ಛಲವಾದಿ ಮಹಾಸಭಾ ಹೆಸರು ದುರುಪಯೋಗ: ಆರೋಪ

Team Udayavani, May 7, 2018, 5:35 PM IST

ಬಾಗಲಕೋಟೆ: ಛಲವಾದಿ ಮಹಾಸಭಾದ ಹೆಸರು ಹೇಳಿಕೊಂಡು ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವುದೇ ನಮ್ಮ ಗುರಿ ಎಂದು ವಿಕೃತ ಮನಸ್ಸಿನ ಕೆಲ ವ್ಯಕ್ತಿಗಳು ಹೇಳಿದ್ದು, ಇದಕ್ಕೆ ಸಮಾಜ ಬಾಂಧವರು ತಲೆ ಕೆಡಿಸಿಕೊಳ್ಳಬಾರದು. ಇಂತಹ ಹೇಳಿಕೆಗೆ ನಮ್ಮ ಮಹಾಸಭಾ ಬೆಂಬಲ ಕೊಡುವುದಿಲ್ಲ ಎಂದು ಛಲವಾದಿ ಮಹಾಸಭಾದ ಮುಖಂಡ ಎಂ.ಎಚ್‌. ಚಲವಾದಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಛಲವಾದಿ ಮಹಾಸಭಾ ಸಂಘಟನೆಯು ಯಾವುದೇ ವ್ಯಕ್ತಿಯ, ಪಕ್ಷಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಛಲವಾದಿ ಮಹಾಸಭಾ ಹೆಸರಿಗೆ ಮಸಿ ಬಳೆಯುವ ಕಿಡಿಗೇಡಿಗಳು ಈ ರೀತಿ ಯತ್ನ ಮಾಡುತ್ತಿದ್ದಾರೆ ಎಂದರು. 

ಈಗಾಗಲೇ ವಿವಿಧ ದಲಿತ ಪರ ಚಿಂತಕರು, ಛಲವಾದಿ ಮಹಾಸಭಾ ಸಂಘಟನೆ ಪದಾ ಧಿಕಾರಿಗಳು ಸಿಎಂ ಸಿದ್ದರಾಮಯ್ಯ, ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲವಾಗಿ ನಿಂತಿದ್ದೇವೆ. ದೇಶದ ಇತಿಹಾಸದಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯವರಿಗೆ ವಿವಿಧ ಇಲಾಖೆಗಳಿಂದ ಅನೇಕ ಸೌಲಭ್ಯಗಳನ್ನು ನೀಡಿ ಸಮಾಜದ ಅಭಿವೃದ್ಧಿ ಮಾಡಿದ್ದಾರೆ. ಕ್ಷೀರಭಾಗ್ಯ, ಅನ್ನಭಾಗ್ಯ, ಕೃಷಿ ಭಾಗ್ಯ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಕಾಂಗ್ರೆಸ್‌ ಸರಕಾರ ಎಲ್ಲ ಜಾತಿ ವರ್ಗಕ್ಕೂ ನೀಡಿದೆ. ಆದ್ದರಿಂದ ಛಲವಾದಿ ಮಹಾಸಭಾ ಸಂಘಟನೆ ಹೇಗೆ ವಿರೋಧ ವ್ಯಕ್ತಪಡಿಸಲು ಸಾಧ್ಯ ಎಂದರು.

ಸಿಎಂ ಸಿದ್ದರಾಮಯ್ಯ ದಲಿತರ, ಹಿಂದುಳಿದ ವರ್ಗಗಳ ಶಕ್ತಿಯಾಗಿ ಅನೇಕ ಯೋಜನೆ ನೀಡಿದ್ದಾರೆ. ಅಲ್ಲದೇ ಸರಕಾರಿ ಕಾಮಗಾರಿ ಟೆಂಡರ್‌ ಪ್ರಕ್ರಿಯೆಯಲ್ಲೂ ಶೇ.18 ರಷ್ಟು ಮೀಸಲಾತಿ ನೀಡಿದ್ದಾರೆ. ಛಲವಾದಿ ಸಮಾಜದ ಅಭಿವೃದ್ಧಿಗೆ ಸಿದ್ದರಾಮಯ್ಯ ಅನೇಕ ಕಾರ್ಯ ಮಾಡಿದ್ದಾರೆ. ಅವರ ಗೆಲುವಿಗೆ ಶ್ರಮಿಸಲಿದ್ದೇವೆ ಎಂದು ತಿಳಿಸಿದರು. ನಗರಸಭೆ ಸದಸ್ಯ ತಿಪ್ಪಣ್ಣ ನೀಲನಾಯಕ ಮಾತನಾಡಿ, ಮೇ 8ರಂದು ಬಾದಾಮಿ ನಗರದಲ್ಲಿ ಎಂ.ಎಚ್‌.ಛಲವಾದಿ ನೇತೃತ್ವದಲ್ಲಿ ಛಲವಾದಿ ಮಹಾಸಭಾ ಸಂಘಟನೆ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಛಲವಾದಿ ಸಮಾಜದ ಬಾಂಧವರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಛಲವಾದಿ ಮಹಾಸಭಾ ಸಂಘಟನೆ ಮುಖಂಡ ಬಸವರಾಜ ಛಲವಾದಿ, ಎನ್‌.ಬಿ. ಗಸ್ತಿ, ಗ್ಯಾನಪ್ಪ ಛಲವಾದಿ ಮುಂತಾದವರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

 • ಬೆಳಗಾವಿ: ಹನಿ ನೀರಿಗಾಗಿ ಪರಿತಪಿಸುತ್ತಿರುವ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ಕೊನೆಗೂ ನೀರು ಸಿಗುತ್ತಿದೆ. ಅದು ಮಹಾರಾಷ್ಟ್ರದ ಜಲಾಶಯಗಳಿಂದಲ್ಲ. ಒಂದೇ...

 • ಹುಬ್ಬಳ್ಳಿ: ಅದರಗುಂಚಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಶನಿವಾರ ಸಂಜೆ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮೀಣ ಠಾಣೆ ಪೊಲೀಸರು...

 • ಹುಬ್ಬಳ್ಳಿ: ಶಾಸ್ತ್ರೀಯ ನೃತ್ಯ ಪ್ರಕಾರಗಳಿಗೆ ವಿದೇಶಗಳಲ್ಲಿ ಸಾಕಷ್ಟು ಮನ್ನಣೆ ಸಿಗುತ್ತಿದ್ದು, ನಮ್ಮ ದೇಶದಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗುವುದು ಅವಶ್ಯವಾಗಿದೆ...

 • ಕಲಘಟಗಿ: ಇಂದಿನ ವೈಜ್ಞಾನಿಕ ಯುಗದಲ್ಲಿಯೂ ವಾಮಾಚಾರದಂತಹ ಮೂಢನಂಬಿಕೆ ಚಟುವಟಿಕೆಗೆ ಪಟ್ಟಣದಿಂದ 3 ಕಿಮೀ ಅಂತರದಲ್ಲಿರುವ ತುಮ್ರಿಕೊಪ್ಪ ಗ್ರಾಮದ ಸನಿಹದ ಬೇಗೂರ...

 • ಧಾರವಾಡ: ಮಳಿ-ಬೆಳಿ ಸಂಪೈತ್ರಿಪಾ..ಗುಡುಗು ಸಿಡ್ಲು ಭಾಳ ಐತ್ರಿಪಾ..ರಕ್ತದ ಕಾವಲಿ ಹರಿತೇತ್ರಿಪಾ..ನನ್ನ ತಂಗೀಗೆ ಐದು ವಾರಾ ಬಿಡ್ರಿಪಾ..ಹುಟ್ಟಿದ ಮಗೂಗೆ ಬಲಾ ಇಲ್ರಿಪಾ.. ಇದು...

ಹೊಸ ಸೇರ್ಪಡೆ

 • ಕೋಲಾರ: ಕಂದಾಯ ಮತ್ತು ಸರ್ವೇ ಇಲಾಖೆ ರೈತರ ರಕ್ತ ಹೀರುತ್ತಿದ್ದು, ಇವೆರಡೂ ಇಲಾಖೆ ಸರಿಪಡಿಸಿದರೆ ಮಾತ್ರ ಭ್ರಷ್ಟಾಚಾರ ಎನ್ನುವುದು ಶೇ.5 ಹತೋಟಿಗೆ ಬಂದು ಜನಸಾಮಾನ್ಯರು...

 • ಏಟು ತಿಂದ ಬೋರ್‌ವೆಲ್‌ಮೇಲ್ವಿಚಾರಕ ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಹಂಡೇಲು ಶಾಲೆಯ ಬಳಿ ಸರಕಾರಿ ಜಾಗದಲ್ಲಿ ಬೋರ್‌ವೆಲ್‌ ಕಾಮಗಾರಿಯ ಮೇಲ್ವಿಚಾರಣೆ...

 • ಪುತ್ತೂರು: ಖ್ಯಾತ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್‌ ದಂಪತಿ ಸಂಚರಿಸುತ್ತಿದ್ದ ಕ್ವಿಡ್‌ ಕಾರು ಪಲ್ಟಿಯಾದ ಘಟನೆ ತಿಂಗಳಾಡಿ ಬಳಿಯ ತ್ಯಾಗರಾಜ ನಗರದ ತಿರುವಿನಲ್ಲಿ...

 • ಗದಗ: ಬರದಂತಹ ಸಂಕಷ್ಟ ಸ್ಥಿತಿಯಲ್ಲಿ ತಾಲೂಕು ಹಾಗೂ ಗ್ರಾಪಂ ಮಟ್ಟದ ಅಧಿಕಾರಿ, ಸಿಬ್ಬಂದಿ ಹಾಗೂ ಕಂದಾಯ ನಿರೀಕ್ಷಕರು ಪ್ರತಿ ಹಳ್ಳಿ ಹಳ್ಳಿಗೆ ತೆರಳಿ ಜನರ ಸಮಸ್ಯೆಗಳನ್ನು...

 • ಬ್ರಹ್ಮಾವರ: ಉಪ್ಪೂರು ಬಳಿ ರಾ.ಹೆ. 66ರಲ್ಲಿ ಲಾರಿಗೆ ಪಿಕ್‌ಅಪ್‌ ವಾಹನ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ರವಿವಾರ ಮುಂಜಾನೆ ನಡೆದಿದೆ. ಬಾಗಲಕೋಟೆ...

 • ಕೋಲಾರ: ಮನುಷ್ಯರು ಸೇವಿಸುವ ಸ್ವಾಭಾವಿಕ ಆಹಾರಗಳಲ್ಲಿ ಹಣ್ಣುಗಳು ಅತಿ ಮುಖ್ಯವಾಗಿದ್ದು, ಅವುಗಳನ್ನು ಆಕರ್ಷಿಸಲು ಮತ್ತು ಕೃತಕವಾಗಿ ಹಣ್ಣಾಗಿಸಲು ಕೆಲವು ಮಾರಣಾಂತಿಕ...