Udayavni Special

ಹಸಿರು ಕರ್ನಾಟಕದಡಿ 30 ಸಾವಿರ ಸಸಿ ನಾಟಿ


Team Udayavani, Aug 19, 2018, 3:45 PM IST

19-agust-11.jpg

ಧಾರವಾಡ: ರಾಜ್ಯದ ಅರಣ್ಯೀಕರಣ ಪ್ರದೇಶವನ್ನು ಹೆಚ್ಚಿಸುವ ಸದುದ್ದೇಶದಿಂದ ಆ.15ರಿಂದ ಆರಂಭವಾಗಿರುವ ಹಸಿರು ಕರ್ನಾಟಕ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಆ.18ರ ವರೆಗೆ ಅಂದಾಜು 30 ಸಾವಿರ ಸಸಿಗಳನ್ನು ನಾಟಿ ಮಾಡಲಾಗಿದೆ ಎಂದು ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶಕುಮಾರ ಹೇಳಿದರು.

ನಗರದ ನವಲೂರು ಅರಣ್ಯೀಕರಣ ಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಸಿರು ಕರ್ನಾಟಕ ಕಾರ್ಯಕ್ರಮದಡಿ ಜಿಲ್ಲೆಗೆ ಬೇಡಿಕೆಗೆ ಅನುಗುಣವಾಗಿ 23 ಸಾವಿರ ಸಸಿಗಳ ನೆಡುವ ಗುರಿ ಹೊಂದಲಾಗಿತ್ತು. ಆದರೆ ಇಂದಿನ ವರೆಗೆ 30 ಸಾವಿರ ಸಸಿಗಳನ್ನು ವಿತರಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಹಾಗೂ ನಗರ ಪ್ರದೇಶದಲ್ಲಿ 1,3 ಮತ್ತು 5 ರೂ.ಗಳ ರಿಯಾಯತಿ ದರದಲ್ಲಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲಾಗಿದೆ ಎಂದರು.

ಗಾಮಗಟ್ಟಿ ಕೈಗಾರಿಕೆ ಪ್ರದೇಶದಲ್ಲಿನ ಅರಣ್ಯೀಕರಣಗೊಳಿಸಿದ ಪ್ರದೇಶದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ವ್ಹಿ. ಮಂಜುನಾಥ ಮಾತನಾಡಿ, ಕಳೆದ 2 ವರ್ಷದಲ್ಲಿ ಸುಮಾರು 7 ಸಾವಿರ ಸಸಿಗಳನ್ನು ಗಾಮಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ನೆಡಲಾಗಿದೆ. ಶೇ.99ರಷ್ಟು ಸಸಿಗಳು ಇಲ್ಲಿ ಬದುಕಿ, ಬೆಳೆದಿವೆ. ಮಾನವ ಮತ್ತು ಪ್ರಾಣಿಗಳ ತೊಂದರೆಗಳಿಂದ ಕಾಪಾಡಿದರೆ ನೆಟ್ಟಿರುವ ಸಸಿಗಳನ್ನು ಶೇ.100ರಷ್ಟು ಉಳಿಸಿ, ಬೆಳೆಸಬಹುದು. ಇದಕ್ಕೆ ಸಾರ್ವಜನಿಕರ ಸಹಕಾರವು ಮುಖ್ಯ ಎಂದರು.

ನವಲೂರ ಗುಡ್ಡ ಜೊತೆಗೆ ಹುಬ್ಬಳ್ಳಿ ತಾಲೂಕಿನ ಬುದ್ನಾಳ ಗುಡ್ಡವನ್ನು ಸಾಲುಮರದ ತಿಮ್ಮಕ್ಕಾ ವೃಕ್ಷ ಉದ್ಯಾನವನವನ್ನಾಗಿ ಮಾಡಲು ಶ್ರಮಿಸಲಾಗುತ್ತಿದೆ. ಈಗಾಗಲೇ ಸಾವಿರಾರು ಗಿಡಗಳನ್ನು ನೆಡಲಾಗಿದ್ದು, ನಮ್ಮ ಸಿಬ್ಬಂದಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಸಾರ್ವಜನಿಕರು ಸಹಕಾರ ನೀಡಿದರೆ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಬಹುದು ಎಂದರು.

ನವಲೂರ ಗುಡ್ಡದಲ್ಲಿ ಜೈವಿಕ್‌ ಇಂಧನ ಗಿಡಗಳು, ಹೊಂಗೆ, ಬೇವು, ಸೀಮರೂಟ್‌ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿದ್ದು, ಮುಂದೆ ನವಲೂರು ಗುಡ್ಡವನ್ನು ಸಂಜೀವಿನಿ ಉದ್ಯಾನವನದ ಹಾಗೆ ಅಭಿವೃದ್ಧಿ ಪಡಿಸಲಾಗುವುದು ಎಂದರು. ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಬಿ.ವೈ. ಈಳಗೇರಿ, ವಲಯ ಅರಣ್ಯಾಧಿಕಾರಿಗಳಾದ ವಿಜಯಕುಮಾರ.ಸಿ, ಬಿ.ಆರ್‌. ಚಿಕ್ಕಮಠ, ಉಪವಲಯ ಅರಣ್ಯಾಧಿಕಾರಿಗಳಾದ ಸಿ.ಎಚ್‌. ಗುಜಮಾಗಡಿ, ಕುಲಕರ್ಣಿ, ಅರಣ್ಯ ರಕ್ಷಕ ವಿಠ್ಠಲ ಜೋನಿ ಇದ್ದರು. 

ನಗರ ಹಸರಿಕರಣ ಯೋಜನೆ ಅಡಿಯಲ್ಲಿ ಅರಣ್ಯ ಇಲಾಖೆ ಇಲ್ಲಿನ ನವಲೂರಿನ ಗುಡ್ಡವನ್ನು ಸಾಲು ಮರದ ತಿಮ್ಮಕ್ಕಾ ವೃಕ್ಷ ಉದ್ಯಾನವನವನ್ನಾಗಿ ಮಾರ್ಪಡಿಸಲು ಅಗತ್ಯ ಕಾರ್ಯ ಯೋಜನೆ ಹಮ್ಮಿಕೊಂಡಿದೆ. ಈಗಾಗಲೇ 130 ಎಕರೆಯಲ್ಲಿ (85 ಹೆಕ್ಟೇರ್‌) 19027 ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿದೆ.
 . ಟಿ.ವಿ. ಮಂಜುನಾಥ,
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

dkಕ್ರಿಕೆಟ್‌ ಬೆಟ್ಟಿಂಗ್‌: 18 ಮಂದಿ ಬಂಧನ

ಕ್ರಿಕೆಟ್‌ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ; 18 ಮಂದಿ ಬಂಧನ

ಹಾವೇರಿ:77 ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ಹಾವೇರಿ:77 ಜನರಿಗೆ ಸೋಂಕು ದೃಢ ; ಇಬ್ಬರು ಸಾವು

LIC

LICಯ ಶೇ. 25ರಷ್ಟು ಷೇರು ಮಾರಾಟಕ್ಕೆ ಚಿಂತನೆ; ಕೇಂದ್ರಕ್ಕೆ 2 ಲಕ್ಷ ಕೋಟಿ ರೂ. ಗಳಿಕೆಯ ಗುರಿ

Hebbavu-01

ಬೈಂದೂರು: ಅಬ್ಬಾ..! ಹೇಗಿದೆ ನೋಡಿ ಅರ್ಧ ಟನ್ ತೂಕ, 20 ಅಡಿ ಉದ್ದದ ‘ದೈತ್ಯ’ ಹೆಬ್ಬಾವು!

ಮಾಲ್ಡವ್ಸ್ ಗೆ ಡೋರ್ನಿಯರ್ ವಿಮಾನ ನೀಡಿದ ಭಾರತ ; ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ನಮೋ!

ಮಾಲ್ಡೀವ್ಸ್ ಗೆ ಡೋರ್ನಿಯರ್ ವಿಮಾನ ಕೊಡುಗೆ ; ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ನಮೋ !

ಸೆ.30ರಂದು ಬಾಬ್ರಿ ಧ್ವಂಸ ಅಂತಿಮ ತೀರ್ಪು: ಆಡ್ವಾಣಿ, ಉಮಾ ಭಾರತಿ, ಜೋಶಿ ಕೋರ್ಟ್ ಗೆ ಗೈರು?

ಸೆ.30ರಂದು ಬಾಬ್ರಿ ಧ್ವಂಸ ಅಂತಿಮ ತೀರ್ಪು: ಆಡ್ವಾಣಿ, ಉಮಾ ಭಾರತಿ, ಜೋಶಿ ಕೋರ್ಟ್ ಗೆ ಗೈರು?

ambani

ಲಾಕ್‌ಡೌನ್‌ ಸಮಯದಲ್ಲಿ 1 ಗಂಟೆಗೆ 90 ಕೋಟಿ ರೂ. ಗಳಿಸಿದ ಮುಖೇಶ್‌ ಅಂಬಾನಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಟವಾಡುತ್ತಾ ಇಂಗು ಗುಂಡಿಗೆ ಬಿದ್ದ ಮೂವರು ಬಾಲಕಿಯರು, ಓರ್ವ ಬಾಲಕಿ ಸಾವು, ಇಬ್ಬರು ಪಾರು

ಆಟವಾಡುತ್ತಾ ಇಂಗು ಗುಂಡಿಗೆ ಬಿದ್ದ ಮೂವರು ಬಾಲಕಿಯರು, ಓರ್ವ ಬಾಲಕಿ ಸಾವು, ಇಬ್ಬರು ಪಾರು

ಕವಿ ಕಣವಿಗೆ ಗೌರವ ಡಾಕ್ಟರೇಟ್‌ ಪ್ರದಾನ

ಕವಿ ಕಣವಿಗೆ ಗೌರವ ಡಾಕ್ಟರೇಟ್‌ ಪ್ರದಾನ

ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ! 10ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ನಲ್ಲಿ ಭಾಗಿ

ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ! 10ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ನಲ್ಲಿ ಭಾಗಿ

ರಸ್ತೆ ಗುಂಡಿಯಲ್ಲಿ ಶೆಟ್ಟರ ಭಾವಚಿತ್ರವಿಟ್ಟು ಪ್ರತಿಭಟನೆ

ರಸ್ತೆ ಗುಂಡಿಯಲ್ಲಿ ಶೆಟ್ಟರ ಭಾವಚಿತ್ರವಿಟ್ಟು ಪ್ರತಿಭಟನೆ

huballi-tdy-1

ಅನ್ನದಾತರಿಗೆ ಬೆಳೆವಿಮೆ ಕಂಪೆನಿಗಳ ಬರೆ

MUST WATCH

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆಹೊಸ ಸೇರ್ಪಡೆ

dkಕ್ರಿಕೆಟ್‌ ಬೆಟ್ಟಿಂಗ್‌: 18 ಮಂದಿ ಬಂಧನ

ಕ್ರಿಕೆಟ್‌ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ; 18 ಮಂದಿ ಬಂಧನ

china

ಚೀನ ಏಕಪಕ್ಷೀಯವಾಗಿ ಎಲ್‌ಎಸಿ ಬದಲಾಯಿಸಿದರೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಭಾರತ ಸ್ಪಷ್ಟನೆ

josh-tdy-3

ಮಳೆಗಾಲದ ಸಂಜೆ ಮತ್ತು ಬಿಸಿಬಿಸಿ ಬೋಂಡಾ…

ಹಾವೇರಿ:77 ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ಹಾವೇರಿ:77 ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ಕಾಪು ಬೀಚ್‌ ಪಾರ್ಕಿಂಗ್ ಏರಿಯಾದಲ್ಲಿ ಕಾಣಿಸಿಕೊಂಡ ಉಡ; ದಂಗಾದ ಜನ

ಕಾಪು ಬೀಚ್‌ ಪಾರ್ಕಿಂಗ್ ಏರಿಯಾದಲ್ಲಿ ಕಾಣಿಸಿಕೊಂಡ ಉಡ; ದಂಗಾದ ಜನತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.