Udayavni Special

ಲಂಚ ಪಡೆಯುವಾಗ ಎಸಿಬಿ ಬಲೆಗೆ ಪಾಲಿಕೆ ನೌಕರ


Team Udayavani, Aug 18, 2017, 12:30 PM IST

hub3.jpg

ಧಾರವಾಡ: ಕಚೇರಿಯಲ್ಲಿ ಮಾಡಿದ ಕೆಲಸಕ್ಕೆ ದೇವಸ್ಥಾನದ ಆವರಣದಲ್ಲಿ ಲಂಚ ಪಡೆಯುತ್ತಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ದ್ವಿತೀಯ ದರ್ಜೆ ಸಹಾಯಕನೊಬ್ಬ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾನೆ. 

ನಿವೇಶನದ ಉತಾರ ಮಾಡಿಕೊಡಲು 15 ಸಾವಿರ ರೂ.ಗಳ ಲಂಚ ಕೇಳಿದ್ದ ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕ ಸುರೇಶ ಗೊಲ್ಲರ ಗುರುವಾರ ಇಲ್ಲಿನ ಸಮೀಪದ ಸಾಯಿಬಾಬಾ ಮಂದಿರದಲ್ಲಿ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿ ಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ. 

ವೀರಭದ್ರಪ್ಪ ನಾವಲಗಿ ಎಂಬುವವರು ಕೆಲಗೇರಿಯಲ್ಲಿ ತಮಗೆ ಸೇರಿದ 8 ಗುಂಟೆ ನಿವೇಶನಕ್ಕೆ ಸಂಬಂಧಿಸಿದಂತೆ ಉತಾರ ಮಾಡಿ ಕೊಡಲು 2016ರ ಏಪ್ರಿಲ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಕೇವಲ 5 ಗುಂಟೆಯ ಜಾಗಕ್ಕೆ ಉತಾರ ನೀಡಿದ್ದ ಪಾಲಿಕೆ ಅ ಧಿಕಾರಿಗಳು, ಉಳಿದ 3 ಗುಂಟೆಯನ್ನು ಹಾಗೇ ಬಿಟ್ಟಿದ್ದರು.

ಅದನ್ನೂಮತ್ತೆ ಮರಳಿ ಉತಾರಲ್ಲಿ ದಾಖಲಿಸುವಂತೆ ಕೋರಿ ಮೂರು ತಿಂಗಳ ಹಿಂದೆ ವೀರಭದ್ರಪ್ಪ ಮತ್ತೂಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಲ್ಲಿಸಿದಾಗಿನಿಂದ ಅನೇಕ ಬಾರಿ ತಮ್ಮ ಕೆಲಸ ಮಾಡಿಕೊಡುವಂತೆ ಕೇಳಿಕೊಂಡರೂ ವೀರಭದ್ರಪ್ಪ ಅವರನ್ನು ಈತ ಇನ್ನೂ ಕೆಲಸವಾಗಿಲ್ಲ. ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಹೇಳಿ ಸತಾಯಿಸುತ್ತಿದ್ದ.

ಕೊನೆಗೆ ಈ ಕೆಲಸಕ್ಕೆ ಸುರೇಶ ಗೊಲ್ಲರ 15 ಸಾವಿರ ರೂ. ಲಂಚದ ಬೇಡಿಕೆ ಇಟ್ಟ. ಲಂಚದ ಬೇಡಿಕೆ ಇಡುತ್ತಿದ್ದಂತೆ ವೀರಭದ್ರಪ್ಪ ಒಂದು ವಾರದ ಹಿಂದೆ ಎಸಿಬಿ ಅ ಧಿಕಾರಿಗಳಿಗೆ ಈ ಕುರಿತು ದೂರು ನೀಡಿದ್ದರು. ಕೊನೆಗೆ ಇಲ್ಲಿನ ಕೆಲಗೇರಿ ಸಾಯಿಬಾಬಾ ಗುಡಿಯ ಬಳಿ ಗುರುವಾರ ಬೆಳಿಗ್ಗೆ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ,

ಸುರೇಶನನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಇನ್‌ಸ್ಪೆಕ್ಟರ್‌ ಪ್ರಮೋದ ಯಲಿಗಾರ ತಿಳಿಸಿದ್ದಾರೆ. ನಂತರ ಬಾರಾಕೋಟ್ರಿ ಬಳಿ ಇರುವ ಪಾಲಿಕೆ ವಲಯ ಕಚೇರಿ1ಕ್ಕೆ ತೆರಳಿದ  ಡಿಎಸ್‌ಪಿ ಜೆ.ರಘು ನೇತೃತ್ವದ ತಂಡ,ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲನೆ ನಡೆಸಿತು.

ಈ ಸಂದರ್ಭದಲ್ಲಿ ಎದುರಿಗೆ ಇದ್ದ ಕಡತಗಳನ್ನು ಸುಮಾರು ಒಂದೂವರೆ ಗಂಟೆ ಕಾಲ ಹುಡುಕಾಡಿದಂತೆ ಮಾಡಿ ಸುರೇಶ ಸತಾಯಿಸಿದ. ನಂತರ ಎಸಿಬಿ ಅಧಿಕಾರಿಗಳೇ ಹುಡುಕಿ ತೆಗೆದರು. ದಾಳಿ ವೇಳೆ ತನಿಖಾ ಧಿಕಾರಿ ಬಿ.ಎ.ಜಾಧವ, ಜಯಾ ಕಟ್ಟಿ, ಗಿರೀಶ ಮನಸೂರು, ಲೋಕೇಶ ಬೆಂಡಿಕಾಯಿ, ಎಸ್‌.ಎಸ್‌. ಕಾಜಗಾರ ತಂಡದಲ್ಲಿದ್ದರು.  

ಟಾಪ್ ನ್ಯೂಸ್

yuvraj singh

ಹರ್ಯಾಣ ಪೊಲೀಸರಿಂದ ಮಾಜಿ ಆಟಗಾರ ಯುವರಾಜ್ ಸಿಂಗ್ ಬಂಧನ!

rwytju11111111111

ಸೋಮವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ

ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ

ಇ-ಅಂಕಪಟ್ಟಿ; ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿ.ವಿ. ಕ್ರಮ

ಇ-ಅಂಕಪಟ್ಟಿ; ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿ.ವಿ. ಕ್ರಮ

ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ ಬೊಮ್ಮಾಯಿ

ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ ಬೊಮ್ಮಾಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ ಬೊಮ್ಮಾಯಿ

ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ ಬೊಮ್ಮಾಯಿ

ಎಚ್‌.ಡಿ. ಕುಮಾರಸ್ವಾಮಿ ಹಿಟ್‌ ಆ್ಯಂಡ್‌ ರನ್‌ ಗಿರಾಕಿ: ಸಿದ್ದರಾಮಯ್ಯ

ಎಚ್‌.ಡಿ. ಕುಮಾರಸ್ವಾಮಿ ಹಿಟ್‌ ಆ್ಯಂಡ್‌ ರನ್‌ ಗಿರಾಕಿ: ಸಿದ್ದರಾಮಯ್ಯ

gfgfdg

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

jghjgyj

ಕೋವಿಡ್ ಮದ್ದು, ಅನ್ಯ ಕಾಯಿಲೆಗೂ ಗುದ್ದು?  

bommai and siddaramaiah

ಒಂದೇ ಹೋಟೆಲ್ ನಲ್ಲಿದ್ದರೂ ಪರಸ್ಪರ ಭೇಟಿಯಾಗದ ಸಿಎಂ-ಮಾಜಿ ಸಿಎಂ!

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

yuvraj singh

ಹರ್ಯಾಣ ಪೊಲೀಸರಿಂದ ಮಾಜಿ ಆಟಗಾರ ಯುವರಾಜ್ ಸಿಂಗ್ ಬಂಧನ!

rwytju11111111111

ಸೋಮವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ಈ ದೇಶಗಳಿಗೆ ಹೋಗುವುದು ಸುಲಭ

ಈ ದೇಶಗಳಿಗೆ ಹೋಗುವುದು ಸುಲಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.