ಅಪಘಾತವೆಸಗಿ ಪರಾರಿಯಾಗಿದ್ದ ಚಾಲಕ ಪೊಲೀಸ್‌ ವಶಕ್ಕೆ


Team Udayavani, Apr 6, 2022, 3:52 PM IST

21-arrest

ಹೊನ್ನಾಳಿ: ಅಪಘಾತವೆಸಗಿ ವ್ಯಕ್ತಿ ಸಾವಿಗೆ ಕಾರಣನಾಗಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹೊನ್ನಾಳಿ ಠಾಣೆ ಸಿಪಿಐ ಟಿ.ವಿ. ದೇವರಾಜ್‌ ಯಶಸ್ವಿಯಾಗಿದ್ದಾರೆ.

ಕ್ಯಾಂಟರ್‌ ಚಾಲಕ ನ್ಯಾಮತಿ ತಾಲೂಕು ಸೋಗಿಲು ಗ್ರಾಮದ ನಿವಾಸಿ ತುಕಾರಾಮ್‌ ಅಲಿಯಾಸ್‌ ತುಕ್ಯಾ ನಾಯ್ಕ(22) ಬಂಧಿತ ಆರೋಪಿ.

ಈತ ತಾಲೂಕಿನ ಎಚ್‌. ಕಡದಕಟ್ಟೆ ಸರ್ಕಲ್‌ ಸಮೀಪದ ಪೆಟ್ರೋಲ್‌ ಬಂಕ್‌ ಬಳಿ ಮಾ. 21ರಂದು ಬೈಕ್‌ಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ. ಈ ಅಪಘಾತದಲ್ಲಿ ಬೈಕ್‌ ಸವಾರ ಎಚ್‌. ಕಡದಕಟ್ಟೆ ಗ್ರಾಮದ ಸಿ.ಎಸ್‌. ಬಸಪ್ಪ (52) ಸ್ಥಳದಲ್ಲೇ ಸಾವಿಗೀಡಾಗಿದ್ದರು.

ಆರೋಪಿಯನ್ನು ಬಂಧಿಸಲು ಮುಂದಾದ ಸಿಪಿಐ ಟಿ.ವಿ. ದೇವರಾಜ್‌ ವಾರ ಕಾಲ ಹೊನ್ನಾಳಿ-ನ್ಯಾಮತಿ ತಾಲೂಕುಗಳ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು. ನರಸಗೊಂಡನಹಳ್ಳಿ, ಅರಕೆರೆ, ಗೊಲ್ಲರಹಳ್ಳಿ, ದಾನಿಹಳ್ಳಿ, ಸೋಗಿಲು, ಕೆಂಚಿಕೊಪ್ಪ ಮತ್ತಿತರ ಗ್ರಾಮಗಳಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವಿವಿಧ ಲಘು ವಾಹನಗಳ ಮೇಲೆ ಕಣ್ಣಿಟ್ಟಿದ್ದರು. ಈ ಮಧ್ಯೆ ಮಾ. 28ರಂದು ಹೊನ್ನಾಳಿ ಪಟ್ಟಣದ ಬಂಬೂ ಬಜಾರ್‌ನಲ್ಲಿ ಇರುವ ಸಾಯಿ ಆಗ್ರೋ ಕೇಂದ್ರದಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆಗ ಕ್ಯಾಂಟರ್‌ವೊಂದು ಹೊನ್ನಾಳಿ ಪಟ್ಟಣದ ಮೂಲಕ ಹಾದು ಹೋಗಿರುವುದು ಪತ್ತೆಯಾಗಿದೆ.

ವಾಹನದ ನೋಂದಣಿ ಸಂಖ್ಯೆ ದಾಖಲಿಸಿಕೊಂಡು ಪತ್ತೆಗೆ ಮುಂದಾಗಿದ್ದಾರೆ. ಮಾ. 31ರಂದು ಕೆಂಚಿಕೊಪ್ಪ ಗ್ರಾಮದಲ್ಲಿ ಮೆಕ್ಕೆಜೋಳದ ಬೆಂಡುಗಳನ್ನು (ಧಾನ್ಯರಹಿತ ತೆನೆಗಳನ್ನು)ತುಂಬುತ್ತಿದ್ದ ಕ್ಯಾಂಟರ್‌ ಪರಿಶೀಲಿಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಸಿಪಿಐ ಟಿ.ವಿ. ದೇವರಾಜ್‌ ಅವರು ಆರೋಪಿ ತುಕಾರಾಮ್‌ನನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಹೊನ್ನಾಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

1-f-fsdfsf

ಪಠ್ಯಪುಸ್ತಕ ಪರಿಷ್ಕರಣೆ; ಗೊಂದಲಗಳಿಗೆ ಸಿಎಂ ತೆರೆ ಎಳೆಯಬೇಕು: ಬರಗೂರು ರಾಮಚಂದ್ರಪ್ಪ

ಮಡಿಕೇರಿ : ಕೋಟೆ ಅಬ್ಬಿಯಲ್ಲಿ ಮುಳುಗಿ ಮೂವರು ಪ್ರವಾಸಿಗರ ಸಾವು, ಮುಗಿಲು ಮುಟ್ಟಿದ ಆಕ್ರಂದನ

ಮಡಿಕೇರಿ : ಕೋಟೆ ಅಬ್ಬಿಯಲ್ಲಿ ಮುಳುಗಿ ಮೂವರು ಪ್ರವಾಸಿಗರ ಸಾವು, ಮುಗಿಲು ಮುಟ್ಟಿದ ಆಕ್ರಂದನ

ಗುಡಿಬಂಡೆ: ಪಟ್ಟಣ ಪಂಚಾಯಿತಿ ಸದಸ್ಯನಿಂದ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ

ಗುಡಿಬಂಡೆ: ಪಟ್ಟಣ ಪಂಚಾಯಿತಿ ಸದಸ್ಯನಿಂದ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ

1-ffsdfsdf

ಕೆಪಿಎಸ್ ಸಿ ಬಾಗಿಲು ತಟ್ಟಿ ಪ್ರತಿಭಟನೆಗೆ ಮಾಜಿ ಸಚಿವ ಸುರೇಶ್ ಕುಮಾರ್ ನಿರ್ಧಾರ

ಕೊರಟಗೆರೆ : ಅಕ್ರಮ ಕಸಾಯಿ ಖಾನೆಗೆ ಪೊಲೀಸರ ದಾಳಿ : ನಾಲ್ವರ ಬಂಧನ, ಗೋವುಗಳ ರಕ್ಷಣೆ

ಕೊರಟಗೆರೆ : ಅಕ್ರಮ ಕಸಾಯಿ ಖಾನೆ ಮೇಲೆ ಪೊಲೀಸರ ದಾಳಿ : ನಾಲ್ವರ ಬಂಧನ, ಗೋವುಗಳ ರಕ್ಷಣೆ

Missing tara airline flight found in Nepal’s Mustang district

ಪತ್ತೆಯಾದ ನೇಪಾಳ ವಿಮಾನ: ಲಾಮ್ಚೆ ನದಿಯಲ್ಲಿ ಪತನಗೊಂಡ 22 ಜನರಿದ್ದ ತಾರಾ ಏರ್ ಕ್ರಾಫ್ಟ್

ಗುಂಡ್ಲುಪೇಟೆ : ಬೈಕ್‍ಗಳ ನಡುವೆ ಮುಖಾಮುಖಿ ಢಿಕ್ಕಿ : ಓರ್ವ ಸ್ಥಳದಲ್ಲೇ ಸಾವು

ಗುಂಡ್ಲುಪೇಟೆ: ಬೈಕ್‍ಗಳ ನಡುವೆ ಮುಖಾಮುಖಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು, ಇನ್ನೋರ್ವ ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

labi

ಮಂತ್ರಿಗಿರಿಗಾಗಿ ಲಾಬಿ ಮಾಡಲು ಹೋಗಲ್ಲ

grant

ನ್ಯಾಯಾಂಗದ ಮೂಲ ಸೌಕರ್ಯಕ್ಕೆ ಅನುದಾನ ಕೊಡಿ

pdo

ಬಡ್ತಿಗೆ ಒತ್ತಾಯಿಸಿ ಪಿಡಿಒಗಳಿಂದ ಮನವಿ ಸಲ್ಲಿಕೆ

harihara

ವಸ್ತು ನಿಷ್ಠವಾಗಿ ಬೆಳೆ ಹಾನಿ ಸಮೀಕ್ಷೆ: ಬೀಳಗಿ

child-rights

ಮಕ್ಕಳ ಸುರಕ್ಷತೆ ಎಲ್ಲರ ಜವಾಬ್ದಾರಿ

MUST WATCH

udayavani youtube

ಭವಿಷ್ಯದ ಸಂಗೀತ ಕ್ಷೇತ್ರಕ್ಕೆ ಕರಾವಳಿ ಕೊಡುಗೆ

udayavani youtube

ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

ಹೊಸ ಸೇರ್ಪಡೆ

Untitled-1

ಸಾಗರ: ಅರುಣ್ ಕುಗ್ವೆ ಬಂಧನಕ್ಕೆ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಎಎಸ್‌ಪಿಗೆ ಮನವಿ

1-f-fsdfsf

ಪಠ್ಯಪುಸ್ತಕ ಪರಿಷ್ಕರಣೆ; ಗೊಂದಲಗಳಿಗೆ ಸಿಎಂ ತೆರೆ ಎಳೆಯಬೇಕು: ಬರಗೂರು ರಾಮಚಂದ್ರಪ್ಪ

27

ಮುಂಗಾರು ಹಂಗಾಮಿಗೆ ರೈತರ ತಯಾರಿ

ಬಾಲಚಂದ್ರ ಸಾಯಿಮನೆಗೆ ಪಾವನಾ ಪರಿಸರ ಪ್ರಶಸ್ತಿ

ಬಾಲಚಂದ್ರ ಸಾಯಿಮನೆಗೆ ಪಾವನಾ ಪರಿಸರ ಪ್ರಶಸ್ತಿ

ಮಡಿಕೇರಿ : ಕೋಟೆ ಅಬ್ಬಿಯಲ್ಲಿ ಮುಳುಗಿ ಮೂವರು ಪ್ರವಾಸಿಗರ ಸಾವು, ಮುಗಿಲು ಮುಟ್ಟಿದ ಆಕ್ರಂದನ

ಮಡಿಕೇರಿ : ಕೋಟೆ ಅಬ್ಬಿಯಲ್ಲಿ ಮುಳುಗಿ ಮೂವರು ಪ್ರವಾಸಿಗರ ಸಾವು, ಮುಗಿಲು ಮುಟ್ಟಿದ ಆಕ್ರಂದನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.