ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ಅನ್ಯಾಯ: ಅಬ್ದುಲ್ ಅಜೀಂ

Team Udayavani, May 13, 2019, 11:41 AM IST

ಕುಂದಗೋಳ: ಈಗಾಗಲೇ ತಾಲೂಕಿನ ಒಟ್ಟು 12 ಗ್ರಾಮಗಳಲ್ಲಿ ಅಲ್ಪಸಂಖ್ಯಾತರ ಸಭೆ ನಡೆಸಿ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಅವರನ್ನು ಗೆಲ್ಲಿಸಲು ಮನವಿ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಹಾಗೂ ಮಾಜಿ ಎಂಎಲ್ಸಿ ಅಬ್ದುಲ್ ಅಜಿಂ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರದಲ್ಲಿದ್ದಾಗ ಮುಸ್ಲಿಂ ಪವಿತ್ರ ಕ್ಷೇತ್ರ ಹಜ್‌ ಯಾತ್ರೆಗೆ ರಿಯಾಯಿತಿ ನೀಡಿದ್ದರು. ಪಾಕಿಸ್ತಾನದ ಲಾಹೋರಕ್ಕೆ ಹಿಂದೂ-ಮುಸ್ಲಿಂ ಬಾಂಧವ್ಯ ವೃದ್ಧಿಗೆ ಸ್ನೇಹಸಂಕೇತವಾಗಿ ಬಸ್‌ ಸಂಚರಿಸುವಂತೆ ಮಾಡಲು ಸ್ವತಃ ಬಸ್‌ ಪ್ರಯಾಣ ಮಾಡಿದ್ದರು. ಅದೇ ರೀತಿ ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಹಜ್‌ ಯಾತ್ರಿ ಭವನ ನಿರ್ಮಿಸಿಕೊಟ್ಟರು. ಪ್ರಧಾನ ನರೇಂದ್ರ ಮೋದಿ ಅವರು ಭೇಟಿ ಪಡಾವೋ ಭೇಟಿ ಬಚಾವೋ ಮತ್ತು ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ ಯೋಜನೆಗಳನ್ನು ಹೊರತಂದು ಅಲ್ಪಸಂಖ್ಯಾತರಿಗೆ ಅನುಕೂಲ ಮಾಡಿಕೊಟ್ಟರು. ಕಾಂಗ್ರೆಸ್‌ ಪಕ್ಷದ ಅಧಿಕಾರದಲ್ಲಿ ನಮ್ಮ ಸಮುದಾಯಕ್ಕೆ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸದೆ ಮೋಸವೆಸಗಲಾಗಿದೆ ಎಂದು ಆರೋಪಿಸಿದರು.

ಸಾಕಷ್ಟು ಮುಸ್ಲಿಂ ಬಾಂಧವರು ಬಿಜೆಪಿಯಿಂದ ಕಾಂಗ್ರೆಸ್‌ ಪಕ್ಷವನ್ನು ಸೇರುತ್ತಿದ್ದಾರೆ ಎಂದು ಡಿಕೆಶಿ ಅವರು ಸುಳ್ಳು ಹೇಳುತ್ತಿದ್ದು, ಅದೇ ಈಗ ಉಲಾrಪಲ್ಟಿ ಆಗುತ್ತಿದೆ. ಕಾಂಗ್ರೆಸ್‌ನ ಬಹುತೇಕ ಮುಸ್ಲಿಂ ಸಮಾಜ ಬಾಂಧವರು ಅಧಿಕವಾಗಿ ಬಿಜೆಪಿ ಸೇರುತ್ತಿದ್ದಾರೆ. ಶನಿವಾರ 300 ಯುವಕರು ಹಾಗೂ ಮುಖಂಡರು ಸೇರಿದ್ದೇ ಇದಕ್ಕೆ ಸಾಕ್ಷಿ ಎಂದರು.

ಪಪಂ ಸದಸ್ಯ ಮಲ್ಲಿಕಾರ್ಜುನ ಕಿರೇಸೂರ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಮತಬಾಂಧವರು ಬಿಜೆಪಿ ಸೇರಿದರು. ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುಕ್ತಾರ ಪಠಾಣ, ಉಪಾಧ್ಯಕ್ಷ ಇಮ್ತಿಯಾಜ ಮುಲ್ಲಾ, ಹು-ಧಾ ಸದಸ್ಯ ಶೇಖಮೊಹಮ್ಮದ, ಬಸವರಾಜ ಕುಂದಗೋಳಮಠ, ಮಕ್ತುಂ ಹುಸೇನ ಬಡಿಗೇರ, ಶರೀಫ ಕಳ್ಳಿಮನಿ, ಇಸ್ಮಾಯಿಲ್ ಅತ್ತಿಮತ್ತೂರ, ಜಾಕೀರಹುಸೇನ ಯರಗುಪ್ಪಿ, ಮಾಬೂಲಿ ದವಡಿ, ಇಲಿಯಾಸ ಕಿತ್ತೂರ, ಮಾಬೂಲಿ ಮತ್ತೇಖಾನವರ ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ