ದುಶ್ಚಟಕ್ಕೆ ಯುವಜನಾಂಗ ಬಲಿ: ಬಸವಪ್ರಭು ಶ್ರೀ ವಿಷಾದ

ಮದ್ಯ, ಗುಟ್ಕಾ, ಸಿಗರೇಟ್‌ಗಳಂತಹ ವಸ್ತುಗಳ ದಾಸರಾದರೆ ಬದುಕು ಹಾಳು

Team Udayavani, Aug 13, 2019, 10:38 AM IST

ದಾವಣಗೆರೆ: ಕರುಣಾಜೀವ ಕಲ್ಯಾಣ ಟ್ರಸ್ಟ್‌ ವಿರಕ್ತ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಬಸವಪ್ರಭು ಸ್ವಾಮೀಜಿಗಳು ಉದ್ಘಾಟಿಸಿದರು.

ದಾವಣಗೆರೆ: ಪ್ರಸ್ತುತ ಯುವಜನಾಂಗ ಆರೋಗ್ಯದ ಎಚ್ಚರಿಕೆ ವಹಿಸದೇ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದುರಂತ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಷಾದಿಸಿದ್ದಾರೆ.

ನಗರದ ವಿರಕ್ತ ಮಠದಲ್ಲಿ ಕರುಣಾಜೀವ ಕಲ್ಯಾಣ ಟ್ರಸ್ಟ್‌ ಏರ್ಪಡಿಸಿದ್ದ 200ನೇ ಯಶಸ್ವಿ ಆರೋಗ್ಯ ತಪಾಸಣಾ ಶಿಬಿರ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ದೇಹ ರಕ್ಷಣೆಗೆ ಅತಿ ಹೆಚ್ಚು ಜಾಗ್ರತೆ ವಹಿಸಬೇಕು. ಆದರೆ, ಇಂದಿನ ಯುವ ಸಮೂಹ ಮದ್ಯ, ಗುಟ್ಕಾ, ಸಿಗರೇಟ್‌ಗಳಂತಹ ವಸ್ತುಗಳ ದಾಸರಾಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.

ಶ್ರಮರಹಿತ ಜೀವನದಿಂದ ಇಂದು ಮಾನವನ ಶರೀರ ರೋಗದ ಗೂಡಾಗಿ ಮಾರ್ಪಟ್ಟಿದೆ. ಅತಿಯಾದ ಆಹಾರ ಸೇವನೆ ಹಾಗೂ ಬೊಜ್ಜಿನಿಂದ ಮಧುಮೇಹ ಸಮಸ್ಯೆ ಎದುರಾಗಲಿದೆ. ಆರೋಗ್ಯ ಎಲ್ಲಕ್ಕಿಂತ ದೊಡ್ಡ ಸಂಪತ್ತು. ಮುನುಷ್ಯನ ಆರೋಗ್ಯ ಸುಸ್ಥಿತಿಯಲ್ಲಿರಲು ಯಾವುದೇ ದುಶ್ಚಟಕ್ಕೆ ಬಲಿಯಾಗಬಾರದು. ಒಮ್ಮೆ ದೇಹ ರಿಪೇರಿಗೆ ಬಂದರೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಭಗವಂತ ನೀಡಿರುವ ದೇಹವನ್ನು ಅತಿ ಎಚ್ಚರಿಕೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಅಲ್ಲಿನ ಜನರ ಬದುಕು ನೀರಲ್ಲಿ ಮುಳುಗಿ ಹೋಗಿದೆ. ಅವರ ನೆರವಿಗೆ ದಾವಿಸುವುದು ಪ್ರತಿಯೊಬ್ಬರ ಕರ್ತವ್ಯ, ಸಂತ್ರಸ್ತರಿಗೆ ಸಹಾಯ ಮಾಡಲಿಚ್ಚಿಸುವವರು ಶಿವಯೋಗಾಶ್ರಮ ಅಥವಾ ವಿರಕ್ತ ಮಠಕ್ಕೆ ಅಗತ್ಯ ವಸ್ತುಗಳನ್ನು ನೀಡಿದರೆ ಶ್ರೀಮಠದಿಂದ ಅವುಗಳನ್ನು ಸಂಕಷ್ಟಕ್ಕೊಳದ ಜನರಿಗೆ ತಲುಪಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಹುಬ್ಬಳ್ಳಿಯ ಕಾರಟಗಿ ಆಸ್ಪತ್ರೆ ಡಾ| ರಾಮಚಂದ್ರ ಹಾಗೂ ಹರಿಹರದ ಡಾ| ಸವಿತಾ ಅವರಿಗೆ ಕಾರ್ಯಕ್ರಮದಲ್ಲಿ ಕರುಣಾ ಸೇವಾ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ, ಮಾತನಾಡಿದ ಡಾ| ರಾಮಚಂದ್ರ ಕಾರಟಗಿ, 12ನೇ ಶತಮಾನದಲ್ಲೇ ಬಸವಣ್ಣನವರು ಕಾಯಕ ನಿಷ್ಠೆ ತತ್ವ ಸಾರಿದ್ದರು. ದಯವೇ ಧರ್ಮದ ಮೂಲವೆಂದು ಹೇಳಿದ್ದರು. ಬಡವರು, ನೊಂದವರಿಗೆ ನೆರವು ನೀಡುವುದರಿಂದ ಬದುಕಿನ ಸಾರ್ಥಕತೆ ಲಭಿಸಲಿದೆ. ಈ ನಿಟ್ಟಿನಲ್ಲಿ ಕರುಣಾ ಜೕವ ಟ್ರಸ್ಟ್‌ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಕರುಣಾ ಜೀವ ಟ್ರಸ್ಟ್‌ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ಡಾ| ಬಿ.ಎಂ.ವಿಶ್ವನಾಥ್‌, ಡಾ| ಶಾರದಾ ಶೆಟ್ಟಿ, ಸಿ.ಜಿ.ದಿನೇಶ್‌, ಇತರರು ಕಾರ್ಯಕ್ರಮದಲ್ಲಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದಾವಣಗೆರೆ: ವೃತ್ತಿಗೆ ಜಾತಿ ಹಚ್ಚಿದ ಕಾರಣದಿಂದ ಇಂದು ಆ ವೃತ್ತಿಗಳೇ ಮರೆಯಾಗುವಂತಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಸಾಣೇಹಳ್ಳಿ ಶಾಖಾ ಮಠದ ಪಟ್ಟಾಧ್ಯಕ್ಷ...

  • ದಾವಣಗೆರೆ: ನಗರದ ಹೊರವಲಯದಲ್ಲಿರುವ ಗಾಜಿನಮನೆಯಲ್ಲಿ ತೋಟಗಾರಿಕೆ ಇಲಾಖೆ ಇಂದಿನಿಂದ ಆ. 27ರ ವರೆಗೆ ಐದು ದಿನಗಳ ಕಾಲ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಿದೆ. ಗುರುವಾರ,...

  • ದಾವಣಗೆರೆ: ಕ್ಷಣಿಕ ಸುಖದ ಮಾದಕ ವಸ್ತುಗಳಿಗೆ ಮಾರು ಹೋಗದೆ ಶಾಶ್ವತ ಸಂತೋಷದ ಕಡೆಗೆ ಮನಸ್ಸನ್ನು ಕೇಂದ್ರೀಕೃತಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಕಾಧಿಕಾರಿ...

  • ದಾವಣಗೆರೆ: ಮಳೆ, ಪ್ರವಾಹದಿಂದ ನಲುಗಿರುವ ಸಂತ್ರಸ್ತರಿಗೆ ವಿತರಣೆಗೆ 20 ಲಕ್ಷ ರೂ. ಮೌಲ್ಯದ ದಿನಸಿ, ಬಿಸ್ಕತ್‌, ನೀರಿನ ಬಾಟಲಿ, ಮಹಿಳೆ ಮತ್ತು ಮಕ್ಕಳ ಬಟ್ಟೆ, ಬ್ಲ್ಯಾಂಕೆಟ್,...

  • ಎನ್‌.ಆರ್‌. ನಟರಾಜ್‌ ದಾವಣಗೆರೆ: ಅಂತೂ ಇಂತೂ ಮಂಗಳವಾರ ವಿಸ್ತರಣೆಯಾದ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಮಂತ್ರಿ ಮಂಡಲದಲ್ಲಿ ಬಿಜೆಪಿ ಭದ್ರ...

ಹೊಸ ಸೇರ್ಪಡೆ