ಬೇಡಿಕೆ ಬಂದರೆ ಮತ್ತಷ್ಟು ಮೇವು ಖರೀದಿ

ಅರಕೇರಾದಲ್ಲಿ ಮೇವು ಬ್ಯಾಂಕ್‌ ಸ್ಥಾಪನೆ

Team Udayavani, May 18, 2019, 5:03 PM IST

ದೇವದುರ್ಗ: ಅರಕೇರಾ ಗ್ರಾಮದಲ್ಲಿ ಮೇವು ಮಾರಾಟ ಕೇಂದ್ರಕ್ಕೆ ಚಾಲನೆ ನೀಡಲಾಯಿತು.

ದೇವದುರ್ಗ: ರೈತರ ಜಾನುವಾರುಗಳಿಗೆ ಮೇವಿನ ಅಗತ್ಯವಿದೆ. ಹಾಗಾಗಿ ಅರಕೇರಾ ಗ್ರಾಮದಲ್ಲಿ ಮೇವಿನ ಬ್ಯಾಂಕ್‌ ಸ್ಥಾಪಿಸಲಾಗಿದೆ ಎಂದು ತಹಶೀಲ್ದಾರ್‌ ಮಲ್ಲಿಕಾರ್ಜುನ ಅರಕೇರಿ ಹೇಳಿದರು.

ಅರಕೇರಾ ಗ್ರಾಮದಲ್ಲಿ ಕಂದಾಯ ಹಾಗೂ ಪಶು ಇಲಾಖೆಯಿಂದ ಸ್ಥಾಪಿಸಲಾದ ಮೇವಿನ ಬ್ಯಾಂಕ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ವರ್ಷ ಕಂದಾಯ ಇಲಾಖೆಯಿಂದ ನಾಲ್ಕು ಹೋಬಳಿ ಕೇಂದ್ರಗಳಲ್ಲಿ ಮೇವಿನ ಬ್ಯಾಂಕ್‌ ಸ್ಥಾಪಿಸಲಾಗಿತ್ತು. ಆದರೆ ರೈತರು ಮೇವು ಖರೀದಿ ಮಾಡಲು ಬಾರದೇ ಇರುವುದರಿಂದ ಇದೀಗ ಮೇವು ಜಾನುವಾರುಗಳಿಗೆ ಉಪಯೋಗಕ್ಕೆ ಬಾರದಂತ ಪರಿಸ್ಥಿತಿಗೆ ಬಂದಿದೆ. ಈಗಾಗಲೇ ನಾಲ್ಕು ಟನ್‌ ಮೇವು ಖರೀದಿಸಲಾಗಿದೆ. ಪ್ರತಿ ಕೆಜಿಗೆ 2 ರೂ. ನಿಗದಿ ಮಾಡಲಾಗಿದೆ ಎಂದು ಹೇಳಿದರು.

ರೈತರ ಬೇಡಿಕೆ ಅನುಗುಣವಾಗಿ ಅಗತ್ಯ ಬಿದ್ದಲ್ಲಿ ಮೇವು ಖರೀದಿ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಲ್ಲಿ ಅವರನ್ನೇ ಹೊಣೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಮೇವಿನ ಬ್ಯಾಂಕ್‌ ಸ್ಥಾಪನೆ ಮಾಡಿದ್ದು, ಇಲ್ಲಿನ ನಾಡಕಚೇರಿ ಸಿಬ್ಬಂದಿ ಬೇಡಿಕೆಯಂತೆ ರೈತರಿಗೆ ಮೇವು ಪೂರೈಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮಳೆ ವೈಫಲ್ಯದಿಂದ ಬೆಳೆಗಳು ಇಲ್ಲದೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗಿದೆ. ಆದರೆ ಜಿಲ್ಲಾಡಳಿತ ತೊಂದರೆ ಉಂಟು ಆಗದಂತೆ ಅರಕೇರಾ ಗ್ರಾಮದಲ್ಲಿ ಸ್ಥಾಪಿಸಲಾಗಿದೆ. ಕೆಲ ಹೋಬಳಿಯಲ್ಲಿ ಬೇಡಿಕೆ ಬಂದರೆ ಅಲ್ಲಿಯು ಸ್ಥಾಪಿಸಲು ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

ಪಶು ವೈದ್ಯಾಧಿಕಾರಿ ಬಸವರಾಜ ಮೀರಸದಾರ್‌, ಕಂದಾಯ ನಿರೀಕ್ಷಕ ಭೀಮರಾಜ ಮೇಟಿ, ಗ್ರಾಮಲೆಕ್ಕಾಧಿಕಾರಿ ಮಹಿಬೂಬ್‌, ಮಲ್ಲಿಕಾರ್ಜುನ, ಡಾ|ಪ್ರಕಾಶ, ಅಭಿಷೇಕ ರೆಡ್ಡಿ, ಉಸ್ಮಾನ್‌ ನಾಗಡದಿನ್ನಿ, ಅಲ್ಲಾಹುದ್ದೀನ್‌ ಇದ್ದರು.

ಪ್ರಾರಂಭವಾದ ದಿನವೇ ರೈತರು 100 ಕೆಜಿ ಮೇವು ಖರೀದಿಸಿದ್ದಾರೆ. ಕೆಲ ಹೋಬಳಿ ವ್ಯಾಪ್ತಿ ಬೇಡಿಕೆ ಬಂದಲ್ಲಿ ಜಿಲ್ಲಾಡಳಿತದಿಂದ ಅನುಮತಿ ಪಡೆದು ಸ್ಥಾಪನೆ ಮಾಡಲಾಗುತ್ತದೆ. ಕುಡಿಯುರಿನ ಸಮಸ್ಯೆ ಉಂಟಾದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಕ್ರಮಕೈಗೊಳ್ಳಲಾಗಿದೆ.
ಎಸ್‌.ಎಂ. ಅರಕೇರಿ, ತಹಶೀಲ್ದಾರ್‌


ಈ ವಿಭಾಗದಿಂದ ಇನ್ನಷ್ಟು

  • ದಾವಣಗೆರೆ: ಅಂತೂ ಇಂತೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿತ ಸ್ಮಾರ್ಟ್‌ಸಿಟಿ ಯೋಜನೆಯಡಿ 28.5 ಕೋಟಿ ವೆಚ್ಚದಲ್ಲಿ ಖಾಸಗಿ ಬಸ್‌ ನಿಲ್ದಾಣ ಕಾಮಗಾರಿಗೆ ಮುಹೂರ್ತ...

  • ಬ್ಯಾಡಗಿ: ಅರಿಯದೇ ಮಾಡಿದ ತಪ್ಪನ್ನು ಜವಾಬ್ದಾರಿಯುತ ನಾಗರಿಕ ಸಮಾಜ ಮನ್ನಿಸುತ್ತಿಲ್ಲ, ಹೀಗಾಗಿ ಎಚ್‌ಐವಿ(ಏಡ್ಸ್‌) ಸೋಂಕಿತರು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ....

  • ದಾವಣಗೆರೆ: ಗ್ರಾಮ ಮಟ್ಟದಲ್ಲೂ ವೃದ್ಧಾಪ್ಯ, ವಿಧವಾ ವೇತನದ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ ಎಂಬ ಆರೋಪ ಗುರುವಾರ ಮಮತಾ ಮಲ್ಲೇಶಪ್ಪ ಅಧ್ಯಕ್ಷತೆಯಲ್ಲಿ...

  • ಕಲಬುರಗಿ: ಕೇಬಲ್‌, ಸೆಟಲೈಟ್‌ ಮೂಲಕ ಪ್ರಸಾರ ಹೊಂದಿರುವ ಟೆಲಿವಿಷನ್‌ ನ್ಯೂಸ್‌ ಮತ್ತು ಮನರಂಜನೆ ಟಿವಿ ಚಾನೆಲ್‌ಗ‌ಳಲ್ಲಿ ಆಕ್ಷೇಪಾರ್ಹ ದೃಶ್ಯಗಳು ಪ್ರಸಾರವಾದಲ್ಲಿ...

  • ರೋಣ: ಪಟ್ಟಣದ ಗೌಡರ ಓಣಿ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನುಶಿ (ಹುಳ), ಕಲ್ಲು ಇರುವ ಕಳಪೆ ಮಟ್ಟದ ಬಿಸಿಯೂಟ ಪೂರೈಸುತ್ತಿರುವುದರಿಂದ ಮಕ್ಕಳು...

ಹೊಸ ಸೇರ್ಪಡೆ