Udayavni Special

ಶಿಕ್ಷಕರ ಅಲೆದಾಟ ತಪ್ಪಿಸಲು ಅದಾಲತ್‌

ಬೆಳಗಾವಿ ವಿಭಾಗ ಮಟ್ಟದ ಶಿಕ್ಷಣ ಸ್ಪಂದನ ಕಾರ್ಯಕ್ರಮ ಉದ್ಘಾಟನೆ

Team Udayavani, Mar 2, 2021, 12:35 PM IST

ಶಿಕ್ಷಕರ ಅಲೆದಾಟ ತಪ್ಪಿಸಲು ಅದಾಲತ್‌

ಧಾರವಾಡ: ರಾಜ್ಯದ ಶಾಲಾ ಶಿಕ್ಷಕರ ಅನಗತ್ಯ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಆಯಾ ಶೈಕ್ಷಣಿಕವಲಯ ವ್ಯಾಪ್ತಿಯಲ್ಲಿ ಶಿಕ್ಷಣ ಅದಾಲತ್‌ಯೋಜಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಎಸ್‌. ಸುರೇಶ ಕುಮಾರ್‌ ಹೇಳಿದರು.

ನಗರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಆಯುಕ್ತಾಲಯವು ಡಯಟ್‌ ಆವರಣದಲ್ಲಿ ಆಯೋಜಿಸಿದ್ದ ಬೆಳಗಾವಿ ವಿಭಾಗಮಟ್ಟದ ಶಿಕ್ಷಣ ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಾಠ ಮಾಡಬೇಕಾದ ಶಿಕ್ಷಕರು ತಮ್ಮ ಕಚೇರಿ ಕೆಲಸಗಳಿಗೆ ಅನಗತ್ಯವಾಗಿ ಅಲೆದಾಡುತ್ತಿರುವಪರಿಸ್ಥಿತಿ ಇದೆ. ಇದಕ್ಕಾಗಿ ಬೆಂಗಳೂರು, ಮೈಸೂರು,ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಇಂಥ ಶಿಕ್ಷಣ ಅದಾಲತ್‌ಗಳನ್ನು ನಡೆಸಲಾಗುವುದು.ಇಂಥದ್ದೊಂದು ಅದಾಲತ್‌ಗೆ ಅರ್ಜಿ ಕರೆದಾಗ 71 ಸಾವಿರ ಅರ್ಜಿಗಳು ಮೊಬೈಲ್‌ ಆ್ಯಪ್‌ ಮೂಲಕವೇಬಂದಿದೆ ಎಂದರು.

ಶಿಕ್ಷಕರ, ಶಿಕ್ಷಣ ಸಂಸ್ಥೆಗಳ ಸಂಬಂ ಧಿತ ದೂರು, ಮನವಿಗಳ ಶೀಘ್ರ ವಿಲೇವಾರಿಗಾಗಿ ರಾಜ್ಯದ ಎಲ್ಲಕಂದಾಯ ವಿಭಾಗಗಳಲ್ಲಿ ಶಿಕ್ಷಣ ಸ್ಪಂದನ ಹಾಗೂ ಶಿಕ್ಷಣ ಸ್ಪಂದನದಡಿ ಕಡತ ವಿಲೇವಾರಿ ಅಭಿಯಾನ ಆಯೋಜಿಸಲಾಗುವುದು. ಶಿಕ್ಷಣ ಸ್ಪಂದನ ಒಂದು ಕಾರ್ಯಕ್ರಮವಾಗದೇ ಅದು ದಿನನಿತ್ಯದ ಕಾರ್ಯವಾಗಬೇಕು. ಶಿಕ್ಷಕರ ಸಮಸ್ಯೆ ದೂರುಗಳಿಗೆಸ್ಪಂದಿಸಲು ವಿಭಾಗಮಟ್ಟದಲ್ಲಿ ಶಿಕ್ಷಣ ಸ್ಪಂದನ ಕಾರ್ಯಕ್ರಮ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದರು.

ಪ್ರಾಮಾಣಿಕತೆ ಎನ್ನುವುದು ಇಂದು ಅಪಹಾಸ್ಯದ ಮಾತಾಗಿದೆ. ಆದರೆ ಅದು ಗೌರವದಸಂಕೇತವಾಗಬೇಕು. ಪ್ರತಿಯೊಬ್ಬರು ಇಲಾಖೆಯಲ್ಲಿಹೆಮ್ಮೆ, ಅಭಿಮಾನ, ಆತ್ಮ ವಿಶ್ವಾಸದಿಂದ ಕೆಲಸ ಮಾಡಬೇಕು. ಕೋವಿಡ್‌ ಸಂದರ್ಭದಲ್ಲಿ ಆರ್ಥಿಕಸಂಕಷ್ಟವಿದ್ದರೂ ಸರಕಾರ ಸರಕಾರಿ ನೌಕರರಿಗೆಸಕಾಲದಲ್ಲಿ ಯಾವುದೇ ಕಡಿತವಿಲ್ಲದೆ ಸಂಪೂರ್ಣಸಂಬಳ ನೀಡಿದೆ. ಇದು ಸರಕಾರದ ಬದ್ಧತೆ. ಅದರಂತೆತಮ್ಮ ಪಾಲಿನ ಕರ್ತವ್ಯಗಳನ್ನು ಪ್ರಾಮಾಣಿಕತೆ, ಬದ್ಧತೆಯಿಂದ ಮಾಡಬೇಕು ಎಂದರು.

ಶಿಕ್ಷಣ ಇಲಾಖೆಯಿಂದ ಸಮಾಜದಲ್ಲಿ ಶಕ್ತಿ ತುಂಬುವ, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವಕೆಲಸವಾಗಬೇಕು. ಮಕ್ಕಳು ಪರೀಕ್ಷೆಗಳನ್ನುಯಾವುದೇ ಭಯ, ಆತಂಕಗಳಿಲ್ಲದೆ ಖುಷಿಯಿಂದ ಆತ್ಮವಿಶ್ವಾಸದಿಂದ ಎದುರಿಸುವ ವಾತಾವರಣಬೆಳಸಬೇಕು. ಸಮಾಜದಲ್ಲಿ ಗೌರವ ಭಾವನೆಹೆಚ್ಚಿಸುವಂತಹ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಮಾತನಾಡಿ, ಶಿಕ್ಷಣ ಇಲಾಖೆ ಕಚೇರಿಗಳಲ್ಲಿಕೆಲಸಗಳು ವಿನಾಕಾರಣ ವಿಳಂಬವಾಗುತ್ತಿದೆ. ಆಭಾಗದ ಶಾಸಕರನ್ನು ಭೇಟಿಯಾಗದಿದ್ದರೆ ಕೆಲಸವೇಆಗಲ್ಲ ಎಂಬ ಸ್ಥಿತಿ ಇದೆ. ಇದು ಬೋಧನೆ ಮೇಲೆಪರಿಣಾಮ ಬೀರುತ್ತಿದೆ. ನಿಂತೇ ಹೋಗಿದ್ದ ಶಿಕ್ಷಣಅದಾಲತ್‌ ಮರಳಿ ಆರಂಭಿಸುವ ಒತ್ತಾಯವಿತ್ತು.ಕನಿಷ್ಠ ಎರಡು ವರ್ಷಗಳಿಗೆ ಒಮ್ಮೆಯಾದರೂ ಇಂತಹ ಅದಾಲತ್‌ ನಡೆಯಬೇಕು ಎಂದರು.

ವಿಧಾನ ಪರಿಷತ ಸದಸ್ಯ ಹನಮಂತ ನಿರಾಣಿ ಮಾತನಾಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಆರ್‌. ಸ್ನೇಹಲ್‌, ಸ್ಲಿಪ್‌ ಸಂಸ್ಥೆಯನಿರ್ದೇಶಕ ರಘುವೀರ, ಡಿಡಿಪಿಐಗಳಾದ ಎಂ.ಎಲ್‌.ಹಂಚಾಟೆ, ಆರ್‌.ಎಸ್‌. ಮುಳ್ಳೂರ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು. ಅಪರ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ವಿದ್ಯಾ ನಾಡಿಗೇರ ನಿರೂಪಿಸಿದರು. ನಿರ್ದೇಶಕಿ ಮಮತಾ ನಾಯಕ ವಂದಿಸಿದರು.

ಟಾಪ್ ನ್ಯೂಸ್

ಗಹ್ದದಸ಻

ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ಇನ್ನಿಲ್ಲ!

ಕ,ಜಹಗ್ರೆ

ಗಿನ್ನೆಸ್ ದಾಖಲೆ ಬರೆದ ಮೊಲ ಕಳ್ಳತನ : ಹುಡುಕಿ ಕೊಟ್ಟವರಿಗೆ ಸಿಗುತ್ತೆ 2 ಲಕ್ಷ ಬಹುಮಾನ!

‘ಓ ಮೈ ಲವ್‌’ ಗಾನ ಬಜಾನ: ಸ್ಮೈಲ್ ಶ್ರೀನು ನಿರ್ದೇಶನದ ಚಿತ್ರ

‘ಓ ಮೈ ಲವ್‌’ ಗಾನ ಬಜಾನ: ಸ್ಮೈಲ್ ಶ್ರೀನು ನಿರ್ದೇಶನದ ಚಿತ್ರ

ತಮಿಳು ಖ್ಯಾತ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ತಮಿಳು ಖ್ಯಾತ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು: ಅಭಿಮಾನಿಗಳಲ್ಲಿ ಆತಂಕ

ಗಹಜಕಜುಹಯತ

ಭಾನುವಾರ ಉತ್ತರ ಪ್ರದೇಶ ಲಾಕ್ ಡೌನ್ : ಮಾಸ್ಕ್ ಹಾಕದಿದ್ದರೆ 10,000 ದಂಡ!

ಕೋವಿಡ್ ನೆಪ ಹೇಳಿ ಎಸ್ಎಸ್ಎಲ್ ಸಿ ಪರೀಕ್ಷೆ ರದ್ಧು ಮಾಡುವ ಪ್ರಯತ್ನ ಬೇಡ: ಬಸವರಾಜ ಹೊರಟ್ಟಿ

ಕೋವಿಡ್ ನೆಪ ಹೇಳಿ ಎಸ್ಎಸ್ಎಲ್ ಸಿ ಪರೀಕ್ಷೆ ರದ್ಧು ಮಾಡುವ ಪ್ರಯತ್ನ ಬೇಡ: ಬಸವರಾಜ ಹೊರಟ್ಟಿ

‍‍ಗಜಗ್ಹದದ್ದಸ

ಬಾಕ್ಸಿಂಗ್ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕಿದ್ದ ವ್ಯಕ್ತಿ ಇಂದು ಆಟೋ ಚಾಲಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-5

ಆರ್ಥಿಕ ತಜ್ಞ  ಡಾ| ಅಂಬೇಡ್ಕರ್ ‌: ಡಾ| ಅಜಿತ್‌

15-4

ಮೀಸಲಾತಿ ಅರ್ಥಹೀನ ಮಾಡುವ ಹುನ್ನಾರ

15-3

ಡಾ|ಅಂಬೇಡ್ಕರ್‌ ಶ್ರೇಷ್ಠ ಮಾನವತಾವಾದಿ: ಪ್ರಸಾದ ಅಬ್ಬಯ್ಯ

15-2

ಪ್ರಜಾಪ್ರಭುತ್ವ ವ್ಯವಸ್ಥೆಗೆ ಸ್ಪಷ್ಟ ರೂಪ ನೀಡಿದ ಚೇತನ: ಜೋಶಿ

15-2

ಡಾ|ಅಂಬೇಡ್ಕರ್‌ ಜೀವನ ಮೌಲ್ಯಗಳು ಸ್ಫೂರ್ತಿದಾಯಕ

MUST WATCH

udayavani youtube

ಮಂಗಳೂರು: ಬೊಟ್ ದುರಂತ ಪ್ರಕರಣ; ಮೂರು ದಿನಗಳಾದರೂ ಪತ್ತೆಯಾಗದ ಮೀನುಗಾರರು

udayavani youtube

ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತುರ್ತು ಸಭೆ

udayavani youtube

ಮಂಗಳೂರು : ಐಟಿ ಕಛೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ

udayavani youtube

Covid 2ನೇ ಅಲೆನಾವು ಬೀದಿಗೆ ಬೀಳಬೇಕಾ?

udayavani youtube

ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

ಹೊಸ ಸೇರ್ಪಡೆ

ಗಹ್ದದಸ಻

ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ಇನ್ನಿಲ್ಲ!

The disappearance of the rules

ನಾಮಪತ್ರ ಸಲ್ಲಿಕೆಗೆ ತೆರೆ:ನಿಯಮಾವಳಿ ಕಣ್ಮರೆ

Ranked in the “Golden Book of World Records”

“ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್ಸ್‌’ ನಲ್ಲಿ ಸ್ಥಾನ

programme held at K R Nagara

ಸಮ ಸಮಾಜಕ್ಕೆ ಹೋರಾಡಿದ ಅಂಬೇಡ್ಕರ್‌

Autograph

ಹಳೆ ಮಿತ್ರರನ್ನು ಸ್ಮತಿಪುಟಗಳಲ್ಲಿತಂದು ನೆನಪುಗಳನ್ನು ಬೆಸೆಯುವ ಕೊಂಡಿ ಆಟೋಗ್ರಾಫ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.