ವಿಮಾನ ನಿಲ್ದಾಣ ಪ್ರಿಯಕರ ಕೊನೆಗೂ ಸೆರೆ

Team Udayavani, Jun 28, 2019, 1:39 PM IST

ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ತನ್ನ ಪ್ರೇಯಸಿಯೊಂದಿಗೆ ಮಾತನಾಡಬೇಕು ಎಂದು ಪೀಡಿಸುತ್ತಿದ್ದ ವ್ಯಕ್ತಿಯನ್ನು ಗೋಕುಲ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತ ರಾಯ್‌ ಡಯಾಸ್‌ ಜಾಮೀನು ಪಡೆದು ತೆರಳಿದ್ದಾರೆ. ಹಲವು ತಿಂಗಳುಗಳಿಂದ ರಾಯ್‌ ಡಯಾಸ್‌ ಇಲ್ಲಿನ ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ತನ್ಮ ಪ್ರೇಯಸಿಯೊಂದಿಗೆ ಮಾತನಾಡಬೇಕು ಎಂದು ಪೀಡಿಸುತ್ತಿದ್ದ. ಇದು ವಿಮಾನ ನಿಲ್ದಾಣ ಪ್ರಾಧಿಕಾರದ ಸಿಬ್ಬಂದಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಅವನಿಗೆ ತಕ್ಕ ಪಾಠ ಕಲಿಸಬೇಕು ಎಂದು ನಿರ್ಧರಿಸಿ ಗೋಕುಲ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಭಗ್ನ ಪ್ರೇಮಿಯ ಹುಡುಕಾಟಕ್ಕೆ ಮುಂದಾಗಿದ್ದರು. ಆದರೆ ಚಾಲಾಕಿ ಡಯಾಸ್‌ ಇಂಟರ್ನೆಟ್ ಕಾಲ್ ಮಾಡುತ್ತಿದ್ದ. ಹೀಗಾಗಿ ಆರಂಭದಲ್ಲಿಪೊಲೀಸರಿಗೆ ಇದು ಕಷ್ಟವಾಗಿತ್ತು. ಆದರೆ ಪಟ್ಟು ಬಿಡದ ಪೊಲೀಸರು ಗೋವಾದಲ್ಲಿದ್ದ ರಾಯ್‌ ಡಯಾಸ್‌ನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಜಾಮೀನು ನೀಡುವಂತಹ ಪ್ರಕರಣವಾಗಿದ್ದರಿಂದ ರಾಯ್‌ ಡಯಾಸ್‌ ಜಾಮೀನು ಪಡೆದು ಗೋವಾಕ್ಕೆ ತೆರಳಿದ್ದಾರೆ. ಎನ್ನಲಾಗಿದ್ದು, ಪುನಃ ಇಂತಹ ಕೆಲಸ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ