ಆಳವಾದ ಜ್ಞಾನವಿದ್ದಲ್ಲಿ ಬೋಧನೆ ಸುಲಭ


Team Udayavani, Feb 8, 2019, 5:57 AM IST

dvg-5.jpg

ದಾವಣಗೆರೆ: ಗ್ರಾಮೀಣ ಪ್ರದೇಶದಲ್ಲೂ ಇಂಗ್ಲಿಷ್‌ ಸಾಂಸ್ಕೃತಿಕ ಸ್ವರೂಪ ಪಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮಾನವ ಹಕ್ಕುಗಳ ವೇದಿಕೆ ಜಿಲ್ಲಾಧ್ಯಕ್ಷ ಬಿ.ಎಂ. ಹನುಮಂತಪ್ಪ ಹೇಳಿದ್ದಾರೆ.

ಇಂಗ್ಲಿಷ್‌ ಭಾಷೆಯ ನಾಟಕ, ಪಾತ್ರಾಭಿನಯ, ವಾಚನಾಭಿನಯ, ಕಥಾಭಿನಯ, ಮತ್ತಿತರ ಅಭಿನಯ ಪ್ರಕಾರಗಳು ಮತ್ತು ಕಾರ್ಯಕ್ರಮಗಳು ಬೆಂಗಳೂರು, ಮೈಸೂರು ಮತ್ತು ಧಾರವಾಡಗಳಂಥ ಅಕಾಡೆಮಿಕ್‌ ಹಾಗೂ ರಾಷ್ಟ್ರಮಟ್ಟದಲ್ಲಿ ಮನ್ನಣೆಗಳಿಸಿದ ವಿಶ್ವವಿದ್ಯಾಲಯಗಳಿಗೆ ಸೀಮಿತವಾಗಿವೆ. ಅಂಥಹ ಕಾರ್ಯಕ್ರಮ ನರಗನಹಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲೂ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು. 

ಇಂಗ್ಲಿಷ್‌ ಅಷ್ಟು ಸುಲಭವಾದ ಭಾಷೆಯಲ್ಲ. ಇದು ಪಟ್ಟಣದ ಶ್ರೀಮಂತರ ಮತ್ತು ಬಂಡವಾಳಶಾಹಿಗಳ ಸ್ವತ್ತಾಗಿತ್ತು. ಆ ಭಾಷೆಯನ್ನು ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕ ರೂಪದಲ್ಲಿ ತರುವುದು ತುಂಬಾ ಕಷ್ಟಕರ. ಆದರೂ ಅದನ್ನು ಗ್ರಾಮೀಣ ಮಕ್ಕಳಿಂದ ಸಾಧ್ಯವಾಗಿಸಿರುವ ಶಿಕ್ಷಕ ಪ್ರಕಾಶ್‌ ಕೊಡಗನೂರ್‌ ಕಾರ್ಯ ಸ್ತುತ್ಯಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಕಲಿಕೆಗೆ ಚೌಕಟ್ಟಿಲ್ಲ. ಚೆನ್ನಾಗಿ ಬರೆಯುವ, ಮಾತನಾಡುವ ವಿದ್ಯಾರ್ಥಿಗಳಿಗೆ ಇದೇ ವ್ಯಾಕರಣವೆಂದು ಹಿಂದೆ ಶಿಕ್ಷಕರು ಕಲಿಸುತ್ತಿದ್ದರು. ಡೈರೆಕ್ಟ್ ಮೆಥಡ್‌ ಪ್ರಯೋಜನಕಾರಿಯಲ್ಲ , ಬದಲಿಗೆ ಭಾಷಿಕ ಪರಿಸರವನ್ನು ವಿವಿಧ ಪ್ರಕಾರಗಳಲ್ಲಿ ಕಟ್ಟಿ ಕೊಡುವ ಕ್ರಮ ಅತ್ಯಂತ ಪರಿಣಾಮಕಾರಿಯಾದದ್ದು. ಇದಕ್ಕೆ ಭಾಷಾ ಶಿಕ್ಷಕರೇ ಆಗಲಿ ಇಲ್ಲವೇ ವಿಷಯ ಶಿಕ್ಷಕರೇ ಆಗಲಿ ಆಳವಾದ ಜ್ಞಾನ ಹೊಂದಿರಲೇಬೇಕು. 

ಕೂದಲಿದ್ದವನು ಹೇಗೆ ಬೇಕಾದರೂ ತಲೆ ಬಾಚಿಕೊಳ್ಳುವಂತೆ ಭಾಷೆಯಲ್ಲಿ ಪ್ರೌಢಿಮೆ ಹೊಂದಿದವರಿಗೆ ಕಲಿಸುವ ಕ್ರಮ ಕಷ್ಟಕರವೇನಲ್ಲ ಎಂದರು. ವಿಶೇಷ ಆಹ್ವಾನಿತರಾಗಿದ್ದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌. ಎಚ್‌. ಅರುಣ್‌ಕುಮಾರ್‌ ಮಾತನಾಡಿ, ಉತ್ತಮ ಚಟುವಟಿಕೆ ಮತ್ತು ಕಾರ್ಯದ ಹಿಂದೆ ಬಹಳಷ್ಟು ಶ್ರಮ ಬೇಕಿದೆ. ಇಂದು ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಪ್ರಪಂಚ ಬಹಳ ಚಿಕ್ಕದಾಗಿದೆ. ನಮ್ಮದಲ್ಲದ ಭಾಷೆಯಾದ ಇಂಗ್ಲಿಷ್‌ ಅರ್ಥ ಮಾಡಿಕೊಂಡು ಭಾಷೆಯ ಏರಿಳಿತ, ಉಚ್ಚಾರಣೆ, ಹಾವ-ಭಾವದಿಂದ ಮಕ್ಕಳು ನಟಿಸುತ್ತಿರುವುದು ಅದ್ಭುತ ಎಂದು ಬಣ್ಣಿಸಿದರು. ಆನಗೋಡು ಶಾಲೆ ಮುಖ್ಯ ಶಿಕ್ಷಕ ಲೋಕಣ್ಣ ಮಾಗೋಡ್ರ ಮಾತನಾಡಿ, ನಾವು ಮಾಡಬೇಕಾದ ಕಾರ್ಯದ ಬಗ್ಗೆ ದೃಢತೆ ಹೊಂದಿದ್ದರೆ ಬಂಜರು ಭೂಮಿಯಲ್ಲೂ ಸಹ ಬೆಳೆ ತೆಗೆಯಬಹುದು ಎಂದರು.

4 ಮತ್ತು 5ನೇ ತರಗತಿ ಮಕ್ಕಳಿಂದ ವಸಿಷ್ಟ ಮತ್ತು ಶಬಲೆ ಪಾಠಗಳ ವಾಚನಾಭಿನಯ, 6ನೇ ತರಗತಿ ಮಕ್ಕಳಿಂದ ಎ ಚಾಟ್‌ ವಿತ್‌ ದ ಗ್ರಾಸ್‌ ಹಾಪರ್‌ ಪಾಠದ ಪಾತ್ರಾಭಿನಯ ಮತ್ತು 7ನೇ ತರಗತಿ ಮಕ್ಕಳಿಂದ ದ ವಂಡರ್‌ ಬೌಲ್‌ ಪಾಠದ ಕಥಾಭಿನಯ ಸಭಿಕರ ಮನಸೂರೆಗೊಂಡಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್‌.ಆರ್‌. ಅಣ್ಣೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಶಿಕ್ಷಕ ಯಲ್ಲಪ್ಪ ಕಡೇಮನಿ, ಎನ್‌ .ಪಿ.ನಾಗರಾಜ್‌, ನಿವೃತ್ತ ಮುಖ್ಯ ಶಿಕ್ಷಕ ಎಚ್‌. ಚಿನ್ನಪ್ಪ, ಎನ್‌.ಜಿ.ಸುಲೋಚನಮ್ಮ, ಇತರರು ಈ ಸಂದರ್ಭದಲ್ಲಿದ್ದರು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.