Udayavni Special

2019ರ ವೇಳೆಗೆ ಸ್ವಚ್ಛ ಭಾರತದ ಗುರಿ: ಸಚಿವ ಜಿಗಜಿಣಗಿ


Team Udayavani, Jul 18, 2018, 5:11 PM IST

18-july-17.jpg

ಬಾಗಲಕೋಟೆ: ದೇಶದ 125 ಕೋಟಿ ಜನರಿಗೂ ಸ್ವಚ್ಛತೆಯ ಅರಿವು ಮೂಡಿಸುವ ಸಂಕಲ್ಪ ಕೇಂದ್ರ ಸರ್ಕಾರ ಮಾಡಿದೆ. ದೇಶದ 4041 ಪಟ್ಟಣ, ಗ್ರಾಮಗಳನ್ನು ಈಗಾಗಲೇ ಸ್ವಚ್ಛ ಪಟ್ಟಣ-ಗ್ರಾಮಗಳೆಂದು ಘೋಷಿಸಲಾಗಿದೆ. 2019ರ ವರೆಗೆ ಇಡೀ ದೇಶವನ್ನು ಸ್ವಚ್ಛ  ಭಾರತ ಮಾಡುವ ಗುರಿ ಹಾಕಿಕೊಂಡಿದ್ದೇವೆ ಎಂದು ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲೀಕರಣ ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ ಹೇಳಿದರು.

ನಗರದ ಬಿವಿವಿ ಸಂಘದ ಜನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿಶ್ವ ಯುವಕರ ಕೌಶಲ ದಿನಾಚರಣೆ ಹಾಗೂ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ದಿನವಾದ 2019ರ ವೇಳೆಗೆ ಇಡೀ ದೇಶವನ್ನು ಸ್ವಚ್ಛ ಭಾರತ ಮಾಡುವ ಸಂಕಲ್ಪ ಕೇಂದ್ರ ಸರ್ಕಾರ ಹೊಂದಿದೆ. ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಆಂದೋಲನ ಆರಂಭಿಸಲಾಗಿದೆ. ಐದು ವರ್ಷಗಳಲ್ಲಿ 125 ಕೋಟಿ ಜನರಲ್ಲೂ ಅರಿವು ಮೂಡಿಸುವ ಉದ್ದೇಶ ಸರ್ಕಾರದ್ದಾಗಿದೆ. ಈಗಾಗಲೇ 2.50 ಕೋಟಿ ಶೌಚಾಲಯ ದೇಶದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಯುವ ಶಕ್ತಿ ಒಂದು ರಾಷ್ಟ್ರದ ಅಮೂಲ್ಯ ಸಂಪತ್ತು. ಈ ಶಕ್ತಿಯನ್ನು ಬಳಸುವುದರ ಮೇಲೆ ಆ ರಾಷ್ಟ್ರದ ಒಳಿತು- ಕೆಡುಕು ಅಡಗಿದೆ. ಯುವ ಶಕ್ತಿಯನ್ನು ರಚನಾತ್ಮಕವಾಗಿ, ವೈಜ್ಞಾನಿಕವಾಗಿ ಹಾಗೂ ಮೌಲ್ಯಯುಕ್ತವಾಗಿ ಬಳಸಿದರೆ ಆ ರಾಷ್ಟ್ರ ಅಭಿವೃದ್ಧಿ ಹೊಂದುತ್ತದೆ. ಇಲ್ಲವಾದರೆ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿ ಕಂಟಕ ಪ್ರಾಯವಾಗಿ ಮಾರ್ಪಡುತ್ತದೆ. 

ಈ ಕಾರಣಕ್ಕಾಗಿಯೇ 2014 ರಲ್ಲಿ ಯುನೈಟೆಡ್‌ ನೇಷನ್ಸ್‌ ಜನರಲ್‌ ಅಸೆಂಬ್ಲಿ ವಿಶ್ವ ಯುವಕರ ಕೌಶಲ ದಿನಾಚರಣೆ ಆಚರಿಸಲು ಘೋಷಣೆ ಮಾಡಲಾಯಿತು. ಕೌಶಲಾಭಿವೃದ್ಧಿಯಿಂದ ಜೀವನದಲ್ಲಿ ಬದಲಾವಣೆ ಎಂಬ ಧ್ಯೇಯ ವ್ಯಾಖ್ಯಾನ ಇಟ್ಟುಕೊಂಡು ಈ ದಿನಾಚರಣೆ ನಡೆಸಲಾಗುತ್ತಿದೆ ಎಂದರು. ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಹೊಣೆ. ಯುವಕರು ಕೌಶಲಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದು ಸಲಹೆ ನೀಡಿದರು. ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಡಾ|ವೀರಣ್ಣ ಚರಂತಿಮಠ, ವೀರಣ್ಣ ಜಿ. ಕಿರಗಿ ಮಾತನಾಡಿದರು.

ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ|ನಾಗರತ್ನ ಟಿಎಂ ಅವರು ವಿಶ್ವ ಯುವಕರ ಕೌಶಲ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ಬಸವೇಶ್ವರ ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕ ಜೆ.ವಿ ಚವ್ಹಾಣ, ಡಾ|ಎಂ ನಂಜುಂಡಸ್ವಾಮಿ, ಎಂ.ಜಿ ಜಿಗಬಡ್ಡಿ, ಬಸವೇಶ್ವರ ವಾಣಿಜ್ಯ ಕಾಲೇಜಿನ ಪ್ರಾಚಾರ್ಯ, ಜನ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ಎಸ್‌.ಎಚ್‌. ಶೆಟ್ಟರ ಮಾತನಾಡಿದರು. ಸುರೇಖಾ ಮಠದ ನಿರೂಪಿಸಿದರು. ರವಿ ಮೇಳಿ ವಂದಿಸಿದರು.

ಟಾಪ್ ನ್ಯೂಸ್

ಸದನವೇನು ಮದುವೆ ಛತ್ರವೇ? ದಾರಿಹೋಕರನ್ನೂ ಸದನಕ್ಕೆ ಕರೆಸುವಿರಾ ಕಾಗೇರಿಯವರೆ?: ಕಾಂಗ್ರೆಸ್

ಸದನವೇನು ಮದುವೆ ಛತ್ರವೇ? ದಾರಿಹೋಕರನ್ನೂ ಸದನಕ್ಕೆ ಕರೆಸುವಿರಾ ಕಾಗೇರಿಯವರೆ?: ಕಾಂಗ್ರೆಸ್

ಬಾಂಬೆ ಷೇರುಪೇಟೆ 60 ದಾಟಿತು… ಮುಂದೇನು?

ಬಾಂಬೆ ಷೇರುಪೇಟೆ 60 ದಾಟಿತು… ಮುಂದೇನು?

ಸಂಬಂಧಿ ಜೊತೆ ಪತ್ನಿಯ ಅನೈತಿಕ ಸಂಬಂಧ: ಮನನೊಂದ ಪತಿ ಆತ್ಮಹತ್ಯೆ

ಸಂಬಂಧಿ ಜೊತೆ ಪತ್ನಿಯ ಅನೈತಿಕ ಸಂಬಂಧ: ಮನನೊಂದ ಪತಿ ಆತ್ಮಹತ್ಯೆ

tiger

ಶಾರ್ಜಾದ ಐಪಿಎಲ್ ಪಂದ್ಯದಲ್ಲಿ ಹುಲಿ ಕುಣಿತದ ಸಂಭ್ರಮ: ವಿಡಿಯೋ ವೈರಲ್

Untitled-1

ಜಾಗತಿಕ ಟಾಪ್‌ ಸ್ಟಾರ್ಟ್‌ ಅಪ್‌ ಹಬ್‌ಗಳಲ್ಲಿ ಬೆಂಗಳೂರಿಗೆ ಸ್ಥಾನ

ಯುಪಿಎಸ್ ಸಿ ಪರೀಕ್ಷೆಯಲ್ಲಿ ಚಾ.ನಗರ ಜಿಲ್ಲೆಯ ಪ್ರಮೋದ್ ಆರಾಧ್ಯ 601 ನೇ ರ್ಯಾಂಕ್

ಯುಪಿಎಸ್ ಸಿ ಪರೀಕ್ಷೆಯಲ್ಲಿ ಚಾ.ನಗರ ಜಿಲ್ಲೆಯ ಪ್ರಮೋದ್ ಆರಾಧ್ಯ 601 ನೇ ರ್ಯಾಂಕ್

ಶ್ರೀರಂಗಪಟ್ಟಣ: ದೇಗುಲದ ಬೀಗ ಮುರಿದು ದೇವರ ಆಭರಣ ಕಳ್ಳತನ

ಶ್ರೀರಂಗಪಟ್ಟಣ: ದೇಗುಲದ ಬೀಗ ಮುರಿದು ದೇವರ ಆಭರಣ ಕಳ್ಳತನ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಿಂಡಿ ತಿನಿಸಿ ಬಾಲಕಿಗೆ ಲೈಂಗಿಕ ದೌರ್ಜನ್ಯ : ಆರೋಪಿ ಬಂಧನ

ತಿಂಡಿ ತಿನಿಸಿ ಬಾಲಕಿಗೆ ಲೈಂಗಿಕ ದೌರ್ಜನ್ಯ : ಆರೋಪಿ ಬಂಧನ

ಶಿಕ್ಷಣ ನೀತಿ ಬಡವರ ಮಕ್ಕಳ ವಿರುದ್ಧದ ಕುತಂತ್ರ : ಪದ್ಮಶ್ರೀ ಡಾ.ಗಣೇಶ ದೇವಿ

ಶಿಕ್ಷಣ ನೀತಿ ಬಡವರ ಮಕ್ಕಳ ವಿರುದ್ಧದ ಕುತಂತ್ರ : ಪದ್ಮಶ್ರೀ ಡಾ.ಗಣೇಶ ದೇವಿ

hftytu6

ಹುಬ್ಬಳ್ಳಿ: ಸ್ನೇಹಿತನ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ

jgujyu

ಧಾರವಾಡ:  ಸಿಕ್ಕ ಹೆಜ್ಜೆ ಗುರುತು.. ಸಿಗದ ಚಿರತೆ

ಗೋವನಕೊಪ್ಪದಲ್ಲಿ ಮುಂದುವರಿದ ಚಿರತೆ ಕಾರ್ಯಾಚರಣೆ

ಗೋವನಕೊಪ್ಪದಲ್ಲಿ ಮುಂದುವರಿದ ಚಿರತೆ ಕಾರ್ಯಾಚರಣೆ

MUST WATCH

udayavani youtube

ಭಾರತ ಬಂದ್ ಬೆಂಬಲಿಸಿದ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷ

udayavani youtube

Cricket stadiumನಲ್ಲೂ ಹುಲಿವೇಷದ ತಾಸೆ ಸದ್ದಿನ ಗಮ್ಮತ್ತು|

udayavani youtube

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

udayavani youtube

ಕೊಂಬು ಕಹಳೆ ವಾಧ್ಯ ತಯಾರಿಸುವ ಚಿಕ್ಕೋಡಿ ಕಲೈಗಾರ ಕುಟುಂಬ

udayavani youtube

ಆಧುನಿಕ ಭರಾಟೆಗೆ ಸಿಲುಕಿ ನಲುಗಿದ ಕುಲುಮೆ ಕೆಲಸಗಾರರ ಬದುಕು

ಹೊಸ ಸೇರ್ಪಡೆ

ಸದನವೇನು ಮದುವೆ ಛತ್ರವೇ? ದಾರಿಹೋಕರನ್ನೂ ಸದನಕ್ಕೆ ಕರೆಸುವಿರಾ ಕಾಗೇರಿಯವರೆ?: ಕಾಂಗ್ರೆಸ್

ಸದನವೇನು ಮದುವೆ ಛತ್ರವೇ? ದಾರಿಹೋಕರನ್ನೂ ಸದನಕ್ಕೆ ಕರೆಸುವಿರಾ ಕಾಗೇರಿಯವರೆ?: ಕಾಂಗ್ರೆಸ್

bel

ಉದ್ಯಮಿಗಳು ಸ್ಥಳೀಯರಿಗೆ ಉದ್ಯೋಗ ನೀಡಲಿ

puksatte lifu

ಚಿತ್ರ ವಿಮರ್ಶೆ: ಪುಕ್ಸಟ್ಟೆ ಲೈಫ್ ನಲ್ಲಿ ಭರಪೂರ ಖುಷಿ ಇದೆ!

ಬಾಂಬೆ ಷೇರುಪೇಟೆ 60 ದಾಟಿತು… ಮುಂದೇನು?

ಬಾಂಬೆ ಷೇರುಪೇಟೆ 60 ದಾಟಿತು… ಮುಂದೇನು?

ಸಂಬಂಧಿ ಜೊತೆ ಪತ್ನಿಯ ಅನೈತಿಕ ಸಂಬಂಧ: ಮನನೊಂದ ಪತಿ ಆತ್ಮಹತ್ಯೆ

ಸಂಬಂಧಿ ಜೊತೆ ಪತ್ನಿಯ ಅನೈತಿಕ ಸಂಬಂಧ: ಮನನೊಂದ ಪತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.