Udayavni Special

ವಾಜಪೇಯಿ ರಾಜಕೀಯ ಆದರ್ಶ ಅಳವಡಿಸಿಕೊಳ್ಳಿ 

Team Udayavani, Sep 1, 2018, 5:07 PM IST

secptember-23.jpg

ಹುಬ್ಬಳ್ಳಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ರಾಷ್ಟ್ರವನ್ನು ವಿಶ್ವದ ಎತ್ತರಕ್ಕೆ ಕೊಂಡೊಯ್ಯಬೇಕೆನ್ನುವ ಗುರಿಯೊಂದಿಗೆ ರಾಜಕಾರಣ ಮಾಡಿದರೇ ಹೊರತು ಅಧಿಕಾರಕ್ಕಾಗಿ ಅಥವಾ ಇನ್ನಾರನ್ನೋ ತುಳಿಯಲಿಕ್ಕಾಗಿ ಅಲ್ಲ. ಹೀಗಾಗಿಯೇ ಅವರೊಬ್ಬ ರಾಜಋಷಿ ಹಾಗೂ ಮುತ್ಸದ್ಧಿ ಎಂದರೆ ಯಾರ ವಿರೋಧ ವ್ಯಕ್ತವಾಗಲಿಕ್ಕಿಲ್ಲ ಎಂದು ಆರೆಸ್ಸೆಸ್‌ನ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು.

ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ನಡೆದ ಅಜಾತಶತ್ರು ಅಟಲ್‌ಜೀ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ ಉತ್ತಮ ಕಾರ್ಯವನ್ನು ಬಹಿರಂಗವಾಗಿ ಶ್ಲಾಘಿಸಿದ್ದು ವಾಜಪೇಯಿಯವರ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ವಾಜಪೇಯಿ ಅವರು ಮಾಡಿದ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ರಾಜಕೀಯ ಪದದ ಅರ್ಥ ವ್ಯಂಗ್ಯವಾಗಿ ಮಾರ್ಪಟ್ಟಿದೆ. ಅಧಿಕಾರಕ್ಕಾಗಿ ರಾಜಕಾರಣ ಎನ್ನುವಷ್ಟರ ಮಟ್ಟಿಗೆ ವ್ಯವಸ್ಥೆ ಬೆಳೆದು ಬಿಟ್ಟಿದೆ. ವಾಜಪೇಯಿ ಅವರಂತಹ ಮಹಾನ್‌ ನಾಯಕರ ರಾಜಕೀಯ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು, ರಾಜಧರ್ಮ ಅನುಸರಿಸಬೇಕು ಎಂದರು. ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ವಾಜಪೇಯಿ ಅವರ ಸಮಯಪ್ರಜ್ಞೆ, ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ನನ್ನನ್ನು ಸಾಕಷ್ಟು ಆಕರ್ಷಿಸಿವೆ. ಅವರು ಒಂದೇ ಒಂದು ಆರೋಪವಿರದ ಸಜ್ಜನ ರಾಜಕಾರಣಿ ಎಂದರು.

ಶಾಸಕ ಜಗದೀಶ ಶೆಟ್ಟರ ಮಾತನಾಡಿ, ರಾಜ್ಯದಲ್ಲಿ ಎರಡು ಪಕ್ಷಗಳ ನಡುವಿನ ಮೈತ್ರಿ ಸರಕಾರ ನಿತ್ಯ ಗೊಂದಲಗಳಿಂದ ಕೂಡಿದೆ. ಆದರೆ ವಾಜಪೇಯಿ ಅವರು ವಿಭಿನ್ನ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಹೊಂದಿದ 23 ಪಕ್ಷಗಳನ್ನು ಒಗ್ಗೂಡಿಸಿಕೊಂಡು ಯಶಸ್ವಿಯಾಗಿ ಆಡಳಿತ ನಡೆಸಿದರು. ಇತರರ ಕಾರ್ಯ ಸಾಧನೆಯನ್ನು ಮುಕ್ತಕಂಠದಿಂದ ಸ್ವಾಗತಿಸುತ್ತಿದ್ದರು ಎಂದರು. ಶಾಸಕರಾದ ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣವರ, ಪ್ರದೀಪ ಶೆಟ್ಟರ, ಪದ್ಮಶ್ರೀ ಪುರಸ್ಕೃತ ಡಾ| ಎಂ.ಎಂ. ಜೋಶಿ, ಜಿ.ಎಂ. ಚಿಕ್ಕಮಠ ಮಾತನಾಡಿದರು. ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕರಾದ ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ಮಹಾಪೌರ ಸುಧೀರ ಸರಾಫ, ಉಪ ಮಹಾಪೌರ ಮೇನಕಾ ಹುರಳಿ, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಶಾಂತಣ್ಣ ಕಡಿವಾಳ, ಬಾಲಚಂದ್ರ ನಾಕೋಡ ಇದ್ದರು.

ವಾಜಪೇಯಿ ದೇಶ ಕಂಡ ಮಹಾನ್‌ ನಾಯಕರಲ್ಲಿ ಒಬ್ಬರು. ಎಲ್ಲಾ ಪಕ್ಷದವರನ್ನು ಗೌರವದಿಂದ ಕಾಣುವ ವ್ಯಕ್ತಿತ್ವವೇ ಅವರನ್ನು ಇಷ್ಟೊಂದು ಎತ್ತರಕ್ಕೆ ಬೆಳೆಸಿದೆ. ಇಂದಿರಾ ಗಾಂಧಿ ಅವರನ್ನು ದುರ್ಗಾ ದೇವಿಗೆ ಹೋಲಿಸಿದ ಗೌರವ ಗುಣ ಎಲ್ಲರಲ್ಲೂ ಕಾಣಲು ಸಾಧ್ಯವಿಲ್ಲ. ಇಂದು ಸಣ್ಣದರಲ್ಲೂ ಕೆಸರೆರಚಾಟ ನಡೆಯುತ್ತಿದೆ. ಇಂದಿರಾ ಗಾಂಧಿ ಹಾಗೂ ವಾಜಪೇಯಿ ಅವರ ಭಾಷಣ ಕೇಳಿ ಬೆಳೆದವನು ನಾನು.
 ಸಿ.ಎಸ್‌. ಶಿವಳ್ಳಿ, ಕಾಂಗ್ರೆಸ್‌ ಶಾಸಕ

ಟಾಪ್ ನ್ಯೂಸ್

ನಿನಗೆ ಬೇರೆ ಹೆಸರು ಬೇಕೇ.. ಸ್ತ್ರೀ ಎಂದರೆ ಅಷ್ಟೇ ಸಾಕೆ..!

ನಿನಗೆ ಬೇರೆ ಹೆಸರು ಬೇಕೇ.. ಸ್ತ್ರೀ ಎಂದರೆ ಅಷ್ಟೇ ಸಾಕೆ..!

ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ, ಸಮತೋಲಿತ ಮುಂಗಡ ಪತ್ರ ಸಾಧ್ಯತೆ

Live Update; ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ, ಸಭಾತ್ಯಾಗಕ್ಕೆ ಕಾಂಗ್ರೆಸ್ ನಿರ್ಧಾರ

ಕೊಡಗಿನಲ್ಲಿ ವ್ಯಾಘ್ರ ಅಟ್ಟಹಾಸ: 8 ವರ್ಷದ ಬಾಲಕನನ್ನು ಕೊಂದು ಹಾಕಿದ ಹುಲಿ

ಕೊಡಗಿನಲ್ಲಿ ವ್ಯಾಘ್ರ ಅಟ್ಟಹಾಸ: 8 ವರ್ಷದ ಬಾಲಕನನ್ನು ಕೊಂದು ಹಾಕಿದ ಹುಲಿ

Untitled-1

ಸುದ್ದಿ ಸುತ್ತಾಟ : ಹನಿಟ್ರ್ಯಾಪ್‌ ಮಾಯಾಜಾಲದ ಹಿಂದೆ – ಮುಂದೆ

ಬಜೆಟ್ ಗೂ ಮುನ್ನ ಬಿಎಸ್ ವೈ ಗೆ ಪ್ರತಿಭಟನೆ ಬಿಸಿ: ಸಿಎಂ ನಿವಾಸದೆದುರು ಮಹಿಳೆಯರ ಪ್ರತಿಭಟನೆ

ಬಜೆಟ್ ಗೂ ಮುನ್ನ ಬಿಎಸ್ ವೈ ಗೆ ಪ್ರತಿಭಟನೆ ಬಿಸಿ: ಸಿಎಂ ನಿವಾಸದೆದುರು ಮಹಿಳೆಯರ ಪ್ರತಿಭಟನೆ

ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ; ಟಿಎಂಸಿ ಕೈವಾಡ: ಬಿಜೆಪಿ ಆರೋಪ

ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ; ಟಿಎಂಸಿ ಕೈವಾಡ: ಬಿಜೆಪಿ ಆರೋಪ

ಕಾಣೆಯಾಗಿದ್ದ ಮಾಜಿ‌ ಶಾಸಕರ ಮಮ್ಮೊಕ್ಕಳು ಶವವಾಗಿ ಪತ್ತೆ!

ಕಾಣೆಯಾಗಿದ್ದ ಮಾಜಿ‌ ಶಾಸಕರ ಮಮ್ಮೊಕ್ಕಳು ಶವವಾಗಿ ಪತ್ತೆ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೇಜೋವಧೆ ವಿರುದ್ದ ಕೋರ್ಟ್ ಗೆ ಹೋಗುವುದು ತಪ್ಪಲ್ಲ: ಸಚಿವ ಶ್ರೀರಾಮುಲು

ತೇಜೋವಧೆ ವಿರುದ್ದ ಕೋರ್ಟ್ ಗೆ ಹೋಗುವುದು ತಪ್ಪಲ್ಲ: ಸಚಿವ ಶ್ರೀರಾಮುಲು

ಸಿದ್ದು- ಡಿಕೆಶಿ ಜೋಡೆತ್ತುಗಳಲ್ಲ, ಅಧಿಕಾರಕ್ಕೆ ಬಡಿದಾಡುವ ಹೋರಿಗಳು: ಶ್ರೀರಾಮುಲು ಟೀಕೆ

ಸಿದ್ದು- ಡಿಕೆಶಿ ಜೋಡೆತ್ತುಗಳಲ್ಲ, ಅಧಿಕಾರಕ್ಕೆ ಬಡಿದಾಡುವ ಹೋರಿಗಳು: ಶ್ರೀರಾಮುಲು ಟೀಕೆ

ನಿವೇಶನ-ಸಾಲ ಕೊಡಿಸುವುದಾಗಿ ವಂಚನೆ; ಮಹಿಳೆ ಸೆರೆ

ನಿವೇಶನ-ಸಾಲ ಕೊಡಿಸುವುದಾಗಿ ವಂಚನೆ; ಮಹಿಳೆ ಸೆರೆ

ಎಪಿಎಂಸಿಗಳಿಗೆ ಈಗ ನಿರ್ವಹಣೆಯೇ ಹೊರೆ

ಎಪಿಎಂಸಿಗಳಿಗೆ ಈಗ ನಿರ್ವಹಣೆಯೇ ಹೊರೆ

Mango

ಮಾವಿಗೆ ಬೆಂಕಿ ಸುರಿದ ಇಬ್ಬನಿ !ಇಬ್ಬನಿಗೆ ಕಮರಿದ ಆಲ್ಫೋನ್ಸೋ|

MUST WATCH

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

udayavani youtube

ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

ಹೊಸ ಸೇರ್ಪಡೆ

ನಿನಗೆ ಬೇರೆ ಹೆಸರು ಬೇಕೇ.. ಸ್ತ್ರೀ ಎಂದರೆ ಅಷ್ಟೇ ಸಾಕೆ..!

ನಿನಗೆ ಬೇರೆ ಹೆಸರು ಬೇಕೇ.. ಸ್ತ್ರೀ ಎಂದರೆ ಅಷ್ಟೇ ಸಾಕೆ..!

ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ, ಸಮತೋಲಿತ ಮುಂಗಡ ಪತ್ರ ಸಾಧ್ಯತೆ

Live Update; ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ, ಸಭಾತ್ಯಾಗಕ್ಕೆ ಕಾಂಗ್ರೆಸ್ ನಿರ್ಧಾರ

ಸ್ವಾಮೀಜಿ ಮನವೊಲಿಕೆಗೆ ತೆರೆಮರೆ ಯತ್ನ?

ಮೀಸಲಿಗಾಗಿ ಪಂಚಮಸಾಲಿ ಹೋರಾಟ : ಸ್ವಾಮೀಜಿ ಮನವೊಲಿಕೆಗೆ ತೆರೆಮರೆ ಯತ್ನ?

ಕೊಡಗಿನಲ್ಲಿ ವ್ಯಾಘ್ರ ಅಟ್ಟಹಾಸ: 8 ವರ್ಷದ ಬಾಲಕನನ್ನು ಕೊಂದು ಹಾಕಿದ ಹುಲಿ

ಕೊಡಗಿನಲ್ಲಿ ವ್ಯಾಘ್ರ ಅಟ್ಟಹಾಸ: 8 ವರ್ಷದ ಬಾಲಕನನ್ನು ಕೊಂದು ಹಾಕಿದ ಹುಲಿ

Untitled-1

ಸುದ್ದಿ ಸುತ್ತಾಟ : ಹನಿಟ್ರ್ಯಾಪ್‌ ಮಾಯಾಜಾಲದ ಹಿಂದೆ – ಮುಂದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.