ಕೃಷ್ಣಾ ತೀರದಲ್ಲಿ ಮತ್ತೆ ಪ್ರವಾಹ ಭೀತಿ

ತಾಲೂಕು ಆಡಳಿತ ಕಟ್ಟೆಚ್ಚರ•21 ಜನ ಅಧಿಕಾರಿಗಳ ತಂಡ ರಚನೆ•ಕಂಗಾಲಾದ ಜನತೆ

Team Udayavani, Sep 7, 2019, 4:16 PM IST

ದೇವದುರ್ಗ: ಹೂವಿನಹೆಡಗಿ ಸೇತುವೆ ಸಮೀಪಿಸುತ್ತಿರುವ ಕೃಷ್ಣಾ ನದಿ ನೀರು.

ದೇವದುರ್ಗ: ಕೃಷ್ಣಾ ನದಿಗೆ ಶುಕ್ರವಾರ 1.84 ಲಕ್ಷ ಕ್ಯೂಸೆಕ್‌ ನೀರು ಹರಿಬಿಡಲಾಗಿದ್ದು, ತೀರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

ಯಾದಗಿರಿ ಜಿಲ್ಲೆ ನಾರಾಯಣಪುರ ಬಸವಸಾಗರ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಹೂವಿನಹೆಡಗಿ ಬಳಿ ಸೇತುವೆ ಮುಳುಗಡೆಯಾಗಲು ಅರ್ಧ ಅಡ್ಡಿ ಭಾಕಿ ಉಳಿದಿದೆ. ಕೃಷ್ಣಾ ನದಿಗೆ ಇನ್ನೂ ನೀರು ಬಿಡುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಇದೀಗ ಮುಳುಗಡೆಯಾಗಿದೆ. ಕೊಪ್ಪರು ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ತಾಲೂಕು ಆಡಳಿತ ಕಟ್ಟೆಚ್ಚರ ಜತೆ ನದಿ ತೀರದ ಗ್ರಾಮಗಳಲ್ಲಿ ಡಂಗೂರ ಜಾಗೃತಿ ಮೂಡಿಸಲಾಗಿದೆ. ಜುಲೈ ಅಂತ್ಯದಿಂದ ಆಗಸ್ಟ್‌ ಎರಡನೇ ವಾರದವರೆಗೆ ಕೃಷ್ಣಾನದಿ ಅಬ್ಬರಕ್ಕೆ ನದಿ ತೀರದ ನಿವಾಸಿಗಳ ಬದುಕು ದಿಕ್ಕುತಪ್ಪಿತ್ತು. 15 ದಿನ ಪ್ರವಾಹದಿಂದ ನಲುಗಿದ ಕೃಷ್ಣಾ ನದಿ ತೀರದ ಮನೆಗಳು ಜಲಾವೃತವಾಗಿದ್ದವು. ಜಮೀನಿಗೆ ನೀರು ನುಗ್ಗಿ ಸಾವಿರಾರು ಎಕರೆ ಬೆಳೆ ಹಾನಿಗೀಡಾಗಿತ್ತು. ಮನೆ-ದನಕರಗಳನ್ನು ಬಿಟ್ಟು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ನದಿ ತೀರದ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ತೆರಳಿ ಬದುಕು ಕಟ್ಟಿಕೊಳ್ಳುತ್ತಿರುವಾಗಲೇ ಮತ್ತೆ ಪ್ರವಾಹ ಭೀತಿ ಶುರುವಾಗಿದೆ.

ದೇವಸ್ಥಾನ ಮುಳುಗಡೆ: ಕೃಷ್ಣಾ ನದಿಗೆ 1.84 ಲಕ್ಷ ಕ್ಯೂಸೆಕ್‌ ನೀರು ಹರಿಬಿಟ್ಟದ್ದರಿಂದ ಗಡ್ಡೆಗೊಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಕೊಪ್ಪರು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗುತ್ತಿದೆ. ಭಕ್ತರಿಗೆ ಪೂಜೆ ಪುನಸ್ಕಾರ ಮಾಡಲು ಅಡಚರಣೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಹೆಚ್ಚುವರಿ ನೀರು ಬಿಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಅಧಿಕಾರಿಗಳ ತಂಡ ರಚನೆ: ಕೃಷ್ಣಾ ತೀರದಲ್ಲಿ ಮತ್ತೆ ಪ್ರವಾಹ ಭೀತಿ ಶುರುವಾಗಿದೆ. ಹೀಗಾಗಿ ತಾಲೂಕು ಆಡಳಿತ ಕಟ್ಟೆಚ್ಚರವಹಿಸಲು ತಾಲೂಕು ಮಟ್ಟದ 21 ಅಧಿಕಾರಿಗಳು ತಂಡ ರಚಿಸಲಾಗಿದೆ. ನದಿ ತೀರದಲ್ಲಿ ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳಿಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಕೃಷ್ಣಾನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳಿಗೆ ತಮ್ಮ ಗ್ರಾಮ ಬಿಟ್ಟು ಹೋಗದಂತೆ ತಾಲೂಕು ಆಡಳಿತ ಸೂಚನೆ ನೀಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಧಾರವಾಡ: ಜಿಲ್ಲೆಯಲ್ಲಿ ಎ ಹಾಗೂ ಬಿ ದರ್ಜೆಯ ದೇವಸ್ಥಾನಗಳು ಇಲ್ಲದಿರುವ ಕಾರಣ ಆಯ್ದ ದೇವಸ್ಥಾನಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಲಾಗುವುದು...

  • ಹುಮನಾಬಾದ: ತಾಲೂಕಿನ ಘೋಡವಾಡಿ ಗ್ರಾಮದ ಹೊರವಲಯದಲ್ಲಿ ಪಂಚಾಯತ ವತಿಯಿಂದ ಮಾದರಿ ಚಿತಾಗಾರ ನಿರ್ಮಾಣ ಕಾರ್ಯ ನಡೆದಿದ್ದು, ಗ್ರಾಮಸ್ಥರು ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಮದಲ್ಲಿ...

  • ಧಾರವಾಡ: ಅವರು ಕುಸ್ತಿ ಹಿಡಿದರೆ ಪ್ರೇಕ್ಷಕರ ಮೈಯಲ್ಲಿ ರೋಮಾಂಚನ.. ಅವರು ಹಾಕುವ ಪಟ್ಟುಗಳಿಗೆ ಎದುರಾಳಿಗೆ ಪೆಟ್ಟು ಖಾತರಿ.. ಮಿಂಚಿನ ವೇಗ..ಗೆಲ್ಲುವ ಉದ್ವೇಗ.. ಒಟ್ಟಿನಲ್ಲಿ...

  • ಜಗಳೂರು : ಮೃತರು ಮತ್ತು ಶಾಲಾ ವಿದ್ಯಾರ್ಥಿಗಳ ಹೆಸರಿನಲ್ಲಿ ಕಳೆದ ಮೂರು ವರ್ಷಗಳಿಂದ ನಕಲಿ ಜಾಬ್‌ ಕಾರ್ಡ್ಗಳನ್ನು ಸೃಷ್ಟಿಸಿ ನರೇಗಾ ಯೋಜನೆಯಡಿ ಕಾಮಗಾರಿ ಮಾಡದೇ...

  • ಹುಬ್ಬಳ್ಳಿ: ನರರೋಗಕ್ಕೆ ಸಂಬಂಧಿಸಿದಂತೆ ಒಂದೇ ಸೂರಿನಡಿ ಎಲ್ಲ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಂಸ್ಕಾರ ಹೆಸರಲ್ಲಿ ಸೇವೆಗೆ ಮುಂದಾಗಿದ್ದ ಮಹಾರಾಷ್ಟ್ರದ ಕನೇರಿಯ...

ಹೊಸ ಸೇರ್ಪಡೆ

  • ಧಾರವಾಡ: ಜಿಲ್ಲೆಯಲ್ಲಿ ಎ ಹಾಗೂ ಬಿ ದರ್ಜೆಯ ದೇವಸ್ಥಾನಗಳು ಇಲ್ಲದಿರುವ ಕಾರಣ ಆಯ್ದ ದೇವಸ್ಥಾನಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಲಾಗುವುದು...

  • ಹುಮನಾಬಾದ: ತಾಲೂಕಿನ ಘೋಡವಾಡಿ ಗ್ರಾಮದ ಹೊರವಲಯದಲ್ಲಿ ಪಂಚಾಯತ ವತಿಯಿಂದ ಮಾದರಿ ಚಿತಾಗಾರ ನಿರ್ಮಾಣ ಕಾರ್ಯ ನಡೆದಿದ್ದು, ಗ್ರಾಮಸ್ಥರು ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಮದಲ್ಲಿ...

  • ಧಾರವಾಡ: ಅವರು ಕುಸ್ತಿ ಹಿಡಿದರೆ ಪ್ರೇಕ್ಷಕರ ಮೈಯಲ್ಲಿ ರೋಮಾಂಚನ.. ಅವರು ಹಾಕುವ ಪಟ್ಟುಗಳಿಗೆ ಎದುರಾಳಿಗೆ ಪೆಟ್ಟು ಖಾತರಿ.. ಮಿಂಚಿನ ವೇಗ..ಗೆಲ್ಲುವ ಉದ್ವೇಗ.. ಒಟ್ಟಿನಲ್ಲಿ...

  • ವಾಷಿಂಗ್ಟನ್: ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಆಂತರಿಕ ವಿಚಾರ. ಈ ಬಗ್ಗೆ ನಾನೇನು ಮಾತನಾಡುವುದಿಲ್ಲ ಎಂದು ಭಾರತಕ್ಕೆ 2 ದಿನಗಳ ಕಾಲ ಭೇಟಿ ನೀಡಿ ತೆರಳಿದ ಬೆನ್ನಲ್ಲೇ...

  • ಜಗಳೂರು : ಮೃತರು ಮತ್ತು ಶಾಲಾ ವಿದ್ಯಾರ್ಥಿಗಳ ಹೆಸರಿನಲ್ಲಿ ಕಳೆದ ಮೂರು ವರ್ಷಗಳಿಂದ ನಕಲಿ ಜಾಬ್‌ ಕಾರ್ಡ್ಗಳನ್ನು ಸೃಷ್ಟಿಸಿ ನರೇಗಾ ಯೋಜನೆಯಡಿ ಕಾಮಗಾರಿ ಮಾಡದೇ...