Udayavni Special

ಪ್ರಾದೇಶಿಕತೆಯಿಂದ ಹಕ್ಕುಗಳಿಗೆ ಧಕ್ಕೆ


Team Udayavani, Feb 18, 2019, 7:42 AM IST

dvg-3.jpg

ಹರಿಹರ: ದೇಶದಲ್ಲಿ ಇತ್ತೀಚಿಗೆ ಮಿತಿಮೀರುತ್ತಿರುವ ಪ್ರಾದೇಶಿಕತೆಯಿಂದ ಮಾನವ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ವಕೀಲ, ಮಾನವ ಹಕ್ಕುಗಳ ಹೋರಾಟಗಾರರಾದ ಮೋಸಸ್‌ ಮುರುಗವೇಲು ಅಭಿಪ್ರಾಯಪಟ್ಟರು.

ರಾಜ್ಯ ವಕೀಲರ ಪರಿಷತ್‌, ತಾಲೂಕು ವಕೀಲರ ಸಂಘ ಹಾಗೂ ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಆಯೋಜಿಸಿದ್ದ ಕಾನೂನು ಕಾರ್ಯಗಾರದಲ್ಲಿ ಮಾನವ ಹಕ್ಕುಗಳ ಕುರಿತು ಉಪನ್ಯಾಸ ನೀಡಿದ ಅವರು, ಭಾರತದ ನಾಗರಿಕರಿಗೆ ದೇಶದ ಯಾವುದೇ ಪ್ರದೇಶಕ್ಕೆ ಮುಕ್ತವಾಗಿ ಸಂಚರಿಸುವ, ವಾಸಿಸುವ, ಉದ್ಯೋಗ ಹಿಡಿಯುವ ಹಕ್ಕಿದೆ. ಆದರೆ ಮಹಾರಾಷ್ಟ್ರದ ಒಂದು ರಾಜಕೀಯ ಪಕ್ಷ ಮರಾಠಿಗರಲ್ಲದವರನ್ನು ಹೊರದೂಡಲು ನೋಡುತ್ತಿದೆ. ಕೆಲ ರಾಜ್ಯಗಳಲ್ಲಿ ಆಯಾ ಭಾಷಿಕರಿಗೆ ಮಾತ್ರ ಉದ್ಯೋಗ ದೊರೆಯಬೇಕು ಎನ್ನಲಾಗುತ್ತಿದೆ. ನೆಲ-ಜಲ, ಜಾತಿ-ಧರ್ಮ, ಭಾಷೆ ಆಧಾರದಲ್ಲಿ ತಾರತಮ್ಯ ಹೆಚ್ಚಾಗಲು ಕೆಲ ಪ್ರಾದೇಶಿಕ ಪಕ್ಷಗಳೂ ಕಾರಣವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ನಾಗರಾಜ್‌ ಹಲವಾಗಲು ಮಾತನಾಡಿ, ಮೂರು ದಿನಗಳ ಕಾರ್ಯಾಗಾರದಲ್ಲಿ ಪರಿಣಿತರು ವಕೀಲಿ ವೃತ್ತಿಯ ಕೌಶಲಗಳನ್ನು ತಿಳಿಸಿಕೊಟ್ಟಿದ್ದು, ಅವುಗಳ ಸದ್ಬಳಕೆ ಮಾಡಿಕೊಂಡು ಯುವ ವಕೀಲರು ಯಶಸ್ಸು ಸಾಧಿಸಬೇಕು ಎಂದರು. 

ಹಿರಿಯ ವಕೀಲರಾದ ಕೆ.ರಾಜು ಕಾರ್ಯಾಗಾರ ಕುರಿತು ಅನಿಸಿಕೆ ವ್ಯಕ್ತಪಡಿಸಿ, ಪರಿಣಿತರು ಬಹು ಮುಖ್ಯ ಕಾಯ್ದೆಗಳ ಮುಖ್ಯಾಂಶಗಳನ್ನು ಸಂಕ್ಷಿಪ್ತವಾಗಿ ತಿಳಿಸಿದ್ದಲ್ಲದೆ ತಮ್ಮ ವೃತ್ತಿ ಬದುಕಿನ ಅನುಭವ ಹಂಚಿಕೊಂಡಿದ್ದು ಉಪಯುಕ್ತವಾಗಿತ್ತು ಎಂದರು. ಮತ್ತೂಬ್ಬ ಹಿರಿಯ ವಕೀಲರಾದ ನಾಗರಾಜ್‌ ಬಿ. ಮಾತನಾಡಿ, ಆಗಾಗ್ಗೆ ಇಂತಹ ಕಾರ್ಯಗಾರಗಳನ್ನು ಆಯೋಜಿಸಬೇಕು ಎಂದರು. ವಕೀಲರಾದ ಶ್ರೀಧರ್‌ ಮೆಹರಾಡೆ ಮಾತನಾಡಿ, ಕಾನೂನು ವಿಷಯಗಳ ಚರ್ಚೆ, ಸಂವಾದ ನಮ್ಮ ಜ್ಞಾನವನ್ನು ಮತ್ತಷ್ಟು ಹರಿತಗೊಳಿಸುತ್ತದೆ ಎಂದರು.

ಸಂಘದ ಕಾರ್ಯದರ್ಶಿ ಎಚ್‌.ಎಚ್‌. ಲಿಂಗರಾಜು, ವಕೀಲರಾದ ಸೈಯದ್‌ ಯೂನಸ್‌, ಇನಾಯತ್‌ ಉಲ್ಲಾ ಟಿ., ಜಿ.ಬಸವಣ್ಯಪ್ಪ, ಪುಷ್ಪ ಕೆ.ಜಿ., ಲೋಹಿತಾ, ಚೇತನಾ, ಜಮುನಾ, ಅಶ್ವಿ‌ನಿ, ಸಾಕಮ್ಮ, ಜಿ.ಎಚ್‌. ಭಾಗೀರಥಿ, ಕೆ.ಜಿ.ಕೆ.ಪಾಟೀಲ್‌, ರಿಯಾಜ್‌ ಅಹಮದ್‌, ಸುಬಾಶ್ಚಂದ್ರ ಬೋಸ್‌, ಅಂಬಾದಾಸ ಮೆಹರಾಡೆ, ರಾಜು ಟಿ.ಮಸವಳ್ಳಿ, ಗಣೇಶ್‌ ದುರ್ಗದ್‌, ಸಿ.ಬಿ.ರಾಘವೇಂದ್ರ, ಸುರೇಶ್‌ ಕುಮಾರ್‌ ವೈ., ಬಿ.ಎಸ್‌.ಗಣೇಶ್‌, ಪರಶುರಾಮ್‌ ಅಂಬೇಕರ್‌ ಮತ್ತಿತರರಿದ್ದರು.

ಟಾಪ್ ನ್ಯೂಸ್

skit

ಸ್ಕಿಟ್‌ನಲ್ಲಿ ಭಾವನೆಗಳಿಗೆ ಧಕ್ಕೆ: ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಏಮ್ಸ್ ವಿದ್ಯಾರ್ಥಿ ಸಂಘ

ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಎಫ್ ಡಿಐಗೆ ಆಹ್ವಾನ: ಮುರುಗೇಶ್ ನಿರಾಣಿ

ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಎಫ್ ಡಿಐಗೆ ಆಹ್ವಾನ: ಮುರುಗೇಶ್ ನಿರಾಣಿ

k-r

ಮಹಾ ಮಳೆಗೆ 21 ಮಂದಿ ಬಲಿ: ಕೇರಳ ಸಿಎಂಗೆ ಪ್ರಧಾನಿ ಮೋದಿ ಕರೆ

rain

ಉತ್ತರಾಖಂಡದಲ್ಲಿ ಭಾರಿ ಮಳೆ ಎಚ್ಚರಿಕೆ : ತುರ್ತು ಪರಿಸ್ಥಿತಿಗೆ ಅಗತ್ಯ ವ್ಯವಸ್ಥೆ

ಹಣಕಾಸು ಸಚಿವಾಲಯ ಸರ್ಕಾರಿ ಆಸ್ತಿಗಳ ಮೋನಿಟೈಷೇಶನ್ ಗಾಗಿ ಕ್ಯಾಬಿನೆಟ್‌ ಅನುಮೋದನೆ ಪಡೆಯಲಿದೆ

ಸಿಪಿಎಸ್‌ಇ ಒಡೆತನದ ಭೂಮಿ: ಹಣಕಾಸು ಸಚಿವಾಲಯದಿಂದ ಹೊಸ ಚಿಂತನೆ

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ ಬೊಮ್ಮಾಯಿ

hgyuy

“ಗೋರ್ಖಾ” ಪೋಸ್ಟರ್‍ ನ  ತಪ್ಪು ತಿದ್ದಿದ ಮಾಜಿ ಯೋಧನಿಗೆ ಅಕ್ಷಯ್‌ ಧನ್ಯವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanagere news

ಬಿಎಸ್‌ವೈ ಪ್ರಚಾರಕ್ಕೆ ಬರ್ತಾರೆ

davanagere news

ಹಿರೇಕಲ್ಮಠದೊಂದಿಗೆ ಅವಿನಾಭಾವ ಸಂಬಂಧ

davanagere news

ನಮ್ಮದು ಸ್ಪದನಶೀಲ ಸರ್ಕಾರ

davanagere news

ಹೊನ್ನಾಳಿಯಲ್ಲಿ ಶೀಘ್ರ ಉಪವಿಭಾಗಾಧಿಕಾರಿ ಕಚೇರಿ ಆರಂಭ: ಸಚಿವ ಅಶೋಕ್‌

cmಮನೆ ಬಾಗಿಲಿಗೆ ಜನಸೇವಕ; ಉನ್ನತ ಅಧಿಕಾರಿಗಳ ಭೇಟಿ, ಸಮಸ್ಯೆಗೆ ಪರಿಹಾರ

ಮನೆ ಬಾಗಿಲಿಗೆ ಜನಸೇವಕ; ಉನ್ನತ ಅಧಿಕಾರಿಗಳ ಭೇಟಿ, ಸಮಸ್ಯೆಗೆ ಪರಿಹಾರ

MUST WATCH

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

ಹೊಸ ಸೇರ್ಪಡೆ

jjkjhgfdsa

ಯೋಜನೆಗಳ ಸದುಪಯೋಗ ಮಾಡಿಕೊಳ್ಳಿ : ಪಾಟೀಲ

gjhgfds

ಗ್ರಾಮಗಳ ಸ್ಥಳಾಂತರವೇ ಪರಿವಾರವಲ್ಲ

gtjhgfdswq

ಕುಮಾರಿಯರಿಗೆ ಉಡಿ ತುಂಬಿದ ನಾಲವಾರ ಶ್ರೀ

hfghftytr

ಗುಳದಾಳಕ್ಕೆ ನಡೆದುಕೊಂಡು ಬಂದ ಜಿಲ್ಲಾಧಿಕಾರಿ 

ಅಧಿಕಾರ ಮೊಟಕುಗೊಳಿಸಲು ಪ್ರತಾಪ್ ಸಿಂಹ, ಕೆ.ಮಹದೇವ್ ಒಳ ಒಪ್ಪಂದ:ಮಾಜಿ ಶಾಸಕ ಕೆ.ವೆಂಕಟೇಶ

ಅಧಿಕಾರ ಮೊಟಕುಗೊಳಿಸಲು ಪ್ರತಾಪ್ ಸಿಂಹ, ಕೆ.ಮಹದೇವ್ ಒಳ ಒಪ್ಪಂದ:ಮಾಜಿ ಶಾಸಕ ಕೆ.ವೆಂಕಟೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.