ಬಿಜೆಪಿ ಗೆಲುವು ಖಚಿತ

Team Udayavani, Mar 1, 2019, 11:14 AM IST

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಳೆದ ಮೂರು ಚುನಾವಣೆಗಳಿಗಿಂತಲೂ ಅತ್ಯಧಿಕ ಮತಗಳಿಂದ ಗೆಲ್ಲಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎಸ್‌. ಸುರೇಶ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಮೇರಾ ಬೂತ್‌ ಸಬ್‌ಸೆ ಮಜ್‌ಬೂತ್‌… ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಡಿಸೆಂಬರ್‌ನಲ್ಲಿ ಪಕ್ಷಕ್ಕೆ ಹೇಳಿಕೊಳ್ಳುವಂತಹ ವಾತಾವರಣ ಇರಲಿಲ್ಲ. ಈಗ ದೇಶದ್ಯಾಂತ ಜನರು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಇನ್ನೂ ಹೆಚ್ಚು ಪರಿಶ್ರಮದಿಂದ ಕೆಲಸ ಮಾಡಬೇಕು. ದಾವಣಗೆರೆ ಒಳ ಗೊಂಡಂತೆ ಎಲ್ಲಾ ಕ್ಷೇತ್ರದಲ್ಲಿ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮತಗಟ್ಟೆ ಗೆಲ್ಲುವರು ಚುನಾವಣೆ ಗೆದ್ದಂತೆ…ಎಂದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ. ಕಾರ್ಯಕರ್ತರು ಚುನಾ ವಣೆ ಗೆಲ್ಲಬೇಕು ಎನ್ನುವ ದೃಷ್ಟಿಯಲ್ಲಿ ಕೆಲಸ ಮಾಡಬೇಕಿದೆ ಎಂದರು.

ಮುಂದಿನ ಚುನಾವಣೆಯಲ್ಲಿ ದೇಶದಲ್ಲಿ ಬಿಜೆಪಿ ಎಷ್ಟು ಸ್ಥಾನ ಪಡೆಯಬೇಕು ಎಂಬ ವಿಚಾರದಲ್ಲಿ ಅಮಿತ್‌ ಷಾ, ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ, ಜಿಲ್ಲೆಯಲ್ಲಿ ಹಿರಿಯ ಮುಖಂಡರು ಕೆಲಸ ಮಾಡುತ್ತಾರೆ. ಕಾರ್ಯಕರ್ತರು ತಮ್ಮ ಬೂತ್‌ ಬಲಿಷ್ಠ ಮಾಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಬಿಜೆಪಿ ವಿರುದ್ಧ ರಚಿತಗೊಂಡಿರುವ ಮಹಾ ಗಟಬಂಧನ್‌ನಿಂದ ಒಂದೊಂದೇ ಪಕ್ಷಗಳು ಹೊರಬರುತ್ತಿವೆ. ಕೇಂದ್ರದ ಸರ್ವವ್ಯಾಪಿ ಸರ್ವಸ್ಪರ್ಶ ಬಜೆಟ್‌, ಆಯುಷ್ಮಾನ್‌ ಭಾರತ್‌ ಯೋಜನೆಯಿಂದ ಬಡವರಿಗೆ ಉಪಯೋಗ ಆಗುತ್ತಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಉಜ್ವಲ, ಜನೌಷಧಿ, ಸ್ಟಂಟ್‌ ಇತರೆ ವೈದ್ಯಕೀಯ ಉಪಕರಣಗಳ ಭಾರೀ ಪ್ರಮಾಣದಲ್ಲಿ ದರ ಇಳಿಕೆ, ಕಪ್ಪು ಹಣಕ್ಕೆ ಕಡಿವಾಣ, ಸರ್ಜಿಕಲ್‌ ದಾಳಿ ಸೇರಿದಂತೆ ದೇಶದ ಜನರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಬಿಜೆಪಿ ಜನರೊಂದಿಗೆ ಇರುವ ಪಕ್ಷ. ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಯೋಜನೆಗಳನ್ನು ಜನರಿಗೆ ತಲುಪಿಸಲು ಅನೇಕ ಕಾರ್ಯಕ್ರಮ ಮಾಡಿದ್ದೇವೆ. ಮೇರಾ ಪರಿವಾರ್‌ ಬಿಜೆಪಿ ಪರಿವಾರ್‌, ಕಮಲ್‌ ಜ್ಯೋತಿ… ಕಾರ್ಯಕ್ರಮಗಳ ಮೂಲಕ ಜನರಲ್ಲಿಗೆ ತಲುಪಿದ್ದೇವೆ ಎಂದರು. 

ಬಿಜೆಪಿ ಕಾರ್ಯಕರ್ತರು ಚುನಾವಣೆಯಲ್ಲಿ ಮೂರು ತಿಂಗಳು ಸತತ ಪರಿಶ್ರಮದಿಂದ ಕೆಲಸ ಮಾಡಿದರೆ. ಕಾಂಗ್ರೆಸ್‌ ಕಾರ್ಯಕರ್ತರು ಕೇವಲ ಮೂರು ದಿನ ಕೆಲಸ ಮಾಡುತ್ತಾರೆ.

ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಸರ್ಕಾರದ ಕೆಲಸಗಳನ್ನು ತಿಳಿಸುತ್ತಾರೆ. ಹೀಗೆ- ಹೋಗುವ ಕಾರ್ಯಕರ್ತರನ್ನು ನಾಗರಿಕರು ಗೌರವದಿಂದ ಮನೆಯೊಳಗೆ ಕರೆಸಿಕೊಳ್ಳುತ್ತಾರೆ. ಅಂಥ ಕಾರ್ಯಕರ್ತರು ನಮ್ಮಲ್ಲಿದ್ದಾರೆ ಎಂದು ಸುರೇಶ್‌ಕುಮಾರ್‌ ಹೇಳಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಮಹಿಳಾ ಮೋರ್ಚಾ ಅಧ್ಯಕ್ಷೆ ಎಚ್‌.ಸಿ. ಜಯಮ್ಮ, ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌, ಎಚ್‌. ಎನ್‌. ಶಿವಕುಮಾರ್‌, ರಾಜನಹಳ್ಳಿ ಶಿವಕುಮಾರ್‌, ಮಾಜಿ ಮೇಯರ್‌ ಸುಧಾ ಜಯರುದ್ರೇಶ್‌, ಕೆ. ಹೇಮಂತ್‌ ಕುಮಾರ್‌, ಭಾಗ್ಯ ಪಿಸಾಳೆ, ಎಂ. ಟಿಪ್ಪುಸುಲ್ತಾನ್‌, ಎಲ್‌.ಡಿ. ಗೋಣೆಪ್ಪ ಇತರರು ಇದ್ದರು.

ರಾಜಕೀಯಕ್ಕೆ “ವಾಯುದಾಳಿ’ ಬಳಕೆ ಬೇಡ ದಾವಣಗೆರೆ: ಭಾರತ ಪಾಕಿಸ್ತಾನದ ಮೇಲೆ ನಡೆಸಿರುವ ವಾಯುದಾಳಿ ವಿಚಾರವನ್ನು ಯಾರೂ ಸಹ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಬಿಜೆಪಿ ಹಿರಿಯ ಮುಖಂಡ, ಶಾಸಕ ಎಸ್‌. ಸುರೇಶ್‌ಕುಮಾರ್‌ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಭಾರತ ಪಾಕಿಸ್ತಾನದ ಮೇಲೆ ನಡೆಸಿರುವ ವಾಯುದಾಳಿಯಿಂದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 22 ಸ್ಥಾನ ಗೆಲ್ಲಲಿದೆ ಎಂದು ಬಿ.ಎಸ್‌. ಯಡಿಯೂರಪ್ಪ ಹೇಳಿಕೆ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ಅವರು ಯಾವ ಪದ ಬಳಸಿದ್ದಾರೆ ನನಗೆ ಗೊತ್ತಿಲ್ಲ. ಯಾರೂ ಕೂಡ ವಾಯುದಾಳಿ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ವ್ಯಕ್ತಿಗಿಂತ ದೇಶ ದೊಡ್ಡದು. ಬಿಜೆಪಿ ಸೇನೆಯ ವಿಚಾರವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುವುದಿಲ್ಲ ಎಂದರು.

ದೇಶದಲ್ಲಿ ಬೇರೂರಿರುವ ಭಯೋತ್ಪಾದನೆ ಕಿತ್ತು ಹಾಕಲು ಇದು ಒಳ್ಳೆಯ ಸಮಯ. ಧಾರವಾಹಿಗಳ ಕಂತಿನ ರೀತಿಯಲ್ಲಿ ಭಯೋತ್ಪಾದನೆ ನಿಗ್ರಹ ಮಾಡುವುದಕ್ಕೆ ಆಗುವುದಿಲ್ಲ. ಬೇರು ಸಮೇತ ಕಿತ್ತೂಗೆಯಬೇಕು ಎಂದು ತಿಳಿಸಿದರು.

ಮರೆಗುಳಿತನಕ್ಕೆ ಸಾಕ್ಷಿ: ಉಗ್ರರನ್ನು ಸಾಯಿಸಬಾರದಿತ್ತು ಎಂಬುದಾಗಿ ತೋಟಗಾರಿಕಾ ಇಲಾಖೆ ಸಚಿವ ಎಂ.ಸಿ. ಮನಗೂಳಿ ಹೇಳಿರುವುದು ಅವರ ಮರೆಗುಳಿತನಕ್ಕೆ ಸಾಕ್ಷಿ. ಸೈನಿಕರ ಬಗ್ಗೆ ಬಾಲಿಶ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸುರೇಶ್‌ಕುಮಾರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಈ ವಿಭಾಗದಿಂದ ಇನ್ನಷ್ಟು

  • ದಾವಣಗೆರೆ: ಅಂಗವಿಕಲರು ಉತ್ತಮ ಸಾಧನೆಯ ಮೂಲಕ ಯಾರಿಗೇನು ಕಡಿಮೆ ಇಲ್ಲ ಎಂಬುದನ್ನು ತೋರಿಸಬೇಕು ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌...

  • ದಾವಣಗೆರೆ: ರೈತರ ಕುಂದುಕೊರತೆ ಚರ್ಚಿಸಲು ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ ತಿಳಿಸಿದ್ದಾರೆ. ಸೋಮವಾರ...

  • ದಾವಣಗೆರೆ: ದಾವಣಗೆರೆಯಲ್ಲೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡುವುದಾಗಿ ವಿರಕ್ತ...

  • ದಾವಣಗೆರೆ: ಸಮಾಜ ಸೇವೆ... ಎನ್ನುವುದು ಜೀವನದ ಸಾರ್ಥಕತೆಯ ಪ್ರತೀಕ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಪ್ರತಿಪಾದಿಸಿದರು. ಭಾನುವಾರ ಕುವೆಂಪು...

  • ಹೊನ್ನಾಳಿ: ಬೇಲಿಮಲ್ಲೂರು ಜಿಪಂ ವ್ಯಾಪ್ತಿಯ ಬೇಲಿಮಲ್ಲೂರು, ಕೋಟೆಮಲ್ಲೂರು, ಅರಕೆರೆ, ಹಿರೇಗೋಣಿಗೆರೆ, ನರಸಗೊಂಡಹಳ್ಳಿ, ಮಾಸಡಿ, ಹೊಸಗೊಲ್ಲರಹಳ್ಳಿ, ಹೊಸದೇವರ...

ಹೊಸ ಸೇರ್ಪಡೆ