ಧಾರವಾಡದಲ್ಲೇ ಎಪಿಪಿ ಪರೀಕ್ಷಾ ಕೇಂದ್ರ ನಿಗದಿಗೆ ಆಗ್ರಹಿಸಿ ಮನವಿ

Team Udayavani, Nov 18, 2019, 10:26 AM IST

ಧಾರವಾಡ: ಸಹಾಯಕ ಸರಕಾರಿ ಅಭಿಯೋಜಕರ (ಎಪಿಪಿ) ಪರೀಕ್ಷೆ ನಡೆಸಲು ಧಾರವಾಡದಲ್ಲಿಯೇ ಪರೀಕ್ಷಾ ಕೇಂದ್ರ ನಿಗದಿಪಡಿಸುವಂತೆ ಆಗ್ರಹಿಸಿ ಧಾರವಾಡ ವಕೀಲರ ಸಂಘದಿಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

ಉತ್ತರ ಕರ್ನಾಟಕ ಭಾಗದ ಕಿರಿಯ ವಕೀಲರು ಆರ್ಥಿಕವಾಗಿ ಹಿಂದುಳಿದಿದ್ದು, ಬೆಂಗಳೂರಿಗೆ ಹೋಗಿ ಪರೀಕ್ಷೆ ಬರೆಯಲು ಆರ್ಥಿಕವಾಗಿ ಹೊರೆಯಾಗುತ್ತದೆ. ಇದಲ್ಲದೇ ಮಹಿಳಾ ಅಭ್ಯರ್ಥಿಗಳಿಗೆ ಪಾಲಕರಿಲ್ಲದೆ ಪರೀಕ್ಷೆ ಬರೆಯಲು ಹೋಗುವುದು ಕಷ್ಟದ ಜತೆಗೆ ಅನಾನುಕೂಲ ಉಂಟಾಗುತ್ತದೆ. ಹೀಗಾಗಿ ಧಾರವಾಡದಲ್ಲೇ ಪರೀಕ್ಷಾ ಕೇಂದ್ರ ಮಾಡುವುದರಿಂದ ಉತ್ತರ ಕರ್ನಾಟಕ ಭಾಗದ ವಕೀಲರಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.  ಪರೀಕ್ಷಾರ್ಥಿಗಳಿಗೆ ಅಗತ್ಯವಿರುವ ಊಟ, ವಸತಿ ಹಾಗೂ ಪರೀಕ್ಷಾ ಕೇಂದ್ರಗಳ ಲಭ್ಯತೆ ಸಾಕಷ್ಟು ಇರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಹಿರಿಯ ಹೋರಾಟಗಾರ ಬಿ.ಡಿ.ಹಿರೇಮಠ, ಸಂಘದ ಅಧ್ಯಕ್ಷ ಬಿ.ಎಸ್‌.ಗೋಡಸೆ, ಪದಾಧಿಕಾರಿಗಳಾದ ರಾಜು ಆರ್‌. ಕೋಟಿ, ಎನ್‌.ಆರ್‌.ಮಟ್ಟಿ, ಆಶೀಷ ಮಗದುಮ್ಮ, ಎನ್‌.ಬಿ. ಖೈರೋನವರ, ಎಮ್‌. ಎನ್‌. ತಾರಿಹಾಳ, ಸಂತೋಷ ಭಾವಿಹಾಳ, ಕೃಷ್ಣಾಜಿ ಪವಾರ, ಪ್ರಕಾಶ ಭಾವಿಕಟ್ಟಿ, ರಾಹುಲ ಅರವಾಡೆ, ಕಲ್ಮೇಶ ನಿಂಗಣ್ಣವರ, ಮಹಿಳಾ ಪ್ರತಿನಿಧಿ ರೂಪಾ ಕೆಂಗಾನೂರ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ