ಪುರಸಭೆಯಿಂದ ಸಂತ ಸೇವಾಲಾಲ್‌ ಫ್ಲೆಕ್ಸ್‌ ತೆರವು : ಪ್ರತಿಭಟನೆ

Team Udayavani, Feb 13, 2021, 3:16 PM IST

sevalal Flex

ಚನ್ನಗಿರಿ: ಸೂರಗೊಂಡನಕೊಪ್ಪದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಂತ ಸೇವಾಲಾಲ್‌ ಜಯಂತಿ ಹಿನ್ನೆಲೆಯಲ್ಲಿ ಸಮಾಜ ಬಾಂಧವರು ಹಾಕಿದ್ದ ಶುಭಕೋರುವ ಫ್ಲೆಕ್ಸ್‌ಗಳನ್ನು ಪುರಸಭೆ ತೆರವುಗೊಳಿಸಿದ್ದರಿಂದ  ಬಂಜಾರಾ ಸಮುದಾಯದವರು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪಟ್ಟಣದ ಗಾಂಧಿ  ವೃತ್ತದಲ್ಲಿ ತಾಲೂಕು ಮಟ್ಟದ ಸೇವಾಲಾಲ್‌ ಸಮಿತಿಯ ಗೌರವಾಧ್ಯಕ್ಷ ಕೆ. ವೀರೇಶ್‌ ನಾಯ್ಕ ಹಾಗೂ ಸಮಾಜದ ಮುಖಂಡರುಗಳಿದ್ದ ಭಾವಚಿತ್ರವುಳ್ಳ ಫೆಕ್ಸ್‌ಗಳನ್ನು ಹಾಕಲಾಗಿತ್ತು. ಅವುಗಳನ್ನು ಹಾಕಿದ ಮಾರನೇ ದಿನವೇ ಪುರಸಭೆ ಸಿಬ್ಬಂದಿ ಉದ್ದೇಶ ಪೂರ್ವಕವಾಗಿ ತೆರವುಗೊಳಿಸಿ ಸಮುದಾಯಕ್ಕೆ ಅಪಮಾನವೆಸಗಿದ್ದಾರೆ. ಯಾರೋ ಪ್ರಭಾವಿ ರಾಜಕಾರಣಿಯೊಬ್ಬರ ಮಾತನ್ನು ಕೇಳಿ ಉದ್ದೇಶ ಪೂರ್ವಕವಾಗಿ ಬೇಕು ಅಂತಲೇ ಮಾಡಿದ್ದಾರೆ. ಸಮುದಾಯದ ದಾರ್ಶನಿಕರೊಬ್ಬರ ಜಯಂತಿ ಆಚರಣೆಗೆ ರಾಜಕೀಯ ಪ್ರಭಾವ ಬಳಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಬಂಜಾರಾ ಸಮುದಾಯದವರು ಪ್ರಶ್ನಿಸಿದರು.

ಸೇವಾಲಾರಿಗೆ ಅಪಮಾನವಾಗಿದ್ದು, ನಮಗೆ ನ್ಯಾಯ ಬೇಕೆಂದು ಆಗ್ರಹಿಸಿ ಪುರಸಭೆ ಅ ಧಿಕಾರಿ ಬಸವರಾಜ್‌ ಮುಂದೆ ಸಮುದಾಯದ ಮುಖಂಡರು ಪಟ್ಟು ಹಿಡಿದರು. ತಾಲೂಕು ಸಂತ ಸೇವಾಲಾಲ್‌ ಸಮಿತಿ ಗೌರವಾಧ್ಯಕ್ಷ ಕೆ. ವೀರೇಶ್‌ ನಾಯ್ಕ ಮಾತನಾಡಿ, ಸಮುದಾಯದ ದಾರ್ಶನಿಕರ ಧಾರ್ಮಿಕ ಆಚರಣೆಗೆ ಫ್ಲೆಕ್ಸ್‌ಗಳನ್ನು ಹಾಕುವುದೇ ತಪ್ಪು ಎನ್ನುವುದಾದರೆ ನಾವ್ಯಾರು ಫೆಕ್ಸ್‌ಗಳನ್ನು ಹಾಕುತ್ತಿರಲಿಲ,É ಅದರೆ ಏಕಾಏಕಿ ಕಾರ್ಯಕ್ರಮ ಮುಗಿಯದೇ ಮುಂಚಿತವಾಗಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ಓರ್ವ ದಾರ್ಶನಿಕರಿಗೆ  ಹಾಗೂ ಆ ಸಮುದಾಯಕ್ಕೆ ಅಪಮಾನ ಎಸಗಿದ್ದೀರಿ ನಮಗೆ ನ್ಯಾಯಬೇಕು ಎಂದು ಆಗ್ರಹಿಸಿದರು.

ಪಟ್ಟಣದಲ್ಲಿ ಇಲ್ಲಿಯವರೆಗೂ ಎಷ್ಟೋ ದಾರ್ಶನಿಕರ ಕಾರ್ಯಕ್ರಮ ಹಾಗೂ ರಾಜಕೀಯ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮ ಮುಗಿದು ತಿಂಗಳು ಕಳೆದರೂ ಅಂತಹ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವುದಿಲ್ಲ. ಅದರೆ ಕಾರ್ಯಕ್ರಮ ಮುಗಿಯದೇ ಇರುವ ಸೇವಾಲಾಲ್‌ರ ಕಾರ್ಯಕ್ರಮದ ಫ್ಲೆಕ್ಸ್ ಗಳನ್ನು ಏಕೆ ಕಿತ್ತು ಹಾಕಿದ್ದೀರಿ. ಸೇವಾಲಾಲ್‌ ರಿಗೆ ಮಾಡಿದ ಅಪಮಾನಕ್ಕೆ ನ್ಯಾಯ ಸಿಗುವವರೆಗೂ ಪುರಸಭೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ :ಸರ್ಕಾರಗಳಿಂದ ಜನ ವಿರೋಧಿ ನೀತಿ: ಕಾಂಗ್ರೆಸ್‌ ಆಕ್ರೋಶ

ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿ ಬಸವರಾಜ್‌ ಪ್ರತಿಕ್ರಿಯಿಸಿ, ಉದ್ದೇಶ ಪೂರ್ವಕವಾಗಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿಲ್ಲ, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಹಳೆಯ ಫ್ಲೆಕ್ಸ್ ಗಳು ತುಂಬಿಕೊಂಡಿದ್ದವು. ಅವುಗಳನ್ನು ತೆರವುಗೊಳಿಸುವಂತೆ ಸಿಬ್ಬಂದಿಗೆ ಹೇಳಿದ್ದೆ. ಅದರೆ ನಿಮ್ಮ ಸೇವಾಲಾಲ್‌ರ ಜಯಂತಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದಾರೆಯೇ ವಿನಃ ಯಾವ ರಾಜಕಾರಣಿಗಳ ಪ್ರಭಾವದಿಂದ ಮಾಡಿಲ್ಲ ಎಂದು ಪ್ರತಿಭಟನಾ ನಿರತರಿಗೆ ಸ್ಪಷ್ಟನೆ ನೀಡಿದರು.

ಸೇವಾಲಾಲ್‌ರ ಬಗ್ಗೆ ನಮಗೂ ಅಪಾರ ಗೌರವವಿದೆ. ಜಯಂತಿ ಆಚರಣೆಗೆ ಪಟ್ಟಣದಲ್ಲಿ ಪುರಸಭೆಯಿಂದ  ಬೇಕಾದ ಸಹಾಯ ಮಾಡಲಾಗುವುದು ಎಂದರು. ಪುರಸಭೆ ಮುಖ್ಯಾ ಧಿಕಾರಿಯ ಪ್ರತಿಕ್ರಿಯೆಗೆ ಸ್ಪಂದಿಸಿದ ಬಂಜಾರಾ ಸಮುದಾಯದವರು ಪ್ರತಿಭಟನೆ ಹಿಂಪಡೆದರು. ಮುಖಂಡರಾದ ಸುಣ್ಣಿಗೆರೆ ಮಲ್ಲನಾಯ್ಕ, ಚಂದ್ರನಾಯ್ಕ, ಅನಿಲ್‌, ನಾಗರಾಜ ನಾಯ್ಕ, ಶಂಕ್ರನಾಯ್ಕ ಮತ್ತಿತರರು ಹಾಜರಿದ್ದರು.

ಟಾಪ್ ನ್ಯೂಸ್

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.