ಕೋವಿಡ್ ಸೋಂಕು ಹರಡದಂತೆ ಕ್ರಮ ಕೈಗೊಳ್ಳಿ: ಉಮಾಶಂಕರ್‌

ಕಂಟೈನ್ಮೆಂಟ್‌-ಬಫರ್‌ ಝೋನ್‌ಗಳ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿ

Team Udayavani, Jun 16, 2020, 10:38 AM IST

ಕೋವಿಡ್ ಸೋಂಕು ಹರಡದಂತೆ ಕ್ರಮ ಕೈಗೊಳ್ಳಿ: ಉಮಾಶಂಕರ್‌

ದಾವಣಗೆರೆ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್‌ ಅಧ್ಯಕ್ಷತೆಯಲ್ಲಿ ಕೋವಿಡ್‌-19 ಪರಿಶೀಲನಾ ಸಭೆ ನಡೆಯಿತು.

ದಾವಣಗೆರೆ: ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುವ ಸಾಧ್ಯತೆ ಹೆಚ್ಚಿದ್ದು, ಎಲ್ಲಾ ಅಧಿಕಾರಿಗಳು ಜಾಗರೂಕತೆಯಿಂದ ಕೆಲಸ ನಿರ್ವಹಿಸಿದರೆ ಮುಂದಿನ ದಿನಗಳಲ್ಲಿ ಅಪಾಯದಿಂದ ತಪ್ಪಿಸಿಕೊಳ್ಳಬಹುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ತಿಳಿಸಿದ್ದಾರೆ. ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಯೋಜಿಸಲಾಗಿದ್ದ ಕೋವಿಡ್‌ -19 ಪರಿಶೀಲನಾ ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್‌ -19 ಕೇಸ್‌ಗಳು ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ಕಂಟೇನ್ಮೆಂಟ್‌ ಝೋನ್‌, ಬಫರ್‌ ಝೋನ್‌ಗಳ ಎಲ್ಲರಿಗೂ ರೋಗ ಲಕ್ಷಣಗಳನ್ನು ಪತ್ತೆ ಮಾಡಿ ಟೆಸ್ಟ್‌ಗೆ ಒಳಪಡಿಸಬೇಕು. ಪ್ರತಿ ಮನೆಯಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ವೈದ್ಯರು ಮತ್ತು ನರ್ಸ್‌ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಜಾಹೀರಾತುಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಕಂಟೇನ್ಮೆಂಟ್‌ ಝೋನ್‌ಗಳಲ್ಲಿ ಸಮುದಾಯಕ್ಕೆ ಹರಡುವಂತಹ ಸಾಧ್ಯತೆಗಳು ಹೆಚ್ಚಿದ್ದು, ಅದನ್ನು ತಡೆಯುವಲ್ಲಿ ಹೆಚ್ಚಿನ ಗಮಸಹರಿಸಬೇಕು. ಬಫರ್‌ ಝೋನ್‌ಗಳಲ್ಲಿ ಪ್ರತಿದಿನ ಟೆಸ್ಟಿಂಗ್‌ ನಡೆಸಬೇಕು ಎಂದರು. ಜಿಲ್ಲೆಯ ಸೋಂಕಿತರಲ್ಲಿ ವೃದ್ದರು ಹೆಚ್ಚಿರುವುದು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಈವರೆಗೆ ದಾಖಲಾದ 227 ಕೇಸ್‌ ಗಳಲ್ಲಿ 60ಕ್ಕಿಂತ ಮೇಲ್ಪಟ್ಟ ವಯಸ್ಸಿನವರ ಸಂಖ್ಯೆ ಹೆಚ್ಚಾಗಿದೆ. ರೋಗಲಕ್ಷಣಗಳು ಇರುವ ಹಾಗೂ ಇಲ್ಲದಿರುವ ಸೋಂಕಿತರ ಸಂಖ್ಯೆಗಳು ಸಹ ಹೆಚ್ಚಾಗಿ
ದಾಖಲಾಗಿವೆ ಎಂದರು.

ಕೋವಿಡ್ ಸೋಂಕಿನ ಲಕ್ಷಣಗಳಿರುವರನ್ನು ಚೆನ್ನಾಗಿ ಆರೈಕೆ ಮಾಡಿ ಹಾಗೂ ಸರಿಯಾಗಿ ಉಪಚರಿಸಿ. ಜಾಲಿನಗರದಲ್ಲಿ ಸೋಂಕು ಪತ್ತೆಯಾಗಿರುವುದರ ಪ್ರಾಥಮಿಕ ಹಾಗೂ ಮೂಲ ಸಂಪರ್ಕ ಪತ್ತೆ ಹಚ್ಚಿ ಎಂದು ಸೂಚಿಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡದಂತೆ ಹೆಚ್ಚಿನ ಜಾಗ್ರತೆ ವಹಿಸಿ ಹಾಗೂ ತುಂಬಾ ಕಷ್ಟಪಟ್ಟು ಕೆಲಸ ನಿರ್ವಹಿಸುವದಕ್ಕಿಂತ ಸ್ಮಾರ್ಟ್‌ ವರ್ಕ್‌ ಮಾಡಿ ಎಂದು ಸಲಹೆ ನೀಡಿದರು. ಜಾಲಿನಗರದ ಒಟ್ಟು 127 ರಲ್ಲಿ 97 ರೋಗಿಗಳು ಗುಣಮುಖರಾಗಿದ್ದು, ಇನ್ನು 9 ಕೇಸ್‌ಗಳು ಮಾತ್ರ ಬಾಕಿ ಉಳಿದಿವೆ. ಜಿಲ್ಲೆಯಲ್ಲಿ ಕೋವಿಡ್‌-19 ಲ್ಯಾಬ್‌ ಉದ್ಘಾಟನೆಯಾಗಿದೆ. ಈವರೆಗೆ 12.116 ಮಂದಿಯನ್ನು ಟೆಸ್ಟ್‌ಗೆ ಒಳಪಡಿಸಿದ್ದೇವೆ. ತಲೆನೋವು, ಜ್ವರ ಮತ್ತು ಕೆಮ್ಮಿನ ಲಕ್ಷಣಗಳಿರುವ ಒಟ್ಟು 6 ಸಾವಿರ ಮಂದಿಯನ್ನು ಟೆಸ್ಟ್‌ಗೆ ಒಳಪಡಿಸಿದ್ದೇವೆ. ಒಟ್ಟು ಈಗ 26 ಸಕ್ರಿಯ ಕೇಸ್‌ಗಳು ಇವೆ. ಅದರಲ್ಲಿ 90 ವರ್ಷದ ವೃದ್ಧೆಯೊಬ್ಬರಿಗೆ ಸೋಂಕು ತಗುಲಿದ್ದು, ಎಚ್ಚರಿಕೆಯಿಂದ ನೋಡಿಕೊಳ್ಳಲಾಗುತ್ತದೆ ಎಂದು
ಡಾ| ಜಿ.ಡಿ. ರಾಘವನ್‌ ತಿಳಿಸಿದರು.

ಭಾನುವಾರ ಬಸವರಾಜಪೇಟೆ ವ್ಯಕ್ತಿಗೆ ಕೋವಿಡ್ ಸೋಂಕು ಕಂಡು ಬಂದಿದ್ದು, ಕುಟುಂಬದ 16 ಮಂದಿ ಕ್ವಾರಂಟೈನ್‌ಗೆ ಒಳಪಡಿಸಿದ್ದು, ಯಾರಿಗೂ ಸಹ ಸೋಂಕು ಕಂಡು ಬಂದಿಲ್ಲ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವಂತಹ ಮಕ್ಕಳು ಕ್ವಾರಂಟೈನ್‌ನಲ್ಲಿದ್ದರೆ ಅಥವಾ ಕೋವಿಡ್‌ ಪಾಸಿಟಿವ್‌ ಎಂದು ದಾಖಲಾಗಿದ್ದರೆ ಹಾಗೂ ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬಂದಿರುವ ಮಕ್ಕಳಿಗೆ ಮುಂದಿನ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಯೆಂದು ಪರಿಗಣಿಸಿ ಪರೀಕ್ಷೆ
ಬರೆಯಲು ಅವಕಾಶವಿರುತ್ತದೆ. ಮೊದಲ ಪ್ರಯತ್ನ ಎಂದು ಪರಿಗಣಿಸಲಾಗುತ್ತದೆ ಎಂದರು. ಪರೀಕ್ಷೆ ಕೇಂದ್ರಗಳನ್ನು ಸ್ಯಾನಿಟೈಸ್‌ಮಾಡಬೇಕು ಹಾಗೂ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅ ಧಿಕಾರಿಗಳಿಗೆ
ಸೂಚಿಸಿದ ಉಸ್ತುವಾರಿ ಕಾರ್ಯದರ್ಶಿ, ಎರಡೂವರೆ ತಿಂಗಳಿನ ಮಗು ಹಾಗೂ ತಾಯಿ ಗುಣಮುಖರಾಗಿರುವುದು ಖುಷಿಯ ವಿಚಾರ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ರಾಘವೇಂದ್ರಸ್ವಾಮಿ ಮಾತನಾಡಿ, ಐಎಲ್‌ಐ ಲಕ್ಷಣಗಳಿರುವಂತವರು, ಪ್ರಾಥಮಿಕ ಸಂರ್ಪಕ ಹೊಂದಿರುವವರು, ಕಂಟೇನ್ಮೆಂಟ್‌ ಹಾಗೂ ಬಫರ್‌ ಝೋನ್‌ಗಳಲ್ಲಿರುವವರು ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್‌ ಸಿಬ್ಬಂದಿ, ಶೀತ ಕೆಮ್ಮು ಲಕ್ಷಣಗಳಿರುವವರು, ಕಂಟೈನ್‌ ಮೆಂಟ್‌ ವಲಯದಲ್ಲಿನ 60 ಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು, ಬಾಣಂತಿಯರಿಗೆ 15 ದಿನಗಳ ನಂತರ ಕೋವಿಡ್‌ ಪರೀಕ್ಷೆ ಮಾಡಬೇಕು ಎಂದು
ತಿಳಿಸಿದರು.

ಡಿಸಿ ಮಹಾಂತೇಶ್‌ ಬೀಳಗಿ, ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಉಪವಿಭಾಗಾಧಿಕಾರಿ ಡಾ| ಮಮತಾ ಹೊಸಗೌಡರ್‌, ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಜಿ. ನಜ್ಮಾ ಇದ್ದರು.

ಟಾಪ್ ನ್ಯೂಸ್

ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

cm-b-bommai

ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್, ನೈಟ್ ಕರ್ಫ್ಯೂ ರದ್ದು: ಹೊಸ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ

ಹಾಸನ: ಸಾಲ ತೀರಿಸಲಾಗದೆ ಸ್ನೇಹಿತನನ್ನು ಕೊಂದ ದಂಪತಿ

ಹಾಸನ: ಸಾಲ ತೀರಿಸಲಾಗದೆ ಸ್ನೇಹಿತನನ್ನು ಕೊಂದ ದಂಪತಿ

pratap

ಮೈಸೂರು ಗ್ಯಾಸ್ ಟ್ರಬಲ್: ಸ್ವಪಕ್ಷೀಯರ ವಿರುದ್ಧ ಮತ್ತೆ ಸಿಂಹ ಘರ್ಜನೆ

mohammed shami

“ತಂಡಕ್ಕೆ ನಾಯಕನ ಅಗತ್ಯವಿದೆ”: ಮುಂದಿನ ಟೆಸ್ಟ್ ನಾಯಕನ ಕುರಿತು ಮೊಹಮ್ಮದ್ ಶಮಿ

ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಇಲ್ಲದಿದ್ರೆ…ಪೆಟ್ರೋಲ್, ಡೀಸೆಲ್ ಇಲ್ಲ: ದೆಹಲಿ ಸರ್ಕಾರ

ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಇಲ್ಲದಿದ್ರೆ…ಪೆಟ್ರೋಲ್, ಡೀಸೆಲ್ ಇಲ್ಲ: ದೆಹಲಿ ಸರ್ಕಾರ

1-sadsad

ಹೂ ಅಂಟಾವ ಮಾವ, ಉಹೂ ಅಂಟಾವ..! : ಶಾಸಕ ರಾಜೂಗೌಡ ಟಾಂಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanagere news

ಗುಣಮುಖರ ಪ್ರಮಾಣ ಹೆಚ್ಚಳ

davanagere news

ಕ್ಯಾಂಪಸ್‌ ಸಂದರ್ಶನದಲ್ಲಿ ವಿದ್ಯಾರ್ಥಿಗಳ ಆಯ್ಕೆ

davanagere news

ದುಗ್ಗಮ್ಮ ಜಾತ್ರೆಗೆ ಮುಹೂರ್ತ ಫಿಕ್ಸ್‌

ballari news

ಪ್ರಜಾಪ್ರಭುತ್ವದಲ್ಲಿ ಪ್ರತಿ ಮತ ಅಮೂಲ್ಯ

davanagere news

ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

MUST WATCH

udayavani youtube

ಚಿಕ್ಕಮಗಳೂರು : ಅರಣ್ಯ ಪ್ರದೇಶದಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ಸಾವಯವ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

ಹೊಸ ಸೇರ್ಪಡೆ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಾನೂನು ಹಾಗೂ ಜಲ ಸಂಪನ್ಮೂಲ ಸಚಿವರಾದ ಮಧುಸ್ವಾಮಿ ಭೇಟಿ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಾನೂನು ಹಾಗೂ ಜಲ ಸಂಪನ್ಮೂಲ ಸಚಿವರಾದ ಮಧುಸ್ವಾಮಿ ಭೇಟಿ

ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

cm-b-bommai

ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್, ನೈಟ್ ಕರ್ಫ್ಯೂ ರದ್ದು: ಹೊಸ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ

ಹಾಸನ: ಸಾಲ ತೀರಿಸಲಾಗದೆ ಸ್ನೇಹಿತನನ್ನು ಕೊಂದ ದಂಪತಿ

ಹಾಸನ: ಸಾಲ ತೀರಿಸಲಾಗದೆ ಸ್ನೇಹಿತನನ್ನು ಕೊಂದ ದಂಪತಿ

pratap

ಮೈಸೂರು ಗ್ಯಾಸ್ ಟ್ರಬಲ್: ಸ್ವಪಕ್ಷೀಯರ ವಿರುದ್ಧ ಮತ್ತೆ ಸಿಂಹ ಘರ್ಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.