ಸಿದ್ಧಗಂಗಾ ಶ್ರೀ ಕಾಯಕತತ್ವದ ಕರ್ಮಯೋಗಿ

Team Udayavani, Jan 22, 2019, 6:22 AM IST

dvg-2.jpg

ದಾವಣಗೆರೆ: ತುಮಕೂರು ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಾಮಾಜಿಕ ನ್ಯಾಯದ ಹರಿಕಾರ, ಕಾಯಕತತ್ವದ ಕರ್ಮಯೋಗಿ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ| ಎಚ್.ಎಸ್‌. ಮಂಜುನಾಥ್‌ ಕುರ್ಕಿ ಸ್ಮರಿಸಿದರು. ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದರು.

ಒಂದು ಮಠವನ್ನು ಹೇಗೆ ಸಮಾಜದಲ್ಲಿ ನಡೆಸಿಕೊಂಡು ಹೋಗಬಹುದು ಎಂಬುದರ ಬಗ್ಗೆ ತಿಳಿಸಿಕೊಟ್ಟ ದಾಸೋಹಿ, ಕರ್ಮಯೋಗಿ ಸಿದ್ದಗಂಗಾ ಶ್ರೀಗಳು. ಇಡೀ ಮನುಕುಲಕ್ಕೆ ಅವರು ಆದರ್ಶ. ಅವರ ಆದರ್ಶ, ಚಿಂತನೆ, ಸಂದೇಶಗಳು ಸಮಾಜದ ಓರೆಕೋರೆ ತಿದ್ದುವಲ್ಲಿ ಸಹಕಾರಿಯಾಗಿವೆ. ಅವರ ವಿಚಾರಧಾರೆಗಳು ಇಡೀ ಮನುಕುಲಕ್ಕೆ ದಾರಿದೀಪ ಎಂದರು.

ಸಾಹಿತಿ ಶಾಂತಗಂಗಾಧರ್‌ ಮಾತನಾಡಿ, ಬಡತನದಲ್ಲಿ ಬೆಳೆದು ಯಾರು ಉನ್ನತ ಮಟ್ಟಕ್ಕೆ ಬರುತ್ತಾರೋ ಅವರಿಗೆ ಮಾತ್ರ ಕಷ್ಟಗಳ ಅರಿವು ಇರಲು ಸಾಧ್ಯ. ಸಿದ್ದಗಾಂಗಾ ಶ್ರೀಗಳು ಕೂಡ ಅಂತಹ ಬಡತನದ ಕುಟುಂಬದಲ್ಲಿ ಬೆಳೆದು ಬಂದವರು. 1930ರಲ್ಲಿ ದೀಕ್ಷೆ ತೊಟ್ಟ ಶ್ರೀಗಳು, ನಂತರದಲ್ಲಿ ಸಾಕಷ್ಟು ಕುಗ್ರಾಮಗಳಲ್ಲಿ ಶಾಲೆಗಳನ್ನು ಪ್ರಾರಂಭ ಮಾಡಿದರು. ದಮನಿತರು, ಶೋಷಿತರು, ಅಕ್ಷರ ಸಂಸ್ಕೃತಿ ಕಂಡಿರದವರ ಏಳ್ಗೆಗೆ ಅನ್ನ, ಅಕ್ಷರ, ಆಶ್ರಯ ನೀಡಿ ಶ್ರಮಿಸಿದ ತ್ರಿವಿಧ ದಾಸೋಹಿಗಳು ಎಂದು ಸ್ಮರಿಸಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ವಾಮದೇವಪ್ಪ ಮಾತನಾಡಿ, ಬಸವತತ್ವ ಪ್ರಚಾರಕರು, ಅಕ್ಷರ ದಾಸೋಹಿಗಳಾದ ಸಿದ್ದಗಂಗಾ ಶ್ರೀಗಳು ಜಾತ್ಯತೀತವಾಗಿ ಎಲ್ಲಾ ವರ್ಗದವರಿಗೂ ಶಿಕ್ಷಣ ಹಾಗೂ ದಾಸೋಹ ಕಲ್ಪಿಸಿದ ಮಹಾನ್‌ಚೇತನರು ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಶಿಕ್ಷಕಿ ಎಸ್‌.ಎಂ. ಮಲ್ಲಮ್ಮ ಮಾತನಾಡಿ, ಸಿದ್ದಗಂಗಾ ಶ್ರೀಗಳ ಶಿಷ್ಯ ವರ್ಗ ಅಪಾರ. ಅವರ ಶಿಷ್ಯ ಬಳಗದವರು ಇಂದು ದೇಶ, ವಿದೇಶಗಳಲ್ಲಿದ್ದರೂ ಕೂಡ ಸಮಾಜಮುಖೀ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹ ನೈತಿಕ ಶಿಕ್ಷಣವನ್ನು ಶ್ರೀಗಳು ಶಿಷ್ಯ ವರ್ಗಕ್ಕೆ ಕಲಿಸಿದ್ದರು. ಅವರು ಅಪರೂಪದ ಜ್ಞಾನ, ತ್ಯಾಗಜೀವಿ ಎಂದು ಹೇಳಿದರು.

ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ್‌ ಶೆಣೈ ಮಾತನಾಡಿ, ಭಾರತರತ್ನ ಪ್ರಶಸ್ತಿಗೆ ಗೌರವ ದೊರಕುವ ನಿಟ್ಟಿನಲ್ಲಿ ಸಿದ್ದಗಂಗಾ ಶ್ರೀಗಳಿದ್ದರು. ಅವರಿಗೆ ಭಾರತ ಸರ್ಕಾರ ಮರಣೋತ್ತರವಾಗಿ ಭಾರತರತ್ನ ನೀಡಬೇಕು ಎಂದು ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಎ.ಆರ್‌. ಉಜ್ಜನಪ್ಪ, ಬುರುಡೆಕಟ್ಟೆ ಮಂಜಪ್ಪ, ಎನ್‌.ಎಸ್‌. ರಾಜು, ಸಿರಾಜ್‌ ಅಹಮದ್‌, ಜಿ.ಆರ್‌. ಷಣ್ಮುಖಪ್ಪ, ಬಿ. ದಿಳ್ಳೆಪ್ಪ, ಹನುಮಂತಪ್ಪ ಇತರರು ಇದ್ದರು.

ಟಾಪ್ ನ್ಯೂಸ್

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

Param-Bir-Singh

ಐಪಿಎಸ್‌ ಅಧಿಕಾರಿ ಪರಂಬೀರ್‌ ಸಿಂಗ್‌ ವಿರುದ್ಧ ಶಿಸ್ತಿನ ಕ್ರಮ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yaddi

‘ತಮಾಷೆಗಾಗಿ ಹೇಳಿದ್ದು’ ಎಂದು ಈಶ್ವರಪ್ಪ ಹೇಳಿದ್ದಾರಲ್ಲ : ಯಡಿಯೂರಪ್ಪ ಸ್ಪಷ್ಟನೆ

cm-b-bommai

ಒಮಿಕ್ರಾನ್ ಬಗ್ಗೆ ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳುತ್ತಿದೆ: ಸಿಎಂ ಬೊಮ್ಮಾಯಿ

26bjp

ಬಿಜೆಪಿಯದ್ದು ಕಮಿಷನ್ ಸರ್ಕಾರ, ಎಚ್ಚರ ವಹಿಸಿ: ವಡ್ನಾಳ್ ರಾಜಣ್ಣ

ಕಾಂಗ್ರೆಸ್ ದುಡ್ಡಿನ ಲೆಕ್ಕದಲ್ಲಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ: ಕೆ.ಎಸ್.ಈಶ್ವರಪ್ಪ

ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಕೊಡುವ ನಂಬಿಕೆಯಿದೆ: ಕೆ.ಎಸ್.ಈಶ್ವರಪ್ಪ

ಕೃಷಿ ಕಾಯ್ದೆಗಳ ಅನುರ್ಜಿತಕ್ಕೆ ರಾಷ್ಟ್ರಪತಿ ಅಂಕಿತವಾಗಲಿ

ಕೃಷಿ ಕಾಯ್ದೆಗಳ ಅನುರ್ಜಿತಕ್ಕೆ ರಾಷ್ಟ್ರಪತಿ ಅಂಕಿತವಾಗಲಿ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.