ತುಂಗಭದ್ರೆ ಮಡಿಲಲ್ಲಿ ಸಂಕ್ರಾಂತಿ ಸಂಭ್ರಮ


Team Udayavani, Jan 15, 2021, 2:41 PM IST

sankranthi-excitement

ಹರಿಹರ: ಸಂಕ್ರಾಂತಿ ಹಬ್ಬದ ನಿಮಿತ್ತ ಗುರುವಾರ ನಗರದ ತುಂಗಭದ್ರಾ ನದಿ ದಡದಲ್ಲಿ ಸಾವಿರಾರು ಜನರು ಗಂಗಾಪೂಜೆ ನೆರವೇರಿಸಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ದಾವಣಗೆರೆ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಟ್ರ್ಯಕ್ಟರ್‌, ಕಾರು, ಆಟೋ, ದ್ವಿಚಕ್ರ ವಾಹನಗಳಲ್ಲಿ ಕುಟುಂಬ ಸ್ನೇಹಿತರೊಂದಿಗೆ ಬಂದ ಸಾವಿರಾರು ಜನರು ನದಿ ದಡದಲ್ಲಿ ಜಮಾಯಿಸಿದ್ದರು. ನದಿಯ ಪಶ್ಚಿಮ ಭಾಗವಾದ ಅಯ್ಯಪ್ಪಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಎಂದಿನಂತೆ ಹೆಚ್ಚಿನ ಜನಸಂದಣಿ ಇತ್ತು. ಪೂರ್ವ ಭಾಗದ ವಾಟರ್‌ ವರ್ಕ್ಸ್, ರೈಲ್ವೆ ಸೇತುವೆ, ರಾಘವೇಂದ್ರ ಮಠದ ಸಮೀಪವೂ ಜನರು ಸೇರಿದ್ದರು.

ವಿಶಿಷ್ಟ ಭಕ್ಷ್ಯ ಭೋಜನ: ಬಿರು ಬಿಸಿಲಿನ ಚುರುಕಿನಲ್ಲೂ ಮರಳಿನ ಮೇಲೆ ಜನರು ಗುಂಪು ಗುಂಪಾಗಿ ಕುಳಿತು ಭೋಜನ ಸವಿದರು. ಜೋಳ-ಸಜ್ಜೆಯ ಖಡಕ್‌ ರೊಟ್ಟಿ, ಬಿಸಿ ಚಪಾತಿ, ಮುಳುಗಾಯಿ, ಬೆಂಡೆಕಾಯಿ, ಆಲೂಗಡ್ಡೆ, ಕಡ್ಲೆ, ಹೆಸರುಕಾಳು, ಬಟಾಣಿ, ಮಡಿಕೆ ಮತ್ತಿತರೆ ಪಲ್ಯಗಳು ಜೊತೆಗೆ ಶೇಂಗಾ, ಎಳ್ಳು, ಕೊಬ್ಬರಿ, ಹಸಿಮೆಣಸು, ಕೆಂಪುಮೆಣಸು, ಕುರುಶಿಣಿ ಚಟ್ನಿಗಳು, ಅಲ್ಲದೆ ಬಿಳಿ ಅನ್ನ, ಚಿತ್ರಾನ್ನ, ಒಗ್ಗರಣೆ ಬುತ್ತಿ ಜೊತೆಗೆ, ಈರುಳ್ಳಿ, ಸಾಂಬಾರು, ಮೊಸರು, ಮಜ್ಜಿಗೆ ಒಳಗೊಂಡ ರುಚಿ ರುಚಿ ಊಟ ಮಾಡಿದರು.

ಪವಿತ್ರ ಸ್ನಾನ: ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಸಾಧಾರಣವಾಗಿತ್ತು. ಅಯ್ಯಪ್ಪಸ್ವಾಮಿ ದೇವಸ್ಥಾನದ ಭಕ್ತ ಜನರು ಪವಿತ್ರ ಸ್ನಾನ ಮಾಡಿದರು. ಯುವಕ-ಯುವತಿಯರು, ಹಿರಿ-ಕಿರಿಯರೆಲ್ಲಾ ನದಿ ನೀರಿನಲ್ಲಿ ಈಜಾಡಿದರು. ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಗಂಗಾಪೂಜೆ ನೆರವೇರಿಸಿದರು. ಅಯ್ಯಪ್ಪ ಸ್ವಾಮಿ ದೇವಾಲಯ, ರಾಘವೇಂದ್ರ ಮಠ, ಚಿತ್ರಾ ಟಾಕೀಸ್‌ ಹಿಂಭಾಗ, ರೈಲ್ವೆ ಸೇತುವೆ, ಹಳೆಯ ನೀರು ಸರಬರಾಜು ಕೇಂದ್ರದ ಆವರಣದಲ್ಲಿ ಜನರು ಕುಳಿತು ಊಟ ಮಾಡಿದರು. ಬಿಸಿಲಿನ  ತಾಪ ಹೆಚ್ಚಿಲ್ಲದಿದ್ದರೂ ನೆರಳಿಗಾಗಿ ಜನರು ಅಲ್ಲಲ್ಲಿ ಡೇರೆಗಳನ್ನು ಹಾಕಿಕೊಂಡಿದ್ದರು.

ಇದನ್ನೂ ಓದಿ:ಒಂದಾಗಿ ಶಾಲೆಗೆ ಹೋದವರು ಒಟ್ಟಿಗೆ ಮಸಣ ಸೇರಿದರು: ಗುರುತಿಸಲಾಗದಷ್ಟು ಜರ್ಜರಿತವಾದ ಮೃತದೇಹಗಳು

ನದಿ ತೀರದುದ್ದಕ್ಕೂ ಐಸ್‌ಕ್ರೀಮ್‌, ಮಂಡಕ್ಕಿ, ಗಿರ್ಮಿಟ್‌, ಕಡ್ಲೆಗಿಡ, ಹುರಿದ ಶೇಂಗಾ, ಬಲೂನ್‌ ಹಾಗೂ ಮಕ್ಕಳ ಆಟಿಕೆಗಳ ವ್ಯಾಪಾರ ಜೋರಾಗಿತ್ತು. ವಾಹನ ನಿಯಂತ್ರಣದ ಜೊತೆಗೆ ನದಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಮಾಡಿದ್ದರು. ಹರಿಹರ, ದಾವಣಗೆರೆ, ರಾಣೆಬೆನ್ನೂರು, ಹಾವೇರಿ, ಬ್ಯಾಡಗಿ ಇತರೆ ಭಾಗದಿಂದ ಜನರು ಆಗಮಿಸಿದ್ದರು. ತುಂಗ, ಭದ್ರ, ಹರಿದ್ರಾವತಿ ಹೀಗೆ ತ್ರಿವೇಣಿ ಸಂಗಮದ ಛಾಪು ಇಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ.

ಚಿಕ್ಕಬಿದರಿ, ಸಾರಥಿ, ಗುತ್ತೂರು, ಹರ್ಲಾಪುರ, ಹಲಸಬಾಳು, ರಾಜನಹಳ್ಳಿ, ಬಿಳಸನೂರು, ನಂದಿಗಾವಿ, ಎಳೆಹೊಳೆ, ಧೂಳೆಹೊಳೆ, ನಂದಿಗುಡಿ, ಉಕ್ಕಡಗಾತ್ರಿ ಮುಂತಾದ ನದಿ ಸಾಲಿನ ಗ್ರಾಮಗಳಲ್ಲಿ, ತಾಲೂಕಿನ ಕೊಂಡಜ್ಜಿ ಬೆಟ್ಟ ಹಾಗೂ ಕೊಮಾರನಹಳ್ಳಿ, ದೇವರಬೆಳೆಕೆರೆ ಕೆರೆಯಂಗಳದಲ್ಲೂ ಜನ ಸಂಕ್ರಾಂತಿ ಹಬ್ಬದಾಚರಣೆ ಮಾಡಿದರು. ಹರಿಹರ ನಗರದ ಶ್ರೀ ಹರಿಹರೇಶ್ವರಸ್ವಾಮಿ, ಗ್ರಾಮದೇವತೆ, ಉಕ್ಕಡಗಾತ್ರಿಯ ಕರಿಬಸವೇಶ್ವರ ಸ್ವಾಮಿ ಸೇರಿದಂತೆ ವಿವಿಧ ದೇವಸ್ಥಾನದಲ್ಲಿ ಸಂಕ್ರಾಂತಿ ನಿಮಿತ್ತ ವಿಶೇಷ ಅಭಿಷೇಕ, ಪೂಜೆ ನೆರವೇರಿಸಲಾಯಿತು.

ಟಾಪ್ ನ್ಯೂಸ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

1-wqeqwe

Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

13-sister

Elder Sister: ಅಕ್ಕ ಅನ್ನೋ ಮಾತೃ ಸ್ವರೂಪಿಣಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.