿ ಪಡೆಯದೇ ಬಾವುಟ, ಬ್ಯಾನರ್‌, ಬಂಟಿಂಗ್‌, ಗೋಡೆ ಬರಹಕ್ಕೆ ನಿರ್ಬಂಧ ವಿಧಿಸಲಾಗಿದೆ.

ಈ ಬಾರಿ ಮತದಾರರು-ಮತಗಟ್ಟೆ 
ದಾವಣಗೆರೆ: ಈ ಬಾರಿ ಒಟ್ಟು 16,1, 965 ಮತದಾರರು ನೋಂದಾಯಿಸಿಕೊಂಡಿದ್ದು, ಕಳೆದ ಬಾರಿಗಿಂತ 1,18,143 ಮತದಾರರು ಹೆಚ್ಚಾಗಿದ್ದಾರೆ. 2014ರ ಚುನಾವಣೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 14,93,822 ಮತದಾರರಿದ್ದರು.
ಅದರಲ್ಲಿ 7,58,904 ಪುರುಷರು ಹಾಗೂ 7,34,918 ಮಹಿಳಾ ಮತದಾರರಿದ್ದರು. 

ಮತದಾರರ ನೋಂದಣಿ ಹಾಗೂ ಮತದಾನದ ಮಹತ್ವ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸ್ವೀಪ್‌ ಅನುಷ್ಠಾನ ಮೂಲಕ 2018ರ ಅಕ್ಟೋಬರ್‌ 10ರಿಂದ ಜಿಲ್ಲೆಯಲ್ಲಿ ಒಟ್ಟು 22,419 ಮತದಾರರು ನೋಂದಾಯಿಸಿಕೊಂಡಿದ್ದು, 26,136 ಮತದಾರರ ಹೆಸರನ್ನು ತೆಗೆದು ಹಾಕಲಾಗಿದೆ. ಇನ್ನು 2019ರ ಜನವರಿ 16ರಿಂದ ಮಾ. 10ರ ವರೆಗೆ ನಡೆಸಿದ ಕಾರ್ಯಕ್ರಮದ ಮೂಲಕ 12,675 ಮತದಾರರು ಸೇರ್ಪಡೆಯಾಗಿದ್ದು, 3396 ಮಂದಿಯನ್ನು ತೆಗೆದುಹಾಕಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ
ಜಿ. ಎನ್‌. ಶಿವಮೂರ್ತಿ ತಿಳಿಸಿದ್ದಾರೆ.

ಮತಗಟ್ಟೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 1896 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಬಾರಿ 1949 ಮತಗಟ್ಟೆ ಸ್ಥಾಪಿಸಲಾಗುವುದು. ಅಲ್ಲದೇ ಇನ್ನೂ 8 ಹೆಚ್ಚು ಮತಗಟ್ಟೆ ಸ್ಥಾಪನೆಗೆ ಚುನಾವನಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೀಗಿದೆ ಚುನಾವಣಾ ತಯಾರಿ…. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ
ಅಧಿಕಾರಿಗಳು ಮತ್ತು ಚುನಾವಣಾ ಕಾರ್ಯಕ್ಕೆ ನೇಮಕಗೊಂಡಿರುವ ಅಧಿಕಾರಿ/ಸಿಬ್ಬಂದಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ರಜೆ ಮೇಲೆ ತೆರಳುವಂತಿಲ್ಲ. ಅಲ್ಲದೆ ಕೇಂದ್ರ ಸ್ಥಾನ ಬಿಡಬೇಕಾದಲ್ಲಿ ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ. 

„ ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಭ್ಯರ್ಥಿ ವೆಚ್ಚದ ಮಿತಿಯನ್ನ 70 ಲಕ್ಷ ರೂ. ನಿಗದಿಪಡಿಸಿದೆ. ಅಭ್ಯರ್ಥಿ ಚುನಾವಣಾ ವೆಚ್ಚಗಳ ವಿವರ ನೋಡಿಕೊಳ್ಳಲು ಹೆಚ್ಚುವರಿಯಾಗಿ ಏಜೆಂಟರನ್ನ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

„ ಮತದಾನ ದಿನ ಎಲ್ಲಾ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳು, ಅವರ ಪ್ರಾಧೀಕೃತ ಕಾರ್ಯಕರ್ತರು ಭಾವಚಿತ್ರ ಇರುವ ಗುರುತಿನ ಚೀಟಿ ಧರಿಸಿರಬೇಕು. ಮತದಾರರಿಗೆ ನೀಡುವ ಚೀಟಿಗಳಲ್ಲಿ ಅಭ್ಯರ್ಥಿಯ ಚಿಹ್ನೆ, ಹೆಸರು, ಪಕ್ಷದ ಹೆಸರು ನಮೂದಿಸಬಾರದು.

„ ಮತಗಟ್ಟೆ 200 ಮೀಟರ್‌ ವ್ಯಾಪ್ತಿಯೊಳಗೆ ರಾಜಕೀಯ ಪಕ್ಷ, ಅಭ್ಯರ್ಥಿ ತೆರೆಯುವ ಅನಧಿಕೃತ ಗುರುತಿನ ಚೀಟಿ ನೀಡುವ ಸ್ಥಳದಲ್ಲಿ ಗುಂಪು ಸೇರಕೂಡದು. ಆ ಸ್ಥಳದಲ್ಲಿ ಪೋಸ್ಟರ್‌, ಬಾವುಟ, ಚಿಹ್ನೆ, ಇತರೆ ಪ್ರಚಾರ ಸಾಮಗ್ರಿ ಪ್ರದರ್ಶಿಸತಕ್ಕದ್ದಲ್ಲ. ಅಲ್ಲಿಗೆ ಯಾವುದೇ ಆಹಾರ ಸಾಮಗ್ರಿ ಸರಬರಾಜಿಗೆ ನಿರ್ಬಂಧ ಇದೆ.

„ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಎಲ್ಲಾ ಮತದಾರರಿಗೆ ಭಾವಚಿತ್ರ ಇರುವ ಚೀಟಿಯನ್ನ ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ವಿತರಿಸಲಾಗುವುದು.

ಪ್ರಚಾರ ವಾಹನಕ್ಕೆ ಪರವಾನಿಗೆ ಚುನಾವಣಾ ಪ್ರಚಾರಕ್ಕಾಗಿ ಬಳಸಲಿರುವ ಎಲ್ಲಾ ವಾಹನಗಳಿಗೆ ಅಭ್ಯರ್ಥಿಯು ಚುನಾವಣಾಧಿಕಾರಿಯಿಂದ ಪರವಾನಿಗೆ ಪಡೆಯುವುದು ಕಡ್ಡಾಯ. ಚುನಾವಣಾಧಿಕಾರಿ ನೀಡುವ ಪರವಾನಿಗೆ ಮೂಲಪ್ರತಿಯನ್ನ ವಾಹನದ ಮುಂಭಾಗದಲ್ಲಿ ಪ್ರದರ್ಶಿಸಬೇಕು. ಪರವಾನಿಗೆ ಪಡೆಯದೇ ವಾಹನ ಬಳಸಿದಲ್ಲಿ ಅಂತಹ ವಾಹನಗಳನ್ನು ಪ್ರಚಾರದಿಂದ
ಹೊರಗಿಡಲಾಗುವುದು.

47 ಚೆಕ್‌ ಪೋಸ್ಟ್‌ ಹೆಚ್ಚು ಮೊತ್ತದ ನಗದು, ಅನಧಿಕೃತ ಮದ್ಯ, ಅನುಮಾನಾಸ್ಪದ ವಸ್ತು, ಶಸ್ತ್ರಾಸ್ತ್ರ ಸಾಗಣೆ ಪರಿಶೀಲನೆಗೆ 47 ಚೆಕ್‌ ಪೋಸ್ಟ್‌ಗಳಲ್ಲಿ ಸ್ಟಾಟಿಕ್‌ ಸರ್ವೇಯಲೆನ್ಸ್‌ ಟೀಮ್‌ ರಚಿಸಲಾಗಿದೆ.

ಫ್ಲೈಯಿಂಗ್‌ ಸ್ಕ್ವಾಡ್‌….
ಚುನಾವಣೆಗೆ ಸಂಬಂಧಿಸಿದಂತೆ ಮತದಾರರಿಗೆ ಆಮಿಷ ಒಡ್ಡುವುದು, ಅನಧಿಕೃತ ಮದ್ಯಮಾರಾಟ, ಹಂಚಿಕೆ ತಡೆಯುವ ಸಲುವಾಗಿ ಪ್ರತಿ ಪೊಲೀಸ್‌ ಠಾಣೆಗೆ ಒಂದರಂತೆ ಪೊಲೀಸ್‌ ಅಧಿಕಾರಿ ನೇತೃತ್ವದಲ್ಲಿ 25 ಫ್ಲೈಯಿಂಗ್‌ ಸ್ವಾRಡ್‌ಗಳನ್ನ ರಚಿಸಲಾಗಿದ್ದು, ಆ ತಂಡಗಳು ದಿನ 24 ಗಂಟೆಯೂ ಕಾರ್ಯನಿರ್ವಹಿಸಲಿವೆ. 

ದೂರಿಗೆ ಕಾಲ್‌ ಸೆಂಟರ್‌ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಿಗೆ ಆಮಿಷವೊಡ್ಡುವುದು, ಮದ್ಯ ಪೂರೈಕೆ, ಹಣ ಹಂಚಿಕೆ, ಇತ್ಯಾದಿಗಳ ಬಗ್ಗೆ ಸಾರ್ವಜನಿಕರು ದೂರು ನೀಡಲು ಈಗಾಗಲೇ ಜಿಲ್ಲಾ ಚುನಾವಣಾ ಕಚೇರಿಯಲ್ಲಿ ಎಕ್ಸ್‌ಪೆಂಡೇಚರ್‌ ಮಾನಿಟರಿಂಗ್‌ ಕಂಟ್ರೋಲ್‌ ರೂಂ ಮತ್ತು ಕಾಲ್‌ ಸೆಂಟರ್‌ ಈಗಾಗಲೇ ಪ್ರಾರಂಭಿಸಲಾಗಿದೆ. ಮತದಾರರ ಪಟ್ಟಿ, ವೆಚ್ಚಗಳಿಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ದೂರುಗಳಿಗೆ ಸಾರ್ವಜನಿಕರು ಟೋಲ್‌ ಪ್ರೀ ಸಂಖ್ಯೆ 1950ಕ್ಕೆ ಕರೆ ಮಾಡಬಹುದು. ಕಾಲ್‌ ಸೆಂಟರ್‌ನಲ್ಲಿ ಉಸ್ತುವಾರಿ ಅಧಿಕಾರಿ ನೇಮಿಸಲಾಗಿದ್ದು, ದೂರವಾಣಿ ಸಂಖ್ಯೆ 08192-272953ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು.

ಟಾಪ್ ನ್ಯೂಸ್

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ

kannada news films

ಬಿಡುಗಡೆಗೆ ರೆಡಿಯಾಗಿವೆ ಸಾಲು ಸಾಲು ಸಿನಿಮಾಗಳು…

ಪೆಗಾಸಸ್ ಗೂಢಚರ್ಯೆ; ಸ್ವತಂತ್ರ ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್

ಪೆಗಾಸಸ್ ಗೂಢಚರ್ಯೆ; ಸ್ವತಂತ್ರ ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್

kotigobba 3

ಸಲಗ, ಕೋಟಿಗೊಬ್ಬ-3 ಸಕ್ಸಸ್‌ ಸಂಭ್ರಮ

ಮಕ್ಕಳಿಗೆ ಲಸಿಕೆ ಸುರಕ್ಷಿತವೇ? ಅನುಮಾನಕ್ಕೆ ಪರಿಹಾರ

ಮಕ್ಕಳಿಗೆ ಲಸಿಕೆ ಸುರಕ್ಷಿತವೇ? ಅನುಮಾನಕ್ಕೆ ಪರಿಹಾರ

ಕೋವಿಡ್ 19 ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಳ; ಬಂಗಾಳ ನಗರದಲ್ಲಿ ಲಾಕ್ ಡೌನ್ ಜಾರಿ

ಕೋವಿಡ್ 19 ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಳ; ಬಂಗಾಳ ನಗರದಲ್ಲಿ ಲಾಕ್ ಡೌನ್ ಜಾರಿ

ಕೆ.ಜಿ.ಎಫ್‌ ಬೆಡಗಿ ರವೀನಾಗೆ ಪಾರ್ಟಿ ಅಂದ್ರೆ ಅಗೋದಿಲ್ವಂತೆ!

ಕೆ.ಜಿ.ಎಫ್‌ ಬೆಡಗಿ ರವೀನಾಗೆ ಪಾರ್ಟಿ ಅಂದ್ರೆ ಅಗೋದಿಲ್ವಂತೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanagere news

ಬೆಳಕಿನ ಹಬ್ಬದಲ್ಲಿ ಹಸಿರು ಪಟಾಕಿ ಬಳಸಿ

davanagere news

ಸ್ಪಚ್ಛತೆಯಿಂದ ರೋಗ ಮುಕ್ತ ಸಮಾಜ ನಿರ್ಮಾಣ

ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಮನವಿ

ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಮನವಿ

17hubballi

ದಾರ್ಶನಿಕರನ್ನು ಜಾತಿಗೆ ಸೀಮಿತ ಮಾಡಬೇಡಿ

23dvg1

ಅನ್ಯಭಾಷೆ ನಾಮಫಲಕ ತೆರವುಗೊಳಿಸದಿದ್ರೆ ಹೋರಾಟ: ರಾಮೇಗೌಡ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ

11kaluve

ಹೂಳು; ಕಾಲುವ್ಯಾಗ ನೀರು ಹೆಂಗ್‌ ಹರಿತಾದ್ರಿ?

10flood

ಬೀದರ ಈಗ ಪ್ರವಾಹ ಪೀಡಿತ ಜಿಲ್ಲೆ!

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎಲ್‌ಇಡಿ ಲೈಟ್ ಅಳವಡಿಕೆಗೆ ಪ್ರಾಯೋಗಿಕ ಚಾಲನೆ

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎಲ್‌ಇಡಿ ಲೈಟ್ ಅಳವಡಿಕೆಗೆ ಪ್ರಾಯೋಗಿಕ ಚಾಲನೆ

kannada news films

ಬಿಡುಗಡೆಗೆ ರೆಡಿಯಾಗಿವೆ ಸಾಲು ಸಾಲು ಸಿನಿಮಾಗಳು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.