Udayavni Special

ಮೀಸಲಾತಿ ನೀಡದಿದ್ರೆ ಉಗ್ರ ಹೋರಾಟ

ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ-2 ಎ ಮೀಸಲಾತಿ­! 6 ತಿಂಗಳಲ್ಲಿ ನೀಡಿದ ಭರವಸೆ ಈಡೇರಿಸಿ: ಶ್ರೀ

Team Udayavani, Mar 29, 2021, 8:34 PM IST

Today

ದಾವಣಗೆರೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿರುವ ಭರವಸೆಯಂತೆ ಮುಂದಿನ 6 ತಿಂಗಳಲ್ಲಿ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ-2 ಎ ಮೀಸಲಾತಿ ನೀಡಬೇಕು. ಇಲ್ಲವಾದಲ್ಲಿ ಅ.15ರಿಂದ ಮತ್ತೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಒತ್ತಾಯಿಸಿ ಪಾದಯಾತ್ರೆಯ ನಂತರ ಬೆಂಗಳೂರಲ್ಲಿ ಸಮಾಜ ಬಾಂಧವರು ಅನಿರ್ದಿಷ್ಟಾವಧಿ ಹೋರಾಟ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದನದಲ್ಲಿ 6 ತಿಂಗಳಲ್ಲಿ ಮೀಸಲಾತಿ ನೀಡಲಾಗುವುದು ಎಂಬ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೋರಾಟಕ್ಕೆ ಅಲ್ಪ ವಿರಾಮ ನೀಡಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮಾಜಕ್ಕೆ 2 ಎ ಮೀಸಲಾತಿ ನೀಡುವ ವಿಶ್ವಾಸ ಇದೆ. ಏಕೆಂದರೆ ಅವರು ಭರವಸೆ ನೀಡಿರುವುದು ನಾಲ್ಕು ಗೋಡೆಗಳ ಮಧ್ಯೆದಲ್ಲಿ ಅಲ್ಲ. ಸೆ.15ರ ಒಳಗಾಗಿ ಮೀಸಲಾತಿ ನೀಡಲಾಗುವುದು ಎಂದು ಸದನದಲ್ಲಿ ಭರವಸೆ ನೀಡಿದ್ದಾರೆ. ಅದು ಕಡತದಲ್ಲಿ ದಾಖಲಾಗಿರುತ್ತದೆ. ಒಂದೊಮ್ಮೆ ಅ.15ರ ಒಳಗಾಗಿ 2 ಎ ಮೀಸಲಾತಿ ಕೊಡದಿದ್ದರೆ ಮತ್ತೆ ಧರಣಿ ಸತ್ಯಾಗ್ರಹ ನಡೆಸಲಾಗುವುದು. 25 ಲಕ್ಷಕ್ಕೂ ಹೆಚ್ಚು ಜನರ ಸೇರಿಸಿ ಬೃಹತ್‌ ರ್ಯಾಲಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳು ಶಾಲಾ ದಾಖಲಾತಿಯಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕು. ಜನಗಣತಿ ಸಂದರ್ಭದಲ್ಲೂ ಸಹ ಸಮಾಜ ಬಾಂಧವರು ಲಿಂಗಾಯತ ಪಂಚಮಸಾಲಿ ಎಂದೇ ಬರೆಸಬೇಕು. ಇಲ್ಲದೇ ಹೋದಲ್ಲಿ ಮೀಸಲಾತಿ ಸಿಗದೆ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಎಲ್ಲರೂ ಜನಗಣತಿ ಮತ್ತು ಶಾಲಾ ದಾಖಲಾತಿಗಳಲ್ಲಿ ಲಿಂಗಾಯತ ಪಂಚಮಸಾಲಿ ಎಂದೇ ಬರೆಸಬೇಕು ಎಂದು ತಿಳಿಸಿದರು. ಪಂಚಮಸಾಲಿ ಸಮಾಜದ ಬಹು ದಶಕಗಳ ಬೇಡಿಕೆ 2 ಎ ಮೀಸಲಾತಿಯ ಆದೇಶ ಬರುವವರೆಗೆ ಸಮಾಜ ಬಾಂಧವರು ಮೈ ಮರೆಯಬಾರದು. ಇದೇ ದಾವಣಗೆರೆಯಿಂದ ಭಿನ್ನಾಭಿಪ್ರಾಯ ಮರೆತು ಹೋರಾಟ ನಡೆಸಲಾಗಿದೆ. ಹರಿಹರ ಪೀಠದ ವಚನಾನಂದ ಸ್ವಾಮೀಜಿಯವರು ಕಾಲಿನಲ್ಲಿ ಬೊಬ್ಬೆ ಬಂದರೂ ಹೋರಾಟ ದಲ್ಲಿ ಪಾಲ್ಗೊಂಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಾದಯಾತ್ರೆ ಮತ್ತು ಧರಣಿ ಸತ್ಯಾಗ್ರಹಕ್ಕೆ ನಿರೀಕ್ಷೆಗೂ ಮೀರಿ ಅಭೂತಪೂರ್ವ ಬೆಂಬಲ ನೀಡಿದವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಶರಣು ಶರಣಾರ್ಥಿ ಸಂದೇಶ ಯಾತ್ರೆಯನ್ನು ಬೆಂಗಳೂರಿನಿಂದ ಪ್ರಾರಂಭಿಸಲಾಗಿದೆ. ದಾವಣಗೆರೆಯಿಂದ ಕಾರಿಗನೂರಿನ ಜೆ.ಎಚ್‌. ಪಟೇಲ್‌ರ ಸಮಾಧಿ ನಂತರ ಉಡುತಡಿಗೆ ತೆರಳಿ, ಅಲ್ಲಿಂದ ಹಿರೇಕೇರೂರುಗೆ ತೆರಳಿ, ವಾಸ್ತವ್ಯ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ ಗೋಪನಾಳ್‌ ಮಾತನಾಡಿ, ಮಠದ ನಿರ್ಮಾಣಕ್ಕಾಗಿ ಒಂದು ಗ್ರಾಮದಿಂದ 1 ಲಕ್ಷ ನೀಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌, ಮಲ್ಲಿಕಾರ್ಜುನ ಅಕ್ಕಿ, ನಗರಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

gjjsddgdf

ಮರಾಠಿಗರು ಪಾಕ್‌ನವರಲ್ಲ,ಲಷ್ಕರಿಗಳಲ್ಲ : ಸಂಜಯ ರಾವುತ್‌

ಸದವದ್

ರಾಜ್ಯದಲ್ಲಿ ಕೋವಿಡ್ ಮಹಾಸ್ಪೋಟ : ಇಂದು 14738 ಪ್ರಕರಣಗಳು

ಖಾಸಗೀಕರಣದ ಹೆಸರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ಲಕ್ಷ್ಯ : ಐವನ್‌ ಡಿ’ಸೋಜಾ ಆರೋಪ

ಖಾಸಗೀಕರಣದ ಹೆಸರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ಲಕ್ಷ್ಯ : ಐವನ್‌ ಡಿ’ಸೋಜಾ ಆರೋಪ

ಉಡುಪಿ-ಮಣಿಪಾಲವನ್ನು ದೇಶಕ್ಕೆ ಮಾದರಿ ನಗರವನ್ನಾಗಿಸಲು ಯತ್ನ: ಅನುಮೋದನೆಯೊಂದೇ ಬಾಕಿ

ಉಡುಪಿ-ಮಣಿಪಾಲವನ್ನು ದೇಶಕ್ಕೆ ಮಾದರಿ ನಗರವನ್ನಾಗಿಸಲು ಯತ್ನ : ಅನುಮೋದನೆಯೊಂದೇ ಬಾಕಿ

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಸರ್ವನಾಶ ಮಾಡಲು ಹುನ್ನಾರ ನಡೆಸಿದೆ :ಬೈರೇಗೌಡ

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಸರ್ವನಾಶ ಮಾಡಲು ಹುನ್ನಾರ ನಡೆಸಿದೆ :ಬೈರೇಗೌಡ

ಖಾಲಿ ಸಿಲಿಂಡರಿಗೆ ಅಡುಗೆ ಅನಿಲ ತುಂಬಿಸಿ ಮಾರಾಟ : ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

ಖಾಲಿ ಸಿಲಿಂಡರಿಗೆ ಅಡುಗೆ ಅನಿಲ ತುಂಬಿಸಿ ಮಾರಾಟ : ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

ಹರಿದ್ವಾರ ಕುಂಭಮೇಳ; ಕಳೆದ ಐದು ದಿನಗಳಲ್ಲಿ 1,701 ಕೋವಿಡ್ ಪ್ರಕರಣ ಪತ್ತೆ

ಹರಿದ್ವಾರ ಕುಂಭಮೇಳ; ಕಳೆದ ಐದು ದಿನಗಳಲ್ಲಿ 1,701 ಕೋವಿಡ್ ಪ್ರಕರಣ ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-2

ಪ್ರಜಾಪ್ರಭುತ್ವ ವ್ಯವಸ್ಥೆಗೆ ಸ್ಪಷ್ಟ ರೂಪ ನೀಡಿದ ಚೇತನ: ಜೋಶಿ

fdgdd

ಬಾಲಚಂದ್ರ ಪ್ರಚಾರದಿಂದ ಬಿಜೆಪಿಗೆ ಆನೆಬಲ : ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ

15-2

ಡಾ|ಅಂಬೇಡ್ಕರ್‌ ಜೀವನ ಮೌಲ್ಯಗಳು ಸ್ಫೂರ್ತಿದಾಯಕ

gjjsddgdf

ಮರಾಠಿಗರು ಪಾಕ್‌ನವರಲ್ಲ,ಲಷ್ಕರಿಗಳಲ್ಲ : ಸಂಜಯ ರಾವುತ್‌

ಕಹಜಕಲಹಗಹ

ಡಾ| ಅಂಬೇಡ್ಕರ್ ಆದರ್ಶ ಪಾಲಿಸಿ : ಈಶ್ವರಪ್ಪ

MUST WATCH

udayavani youtube

ಮಂಗಳೂರು : ಐಟಿ ಕಛೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ

udayavani youtube

Covid 2ನೇ ಅಲೆನಾವು ಬೀದಿಗೆ ಬೀಳಬೇಕಾ?

udayavani youtube

ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

udayavani youtube

ಭಾರತದಲ್ಲಿ 10 ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳ

udayavani youtube

ವಾಹನ ಅಡ್ಡಗಟ್ಟಿ ಸುಲಿಗೆ ಪ್ರಕರಣ: ಮಂಗಳೂರಿನಲ್ಲಿ ಮತ್ತೆ ಆರು ಖದೀಮರ ಬಂಧನ

ಹೊಸ ಸೇರ್ಪಡೆ

15-2

ಪ್ರಜಾಪ್ರಭುತ್ವ ವ್ಯವಸ್ಥೆಗೆ ಸ್ಪಷ್ಟ ರೂಪ ನೀಡಿದ ಚೇತನ: ಜೋಶಿ

fdgdd

ಬಾಲಚಂದ್ರ ಪ್ರಚಾರದಿಂದ ಬಿಜೆಪಿಗೆ ಆನೆಬಲ : ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ

15-2

ಡಾ|ಅಂಬೇಡ್ಕರ್‌ ಜೀವನ ಮೌಲ್ಯಗಳು ಸ್ಫೂರ್ತಿದಾಯಕ

gjjsddgdf

ಮರಾಠಿಗರು ಪಾಕ್‌ನವರಲ್ಲ,ಲಷ್ಕರಿಗಳಲ್ಲ : ಸಂಜಯ ರಾವುತ್‌

ಕಹಜಕಲಹಗಹ

ಡಾ| ಅಂಬೇಡ್ಕರ್ ಆದರ್ಶ ಪಾಲಿಸಿ : ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.