Udayavni Special

ಮನಃಸ್ಥಿತಿ ಬದಲಾದಲ್ಲಿ ಉತ್ತಮ ಜೀವನ

ದಮನಿತ ಮಹಿಳೆಯರಿಗೆ ಹಿರಿಯ ಸಿವಿಲ್‌ ನ್ಯಾಯಾಧೀಶ ಪ್ರಭು ಎನ್‌ ಬಡಿಗೇರ್‌ ಸಲಹೆ

Team Udayavani, Nov 22, 2019, 11:31 AM IST

21-November-3

ದಾವಣಗೆರೆ: ಲೈಂಗಿಕ ಕಾರ್ಯಕರ್ತೆಯರು ತಮ್ಮ ಜೀವನವಿಷ್ಟೇ ಎಂಬ ನಿರಾಶಾಭಾವ ತೊರೆದು, ಮುಂದಿನ ದಿನಗಳಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳುವ ಬಗ್ಗೆ ಆಲೋಚಿಸಿದಾಗ ಮಾತ್ರ ಬದುಕಿನ ದಿಕ್ಕು ಬದಲಾವಣೆ ಸಾಧ್ಯವಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪಾಧ್ರಿ ಕಾರದ ಸದಸ್ಯ ಕಾರ್ಯದರ್ಶಿ ಪ್ರಭು.ಎನ್‌ ಬಡಿಗೇರ್‌ ಹೇಳಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ದುರ್ಗಾಶಕ್ತಿ ಏಡ್ಸ್‌ ತಡೆಗಟ್ಟುವ ಸಂಘದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಎಡಿಆರ್‌ ಕಟ್ಟಡದಲ್ಲಿ ಗುರುವಾರ ಏರ್ಪಡಿಸಿದ್ದ ದಮನಿತ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯ ಅಸಹಾಯಕ ಪರಿಸ್ಥಿತಿಯನ್ನು ಪುರುಷರು ಬಳಸಿಕೊಳ್ಳುತ್ತಿದ್ದಾರೆ. ಮಹಿಳೆಯರು ಇದರ ವಿರುದ್ಧ ಧ್ವನಿ ಎತ್ತಬೇಕು. ಆಗ ಮಾತ್ರ ತಮ್ಮ ಮೇಲಾಗುತ್ತಿರುವ ದೌರ್ಜನ್ಯ, ಶೋಷಣೆ ಮತ್ತು ಅನ್ಯಾಯ ತಡೆಯಬಹುದು. ಅಲ್ಲದೆ ತಮಗಾಗಿರುವ ಅನ್ಯಾಯದ ಬಗ್ಗೆ ಹೇಳಿಕೊಂಡರೆ, ನಾವು ಕಾನೂನು ಕ್ರಮ ಜರುಗಿಸಿ, ನ್ಯಾಯ ಒದಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂರಕ್ಷಣಾಧಿಕಾರಿ ಪೂರ್ಣಿಮ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ದಮನಿತ ಮಹಿಳೆಯರಿಗಾಗಿ ಅನೇಕ ಯೋಜನೆಗಳಿವೆ. ಮಹಿಳೆಯರು ಆರ್ಥಿಕವಾಗಿ ಸದೃಢರಾದರೆ ಶೋಷಣೆಗೆ ಒಳಗಾಗುವುದು ಕಡಿಮೆಯಾಗಲಿದೆ ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ.ಮಂಜುನಾಥ್‌ ಮಾತನಾಡಿ, ಮಹಿಳೆಯರು ದಮನಿತರಾಗಲು ನೂರಾರು ಕಾರಣಗಳಿವೆ. ಬಡತನ, ಅನಕ್ಷರತೆ, ಮಹಿಳಾ ದೌರ್ಜನ್ಯಗಳು ಸೇರಿ ಮಹಿಳೆಯರನ್ನು ದಮನಿತರಾನ್ನಾಗಿ ಮಾಡುತ್ತಿವೆ. ಮಹಿಳೆಯರು ಹಿಂದಿನ ಘಟನೆಗಳನ್ನು ಮರೆತರೆ ಸುಂದರ ಮತ್ತು
ಸ್ವಸ್ಥ ಜೀವನ ನಿರ್ಮಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣಕುಮಾರ್‌ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳು ಒಂದಲ್ಲಾ ಒಂದು ರೀತಿಯಲ್ಲಿ ಅನಾದಿ ಕಾಲದಿಂದಲೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ಪುರುಷರಿಗೆ ಸಮಾನವಾಗಿ ಮುಂದುವರೆಯುತ್ತಿದ್ದರೂ ಸಹ ಆಕೆ ಪುರುಷರ ಮೇಲೆ ಅವಲಂಬಿತಳಾಗಿರುವುದರಿಂದ ಶೋಷಣೆ ಇಂದಿನ ದಿನಗಳಲ್ಲಿಯೂ ನಡೆಯುತ್ತಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ನಮ್ಮ ವೈದ್ಯಕೀಯ ಕ್ಷೇತ್ರ ಹೆಚ್ಚು ಮುಂದುವರೆದಿದ್ದು, ಏಡ್ಸ್‌ ರೋಗಕ್ಕೆ ಚಿಕಿತ್ಸೆ ಕಂಡು ಹಿಡಿಯಲಾಗಿದೆ. ಆದರೂ ಏಡ್ಸ್‌ ರೋಗ ಇರುವವರನ್ನು ಸಮಾಜದಿಂದ ದೂರವಿಡಲಾಗುತ್ತಿದೆ. ಇಂತಹ ಪರಿಸ್ಥಿತಿ ಬದಲಾಗಬೇಕು. ದಮನಿತರ ಬಗ್ಗೆ ಕಾಳಜಿ ಹೊಂದಿರುವ ದುರ್ಗಾಶಕ್ತಿ ಸಂಘದ ಕಾರ್ಯ ಅಭಿನಂದನಾರ್ಹ ಎಂದು ಹೇಳಿದರು.

ಉಪನ್ಯಾಸ ನೀಡಿದ ವಕೀಲೆ ಅನಿತಾ, ಎಲ್ಲರಂತೆ ದಮನಿತರಿಗೂ ಹಕ್ಕುಗಳಿವೆ. ಜೊತೆಗೆ ದಮನಿತರಿಗಾಗಿ ವಿಶೇಷ ಮೀಸಲಾತಿ ಕೂಡ ಇದೆ. ಬಡತನ ಮತ್ತು ಇತರೆ ಕಾರಣಗಳಿಂದ ಕೆಲವು ಮಹಿಳೆಯರು ಲೈಂಗಿಕ ಕಾರ್ಯಕರ್ತೆಯರ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾರೂ ಸಹ ಸ್ವ ಇಚ್ಛೆಯಿಂದ ಇಂತಹ ವೃತ್ತಿಗೆ ಬರುವುದಿಲ್ಲ ಎಂದರು.

ಮಾನವ ಕಳ್ಳಸಾಗಾಣಿಕೆಯಿಂದ ಮಹಿಳೆಯರ ಜೊತೆಗೆ ಮಕ್ಕಳು ಸಹ ಶೋಷಣೆಗೆ ಒಳಾಗಾಗುತ್ತಿದ್ದಾರೆ. ಮಾನವ ಕಳ್ಳಸಾಗಾಣಿಕೆಯು ಕ್ರಿಮಿನಲ್‌ ಅಪರಾಧವಾಗಿದ್ದು ಇಂತಹ ಪ್ರಕರಣಗಳಿಂದ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಲು ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ದಮನಿತರು ತಮ್ಮ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ಮಹಿಳೆಯರು ಆಮಿಷಗಳಿಗೆ ಒಳಗಾಗುವುದರಿಂದಲೂ ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಿವೆ. ದಮನಿತ ಮಹಿಳೆಯರು ತಮ್ಮ ಮಕ್ಕಳು ಲೈಂಗಿಕ ವೃತ್ತಿಯಲ್ಲಿ ತೊಡಗುವುದನ್ನು ತಪ್ಪಿಸಲು ಉತ್ತಮ ಶಿಕ್ಷಣ ನೀಡಬೇಕು ಎಂದು ಕಿವಿಮಾತು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾ ನಿರೀಕ್ಷಕಿ ಮಂಜುಳಾ, ದಮನಿತರಿಗಾಗಿ ಇರುವ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ವಕೀಲ ಆಂಜನೇಯ ಗುರೂಜಿ ಮಾತನಾಡಿ, ದಮನಿತರು ಕಳೆದು ಹೋದ ದಿನಗಳ ನೆನೆದು ದುಃಖೀಸದೇ ಮುಂದಿನ ದಿನದಲ್ಲಿ ನಗುತ್ತ ಬಾಳಬೇಕು ಎಂದರು. ದುರ್ಗಾಶಕ್ತಿ ಏಡ್ಸ್‌ ತಡೆಗಟ್ಟುವ ಸಂಘದ ಅಧ್ಯಕ್ಷೆ ಮಂಜುಳಾ, ಜಿಲ್ಲಾ ಕಾನೂನು ಸೇವಾ ಪ್ರಾಧಿ ಕಾರದ ಪ್ಯಾನಲ್‌ ವಕೀಲರು, ದಮನಿತ ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ವಂದಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Dead-730

ಚಾಮರಾಜನಗರ ಜಿಲ್ಲೆ: ಕೋವಿಡ್‌ನಿಂದ ಮೊದಲ ಸಾವು

ಸಚಿವ ಸಿಟಿ ರವಿಗೂ ತಾಗಿದ ಕೋವಿಡ್ ಸೋಂಕು: ಯಾವುದೇ ಸೋಂಕು ಲಕ್ಷಣಗಳಿಲ್ಲ ಎಂದ ಸಚಿವ

ಸಚಿವ ಸಿಟಿ ರವಿಗೂ ತಾಗಿದ ಕೋವಿಡ್ ಸೋಂಕು: ಯಾವುದೇ ಸೋಂಕು ಲಕ್ಷಣಗಳಿಲ್ಲ ಎಂದ ಸಚಿವ

ಭಾರತದೊಳಕ್ಕೆ ನುಸುಳಲು ಗಡಿಯಲ್ಲಿ ಪಾಕ್ ಬೆಂಬಲಿತ 300 ಉಗ್ರರ ಠಿಕಾಣಿ: ಸೇನೆ

ಭಾರತದೊಳಕ್ಕೆ ನುಸುಳಲು ಗಡಿಯಲ್ಲಿ ಪಾಕ್ ಬೆಂಬಲಿತ 300 ಉಗ್ರರ ಠಿಕಾಣಿ: ಸೇನೆ

ಶಿರ್ವ, ಕುತ್ಯಾರು, ಕಳತ್ತೂರು 20 ಜನರಲ್ಲಿ ಕೋವಿಡ್ ಸೋಂಕು

ಶಿರ್ವ, ಕುತ್ಯಾರು, ಕಳತ್ತೂರು ಪರಿಸರದಲ್ಲಿ 20 ಜನರಲ್ಲಿ ಕೋವಿಡ್ ಸೋಂಕು

ಬೆಂಗಳೂರು ಹಾಗೂ ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ವಾರ ಸಂಪೂರ್ಣ ಲಾಕ್ ಡೌನ್

ಬೆಂಗಳೂರು ಹಾಗೂ ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ವಾರ ಸಂಪೂರ್ಣ ಲಾಕ್ ಡೌನ್

ಮಗಳ ಪ್ರೇಮ ವಿವಾಹಕ್ಕೆ ವಿರೋಧ: ಅಳಿಯ ಮನೆಯ ಐವರನ್ನು ಹಾಡುಹಗಲೇ ಬರ್ಬರ ಕೊಲೆ

ಮಗಳ ಪ್ರೇಮ ವಿವಾಹಕ್ಕೆ ವಿರೋಧ: ಅಳಿಯ ಮನೆಯ ನಾಲ್ವರನ್ನು ಹಾಡುಹಗಲೇ ಬರ್ಬರ ಕೊಲೆ

ಥಾಣೆಯಲ್ಲಿ ವಿಕಾಸ್ ದುಬೆಯ ಇಬ್ಬರು ಆಪ್ತ ಸಹಚರರು ದಯಾ ನಾಯಕ್ ತಂಡದ ಬಲೆಗೆ

ಥಾಣೆಯಲ್ಲಿ ವಿಕಾಸ್ ದುಬೆಯ ಇಬ್ಬರು ಆಪ್ತ ಸಹಚರರು ದಯಾ ನಾಯಕ್ ತಂಡದ ಬಲೆಗೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೈಸೂರು ಜಿಲ್ಲೆಯಲ್ಲಿ ಒಂದೇ ದಿನ 83 ಪಾಸಿಟಿವ್ ಪ್ರಕರಣ ಪತ್ತೆ

ಮೈಸೂರು ಜಿಲ್ಲೆಯಲ್ಲಿ ಒಂದೇ ದಿನ 83 ಪಾಸಿಟಿವ್ ಪ್ರಕರಣ ಪತ್ತೆ

Dead-730

ಚಾಮರಾಜನಗರ ಜಿಲ್ಲೆ: ಕೋವಿಡ್‌ನಿಂದ ಮೊದಲ ಸಾವು

ಸಚಿವ ಸಿಟಿ ರವಿಗೂ ತಾಗಿದ ಕೋವಿಡ್ ಸೋಂಕು: ಯಾವುದೇ ಸೋಂಕು ಲಕ್ಷಣಗಳಿಲ್ಲ ಎಂದ ಸಚಿವ

ಸಚಿವ ಸಿಟಿ ರವಿಗೂ ತಾಗಿದ ಕೋವಿಡ್ ಸೋಂಕು: ಯಾವುದೇ ಸೋಂಕು ಲಕ್ಷಣಗಳಿಲ್ಲ ಎಂದ ಸಚಿವ

ಶಿರ್ವ, ಕುತ್ಯಾರು, ಕಳತ್ತೂರು 20 ಜನರಲ್ಲಿ ಕೋವಿಡ್ ಸೋಂಕು

ಶಿರ್ವ, ಕುತ್ಯಾರು, ಕಳತ್ತೂರು ಪರಿಸರದಲ್ಲಿ 20 ಜನರಲ್ಲಿ ಕೋವಿಡ್ ಸೋಂಕು

ಮಗಳ ಪ್ರೇಮ ವಿವಾಹಕ್ಕೆ ವಿರೋಧ: ಅಳಿಯ ಮನೆಯ ಐವರನ್ನು ಹಾಡುಹಗಲೇ ಬರ್ಬರ ಕೊಲೆ

ಮಗಳ ಪ್ರೇಮ ವಿವಾಹಕ್ಕೆ ವಿರೋಧ: ಅಳಿಯ ಮನೆಯ ನಾಲ್ವರನ್ನು ಹಾಡುಹಗಲೇ ಬರ್ಬರ ಕೊಲೆ

MUST WATCH

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

ಹೊಸ ಸೇರ್ಪಡೆ

ಮೈಸೂರು ಜಿಲ್ಲೆಯಲ್ಲಿ ಒಂದೇ ದಿನ 83 ಪಾಸಿಟಿವ್ ಪ್ರಕರಣ ಪತ್ತೆ

ಮೈಸೂರು ಜಿಲ್ಲೆಯಲ್ಲಿ ಒಂದೇ ದಿನ 83 ಪಾಸಿಟಿವ್ ಪ್ರಕರಣ ಪತ್ತೆ

Dead-730

ಚಾಮರಾಜನಗರ ಜಿಲ್ಲೆ: ಕೋವಿಡ್‌ನಿಂದ ಮೊದಲ ಸಾವು

ಸಚಿವ ಸಿಟಿ ರವಿಗೂ ತಾಗಿದ ಕೋವಿಡ್ ಸೋಂಕು: ಯಾವುದೇ ಸೋಂಕು ಲಕ್ಷಣಗಳಿಲ್ಲ ಎಂದ ಸಚಿವ

ಸಚಿವ ಸಿಟಿ ರವಿಗೂ ತಾಗಿದ ಕೋವಿಡ್ ಸೋಂಕು: ಯಾವುದೇ ಸೋಂಕು ಲಕ್ಷಣಗಳಿಲ್ಲ ಎಂದ ಸಚಿವ

ಭಾರತದೊಳಕ್ಕೆ ನುಸುಳಲು ಗಡಿಯಲ್ಲಿ ಪಾಕ್ ಬೆಂಬಲಿತ 300 ಉಗ್ರರ ಠಿಕಾಣಿ: ಸೇನೆ

ಭಾರತದೊಳಕ್ಕೆ ನುಸುಳಲು ಗಡಿಯಲ್ಲಿ ಪಾಕ್ ಬೆಂಬಲಿತ 300 ಉಗ್ರರ ಠಿಕಾಣಿ: ಸೇನೆ

ಶಿರ್ವ, ಕುತ್ಯಾರು, ಕಳತ್ತೂರು 20 ಜನರಲ್ಲಿ ಕೋವಿಡ್ ಸೋಂಕು

ಶಿರ್ವ, ಕುತ್ಯಾರು, ಕಳತ್ತೂರು ಪರಿಸರದಲ್ಲಿ 20 ಜನರಲ್ಲಿ ಕೋವಿಡ್ ಸೋಂಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.