21ಕ್ಕೆ ಚುನಾವಣೆ ವಾಹನ ಪರವಾನಗಿ ಮುಕ್ತಾಯ: ಡಿಸಿ

23ಕ್ಕೆ ಮತದಾನ ಮತಗಟ್ಟೆಗಳಲ್ಲಿ ಮೊಬೈಲ್‌ ಬಳಕೆ ನಿಷೇಧ ಹದ್ದು ಮೀರಿದರೆ ಕಠಿಣ ಕ್ರಮ ಖಚಿತ

Team Udayavani, Apr 18, 2019, 4:52 PM IST

ಧಾರವಾಡ: ನಗರದ ಡಿಸಿ ಕಚೇರಿಯಲ್ಲಿ ಜರುಗಿದ ಅಭ್ಯರ್ಥಿಗಳು ಮತ್ತು ಅವರ ಏಜೆಂಟರುಗಳ ಸಭೆಯಲ್ಲಿ ಡಿಸಿ ದೀಪಾ ಚೋಳನ್‌ ಮಾತನಾಡಿದರು.

ಧಾರವಾಡ: ಲೋಕಸಭಾ ಚುನಾವಣೆ ಪ್ರಚಾರಕ್ಕೆ ಪಡೆದಿರುವ ಎಲ್ಲ ಪ್ರಚಾರ ವಾಹನಗಳ ಪರವಾನಗಿ ಅವ ಧಿ ಏ.21ರಂದು
ಸಂಜೆಗೆ ಮುಕ್ತಾಯವಾಗುತ್ತದೆ ಎಂದು ಜಿಲ್ಲಾ ಚುನಾವಣಾ ಕಾರಿ ದೀಪಾ ಚೋಳನ್‌ ಹೇಳಿದರು.

ನಗರದ ಡಿಸಿ ಕಚೇರಿಯಲ್ಲಿ ಜರುಗಿದ ಅಭ್ಯರ್ಥಿಗಳು ಮತ್ತು ಅವರ ಏಜೆಂಟರುಗಳ ಸಭೆಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿ
ಹಾಗೂ ಏಜೆಂಟ್‌ರ ಬಳಕೆಗೆ ಒಂದು ವಾಹನಕ್ಕೆ ಮಾತ್ರ ಪರವಾನಗಿ ಇರುತ್ತದೆ.

ಇನ್ನೂ ಏ.23ರಂದು ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಈ ವೇಳೆ ಕ್ಷೇತ್ರದ ಮತದಾರರಲ್ಲದವರು ಮತದಾನಕ್ಕೆ 48 ಗಂಟೆಗಳ ಪೂರ್ವದಲ್ಲಿ ಕ್ಷೇತ್ರದಿಂದ ಹೊರ
ನಡೆಯಬೇಕು ಎಂದರು.

ಮತಗಟ್ಟೆಗಳಿಗೆ ಯಾರೂ ಮೊಬೈಲ್‌ ತೆಗೆದುಕೊಂಡು ಬರಕೂಡದು. ಮತಗಟ್ಟೆಗೆ 200 ಮೀಟರ್‌ಗಳ ಅಂತರದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ಟೆಂಟ್‌
ಹಾಕಿಕೊಳ್ಳಬಹುದು. ಇವಿಎಂ, ವಿವಿಪ್ಯಾಟ್‌ಗಳ ರ್‍ಯಾಂಡಮೈಸೇಷನ್‌, ಚುನಾವಣಾ ಚಿಹ್ನೆಗಳನ್ನು ಅಪ್‌ಲೋಡ್‌ ಮಾಡುವಾಗ ಅಭ್ಯರ್ಥಿಗಳು ಅಥವಾ ಅವರ ಏಜೆಂಟ್‌ರು ತಪ್ಪದೇ
ಹಾಜರಿರಬೇಕು ಎಂದರು.

ಮತದಾನ ಮುನ್ನಾ ದಿನ ಏ.22 ಹಾಗೂ ಮತದಾನ ದಿನ ಏ.23ರಂದು ಮುದ್ರಣ ಮಾಧ್ಯಮಗಳು ಸೇರಿದಂತೆ ಯಾವುದೇ
ರೀತಿಯ ವಿದ್ಯುನ್ಮಾನ ಮಾಧ್ಯಮಗಳು, ಬಲ್ಕ್ ಎಸ್‌ಎಂಎಸ್‌, ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಕಟಿಸಲು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಜಾಹೀರಾತಿನ ಪ್ರತಿ ಲಗತ್ತಿಸಿ ಏ.20 ರೊಳಗೆ ಸಮಿತಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.

ಮತದಾನ ಪೂರ್ವದ ಅವಧಿಯಲ್ಲಿ ಯಾವುದೇ ಕಲ್ಯಾಣ ಮಂಟಪ, ಸಮುದಾಯ ಭವನ, ಸಾರ್ವಜನಿಕ ಸ್ಥಳಗಳಲ್ಲಿ ಊಟ,
ಉಪಹಾರ ಏರ್ಪಡಿಸಿದರೆ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಮತದಾನಕ್ಕೆ ಬರುವಾಗ ಭಾವಚಿತ್ರವುಳ್ಳ
ಮತದಾರರ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು
ತೋರಿಸಿ ಮತ ಚಲಾಯಿಸಬಹುದು ಎಂದರು.

ಇದೇ ಸಂದರ್ಭದಲ್ಲಿ ಕುಂದಗೋಳ ವಿಧಾನಸಭಾ ಕ್ಷೇ ತ್ರದ ಉಪಚುನಾವಣೆ ಕುರಿತ ವಿವರಗಳನ್ನು ರಾಜಕೀಯ ಪಕ್ಷಗಳಿಗೆ
ಒದಗಿಸಿದರು. ಕೇಂದ್ರ ಚುನಾವಣಾ ಆಯೋಗ ವೀಕ್ಷಕ ಭಾನುಪ್ರಕಾಶ ಏಟೂರು, ಅಪರ ಜಿಲ್ಲಾ ಧಿಕಾರಿ ಡಾ|ಸುರೇಶ ಇಟ್ನಾಳ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳ ಸಹಾಯಕ
ಚುನಾವಣಾಧಿಕಾರಿಗಳು ಇದ್ದರು.


ಈ ವಿಭಾಗದಿಂದ ಇನ್ನಷ್ಟು

  • ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಮೇ 23ರಂದು ಬೆಳಗ್ಗೆ 8 ಗಂಟೆಯಿಂದ ದೇವಗಿರಿಯ ಸರ್ಕಾರಿ ಎಂಜನಿಯರಿಂಗ್‌ ಕಾಲೇಜಿನಲ್ಲಿ...

  • ಕಾರವಾರ: ಮತ ಎಣಿಕೆ ಕೇಂದ್ರಕ್ಕೆ ಕಡ್ಡಾಯವಾಗಿ ಮೊಬೈಲ್ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್‌ ಕೆ. ಹೇಳಿದ್ದಾರೆ. ಜಿಲ್ಲಾದಿಕಾರಿ ಕಚೇರಿಯಲ್ಲಿ...

  • ಶಿರಸಿ: ಕರ್ನಾಟಕದಲ್ಲಿ ನೆಲೆಸಿರುವ ವಿವಿಧ ಸಮುದಾಯಗಳ ಕೊಂಕಣಿ ಭಾಷಿಕರು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ನೀಡುತ್ತಿರುವ ಸೌಲಭ್ಯಗಳನ್ನು ಪಡೆದುಕೊಂಡು...

  • ಸಂಬರಗಿ: ಖೀಳೆಗಾಂವ ಗ್ರಾಮದಲ್ಲಿ ಬುದ್ಧ ಹಾಗೂ ಡಾ| ಬಿ.ಆರ್‌. ಅಂಬೇಡ್ಕರ್‌ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ಪಿಕೆಪಿಎಸ್‌ ಅಧ್ಯಕ್ಷ ಅಣ್ಣಪ್ಪ ನಿಂಬಾಳ...

  • ಬೆಳಗಾವಿ: ಮಳೆ ಬಂತೆಂದರೆ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಕಿರಿಕಿರಿಯಾಗುವುದು ಸಹಜ. ಪ್ರತಿ ವರ್ಷ ಅದೇ ರಾಗ ಅದೇ ಹಾಡು ಎಂಬ ಸ್ಥಿತಿ ಬೆಳಗಾವಿ ನಗರದಲ್ಲಿದೆ....

ಹೊಸ ಸೇರ್ಪಡೆ