ಕಾಂಗ್ರೆಸ್‌ನಿಂದ ದಲಿತ ವಿರೋಧಿ ನೀತಿ

ಪಾಕ್‌ ಧೋರಣೆಯನ್ನೇ ಕೃತಿಯಲ್ಲಿ ಬಿಂಬಿಸುವ ಕಾಂಗ್ರೆಸ್‌: ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಆರೋಪ

Team Udayavani, Jan 26, 2020, 3:03 PM IST

ಸಾಗರ: ಸದಾ ಪಾಕಿಸ್ತಾನವನ್ನು ಬೆಂಬಲಿಸುವ ಕಾಂಗ್ರೆಸ್‌ ದೇಶದ ಹಿತಾಸಕ್ತಿಗೆ ವಿರುದ್ಧವಾದ ನಿಲುವುಗಳನ್ನೇ ತೆಗೆದುಕೊಳ್ಳುತ್ತದೆ. 370ನೇ ವಿಧಿ ರದ್ದತಿ, ಅಯೋಧ್ಯೆ ರಾಮ ಮಂದಿರ, ಸಿಎಎ ಮೊದಲಾದ ವಿಚಾರಗಳಲ್ಲಿ ಪಾಕ್‌ ಹೇಳಿದ್ದನ್ನೇ ಕಾಂಗ್ರೆಸ್‌ ಮಾಡುತ್ತದೆ. ಭಾರತದ ಬದಲು ಕಾಂಗ್ರೆಸ್‌ ಪಾಕಿಸ್ತಾನಕ್ಕೆ ಹೋಗಿ ರಾಜಕೀಯ ಮಾಡಿದರೆ ಅಲ್ಲಿ ಅದೇ ಆಡಳಿತಕ್ಕೆ ಬರುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ವ್ಯಂಗ್ಯವಾಡಿದರು.

ನಗರದ ಗಾಂಧಿ ಮೈದಾನದಲ್ಲಿ ಶನಿವಾರ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು, ಇಲ್ಲಿನ ಪೌರತ್ವ ಕಾಯ್ದೆ ಮಾನವತ್ವ, ದಲಿತ ಹಾಗೂ ಅಂಬೇಡ್ಕರ್‌ ಪರವಾಗಿ ಅನುಷ್ಠಾನಕ್ಕೆ ಬಂದಿರುವ ಕಾಯ್ದೆ. ಇದನ್ನು ವಿರೋಧಿಸುವ ಮೂಲಕ ಕಾಂಗ್ರೆಸ್‌ ದಲಿತ ವಿರೋ ಧಿ ಧೋರಣೆ ಪ್ರದರ್ಶಿಸುತ್ತಿದೆ ಎಂದು ಹರಿಹಾಯ್ದರು.

ಭಾರತದಲ್ಲಿ ಸೋನಿಯಾ ಗಾಂಧಿ , ದಲೈಲಾಮಾ, ಅಗ್ಮೆನ್‌ ಸಾಮಿ, ತಸ್ಲಿàಮಾ ಸೇರಿದಂತೆ ಬಹುತೇಕರಿಗೆ ಪೌರತ್ವ ನೀಡಲಾಗಿದೆ. ಆದರೆ ಪಾಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾದೇಶದಿಂದ ಧಾರ್ಮಿಕ ಶೋಷಣೆಗೆ ಒಳಗಾಗಿ ಬರುವ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುವುದು ಮಾನವೀಯತೆಯ ಕೆಲಸವಾಗಿದೆ. ಅದೇ ಪಾಕಿಸ್ತಾನದಲ್ಲಿ ಶೌಚಾಲಯ
ತೊಳೆಯುವ ಕೆಲಸಕ್ಕೆ ಬಹುಸಂಖ್ಯಾತ ಪಾಕೇತರರು ಮಾತ್ರ ಅರ್ಜಿ ಸಲ್ಲಿಸಬೇಕು ಎಂಬ ನಿಯಮ ರೂಪಿಸಿ ಅಲ್ಪಸಂಖ್ಯಾತರನ್ನು ನಿಕೃಷ್ಟವಾಗಿ ಕಾಣುವ ಕೆಲಸ ಮಾಡುತ್ತದೆ ಎಂದು ಆರೋಪಿಸಿದರು.

ಪರೋಕ್ಷವಾಗಿ ಹೇಳುವುದಕ್ಕಿಂತ ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನ ದೇಶದವರಿಗೆ ಪೌರತ್ವ ಕೊಡಿ ಎಂದು ಕಾಂಗ್ರೆಸ್‌ ನೇರವಾಗಿ ಹೇಳಿ, ಸಂಸತ್‌ ಎದುರು ಧರಣಿ ನಡೆಸುವುದು ಒಳ್ಳೆಯದು. ಕಾಂಗ್ರೆಸ್‌ ಈ ದೇಶದ ಒಂದು ರಾಜಕೀಯ ಪಕ್ಷ ಎಂದು ಹೇಳಿಕೊಳ್ಳಲು ನಾಚಿಕೆಯಾಗುವ ಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಭಾರತೀಯರು ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ರಾಷ್ಟ್ರೀಯ ಪೌರತ್ವ ಕಾಯ್ದೆಗೆ ಬಿಜೆಪಿಗೆ ರಾಜ್ಯಸಭೆಯಲ್ಲಿ ಕೇವಲ 85 ಸದಸ್ಯ ಬಲವಿದ್ದರೂ 125 ಮತ ಬೀಳುತ್ತದೆ. ಲೋಕಸಭೆಯಲ್ಲಿ ಹಾಜರಿದ್ದ 391 ಸದಸ್ಯರಲ್ಲಿ 311 ಸಂಸದರು ಕಾಯ್ದೆ ಪರವಾಗಿ ಮತ ಚಲಾಯಿಸಿದ್ದರಿಂದಲೇ ಅದು ಸಂವಿಧಾನಬದ್ಧವಾಗಿದೆ. ಕಾಯ್ದೆಗೆ ಇಂತಹ ಬೆಂಬಲ ಸಿಕ್ಕಿದ ನಂತರ ಕಾಂಗ್ರೆಸ್‌ ಅನಗತ್ಯ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ. ಮೂರು ದೇಶಗಳಿಂದ ಶೋಷಣೆಗೆ ಒಳಗಾಗಿ ಬಂದ ಅಲ್ಪಸಂಖ್ಯಾತರಾದ ಹಿಂದೂ, ಜೈನ್‌, ಕ್ರಿಶ್ಚಿಯನ್‌, ಪಾರ್ಶಿ, ಸಿಕ್‌, ಬೌದ್ಧ ಧರ್ಮೀಯರಿಗೆ ಪೌರತ್ವ ಕೊಡುವ ಈ ಶ್ರೇಷ್ಟ ಕಾಯ್ದೆಯನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿರುವ ಕಾಂಗ್ರೆಸ್‌ ಮಾಡುತ್ತಿರುವುದು ಸಮಾಜದ್ರೋಹಿ ಕೆಲಸವಾಗಿದೆ. ಜನರನ್ನು ದೇಶದಿಂದ ಹೊರಹಾಕಲು ಸಿಎಎ ಕಾಯ್ದೆಯಲ್ಲಿ ಅವಕಾಶವೇ ಇಲ್ಲ. ಹಿಂದೆ ನಾವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ರಾಷ್ಟ್ರೀಯ ಪೌರತ್ವ ಕಾಯ್ದೆ ಪರ ಮೋದಿಯವರನ್ನು ಬೆಂಬಲಿಸುವ ಮೂಲಕ ಈ ಜನಾಂದೋಲನದಲ್ಲಿ ಸಮಸ್ತ ಭಾರತೀಯರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಶಾಸಕ ಎಚ್‌. ಹಾಲಪ್ಪ ಮಾತನಾಡಿ, ಪೌರತ್ವ ಕಾಯ್ದೆ ಬಗ್ಗೆ ಕಾಂಗ್ರೆಸ್‌, ಕೆಲವು ಬುದ್ಧಿಜೀವಿಗಳು, ಮುಸ್ಲಿಂ ಮುಖಂಡರು ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಾಯ್ದೆ ಅನುಷ್ಠಾನದಿಂದ ಯಾರನ್ನೂ ದೇಶಬಿಟ್ಟು ಓಡಿಸುವುದಿಲ್ಲ. ಯಾರ್ಯಾರೋ ದೇಶದೊಳಕ್ಕೆ ಬರಲು ಭಾರತ ಸಾರ್ವಜನಿಕ ಗೋಮಾಳವಲ್ಲ. ಭಾರತವಾಸಿಗಳಾಗಬೇಕಾದರೆ ಇಲ್ಲಿನ ಪೌರತ್ವ ಅಧಿಕೃತವಾಗಿ ಪಡೆಯಲೇಬೇಕು. ಈ  ಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯನ್ನು ಪ್ರತಿಯೊಬ್ಬರೂ ಬೆಂಬಲಿಸುವ ಅಗತ್ಯವಿದೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌, ಸೊರಬ ಶಾಸಕ ಕುಮಾರ ಬಂಗಾರಪ್ಪ, ವಿಧಾನ ಪರಿಷತ್‌ ಸದಸ್ಯ ಎಸ್‌. ರುದ್ರೇಗೌಡ ಮಾತನಾಡಿದರು. ಮಾಜಿ ಶಾಸಕ ಸ್ವಾಮಿರಾವ್‌, ಪ್ರಮುಖರಾದ ಗಿರೀಶ್‌ ಪಾಟೀಲ್‌, ಎಸ್‌. ದತ್ತಾತ್ರಿ, ಚೇತನರಾಜ್‌ ಕಣ್ಣೂರು, ಕೆ.ಆರ್‌. ಗಣೇಶಪ್ರಸಾದ್‌, ಕೆ.ಎಸ್‌. ಗುರುಮೂರ್ತಿ ಇನ್ನಿತರರು ಇದ್ದರು. ರಂಜಿನಿ ಪ್ರಾರ್ಥಿಸಿದರು. ಪ್ರಸನ್ನ ಕೆರೆಕೈ ಸ್ವಾಗತಿಸಿದರು. ಲೋಕನಾಥ್‌ ಬಿಳಿಸಿರಿ ವಂದಿಸಿದರು. ಸಂತೋಷ್‌ ಆರ್‌. ಶೇಟ್‌ ನಿರೂಪಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...