ಲೋಕಸಮರ ಕಣದಲ್ಲಿ 19 ಕದನ ಕಲಿಗಳು

Team Udayavani, Apr 9, 2019, 9:59 AM IST

ಧಾರವಾಡ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾದ ಸೋಮವಾರ ನಾಲ್ವರು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಮರಳಿ ಪಡೆದರು.
ಅಂತಿಮವಾಗಿ ಕಣದಲ್ಲಿ ಉಳಿದಿರುವ 19 ಅಭ್ಯರ್ಥಿಗಳಿಗೆ ಭಾರತ ಚುನಾವಣಾ ಆಯೋಗದ ವೀಕ್ಷಕ ಸಮೀರ್‌ಕುಮಾರ್‌
ಬಿಸ್ವಾಸ್‌ ಅವರ ಸಮ್ಮುಖದಲ್ಲಿ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ದೀಪಾ ಚೋಳನ್‌ ಚಿಹ್ನೆಗಳನ್ನು ಹಂಚಿಕೆ ಮಾಡಿದರು. ನಾಮಪತ್ರಗಳನ್ನು ವಾಪಸ್‌ ಪಡೆಯಲು ಮಧ್ಯಾಹ್ನ 3 ಗಂಟೆವರೆಗೆ ಅವಕಾಶವಿತ್ತು.
ಭ್ರಷ್ಟಾಚಾರ ಮಿಟಾವೋ ಪಕ್ಷದ ಅಭ್ಯರ್ಥಿ ಪ್ರಕಾಶ ದೊಡ್ಡವಾಡ, ಪಕ್ಷೇತರ ಅಭ್ಯರ್ಥಿಗಳಾದ ಗುರಪ್ಪ ತೋಟದ, ರಾಯನಗೌಡ ದ್ಯಾಮನಗೌಡ ಕುಮಾರದೇಸಾಯಿ, ರಾಜಶೇಖರಯ್ಯ ಕಂತಿಮಠ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡರು. ಮಧ್ಯಾಹ್ನ 3 ಗಂಟೆ ನಂತರ ಹಾಜರಿದ್ದ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರ ಸಮ್ಮುಖದಲ್ಲಿ ಕ್ರಮ ಸಂಖ್ಯೆ ಹಾಗೂ ಚಿಹ್ನೆಗಳನ್ನು ಹಂಚಿಕೆ ಮಾಡಿ, ಅನುಮೋದನೆಗಾಗಿ ಮುಖ್ಯ ಚುನಾವಣಾಧಿಕಾರಿಗಳಿಗೆ ಕಳುಹಿಸಿ ಕೊಡಲಾಯಿತು.
ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳು : ಈರಪ್ಪ ಹರಿಜನ ಉರ್ಫ್‌ ಮಾದರ (ಬಹುಜನ ಸಮಾಜ ಪಕ್ಷ), ಪ್ರಹ್ಲಾದ ಜೋಶಿ (ಬಿಜೆಪಿ ), ವಿನಯ ಕುಲಕರ್ಣಿ (ಕಾಂಗ್ರೆಸ್‌), ಗಂಗಾಧರ ಬಡಿಗೇರ್‌ (ಎಸ್‌ ಯುಸಿಐ), ಸಂತೋಷ ನಂದೂರ (ಉತ್ತಮ ಪ್ರಜಾಕೀಯ ಪಕ್ಷ),ರೇವಣಸಿದ್ದಪ್ಪ ಬಸವರಾಜ ತಳವಾರ (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ),ರಾಜು ಕಾಂಬಳೆ (ಆಜಾದ್‌ ಮಜ್ದೂರ ಕಿಸಾನ್‌ ಪಕ್ಷ), ವಿನೋದ್‌ ಘೋಡಕೆ (ಪ್ರೌಟಿಸ್ಟ್‌ ಬ್ಲಾಕ್‌ ಇಂಡಿಯಾ), ವಾದಿರಾಜ್‌ ಮನ್ನಾರಿ (ಆಲ್‌ಇಂಡಿಯಾ ಹಿಂದೂಸ್ತಾನ್‌ ಕಾಂಗ್ರೆಸ್‌ ಪಕ್ಷ), ಸೋಮಶೇಖರ್‌ ಯಾದವ್‌ (ಭಾರಿಪ ಬಹುಜನ ಮಹಾಸಂಘ) ಹಾಗೂ ಪಕ್ಷೇತರರಾಗಿ ಉದಯಕುಮಾರ್‌ ಅಂಬಿಗೇರ, ಮಕುಖಾನ್‌ ಸರ್‌ದೇಸಾಯಿ, ಮಲ್ಲಿಕಾರ್ಜುನಗೌಡ ಬಾಳನಗೌಡ್ರ, ರಾಜು ಅನಂತಸಾ ನಾಯಕವಾಡಿ, ಶಕೀಲ್‌ ಅಹ್ಮದ್‌ ದೊಡವಾಡ, ವೀರಪ್ಪ ಮಾರಡಗಿ, ಅಬ್ದುಲ್‌ ರೆಹೆಮಾನ್‌ ದುಂಡಸಿ, ಬಸವರಾಜ ಸಂಗಣ್ಣವರ, ಹಸೀನಬಾನು ಟಪಾಲವಾಲೆ ಅಂತಿಮವಾಗಿ ಕಣದಲ್ಲುಳಿದಿದ್ದಾರೆ.
ಜೆಡಿಯು ಪಕ್ಷದ ಅಭ್ಯರ್ಥಿಯಾಗಿ ಗುರಪ್ಪ ತೋಟದ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಬಿ ಫಾರಂ ನೀಡದ ಕಾರಣ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಪರಿಗಣಿಸಲಾಗಿತ್ತು. ಆದರೆ ಈಗ ಅವರು ತಮ್ಮ ನಾಮಪತ್ರ ಹಿಂಪಡೆಯುವುದರ ಜೊತೆಗೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಧಾರವಾಡ: ನ್ಯಾಯವಾದಿ ಯಲ್ಲಪ್ಪ ಬೆಳ್ಳಕ್ಕಿ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಹಾಗೂ ಅನುಚಿತವಾಗಿ ವರ್ತಿಸಿದ ಉಪನಗರ ಠಾಣೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ...

  • ಹುಬ್ಬಳ್ಳಿ: ಹಾಳಾದ ರಸ್ತೆಗೆ "ಅನಾಥ ರಸ್ತೆ' ಎಂದು ನಾಮಕರಣ ಮಾಡುವ ಮೂಲಕ ಹುಬ್ಬಳ್ಳಿ ಆಟೋ ರಿಕ್ಷಾ ಚಾಲಕರು ಹಾಗೂ ಮಾಲೀಕರ ಸಂಘದಿಂದ ಸೋಮವಾರ ವಿನೂತನವಾಗಿ ಪ್ರತಿಭಟನೆ...

  • ಧಾರವಾಡ: ವಾರದ ಪ್ರತಿ ಮಂಗಳವಾರ ಕೃಷಿರಂಗ ಕಾರ್ಯಕ್ರಮದಲ್ಲಿ ಪ್ರಸಾರ ಆಗುತ್ತಿರುವ ಎಸ್‌ಡಿಎಂ ಡಾಕ್ಟರ್‌ ಆರೋಗ್ಯ ಸಂವಾದ ಕಾರ್ಯಕ್ರಮದ 700ನೇ ಸಂಚಿಕೆಯ ಮಹೋತ್ಸವವನ್ನು...

  • ಧಾರವಾಡ: ಇಲ್ಲಿಯ ಜಿಲ್ಲಾ ವಾರ್ತಾ ಭವನದ ಕಟ್ಟಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರ ಜನಸಂಪರ್ಕ ಕಚೇರಿಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ...

  • ಧಾರವಾಡ: ನೂತನ ಕೈಗಾರಿಕಾ ನೀತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ...

ಹೊಸ ಸೇರ್ಪಡೆ

  • ಬೆಂಗಳೂರು: ರಾಜ್ಯದ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಮತ್ತು ರಾಜ್ಯ ಗುಪ್ತಚರ ವಿಭಾಗ ಅಡಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಯೋತ್ಪಾದಕ ನಿಗ್ರಹ ವಿಭಾಗ...

  • ಬೆಂಗಳೂರು: ನಗರದ ಸುತ್ತ-ಮುತ್ತಲ ಪ್ರದೇಶಗಳಲ್ಲಿ ಜೆಎಂಬಿ(ಜಮಾತ್‌-ಉಲ್‌-ಮುಜಾಹಿದ್ದೀನ್‌) ಉಗ್ರರ ಅಡಗುತಾಣಗಳು ಪತ್ತೆಯಾಗಿವೆ ಎಂಬ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)...

  • ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ನನ್ನನ್ನು ಬಂಧಿಸಿರುವುದು ರಾಜಕೀಯ ಪಿತೂರಿ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ದೆಹಲಿ ಹೈಕೋರ್ಟ್‌ನಲ್ಲಿ ತಮ್ಮ...

  • ಬೆಂಗಳೂರು: ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ರೂಪಿಸಿರುವ "ಸಹಾಯ ಆ್ಯಪ್‌'ನಲ್ಲಿ ದಾಖಲಾಗುವ ದೂರುಗಳನ್ನು ಕಾಲಮಿತಿಯೊಳಗೆ ಬಗೆಹರಿಸುವುದಕ್ಕೆ...

  • ಬೆಂಗಳೂರು: ವೇತನ ಪರಿಷ್ಕರಣೆಗಾಗಿ ಎಚ್‌ಎಎಲ್‌ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನ ತಾರಕ್ಕೇರಿದ್ದು, ನೌಕರರ ಸಂಘಟನೆ ಮತ್ತು ಆಡಳಿತ...