6ರ ಬಾಲೆಯ ರೇಪ್:60ರ ವೃದ್ಧನಿಗೆ ಹಿಗ್ಗಾಮುಗ್ಗಾ ಗೂಸಾ
Team Udayavani, Sep 10, 2017, 11:55 AM IST
ಕಲಘಟಗಿ : 60 ವರ್ಷದ ಮುದುಕನೊಬ್ಬ ಕಾಮಾಂಧನಾಗಿ 6 ಬಾಲಕಿಯ ಮೇಲೆ ಅತ್ಯಾಚಾರಗೈದು ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿಸಿಕೊಂಡ ಘಟನೆ ಹುಲುಕುಪ್ಪ ಎಂಬಲ್ಲಿ ನಡೆದಿದೆ.
ಸಂಗಯ್ಯ ಓಸನೂರ ಮಠ(60)ಎಂಬಾತ ಆಟವಾಡಲು ಬಂದಿದ್ದ ಬಾಲಕಿಯ ಮೇಲೆ ಹೇಯ ಕೃತ್ಯ ಎಸಗಿದ್ದಾನೆ.
ವಿಷಯ ತಿಳಿದ ಕೂಡಲೇ ಆಕ್ರೋಶಗೊಂಡ ಸ್ಥಳೀಯರು ಸಂಗಯ್ಯನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಲಘಟಗಿ ಪೊಲೀಸರು ಸ್ಥಳಕ್ಕಾಗಮಿಸಿ ಸಂಗಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಪೋಕ್‌ಸೋ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.