ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರಚನೆ ಶ್ಲಾಘನೀಯ

Team Udayavani, Jul 10, 2021, 9:44 AM IST

ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರಚನೆ ಶ್ಲಾಘನೀಯ

ದಾವಣಗೆರೆ: ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರಚನೆಯಿಂದ ದೇಶದ ಸಹಕಾರ ರಂಗದ ಸಮಸ್ಯೆಗಳಿಗೆ ಕ್ಷಿಪ್ರವಾಗಿ ಸ್ಪಂದಿಸಲು ಹಾಗೂ ಸಹಕಾರ ಕ್ಷೇತ್ರವನ್ನು ಬಲಪಡಿಸಲು ಸಹಕಾರಿಯಾಗಲಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಹಾಗೂ ರಾಜ್ಯ ಬಿಜೆಪಿ ಸಹಕಾರ ಪ್ರಕೋಷ್ಠದ ಸಹ ಸಂಚಾಲಕ ಜಿ.ನಂಜನಗೌಡ ಆಶಯ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಸಹಕಾರ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಸಚಿವಾಲಯ ಇರಲಿಲ್ಲ. ಸಹಕಾರಿ ಕ್ಷೇತ್ರದ ತೊಂದರೆ ನಿವಾರಿಸಲು ಕೃಷಿ ಇಲಾಖೆಯ ಜತೆಗೆ ಕಾರ್ಯ ನಿರ್ವಹಿಸುವ ಸಹಕಾರಿ ಮಂತ್ರಿಗಳನ್ನೇ ವಿನಂತಿಸಬೇಕಿತ್ತು. ದೇಶದ ಕೃಷಿ ಕ್ಷೇತ್ರ ಅತ್ಯಂತ ದೊಡ್ಡದಾಗಿರುವುದರಿಂದ ಕೃಷಿ ಸಚಿವಾಲಯವು ಸಹಕಾರಿ ಕ್ಷೇತ್ರದ ಕಡೆ ಗಮನಹರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಈಗ ಪ್ರತ್ಯೇಕ ಕೃಷಿ ಸಚಿವಾಲಯ ಆಗಿದ್ದರಿಂದ ರಾಷ್ಟ್ರ, ರಾಜ್ಯದಲ್ಲಿನ ಸಹಕಾರ ಕ್ಷೇತ್ರದ ಸಮಸ್ಯೆಗಳು ಶೀಘ್ರ ಬಗೆಹರಿಯಲಿವೆ. ನೂತನ ಸಹಕಾರ ಸಚಿವಾಲಯಕ್ಕೆ ಅಮಿತ್‌ ಷಾ ಮೊದಲ ಸಚಿವರಾಗಿದ್ದು, ದಕ್ಷತೆಯಿಂದ ಕಾರ್ಯನಿರ್ವಹಿಸಲಿದ್ದಾರೆ. ಪ್ರತ್ಯೇಕ ಸಚಿವಾಲಯದಿಂದ ಸಹಕಾರ ರಂಗದಲ್ಲಿ ಮಹತ್ತರ ಬದಲಾವಣೆಗಳು ಆಗಲಿವೆ. ರೈತ ಸಹಕಾರಿ ಸಂಘಗಳ ಮೂಲಕ ಸೌಲಭ್ಯ ಕಲ್ಪಿಸಲು ಅವಕಾಶಗಳಿವೆ ಎಂದರು.

ಸಹಕಾರಿ ಸಚಿವಾಲಯವು ದೇಶದಲ್ಲಿ ಸಹಕಾರಿ ಆಂದೋಲನ ಬಲಪಡಿಸಲು ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ ಚೌಕಟ್ಟುಗಳನ್ನು ಒದಗಿಸುತ್ತದೆ. ಈ ಹೊಸ ಖಾತೆಗೆ ರಾಜ್ಯದಲ್ಲಿ ಉಸ್ತುವಾರಿ ಸಚಿವರನ್ನು ನೇಮಿಸುವ ಸಾಧ್ಯತೆಯೂ ಇದೆ. ಇದು ಸಹಕಾರಿಗಳನ್ನು ನಿಜವಾದ, ಜನಾಧಾರಿತ ಚಳವಳಿಯಂತೆ ತಳಮಟ್ಟದವರೆಗೆ ತಲುಪಲು ಸಹಾಯ ಮಾಡುತ್ತದೆ. ದೇಶದಲ್ಲಿ ಸಹಕಾರಿ ರಂಗದ ಆರ್ಥಿಕವಾಗಿ ಲಾಭಗಳಿಸುವ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ಬಹುರಾಜ್ಯ ಸಹಕಾರಿ ಸಂಸ್ಥೆಗಳ ಅಭಿವೃದ್ಧಿಯನ್ನು ಶಕ್ತಗೊಳಿಸಲು ಸಹಕಾರಿಯಾಗಲಿದೆ. ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವರು ನೀಡಿದ ಘೋಷಣೆಯನ್ನು ಸಹ ಪೂರೈಸಲಿದೆ ಎಂದ ಅವರು, ಪ್ರತ್ಯೇಕ ಸಹಕಾರ ಸಚಿವಾಲಯ ನಿರ್ಣಯ ಕೈಗೊಂಡ ಪ್ರಧಾನ ಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸಿದರು.

ಸಹಕಾರಿಗಳಾದ ಎಚ್‌.ಎಂ.ನಾಗರಾಜ್‌, ಮಲ್ಲಪ್ಪ, ನಾಗರಾಜಮೂರ್ತಿ, ಓಂಕಾರಗೌಡ್ರ, ನಟರಾಜ್‌ ಸುದ್ದಿಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು

ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು

ಜೋಹರ್‌ ಕಣಿವೆ ರಸ್ತೆ 2023ರಲ್ಲಿ ಮುಕ್ತಾಯ

ಜೋಹರ್‌ ಕಣಿವೆ ರಸ್ತೆ 2023ರಲ್ಲಿ ಮುಕ್ತಾಯ

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್‌ ಸಿಂಗ್‌ ಅಮಾನತು

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್‌ ಸಿಂಗ್‌ ಅಮಾನತು

ಕಾರು ತಡೆದಿದ್ದಕ್ಕೆ ಸಸ್ಪೆಂಡ್‌ಗೆ ಪಟ್ಟು!

ತನ್ನ ಕಾರು ತಡೆದರೆಂದು ಪೊಲೀಸರಿಗೆ ಅಮಾನತು ಬೆದರಿಕೆ ಹಾಕಿದ ಬಿಹಾರ ಸಚಿವ !

ಅತ್ಯಾಚಾರ ಆರೋಪಿ ಖುಲಾಸೆ: ಜೈಲಿಂದ ಬಿಡುಗಡೆ ಮಾಡಲು ಆದೇಶ

ಅತ್ಯಾಚಾರ ಆರೋಪಿ ಖುಲಾಸೆ: ಜೈಲಿಂದ ಬಿಡುಗಡೆ ಮಾಡಲು ಆದೇಶ

ವಿಜಯಪುರ-ಮಂಗಳೂರು ರೈಲು ಪುನಾರಂಭ : ರೈಲು ಪ್ರಿಯರಲ್ಲಿ ಸಂತಸ

ವಿಜಯಪುರ-ಮಂಗಳೂರು ರೈಲು ಪುನಾರಂಭ : ರೈಲು ಪ್ರಿಯರಲ್ಲಿ ಸಂತಸ

ಬನ್ನಿ, ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಿ ; ಟಿವಿ, ಫ್ರಿಡ್ಜ್ ಗೆಲ್ಲಿ!

ಬನ್ನಿ, ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಿ ; ಟಿವಿ, ಫ್ರಿಡ್ಜ್ ಗೆಲ್ಲಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdsdweqe

ಜನಮಾನಸದಿಂದ ಮಾಸ್ಕ್ ದೂರ?

ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ನಿಶ್ಚಿತ: ರೇವಣ್ಣ

ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ನಿಶ್ಚಿತ: ರೇವಣ್ಣ

ಈ ಬಾರಿಯೂ ಕಾಂಗ್ರೆಸ್‌ ಗೆಲುವು ನಿಶ್ಚಿತ

ಈ ಬಾರಿಯೂ ಕಾಂಗ್ರೆಸ್‌ ಗೆಲುವು ನಿಶ್ಚಿತ

yaddi

‘ತಮಾಷೆಗಾಗಿ ಹೇಳಿದ್ದು’ ಎಂದು ಈಶ್ವರಪ್ಪ ಹೇಳಿದ್ದಾರಲ್ಲ : ಯಡಿಯೂರಪ್ಪ ಸ್ಪಷ್ಟನೆ

cm-b-bommai

ಒಮಿಕ್ರಾನ್ ಬಗ್ಗೆ ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳುತ್ತಿದೆ: ಸಿಎಂ ಬೊಮ್ಮಾಯಿ

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು

ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು

ಜೋಹರ್‌ ಕಣಿವೆ ರಸ್ತೆ 2023ರಲ್ಲಿ ಮುಕ್ತಾಯ

ಜೋಹರ್‌ ಕಣಿವೆ ರಸ್ತೆ 2023ರಲ್ಲಿ ಮುಕ್ತಾಯ

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್‌ ಸಿಂಗ್‌ ಅಮಾನತು

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್‌ ಸಿಂಗ್‌ ಅಮಾನತು

ಕಾರು ತಡೆದಿದ್ದಕ್ಕೆ ಸಸ್ಪೆಂಡ್‌ಗೆ ಪಟ್ಟು!

ತನ್ನ ಕಾರು ತಡೆದರೆಂದು ಪೊಲೀಸರಿಗೆ ಅಮಾನತು ಬೆದರಿಕೆ ಹಾಕಿದ ಬಿಹಾರ ಸಚಿವ !

ಅತ್ಯಾಚಾರ ಆರೋಪಿ ಖುಲಾಸೆ: ಜೈಲಿಂದ ಬಿಡುಗಡೆ ಮಾಡಲು ಆದೇಶ

ಅತ್ಯಾಚಾರ ಆರೋಪಿ ಖುಲಾಸೆ: ಜೈಲಿಂದ ಬಿಡುಗಡೆ ಮಾಡಲು ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.