ಕಳ್ಳರ ಬಂಧನ: ಚಿನ್ನ-ಬೆಳ್ಳಿ ಆಭರಣ, ಬೈಕ್‌ ವಶ

Team Udayavani, Feb 17, 2017, 1:08 PM IST

dvg3.jpg

ದಾವಣಗೆರೆ: ಹಾವೇರಿ ಜಿಲ್ಲೆಯ ಬ್ಯಾಡಗಿ, ಹಂಸಭಾವಿ, ದಾವಣಗೆರೆಯ ಬಡಾವಣೆ ಪೊಲೀಸ್‌ ಠಾಣೆ ವ್ಯಾಪ್ತಿಯ ಮನೆ ಹಾಗೂ ಬೈಕ್‌ ಕಳವು ಸಂಬಂಧಿಸಿದಂತೆ ಐವರನ್ನು ಬಂಧಿಸಿರುವ ಬಡಾವಣೆ ಠಾಣೆ ಪೊಲೀಸರು, ಆರೋಪಿಗಳಿಂದ ಚಿನ್ನ-ಬೆಳ್ಳಿ ಆಭರಣ, 2 ಬೈಕ್‌ ವಶಪಡಿಸಿಕೊಂಡಿದ್ದಾರೆ. 

ಪ್ರಕರಣಗಳಿಗೆ ಸಂಬಂಧಿಸಿದಂತೆ ಮಲೇಬೆನ್ನೂರು ವಾಸಿ ನಾಗರಾಜ್‌ ಅಲಿಯಾಸ್‌ ಬಳ್ಳಾರಿ ನಾಗ (25), ಬ್ಯಾಡಗಿ ತಾಲೂಕಿನ ಕದರಮಂಡಲಗಿಯ ಸಿದ್ದು ಉಜ್ಜಿನಿ (21), ಶಿವರಾಜನಾಯ್ಕರ್‌ ಹಾಗೂ ಕದ್ದ  ವಸ್ತುಗಳನ್ನು ಖರೀದಿಸಿದ್ದ ರಾಣಿಬೆನ್ನೂರಿನ ಚಂದ್ರಶೇಖರ್‌ ಅಂಬಲಿ, ಹಾಲಪ್ಪ ಶಿವಪ್ಪ ಮಾಳಗಿ ಬಂಧಿತ ಆರೋಪಿಗಳು. 

ಬಂಧಿತರಿಂದ ಒಟ್ಟು 5,13, 580 ರೂಪಾಯಿ ಮೌಲ್ಯದ 189 ಗ್ರಾಂ ಚಿನ್ನ, 682 ಗ್ರಾಂ ತೂಕದ ಬೆಳ್ಳಿ ಆಭರಣ, 2 ಬೈಕ್‌ ವಶಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದಾಗಿ ಹಂಸಭಾವಿ ಠಾಣೆಯಲ್ಲಿ ವ್ಯಾಪ್ತಿಯಲ್ಲಿ  4, ಬ್ಯಾಡಗಿ ಠಾಣಾ ವ್ಯಾಪ್ತಿಯಲ್ಲಿ 2 ಮನೆಗಳ್ಳತನ ಹಾಗೂ ದಾವಣಗೆರೆಯ ಬಡಾವಣೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಒಂದು ಬೈಕ್‌ ಕಳ್ಳತನ ಪ್ರಕರಣ ಪತ್ತೆಯಾಗಿವೆ.

ಆರೋಪಿ  ನಾಗರಾಜ್‌ ಅಲಿಯಾಸ್‌ ಬಳ್ಳಾರಿ ನಾಗ ಈ ಹಿಂದೆ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಡಾವಣೆ ಪೊಲೀಸ್‌ ಠಾಣೆಯ ಪಿಎಸ್‌ ಐಗಳಾದ ಡಿ.ಎಂ. ಭವ್ಯ, ವೈ.ಎಸ್‌. ಶಿಲ್ಪ ಸಿಬ್ಬಂದಿ ದಾವಣಗೆರೆಯ ರಿಂಗ್‌ ರಸ್ತೆಯಲ್ಲಿ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ನಂಬರ್‌ ಪ್ಲೇಟ್‌ ಇಲ್ಲದ ಬಂದ ಇಬ್ಬರು ಬೈಕ್‌ ಸವಾರರನ್ನು ವಿಚಾರಣೆಗೆ  ಒಳಪಡಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತು. 

ಇಬ್ಬರನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಮತ್ತೂಬ್ಬ ಕಳ್ಳ ಶಿವರಾಜನಾಯ್ಕರ್‌ ಹಾಗೂ ಕದ್ದ ವಸ್ತುಗಳನ್ನು ಖರೀದಿಸಿದ್ದ ರಾಣಿಬೆನ್ನೂರಿನ ಚಂದ್ರಶೇಖರ್‌ ಅಂಬಲಿ, ಹಾಲಪ್ಪ ಶಿವಪ್ಪ ಮಾಳಗಿ ಬಗ್ಗೆ ಮಾಹಿತಿ ನೀಡಿದ್ದರು. ಅದರ ಆಧಾರದಂತೆ ಎಲ್ಲರನ್ನೂ ಬಂಧಿಸಲಾಗಿದೆ ಎಂದರು. ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಯಶೋಧಾ ಎಸ್‌. ವಂಟಿಗೋಡಿ, ನಗರ  ಪೊಲೀಸ್‌ ಉಪಾಧೀಕ್ಷಕ ಕೆ. ಅಶೋಕ್‌ಕುಮಾರ್‌, ವೃತ್ತ ನಿರೀಕ್ಷಕ ಸಂಗನಾಥ್‌, ಪಿಎಸ್‌ಐಗಳಾದ ಡಿ.ಎಂ. ಭವ್ಯ, ವೈ.ಎಸ್‌. ಶಿಲ್ಪ ಸುದ್ದಿಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

Kaup ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಸ್ವರ್ಣ ಗದ್ದುಗೆ ಸ್ವರ್ಣ ಸಮರ್ಪಣೆಗೆ ಚಾಲನೆ

Kaup ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಣೆಗೆ ಚಾಲನೆ

T20 World Cup:‌ ಬಾಂಗ್ಲಾ ವಿರುದ್ಧ ಗೆದ್ದು ಸೆಮಿಫೈನಲ್‌ ಗೇರಿದ ಅಘ್ಘಾನ್; ಆಸೀಸ್‌ಗೆ ಆಘಾತ

T20 World Cup:‌ ಬಾಂಗ್ಲಾ ವಿರುದ್ಧ ಗೆದ್ದು ಸೆಮಿಫೈನಲ್‌ ಗೇರಿದ ಅಘ್ಘಾನ್; ಆಸೀಸ್‌ಗೆ ಆಘಾತ

ಮಲ್ನಾಡ್ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್ ಹೃದಯಘಾತದಿಂದ ನಿಧನ

ಮಲ್ನಾಡ್ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್ ಹೃದಯಘಾತದಿಂದ ನಿಧನ

Beejadi: 7 ದಿನದ ಹಿಂದೆ ಸಮುದ್ರ ಪಾಲಾಗಿದ್ದ ತುಮಕೂರು ಮೂಲದ ಯುವಕನ ಶವ ಕಾರವಾರದಲ್ಲಿ ಪತ್ತೆ

Beejadi: 7 ದಿನದ ಹಿಂದೆ ಸಮುದ್ರ ಪಾಲಾಗಿದ್ದ ತುಮಕೂರು ಮೂಲದ ಯುವಕನ ಶವ ಕಾರವಾರದಲ್ಲಿ ಪತ್ತೆ

3

ವಿದ್ಯಾರ್ಥಿನಿ ಪ್ರಭುದ್ಯಾ ಕೊಲೆ ಪ್ರಕರಣ ಸಿಐಡಿಗೆ ವರ್ಗಾವಣೆ

Bhatkal: ಮಾತನಾಡಲೆಂದು ದಾಂಡೇಲಿಯಿಂದ ಕರೆಸಿ 7 ತಿಂಗಳ ಮಗುವಿನ ಅಪಹರಣ… ದೂರು ದಾಖಲು

Bhatkal: ಮಾತನಾಡಲೆಂದು ದಾಂಡೇಲಿಯಿಂದ ಕರೆಸಿ 7 ತಿಂಗಳ ಮಗುವಿನ ಅಪಹರಣ… ದೂರು ದಾಖಲು

Tollywood: ʼಕಲ್ಕಿ 2898 ADʼಯ ಪ್ರಭಾಸ್‌ ʼಬುಜ್ಜಿʼ ಸವಾರಿ ಮಾಡಿದ ರಿಷಬ್‌ ಶೆಟ್ಟಿ

Tollywood: ʼಕಲ್ಕಿ 2898 ADʼಯ ಪ್ರಭಾಸ್‌ ʼಬುಜ್ಜಿʼ ಸವಾರಿ ಮಾಡಿದ ರಿಷಬ್‌ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Davanagere; ಅಲ್ಯೂಮಿನಿಯಂ ವೈರ್ ಕಳ್ಳ 23 ವರ್ಷಗಳ ನಂತರ ಮತ್ತೆ ಬಂಧನ

1-BP

BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Lokayukta

ದಾವಣಗೆರೆ: ಕಂದಾಯ ಅಧಿಕಾರಿ ಮತ್ತು ಎಸ್‌ಡಿಎ ಲೋಕಾಯುಕ್ತ ಬಲೆಗೆ

ಯಾರಿಗೂ, ಯಾವ ಪಕ್ಷ ಗಳಿಗೂ ರೈತರ ಕಾಳಜಿ ಇಲ್ಲ: ಎಚ್‌. ಆರ್‌. ಬಸವರಾಜಪ್ಪ

ಯಾರಿಗೂ, ಯಾವ ಪಕ್ಷ ಗಳಿಗೂ ರೈತರ ಕಾಳಜಿ ಇಲ್ಲ: ಎಚ್‌. ಆರ್‌. ಬಸವರಾಜಪ್ಪ

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

Kaup ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಸ್ವರ್ಣ ಗದ್ದುಗೆ ಸ್ವರ್ಣ ಸಮರ್ಪಣೆಗೆ ಚಾಲನೆ

Kaup ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಣೆಗೆ ಚಾಲನೆ

T20 World Cup:‌ ಬಾಂಗ್ಲಾ ವಿರುದ್ಧ ಗೆದ್ದು ಸೆಮಿಫೈನಲ್‌ ಗೇರಿದ ಅಘ್ಘಾನ್; ಆಸೀಸ್‌ಗೆ ಆಘಾತ

T20 World Cup:‌ ಬಾಂಗ್ಲಾ ವಿರುದ್ಧ ಗೆದ್ದು ಸೆಮಿಫೈನಲ್‌ ಗೇರಿದ ಅಘ್ಘಾನ್; ಆಸೀಸ್‌ಗೆ ಆಘಾತ

ಮಲ್ನಾಡ್ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್ ಹೃದಯಘಾತದಿಂದ ನಿಧನ

ಮಲ್ನಾಡ್ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್ ಹೃದಯಘಾತದಿಂದ ನಿಧನ

5

Dengue fever: ಪಾಲಿಕೆ ಆಯುಕ್ತರಿಗೂ ಡೆಂಘಿ ಜ್ವರ; ಹೆಚ್ಚುತ್ತಿವೆ ಪ್ರಕರಣ

54

ತಾಯಿ ನಿಂದಿಸಿದ್ದಕ್ಕೆ ಸಿಮೆಂಟ್‌ ಇಟ್ಟಿಗೆ ಎತ್ತಿ ಹಾಕಿ ಕೂಲಿ ಕಾರ್ಮಿಕನ ಕೊಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.