ಮಕ್ಕಳಿಗೆ ಪಠ್ಯದ ಜತೆ ಪರಿಸರ ಪಾಠ

ಮಜ್ಜಿಗೇರದೊಡ್ಡಿ ಶಾಲೆಯಲ್ಲಿ ಕೈತೋಟ ನಿರ್ಮಾಣ „ ಮಕ್ಕಳಿಂದಲೇ ಗಿಡಗಳ ಪೋಷಣೆ

Team Udayavani, Sep 30, 2019, 4:55 PM IST

ದೇವದುರ್ಗ: ತಾಲೂಕಿನ ಕೆ. ಇರಬಗೇರಾ ಕ್ಲಸ್ಟರ್‌ ವ್ಯಾಪ್ತಿಯ ಮಜ್ಜಿಗೇರದೊಡ್ಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಸಿರು ಪರಿಸರದಿಂದ ಗಮನ ಸೆಳೆಯುತ್ತಿದೆ.

2009-10ನೇ ಸಾಲಿನಲ್ಲಿ ಆರಂಭವಾಗಿರುವ ಈ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 52 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಆರಂಭದಲ್ಲಿ ಒಬ್ಬರೇ ಶಿಕ್ಷಕರು ಮರದ ಕೆಳಗೆ ಮಕ್ಕಳಿಗೆ ಪಾಠ ಬೋಧಿಸುತ್ತಿದ್ದರು. 2014ರಲ್ಲಿ ಎರಡು ಕೋಣೆಗಳನ್ನು ನಿರ್ಮಿಸಲಾಯಿತು. ಶಾಲಾ ಮುಂಭಾಗದಲ್ಲಿ ಬಸವಣ್ಣ, ಮಹರ್ಷಿ
ವಾಲ್ಮೀಕಿ ಅವರ ಚಿತ್ರಗಳನ್ನು ಬಿಡಿಸಲಾಗಿದೆ.

ಕೈ ತೋಟ: ಶಾಲೆ ಆವರಣದಲ್ಲಿ ಕೈ ತೋಟ ನಿರ್ಮಿಸಲಾಗಿದೆ. ಇಲ್ಲಿ ಬೆಳೆದ ತರಕಾರಿಯನ್ನು ಮಧ್ಯಾಹ್ನದ ಬಿಸಿ ಊಟಕ್ಕೆ ಬಳಸಲಾಗುತ್ತಿದೆ. ಶಾಲೆ ಆವರಣದಲ್ಲಿ ಹೊಂಗೆ, ಅರಳಿ ಮರ, ಬಸವನಪಾದ, ನುಗ್ಗೆ ಸೇರಿ ಇತರೆ ಗಿಡಗಳನ್ನು ಬೆಳೆಸಲಾಗಿದೆ.ಹಸಿರು ಪರಿಸರ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಮೂಡಿಸುತ್ತಿದೆ. ಆಟದ ಸಮಯದಲ್ಲಿ ಮಕ್ಕಳು ಗಿಡಗಳಿಗೆ ನೀರುಣಿಸಿ ಪೋಷಿಸುತ್ತಾರೆ. ಇನ್ನು ಶಾಲಾ ಆವರಣದ ಒಳಗೆ ದನಕರುಗಳು ಬರದಂತೆ ಗೇಟ್‌ ಅಳವಡಿಸಲಾಗಿದೆ. ಶಾಲೆ ರಜೆ ಅವಧಿಯಲ್ಲಿ ಮಕ್ಕಳ ಪಾಲಕರೇ ಗಿಡಗಳ ರಕ್ಷಣೆ ಮಾಡುತ್ತಿದ್ದಾರೆ. ಬಿಸಿಯೂಟಕ್ಕೆ ತಾಟು, ಗ್ಲಾಸ್‌ ಸೇರಿ ಇತರೆ ಸಾಮಗ್ರಿಗಳು ದಾನಿಗಳು
ನೀಡುವ ಮೂಲಕ ಶಾಲೆ ಪ್ರಗತಿಗೆ ಕೈಜೋಡಿಸಿದ್ದಾರೆ. ಶಾಲೆಯಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ಮಧ್ಯಾಹ್ನ ಬಿಸಿಯೂಟ ಮತ್ತು ಕೈತೋಟಕ್ಕೆ ಗಿಡಮರಗಳಿಗೆ ಕೊಳವೆಬಾವಿ ನೀರು ಅನುಕೂಲವಾಗಿದೆ. ಬಳಕೆಯಾಗಿ ಉಳಿದ ನೀರು ನೇರವಾಗಿ ಕೈತೋಟಕ್ಕೆ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ.

ಶಿಕ್ಷಕರಿಗಿಂತ ಮಕ್ಕಳ ಪಾಲಕರೇ ಶಾಲೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಎಂದು ಮುಖ್ಯ ಶಿಕ್ಷಕಿ ಭಾಗ್ಯ ತಿಳಿಸಿದರು. ಮಜ್ಜಿಗೇರದೊಡ್ಡಿ ಸರಕಾರಿ ಶಾಲೆಯಿಂದ ಪ್ರತಿ ವರ್ಷ ಮೊರಾರ್ಜಿ ವಸತಿ ಶಾಲೆಗೆ ಮಕ್ಕಳು ಆಯ್ಕೆಯಾಗುತ್ತಿದ್ದಾರೆ. ಪ್ರಸಕ್ತ ವರ್ಷ ನಾಲ್ಕು ಮಕ್ಕಳು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ