ವಿದ್ಯಾರ್ಥಿಗಳ ಕ್ರಿಯಾಶೀಲತೆ- ಸೃಜನಶೀಲತೆ ಬಿಚ್ಚಿಟ್ಟ ಪ್ರದರ್ಶನ


Team Udayavani, Jan 12, 2019, 7:33 AM IST

dvg-2.jpg

ದಾವಣಗೆರೆ: ಥರ್ಮಕೋಲ್‌ನಲ್ಲಿ ಸಿದ್ಧಗೊಂಡಿರುವ ಯಕ್ಷಗಾನ ಕಿರೀಟ…, ಭತ್ತ ಬಳಸಿ ಸಿದ್ಧಪಡಿಸಿದ ಆತ್ಯಾಕರ್ಷಕ ಜ್ಯೂಯೆಲರಿ…, ಬಲೂನ್‌ ಪುಟ್ಟಿ…, ರದ್ದಿ ಪೇಪರ್‌ನಲ್ಲಿ ಸಿದ್ಧವಾಗಿರುವ ಬ್ಯಾಗ್‌… ಹೀಗೆ ವಿವಿಧ ನಮೂನೆ, ಮಾದರಿ, ಬಣ್ಣಗಳಲ್ಲಿ ಸಿದ್ಧಗೊಂಡಿರುವ ಕರಕುಶಲ ವಸ್ತುಗಳ ಲೋಕವೇ ಕಂಡು ಬಂದಿದ್ದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ರೇಣುಕಾ ಮಂದಿರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರೌಢಶಾಲಾ ಶೆ„ಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ ವಸ್ತುಪ್ರದರ್ಶನದಲ್ಲಿ.

ಪ್ರದರ್ಶನದಲ್ಲಿ ಪಾಲ್ಗೊಂಡಿರುವ 110 ಶಾಲೆಗಳ ವಿದ್ಯಾರ್ಥಿಗಳ ಪರಿಕಲ್ಪನೆಯಲ್ಲಿ ಸಿದ್ಧಗೊಂಡಿರುವ ವಸ್ತುಗಳು ಮಕ್ಕಳ ದೇಹ, ಮನಸ್ಸು ಮತ್ತು ಆತ್ಮಗಳಿಗೆ ಸರ್ವಾಂಗೀಣ ಶಿಕ್ಷಣವನ್ನು ನೀಡುವುದೇ ವೃತ್ತಿ ಶಿಕ್ಷಣದ ಪ್ರಮುಖ ತತ್ವ… ಎನ್ನುವ ಮೂಲಕ ವೃತ್ತಿ ಶಿಕ್ಷಣದ ಮಹತ್ವವನ್ನು ತಿಳಿಸಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮಾತಿಗೆ ಅನುಗುಣವಾಗಿದ್ದವು.

ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗೌರಮ್ಮ, ಹೇಮ, ಸಿಂಚನ, ಅಂಜಲಿ ಸಿದ್ಧಪಡಿಸಿರುವ ಡಿಟರ್ಜೆಂಟ್ ಪೌಡರ್‌, ಸ್ನಾನದ ಚೂರ್ಣ, ಡ್ರಾಯಿಂಗ್‌ ಪೇಪರ್‌, ಹಳೆಯ ಕ್ಯಾಲೆಂಡರ್‌ ಬಳಸಿ ತಯಾರಿಸಿರುವ ಪೇಪರ್‌ ಬ್ಯಾಗ್‌, ಪೋಸ್ಟಲ್‌ ಕವರ್‌… ಮಕ್ಕಳಲ್ಲಿನ ಕ್ರಿಯಾತ್ಮಕತೆಗೆ ಸಾಕ್ಷಿಯಾಗಿದ್ದವು.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಜಯನಗರದ ಸರ್ಕಾರಿ ಪ್ರೌಢಶಾಲೆಯ ಕಲಾ ಶಿಕ್ಷಕಿ ಎಸ್‌. ಪವಿತ್ರಾ ಮಾರ್ಗದರ್ಶನದಲ್ಲಿ 9ನೇ ತರಗತಿಯ ಎಸ್‌. ಅನ್ಸಿರಾ, ಶರಣ್ಯ, ನಿರಂಜನ್‌ ಸಿದ್ದಪಡಿಸಿರುವ ಥರ್ಮಕೋಲ್‌ನ ಯಕ್ಷಗಾನ ಕಿರೀಟ…, ಭತ್ತದ ಆತ್ಯಾಕರ್ಷಕ ಜ್ಯೂಯೆಲರಿ…, ಬಲೂನ್‌ ಪುಟ್ಟಿ, ಅಡಕೆ ಮತ್ತು ನವಧಾನ್ಯದಲ್ಲಿ ಒಡಮೂಡಿದ ಗಣಪ, ಸ್ಪಂಜಿನ ಶಂಖು… ಮನ ಮೆಚ್ಚುವಂತಿದ್ದವು.

ಕಸದಿಂದ ರಸ… ಎನ್ನುವಂತೆ ಹಳೆಯ ತೆಂಗಿನಕಾಯಿ, ಬಲೂನ್‌, ಪೇಪರ್‌ ಇತರೆ ವಸ್ತುಗಳ ಬಳಸಿ ಅನೇಕ ಸಾಮಗ್ರಿ ತಯಾರಿಸುವುದನ್ನು ನಮ್ಮ ಶಿಕ್ಷಕಿ ಪವಿತ್ರಾ ಹೇಳಿಕೊಟ್ಟಿದ್ದಾರೆ. ಶಾಲೆಯಲ್ಲಿ ಕ್ರಾಫ್ಟ್‌ ಪಿರಿಯಡ್‌ ಇದ್ದಾಗ ಮಾತ್ರ ಮಾಡುವುದಲ್ಲ. ಮನೆಯಲ್ಲೂ ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು.

ಬೆಳಗಾವಿ ಜಿಲ್ಲೆಯ ಹಣ್ಣಿಕೇರಿ ಪ್ರೌಢಶಾಲೆಯ ಮಹಾಂತೇಶ್‌ ದೊಡ್ಮನಿ, ಸಾಗರ್‌ ಬೆಳಗಣ್ಣನವರ್‌ ಸಿರಿಧಾನ್ಯ ಪ್ರಾತ್ಯಕ್ಷಿಕೆ, ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯ ಶ್ರೀ ರೇಣುಕ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ಕುಬೇರನಾಯ್ಕ, ಎ.ನಂದೀಶ್‌ ಸಿದ್ದಪಡಿಸಿರುವ ತಾರಸಿ ಉದ್ಯಾನವನ, ಮಳೆ ನೀರು ಕೊಯ್ಲು ಪ್ರಾತ್ಯಕ್ಷಿಕೆ, ಬೈಲಹೊಂಗಲದ ಸೋಮೈಯಾ ವಿನಯ ಮಂದಿರ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಶಿವಾನಿ, ಕಬ್ಬಿನ ಗರಿಯಿಂದ ಮಾಡಿದ ಮನೆ… ಎಲ್ಲವೂ ಉತ್ತಮವಾಗಿದ್ದವು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.