ಪ್ರತಿಜ್ಞಾವಿಧಿ ಆಚರಣೆಗೆ ತನ್ನಿ

•ಸ್ವಚ್ಛ ಮೇವ ಜಯತೆ ಆಂದೋಲನಕ್ಕೆ ಚಾಲನೆ•ನೈಸರ್ಗಿಕ ವಿಕೃತಿಯ ಪ್ರಕೋಪದಿಂದ ಸರ್ವನಾಶ: ಡಿಸಿ

Team Udayavani, Jun 12, 2019, 10:12 AM IST

4

ದಾವಣಗೆರೆ: ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಸ್ವಚ್ಛ ಮೇವ ಜಯತೆ ಆಂದೋಲನ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದ ಸಂದರ್ಭ.

ದಾವಣಗೆರೆ: ಪ್ರಾಚೀನ ಸಂಸ್ಕೃತಿ ಮೇಲಾದ ಹತ್ತಾರು ದಾಳಿಯಿಂದಾಗಿ ಇಂದು ಬ್ಯಾಹ್ಯ ದಾಳಿ, ಪರಕೀಯರ ದಾಳಿ ಮಾತ್ರವಲ್ಲದೇ, ನೈಸರ್ಗಿಕ ವಿಕೃತಿಯ ಪ್ರಕೋಪದ ದಾಳಿಯಿಂದಾಗಿ ನಾಗರಿಕತೆಯ ಜತೆಗೆ ಇಡೀ ಭಾಷೆ, ಸಂಸ್ಕೃತಿ ನಾಶವಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ವಿಶ್ಲೇಷಿಸಿದರು.

ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಜಿಪಂ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛ ಮೇವ ಜಯತೆ ಆಂದೋಲನ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಪ್ರಾಚೀನ ಸಂಸ್ಕೃತಿಗೆ ತನ್ನದೇ ಆದ ಇತಿಹಾಸವಿದೆ. ಆದರೆ, ನಾಗರಿಕತೆ, ಸಂಸ್ಕೃತಿ ಮೇಲಾದ ದಾಳಿಯಿಂದಾಗಿ ಭಾಷೆ, ಮನುಕುಲದ ಚಿಂತನೆ, ಸಂಸ್ಕೃತಿ ಹಾಳಾಗುತ್ತಿದೆ. ಅದನ್ನು ಅರ್ಥ ಮಾಡಿಕೊಳ್ಳದೇ ಇಂದಿಗೂ ಆರೋಗ್ಯ ಸುಧಾರಣೆ, ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಶೇಷಾವಸ್ಥೆಯಲ್ಲಿರುವುದು ನಿಜಕ್ಕೂ ದುರಂತ ಎಂದು ಕಳವಳ ವ್ಯಕ್ತಪಡಿಸಿದರು.

ಇತಿಹಾಸದುದ್ದಕ್ಕೂ ನಾವು ನೋಡಿದಾಗ ಭಾರತೀಯರಾದ ನಾವು ಸಿಂಧೂ ನಾಗರಿಕತೆಯಂತಹ ಪ್ರಾಪಂಚಿಕ ಹಿನ್ನೆಲೆಯನ್ನ ಅತ್ಯಂತ ಹಿಂದಿನ ಐತಿಹಾಸಿಕ ಹಿನ್ನೆಲೆಯನ್ನ ಹೊಂದಿರುವ ಜನರಾಗಿದ್ದೇವೆ. ಇಂದಿಗೂ ಸಹ ಹರಪ್ಪ ಮಹೆಂಜೋದಾರೋದಲ್ಲಿ ಆಕರ್ಷಕ ಕಸದ ತೊಟ್ಟಿ, ಶಹನಗೃಹ, ಅಡುಗೆ ಮನೆಗಳು, ಸುತ್ತಲಿನ ಪರಿಸರ ಎಲ್ಲವೂ ಇದ್ದದ್ದು, ಸ್ವಚ್ಛತೆಗೆ ಸಾಕ್ಷಿಯಾಗಿವೆ. ಅಲ್ಲಿ ನಮ್ಮ ಹಿಂದೂ ಭಾರತೀಯ ಸಂಸ್ಕೃತಿಯ ವಾಸನೆಯ ಘಮಲು ಈಗಲೂ ಇದೆ ಎಂದರು.

ಜಗತ್ತಿನ ಎಲ್ಲಾ ಸಂಸ್ಕೃತಿಗಿಂತ ಪುರಾತನವಾದ ಸಂಸ್ಕೃತಿ ಹೊಂದಿರುವ ನಾವು ಈ ಜಗತ್ತಿನ ಎಲ್ಲಾ ನಾಗರಿಕತೆಗಳಿಗಿಂತಲೂ ಪ್ರಪ್ರಥಮ ನಾಗರಿಕತೆ ಹೊಂದಿದ್ದೇವೆ. ಹರಪ್ಪ ಮಹೆಂಜೋದಾರೋ ಸಿಂಧೂ ನಾಗರಿಕತೆಯ ತಳಹದಿಯ ಸಂಸ್ಕೃತಿಯ ನಾವು ಸ್ವಾತಂತ್ರ್ಯ ನಂತರದ ಇಂದಿಗೂ ಕೂಡ ಪರಿಸರ ಸ್ವಚ್ಛವಾಗಿಡುತ್ತೇವೆ. ನಮ್ಮ ಮನೆ, ಗ್ರಾಮ, ಅಂಗಳ, ಶೌಚಾಲಯ, ಪರಿಸರವನ್ನ ಸ್ವಚ್ಛವಾಗಿಡುತ್ತೇವೆ ಎಂದು ಪ್ರತಿವರ್ಷ ಪ್ರತಿಜ್ಞೆ ಮಾಡುತ್ತೇವೆ. ಆದರೆ ಆಚರಣೆಗೆ ತರುವಲ್ಲಿ ಕೀಳರಿಮೆ ಪಡುತ್ತಿರುವುದು ನಿಜಕ್ಕೂ ದುರಂತ ಎಂದು ವಿಷಾದಿಸಿದರು.

ಪ್ರಬುದ್ಧ ಸಮಾಜ ನಿರ್ಮಾಣವಾಗಲು ಮೊದಲು ತಾವು ಬದಲಾಗಿ ಇತರರನ್ನೂ ಬದಲಾಯಿಸುವ ಕೆಲಸ ಮಾಡಬೇಕು. ಇಂದಿನ ಜನರೇಷನ್‌ ಮಕ್ಕಳು ಸೂಕ್ಷ್ಮವಾಗಿ ಬರೀ ಓದು ಮುಗಿಸಿ, ವಿದೇಶಕ್ಕೆ ಹಾರಿ ಕೆಲಸ ಪಡೆಯುವ ಹಂಬಲದಲ್ಲಿರುತ್ತಾರೆ. ಅವರಿಗೆ ತನ್ನ ನಾಡಿನ ಸುತ್ತಲಿನ ಐತಿಹಾಸಿಕ ಸ್ಥಳಗಳ ಬಗ್ಗೆ ಪರಿಚಯವಿರುವುದಿಲ್ಲ. ಈ ಬಗ್ಗೆ ಪ್ರತಿಯೊಬ್ಬರು ಪ್ರಶ್ನೆ ಮಾಡಿಕೊಳ್ಳಬೇಕು. ಮಕ್ಕಳು ಬರೀ ಇಂಜಿನಿಯರ್‌, ಡಾಕ್ಟರ್‌ಗಳಾದರೆ ಸಾಲದು. ಹಾಗಾಗಿ ಅವರಿಗೆ ಬಾಲ್ಯದಲ್ಲೇ ಶಿಕ್ಷಕರು, ಪೋಷಕರು ಸೇವಾ ಮನೋಭಾವ ಬೆಳೆಸಬೇಕು ಎಂದರು.

ಭಾವನಾತ್ಮಕ ಸಂಬಂಧಗಳನ್ನೇ ದೂರಮಾಡಿ ಮಕ್ಕಳನ್ನು ಬೆಳೆಸುವ ರೀತಿ ಸರಿಯಲ್ಲ. ಸಮಾಜದ ಪರಿಸರ, ಸಾಮಾಜಿಕ ಆರೋಗ್ಯ ಕಾಪಾಡುವ ಬಗ್ಗೆ ಇಂದಿನ ಮಕ್ಕಳಿಗೆ ಬಾಲ್ಯದಲ್ಲೇ ಅರಿವು ಮೂಡಿಸಿದ್ದರೆ ನಮ್ಮ ದೇಶದ ಪರಿಸರ, ಸ್ವಚ್ಛತೆ, ಇತಿಹಾಸ ಹಾಳಾಗುತ್ತಿರಲಿಲ್ಲ. ಇನ್ನು ಮುಂದೆ ಆದರೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ ಶುದ್ಧ ಪರಿಸರದ ವಾತಾವರಣ ನಿರ್ಮಾಣ, ಪರಿಸರ ಆಂದೋಲನದ ಸಿದ್ಧಾಂತ, ಪರಿಸರದ ಕಾಳಜಿ ಬೆಳೆಸಿ ಸುಶಿಕ್ಷಿತರನ್ನಾಗಿ ಮಾಡಬೇಕಿದೆ ಎಂದು ಹೇಳಿದರು.

ಜಿಪಂ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಮಹಾತ್ಮ ಗಾಂಧೀಜಿಯವರು ದೇವರ ಬಗ್ಗೆ ಅಪಾರ ನಂಬಿಕೆ, ಶ್ರದ್ಧೆ ಹೊಂದಿದ್ದರು. ಸ್ವಚ್ಛತೆ ಇರುತ್ತೋ ಅಲ್ಲಿ ದೇವರು ನೆಲೆಸಿರುತ್ತಾನೆ ಎಂದುಕೊಂಡಿದ್ದರು. ಬದಲಾದ ಕಾಲದಲ್ಲಿ ಇಂದು ಎಲ್ಲಿ ನಾಗರಿಕರು ಇರುತ್ತಾರೋ ಅಲ್ಲಿ ಮಾತ್ರ ಸ್ವಚ್ಛತೆ ಇರಲು ಸಾಧ್ಯ ಎಂದು ಬದಲಾಯಿಸಿಕೊಳ್ಳಬೇಕಾದಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಬಯಲು ಬಹಿರ್ದೆಸೆ ಎಂದಾಕ್ಷಣ ಕೇವಲ ಗ್ರಾಮೀಣ ಪ್ರದೇಶಗಳೆ ನೆನಪಾಗುತ್ತದೆ. ಆದರೆ, ಬಹಿರ್ದೆಸೆಗಿಂತ ಹೆಚ್ಚಾಗಿ ನಗರ ಕಾರ್ಖಾನೆಗಳು ಹೊರ ಸೂಸುವ ಹೊಗೆಯಿಂದ ಹೆಚ್ಚು ಪರಿಸರ ನಾಶವಾಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಕುಟುಂಬ ವಾಸಿಸಲು ಎಷ್ಟು ಜಾಗವಿದೆ, ಸಮಸ್ಯೆ ಏನಿವೆ ಎಂಬುದನ್ನು ಪರಿಗಣನೆಗೆ ತೆಗೆದುಕೊಂಡು ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಜಾಗ ನಿಗದಿಪಡಿಸುವ ಕೆಲಸ ಇಲಾಖೆ, ಗ್ರಾಪಂ ಮಟ್ಟದಲ್ಲಿ ಆಗಬೇಕು ಎಂದರು.

ಪರಿಸರ ರಕ್ಷಿಸುವ ಕೆಲಸ ಗ್ರಾಮೀಣ ಪ್ರದೇಶದ ಜನರಿಂದ ಮಾತ್ರವಲ್ಲ. ನಗರವಾಸಿಗಳ ಜನರ ಪ್ರತಿಕುಲದ ಪರಿಣಾಮದಿಂದಾಗಿ ಹತ್ತುಪಟ್ಟು ಪರಿಸರ ಮಾಲಿನ್ಯ ಆಗುತ್ತಿದೆ. ಹಾಗಾಗಿ ಎಲ್ಲರೂ ತಮ್ಮ ಆದ್ಯತೆಗಳನ್ನು ಹಿತಿಮಿತಿಯೊಳಗೆ ಇಟ್ಟುಕೊಂಡು ಪರಿಸರ ರಕ್ಷಣೆಗೆ ಮುಂದಾಗಬೇಕು. ಇಲಾಖೆಗಳ ವಾಹನದಲ್ಲೂ ಎಸಿ ಬಳಸದೇ ಆದಷ್ಟು ಬಯೋ ಡೀಸೆಲ್ ಬಳಕೆಗೆ ಒತ್ತು ನೀಡಬೇಕು. ಕೃಷಿ ಇಲಾಖೆಯವರು ಬೆಳೆ ನಾಶ ಮಾಡುವ ಕೀಟಕ್ಕೆ ಸೈನಿಕ ಹುಳು ಎಂದು ಕರೆಯುವ ಬದಲು ರಾಕ್ಷಸ ಹುಳು ಎಂದು ಹೆಸರಿಡಬೇಕು ಎಂದು ಇಲಾಖೆಯವರಲ್ಲಿ ಮನವಿ ಮಾಡಿದರು.

ಜಿಪಂ ಉಪ ಕಾರ್ಯದರ್ಶಿ ಭೀಮಾನಾಯ್ಕ ಮಾತನಾಡಿ, ಎಲ್ಲಾ ತಾಲೂಕಿನ ಗ್ರಾಮ ಪಂಚಾಯತಿ ಮಟ್ಟದಲ್ಲಿ ಎಲ್ಲಾ ಗ್ರಾಮಗಳಲ್ಲಿನ ಜನರಿಗೆ ಶೌಚಾಲಯ ನಿರ್ಮಾಣ, ತ್ಯಾಜ್ಯ ವಿಲೇವಾರಿ, ಪರಿಸರ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ಇಂದಿನಿಂದ ಜುಲೈ 10ರವರೆಗೆ ಸ್ವಚ್ಛ ಮೇವ ಜಯತೆ ಆಂದೋಲನ ಹಮ್ಮಿಕೊಳ್ಳುತ್ತಿದ್ದೇವೆ. ಜೊತೆಗೆ ಗೋಡೆ ಬರಹ, ಜಾಥಾ, ಶಿಕ್ಷಣ ಸಂವಾದ, ಪ್ರಬಂಧ ಹೀಗೆ ನಾನಾ ರೀತಿಯ ಕಾರ್ಯಕ್ರಮಗಳ ಮೂಲಕ ಆಂದೋಲನ ಯಶಸ್ವಿ ಮಾಡುವ ಗುರಿ ಹೊಂದಿದ್ದೇವೆ ಎಂದರು. ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್‌, ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ತಾಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಎಂ.ಆರ್‌. ಮಹೇಶ್‌,ಜಿಲ್ಲಾ ಜಂಟಿ ಕೃಷಿ ಉಪನಿರ್ದೇಶಕ ಶರಣಪ್ಪ ಮುದಗಲ್, ಕೃಷಿ ವಿಜ್ಞಾನಿ ದೇವರಾಜ್‌, ಶಾಂತಭಟ್, ಡಿಡಿಪಿಐ ಸಿ.ಆರ್‌. ಪರಮೇಶ್‌ವರಪ್ಪ, ಯುವಜನ ಸಬಲೀಕರಣ ಇಲಾಖೆಯ ಶ್ರೀನಿವಾಸ್‌, ಜೆ. ಸವಿತ, ಉಮಾ ವೆಂಕಟೇಶ್‌, ಸಾಕಮ್ಮ ಗಂಗಾಧರ್‌ ನಾಯ್ಕ, ಶಾಂತಕುಮಾರಿ ಇತರರು ಉಪಸ್ಥಿತರಿದ್ದರು.

ಬಯಲು ಬಹಿರ್ದೆಸೆ ಈ ಶತಮಾನದ ದುರಂತ
ಕಳೆದ 20 ವರ್ಷಗಳ ಹಿಂದಿನಿಂದಲೂ ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸುತ್ತಾ ಬರಲಾಗುತ್ತಿದೆ. ಆದರೂ ಕೂಡ ನಮ್ಮ ಗ್ರಾಮೀಣ ಮಟ್ಟದ ಎಷ್ಟೋ ಹಳ್ಳಿ, ಊರುಗಳಲ್ಲಿ ಇಂದಿಗೂ ಸಹ ಮಹಿಳೆಯರು ಬಯಲು ಬಹಿರ್ದೆಸೆಗೆ ಜಾಗ ಹುಡುಕಿಕೊಂಡು ಹೋಗುವ ಸ್ಥಿತಿ ತಪ್ಪಿಲ್ಲ. ಇದು ನಿಜಕ್ಕೂ ದುರಂತ. ಈ ಶತಮಾನದಲ್ಲೂ ಈ ಸ್ಥಿತಿ ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ಬೇಸರ ವ್ಯಕ್ತಪಡಿಸಿದರು.

ಗಮನ ಸೆಳೆದ ವಸ್ತು ಪ್ರದರ್ಶನ
ಕೃಷಿ ಇಲಾಖೆಯಿಂದ ಕೃಷಿ ಬೆಳೆಗಳ ಬಗ್ಗೆ ಪ್ರಾತಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು. ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ಬೆಳೆ, ತಾರಸಿ ತೋಟ, ನಿರ್ವಹಣೆ ಕ್ರಮ, ಸಲಕರಣೆಗಳ ಉಪಯುಕ್ತ ಮಾಹಿತಿ ಹಾಗೂ ತರಳಬಾಳು ಜೈವಿಕ ಇಂಧನ ಸಂಶೋಧನಾ ಕೇಂದ್ರ, ಸಿರಿಗೆರೆ ವತಿಯಿಂದ ಬಯೋಡಿಸೇಲ್, ಆಯುಷ್‌ ಇಲಾಖೆಯಿಂದ ಆಯುರ್ವೇದ ಉತ್ಪನ್ನ, ಜಿಲ್ಲಾ ಪಂಚಾಯತ್‌ನಡಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳ ಬಗ್ಗೆ ಹಾಗೂ ಆರೋಗ್ಯ ಇಲಾಖೆಯಿಂದ ಆರೋಗ್ಯದ ಅರಿವು ಮೂಡಿಸಿ ಸಣ್ಣಪುಟ್ಟ ಕಾಯಿಲೆಗಳಿಗೆ ಮಾತ್ರೆ ವಿತರಿಸಲಾಯಿತು. ಹೀಗೆ ವಿವಿಧ ಇಲಾಖೆಗಳಿಂದ ವಸ್ತು ಪ್ರದರ್ಶನ ಕಳೆಗಟ್ಟಿತ್ತು.

ಟಾಪ್ ನ್ಯೂಸ್

30 ದಿನದೊಳಗೆ ಗಂಗಾ ಕಲ್ಯಾಣ ಸಂಪರ್ಕ: ಸುನಿಲ್ ಕುಮಾರ್

30 ದಿನದೊಳಗೆ ಗಂಗಾ ಕಲ್ಯಾಣ ಸಂಪರ್ಕ: ಸುನಿಲ್ ಕುಮಾರ್

ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ

ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ

ರಾಷ್ಟ್ರೀಯ ಹಬ್ಬಗಳಲ್ಲಿ ಸ್ವಯಃ ಪ್ರೇರಣೆಯಿಂದ ಭಾಗವಹಿಸಿ : ಶಾಸಕ ಸಿದ್ದು ಸವದಿ

ರಾಷ್ಟ್ರೀಯ ಹಬ್ಬಗಳಲ್ಲಿ ಸ್ವಯಃ ಪ್ರೇರಣೆಯಿಂದ ಭಾಗವಹಿಸಿ : ಶಾಸಕ ಸಿದ್ದು ಸವದಿ

ಸೋಂಕು ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜು ಮುಚ್ಚಿ;ರಾಜ್ಯ ಸರಕಾರಕ್ಕೆ ಹೆಚ್.ಡಿ.ಕೆ ಸಲಹೆ

ಸೋಂಕು ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜು ಮುಚ್ಚಿ;ರಾಜ್ಯ ಸರಕಾರಕ್ಕೆ ಹೆಚ್.ಡಿ.ಕೆ ಸಲಹೆ

30 ದಿನದೊಳಗೆ ಗಂಗಾ ಕಲ್ಯಾಣ ಸಂಪರ್ಕ: ಸಚಿವ ವಿ.ಸುನೀಲ್ ಕುಮಾರ್

30 ದಿನದೊಳಗೆ ಗಂಗಾ ಕಲ್ಯಾಣ ಸಂಪರ್ಕ: ಸಚಿವ ವಿ.ಸುನೀಲ್ ಕುಮಾರ್

ವ್ಯವಸ್ಥೆಯ ಸುಧಾರಣೆ ಮುಖ್ಯವೇ ವಿನಾ ವೈಯಕ್ತಿಕ ಪ್ರತಿಷ್ಠೆಯಲ್ಲ; ಅಶ್ವತ್ಥನಾರಾಯಣ

ವ್ಯವಸ್ಥೆಯ ಸುಧಾರಣೆ ಮುಖ್ಯವೇ ವಿನಾ ವೈಯಕ್ತಿಕ ಪ್ರತಿಷ್ಠೆಯಲ್ಲ; ಅಶ್ವತ್ಥನಾರಾಯಣ

ನಾನೊಬ್ಬ ಯೋಧ, ಪಂಜಾಬ್ ಗತ ವೈಭವ ಮರು ಸ್ಥಾಪಿಸುತ್ತೇನೆ; ಭಗವಂತ ಮಾನ್

ನಾನೊಬ್ಬ ಯೋಧ, ಪಂಜಾಬ್ ಗತ ವೈಭವ ಮರು ಸ್ಥಾಪಿಸುತ್ತೇನೆ; ಭಗವಂತ ಮಾನ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಗಸ್ ಹಾಜರಿ ಹಾಕಲು ಗ್ರಾಪಂ ಸದಸ್ಯರಿಂದಲೇ ಒತ್ತಡ: ಆಕ್ರೋಶ

ಬೋಗಸ್ ಹಾಜರಿ ಹಾಕಲು ಗ್ರಾಪಂ ಸದಸ್ಯರಿಂದಲೇ ಒತ್ತಡ: ಆಕ್ರೋಶ

ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ

ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ

ಪ್ರಧಾನಿ ಮೋದಿಯಿಂದ ಕಾಶಿ ಕ್ಷೇತ್ರಕ್ಕೆ ವಿಶ್ವ ಪ್ರಸಿದ್ಧಿ: ಶಿವಾಚಾರ್ಯ ಮಹಾಸ್ವಾಮೀಜಿ

ಪ್ರಧಾನಿ ಮೋದಿಯಿಂದ ಕಾಶಿ ಕ್ಷೇತ್ರಕ್ಕೆ ವಿಶ್ವ ಪ್ರಸಿದ್ಧಿ: ಶಿವಾಚಾರ್ಯ ಮಹಾಸ್ವಾಮೀಜಿ

ಮಂಜೂರಾದ ಹುದ್ದೆಗಳಲ್ಲಿ ಶೇ.20 ಮಾತ್ರ ಭರ್ತಿ

ಮಂಜೂರಾದ ಹುದ್ದೆಗಳಲ್ಲಿ ಶೇ.20 ಮಾತ್ರ ಭರ್ತಿ

ನಿರ್ವಹಣೆ ಇಲ್ಲದೆ ಪಾಳು ಕೊಂಪೆಯಾದ ಅತ್ತಾವರ ಕಟ್ಟೆ ಉದ್ಯಾನವನ!

ನಿರ್ವಹಣೆ ಇಲ್ಲದೆ ಪಾಳು ಕೊಂಪೆಯಾದ ಅತ್ತಾವರ ಕಟ್ಟೆ ಉದ್ಯಾನವನ!

MUST WATCH

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

ಹೊಸ ಸೇರ್ಪಡೆ

30 ದಿನದೊಳಗೆ ಗಂಗಾ ಕಲ್ಯಾಣ ಸಂಪರ್ಕ: ಸುನಿಲ್ ಕುಮಾರ್

30 ದಿನದೊಳಗೆ ಗಂಗಾ ಕಲ್ಯಾಣ ಸಂಪರ್ಕ: ಸುನಿಲ್ ಕುಮಾರ್

ಬೋಗಸ್ ಹಾಜರಿ ಹಾಕಲು ಗ್ರಾಪಂ ಸದಸ್ಯರಿಂದಲೇ ಒತ್ತಡ: ಆಕ್ರೋಶ

ಬೋಗಸ್ ಹಾಜರಿ ಹಾಕಲು ಗ್ರಾಪಂ ಸದಸ್ಯರಿಂದಲೇ ಒತ್ತಡ: ಆಕ್ರೋಶ

ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ

ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ

ಪ್ರಧಾನಿ ಮೋದಿಯಿಂದ ಕಾಶಿ ಕ್ಷೇತ್ರಕ್ಕೆ ವಿಶ್ವ ಪ್ರಸಿದ್ಧಿ: ಶಿವಾಚಾರ್ಯ ಮಹಾಸ್ವಾಮೀಜಿ

ಪ್ರಧಾನಿ ಮೋದಿಯಿಂದ ಕಾಶಿ ಕ್ಷೇತ್ರಕ್ಕೆ ವಿಶ್ವ ಪ್ರಸಿದ್ಧಿ: ಶಿವಾಚಾರ್ಯ ಮಹಾಸ್ವಾಮೀಜಿ

ಮಂಜೂರಾದ ಹುದ್ದೆಗಳಲ್ಲಿ ಶೇ.20 ಮಾತ್ರ ಭರ್ತಿ

ಮಂಜೂರಾದ ಹುದ್ದೆಗಳಲ್ಲಿ ಶೇ.20 ಮಾತ್ರ ಭರ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.