Udayavni Special

ವಾಯವ್ಯ ಸಾರಿಗೆಗೆ 66 ಕೋಟಿ ನಷ್ಟ

 ಗಾಯದ ಮೇಲೆ ಕೊರೊನಾ ಬರೆ!  ­ಡೀಸೆಲ್‌-ಬಿಡಿಭಾಗಕ್ಕೂ ಸಾಲದು ಆದಾಯ

Team Udayavani, Apr 29, 2021, 5:35 PM IST

yutyu

ವರದಿ : ಹೇಮರಡ್ಡಿ ಸೈದಾಪುರ

ಹುಬ್ಬಳ್ಳಿ: ನೌಕರರು ನಡೆಸಿದ ಮುಷ್ಕರದಿಂದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 14 ದಿನಗಳಲ್ಲಿ 66.03 ಕೋಟಿ ರೂ. ಸಾರಿಗೆ ಆದಾಯ ಖೋತಾ ಆಗಿದ್ದು, ಮುಷ್ಕರ ಮುಗಿದು ಸಹಜ ಸ್ಥಿತಿಗೆ ಬರಲಿದೆ ಎನ್ನುವುದರೊಳಗೆ ಕೊರೊನಾ ಎರಡನೇ ಅಲೆ, ಕರ್ಫ್ಯೂ ನಷ್ಟದ ಪ್ರಮಾಣ ಹೆಚ್ಚುವಂತೆ ಮಾಡಿದೆ.

ಆರ್ಥಿಕವಾಗಿ ಸಂಪೂರ್ಣ ಕುಸಿದಿರುವ ವಾಯವ್ಯ ಸಾರಿಗೆ ಸಂಸ್ಥೆ ಕಳೆದ ವರ್ಷದ ಲಾಕ್‌ಡೌನ್‌ ಪರಿಣಾಮ ಚೇತರಿಸಿಕೊಳ್ಳದ ಪರಿಸ್ಥಿತಿಯಲ್ಲಿದೆ. ಹೀಗಿರುವಾಗ ಸಾರಿಗೆ ನೌಕರರು ಏ.7ರಿಂದ 20ರವರೆಗೆ ನಡೆಸಿದ 14 ದಿನಗಳ ಮುಷ್ಕರದಿಂದಾಗಿ 66.03 ಕೋಟಿ ರೂ. ಸಾರಿಗೆ ಆದಾಯ ನಷ್ಟವಾಗಿದೆ. ಸಂಸ್ಥೆಯ 3380 ಬಸ್‌ ಗಳ ಕಾರ್ಯಾಚರಣೆಯಿಂದ ಪ್ರತಿನಿತ್ಯ 4.5-4.75 ಕೋಟಿ ರೂ. ಸಾರಿಗೆ ಆದಾಯವಿದೆ. ಮುಷ್ಕರವೇನೋ ಮುಗಿಯಿತು. ಮದುವೆ, ಸಭೆ ಸಮಾರಂಭಗಳ ಸೀಸನ್‌ ಇರುವುದರಿಂದ ಒಂದಿಷ್ಟು ಹೆಚ್ಚುವರಿ ಸಾರಿಗೆ ಆದಾಯ ನಿರೀಕ್ಷೆಗೆ ಕೊರೊನಾ ಎರಡನೇ ಅಲೆ ತಣ್ಣೀರು ಎರಚಿದೆ.

ಮುಷ್ಕರದ ಮೊದಲ ದಿನ ಕೇವಲ 21 ಬಸ್‌ ಸಂಚಾರ ಮಾಡಿದ್ದವು. ಕೆಲ ವಿಭಾಗಗಳಲ್ಲಿ ಒಂದು ಬಸ್‌ ಕೂಡ ಹೊರಬರಲಿಲ್ಲ. 2ನೇ ದಿನ 48, 3ನೇ ದಿನ 107, 4ನೇ ದಿನ 389 ಹೀಗೆ 14ನೇ ದಿನದಂದು 1539 (ಶೇ.45) ಬಸ್‌ಗಳು ಸಂಚಾರ ಮಾಡಿದ್ದವು. ಏ.20ರಂದು ಹೈಕೋರ್ಟ್‌ ಆದೇಶ ನೀಡಿದ ಪರಿಣಾಮ ಏ.21ರಂದು ಶೇ.89 ಬಸ್‌ಗಳು ಸಂಚರಿಸುವ ಮೂಲಕ ಸಾರಿಗೆ ಸೇವೆ ಸಹಜ ಸ್ಥಿತಿಗೆ ಬಂದಿತು. ಓಡಿಸಿದ್ದೇ ಹೆಚ್ಚುವರಿ ನಷ್ಟ: 14 ದಿನಗಳಲ್ಲಿ ಸಂಚಾರ ಮಾಡಿದ ಒಟ್ಟು 8458 ಬಸ್‌ ಗಳಿಂದ ಬಂದ ಸಾರಿಗೆ ಆದಾಯ 46.6 ಲಕ್ಷ ರೂ. ಮಾತ್ರ. ಸಾಮಾನ್ಯ ದಿನಗಳಲ್ಲಿ ಪ್ರತಿ ಕಿಮೀ ಕಾರ್ಯಾಚರಣೆಗೆ 41-42 ರೂ. ಖರ್ಚಾಗುತ್ತದೆ. ಆದರೆ ಮುಷ್ಕರದ ಸಂದರ್ಭದಲ್ಲಿ ಜನರೇ ಇಲ್ಲದೆ ಒಂದಿಷ್ಟು ಬಸ್‌ಗಳನ್ನು ಓಡಿಸಿದ ಪರಿಣಾಮ ಪ್ರತಿ ಕಿಮೀ ಕಾರ್ಯಾಚರಣೆಗೆ ಸುಮಾರು 115 ರೂ. ಖರ್ಚು ತಗುಲಿದೆ. ಈ ಕಾರ್ಯಚರಣೆಗಳಿಂದ ಸಂಸ್ಥೆಗೆ ಬರೋಬ್ಬರಿ 15.40 ಕೋಟಿ ರೂ. ನಷ್ಟವಾಗಿದೆ!

ಯಾರಿಗೆ ಕರ್ತವ್ಯ ನೀಡಬೇಕು?: ನೈಟ್‌ ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ ಪಾಳಿಯ ಬಸ್‌ಗಳು ಬಹುತೇಕ ರದ್ದಾಗಿವೆ. ಇನ್ನೂ ಹಗಲು ವೇಳೆಯಲ್ಲಿ ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆಯಾಗಿದೆ. ಇದರಿಂದ ನೌಕರರಿಗೆ ಕರ್ತವ್ಯ ನಿಯೋಜನೆ ಬದಲು ರಜೆ ಹಾಕಿ ಮನೆಗೆ ಹೋಗಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಏ.7ರಿಂದ 21ರವರೆಗೆ ಕರ್ತವ್ಯ ನಿರ್ವಹಿಸಿದ ಶೇ.50 ಸಿಬ್ಬಂದಿ ಹೊರತುಪಡಿಸಿ ಉಳಿದವರಿಗೆ ಮಾರ್ಚ್‌ ತಿಂಗಳ ವೇತನ ಪಾವತಿಸಿಲ್ಲ. ಇದೀಗ ಕರ್ಫ್ಯೂವಿನಿಂದಾಗಿ ಪ್ರಯಾಣಿಕರ ಕೊರತೆ. ಮೇಲಾಗಿ ಶೇ.50 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಿದೆ. ಬಸ್‌ಗಳು ಕಾರ್ಯಾಚರಣೆಯಿಂದ ನಷ್ಟದ ಪ್ರಮಾಣ ಹೆಚ್ಚಾಗಲಿದೆ. ಬರುವ ಆದಾಯ ಡೀಸೆಲ್‌, ಬಿಡಿ ಭಾಗ ಖರೀದಿಗೆ ವೆಚ್ಚಕ್ಕೇ ಸಾಕಾಗುವುದಿಲ್ಲ. ಏಪ್ರಿಲ್‌ ತಿಂಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ವೇತನ ನೀಡುವುದಾದರೂ ಹೇಗೆ ಎನ್ನುವ ಪರಿಸ್ಥಿತಿ ಬಂದೊದಗಲಿದೆ ಎನ್ನುವ ಆತಂಕವಿದೆ.

ಟಾಪ್ ನ್ಯೂಸ್

covid effect at chikkamagalore

ಚಿಕ್ಕಮಗಳೂರು : ನಿಯಮ ಉಲ್ಲಂಘಿಸಿ ಅಂತ್ಯಸಂಸ್ಕಾರಕ್ಕೆ ಹೋದವರಿಗೆ ಕೋವಿಡ್ ದೃಢ

cats

ಫೇಸ್ ಬುಕ್ ಸ್ನೇಹಿತನಿಂದ ಹೀನ ಕೃತ್ಯ : ಮಹಿಳೆ ಮೇಲೆ 25 ಕಾಮುಕರಿಂದ ಅತ್ಯಾಚಾರ

cats

ದೆಹಲಿಯಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ಮುಂದುವರಿಕೆ

Untitled-1

ಜೋರಾದ ಗಾಳಿ-ಮಳೆಗೆ ಗೋಡೆ ಕುಸಿದು ಅಜ್ಜಿ-ಮೊಮ್ಮಗ ಸಾವು

ಬದ್ಗದಸ್ದ

ಚಿಕ್ಕಮಗಳೂರಿನಲ್ಲೂ ಆಕ್ಸಿಜನ್ ಬಸ್ ಸೇವೆ ಪ್ರಾರಂಭ : ಡಿಸಿಎಂ ಸವದಿ

ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ವೈಯಕ್ತಿಕವಾಗಿ 50ಸಾವಿರ ರೂ.ಪರಿಹಾರ:ಸಚಿವ ಬಿ.ಸಿ.ಪಾಟೀಲ್

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 50 ಸಾವಿರ ರೂ.ಪರಿಹಾರ: ಬಿ.ಸಿ.ಪಾಟೀಲ್

page

ರೈತರಿಂದ ನೇರವಾಗಿ ಟೊಮೇಟೋ ಖರೀದಿಸಿ ಉಚಿತವಾಗಿ ವಿತರಿಸಿದ ನಟ ಉಪೇಂದ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Is infection spreading from primary contact?

ಪ್ರಾಥಮಿಕ ಸಂಪರ್ಕದಿಂದ ಹರಡುತ್ತಿದೆಯೇ ಸೋಂಕು?

covid effect at chikkamagalore

ಚಿಕ್ಕಮಗಳೂರು : ನಿಯಮ ಉಲ್ಲಂಘಿಸಿ ಅಂತ್ಯಸಂಸ್ಕಾರಕ್ಕೆ ಹೋದವರಿಗೆ ಕೋವಿಡ್ ದೃಢ

Untitled-1

ಜೋರಾದ ಗಾಳಿ-ಮಳೆಗೆ ಗೋಡೆ ಕುಸಿದು ಅಜ್ಜಿ-ಮೊಮ್ಮಗ ಸಾವು

ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ವೈಯಕ್ತಿಕವಾಗಿ 50ಸಾವಿರ ರೂ.ಪರಿಹಾರ:ಸಚಿವ ಬಿ.ಸಿ.ಪಾಟೀಲ್

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 50 ಸಾವಿರ ರೂ.ಪರಿಹಾರ: ಬಿ.ಸಿ.ಪಾಟೀಲ್

ಒಂದು ವಾರದ ಅಂತರದಲ್ಲಿ ತಾಯಿ-ಮಗ ಕೋವಿಡ್ ಗೆ ಬಲಿ : ದುಃಖದ ಕೂಪದಲ್ಲಿ 8 ತಿಂಗಳ ಗರ್ಭಿಣಿ..

ಒಂದು ವಾರದ ಅಂತರದಲ್ಲಿ ತಾಯಿ-ಮಗ ಕೋವಿಡ್ ಗೆ ಬಲಿ : ದುಃಖದ ಕೂಪದಲ್ಲಿ 8 ತಿಂಗಳ ಗರ್ಭಿಣಿ..

MUST WATCH

udayavani youtube

ಪುತ್ತೂರು ಮಹಾಲಿಂಗೇಶ್ವರ ದೇಗುಲದ ಸಭಾಂಗಣ ಸದ್ಯಕ್ಕೆ COVID CARE CENTRE

udayavani youtube

ಕನ್ನಡ ಶಾಲೆಯ ವಿಭಿನ್ನ ಇಂಗ್ಲೀಷ್ ಕ್ಲಾಸ್

udayavani youtube

ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ

udayavani youtube

ರಾಯಚೂರು ; ಫುಲ್ ಲಾಕ್ ಡೌನ್ ಹಿನ್ನೆಲೆ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

udayavani youtube

Oxygen ನಮಗೆ ಬೇಕಿರುವುದಕ್ಕಿಂತ ಜಾಸ್ತಿನೇ ಇದೆ

ಹೊಸ ಸೇರ್ಪಡೆ

Is infection spreading from primary contact?

ಪ್ರಾಥಮಿಕ ಸಂಪರ್ಕದಿಂದ ಹರಡುತ್ತಿದೆಯೇ ಸೋಂಕು?

cats

ಕಣ್ಮನ ಸೆಳೆಯುವ ಗೋಕಾಕ್ ಜಲಪಾತ

covid effect at chikkamagalore

ಚಿಕ್ಕಮಗಳೂರು : ನಿಯಮ ಉಲ್ಲಂಘಿಸಿ ಅಂತ್ಯಸಂಸ್ಕಾರಕ್ಕೆ ಹೋದವರಿಗೆ ಕೋವಿಡ್ ದೃಢ

cats

ಫೇಸ್ ಬುಕ್ ಸ್ನೇಹಿತನಿಂದ ಹೀನ ಕೃತ್ಯ : ಮಹಿಳೆ ಮೇಲೆ 25 ಕಾಮುಕರಿಂದ ಅತ್ಯಾಚಾರ

cats

ದೆಹಲಿಯಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ಮುಂದುವರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.