ಬೆಳಗಾವಿಗೆ ಆಯುರ್ವೇದ ಔಷಧಾಲಯ?
Team Udayavani, Sep 24, 2018, 5:23 PM IST
ಹುಬ್ಬಳ್ಳಿ: ಬೆಂಗಳೂರಿಗೆ ಸ್ಥಳಾಂತರಗೊಳ್ಳುವ ಆತಂಕದಲ್ಲಿದ್ದ ಬೆಳಗಾವಿಯ ಆಯುರ್ವೇದ ಔಷಧಾಲಯ ಘಟಕ ಬೆಳಗಾವಿಯಲ್ಲೇ ನೆಲೆಗೊಳ್ಳಲು ಆಯುಷ್ ನಿರ್ದೇಶನಾಲಯದ ನಿರ್ದೇಶಕರ ನೇತೃತ್ವದ ತಂಡ ಸ್ಥಳ ಪರಿಶೀಲಿಸಿ ಹಲವು ಸಲಹೆ ನೀಡಿದೆ. ಬೆಳಗಾವಿಯ ವಿಧಾನಮಂಡಲ ಅಧಿವೇಶನ ವೇಳೆ ಮುಖ್ಯಮಂತ್ರಿಗಳಿಂದ ಶಿಲಾನ್ಯಾಸ ನೆರವೇರೀತೆ ಎಂಬ ನಿರೀಕ್ಷೆ ಗರಿಗೆದರುವಂತೆ ಮಾಡಿದೆ.
ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿ ಉದ್ದೇಶಿತ ಆಯುರ್ವೇದ ಔಷಧಾಲಯ ಘಟಕವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಯತ್ನ ನಡೆದಿತ್ತು. ಇದಕ್ಕೆ ಬೆಳಗಾವಿಯ ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕರ ವಿರೋಧ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಖಡಕ್ ಆದೇಶ ಹಿನ್ನೆಲೆಯಲ್ಲಿ ಆಯುಷ್ ನಿರ್ದೇಶನಾಲಯ ಅಧಿಕಾರಿಗಳ ತಂಡ ಸೆ. 18-19ರಂದು ಬೆಳಗಾವಿಗೆ ಆಗಮಿಸಿ ಪರಿಶೀಲಿಸಿರುವುದು ಘಟಕ ಸ್ಥಾಪನೆ ಆಸೆ ಗರಿಗೆದರುವಂತೆ ಮಾಡಿದೆ.
ಒಂದೂವರೆ ತಾಸು ಪರಿಶೀಲನೆ: ಆಯುಷ್ ನಿರ್ದೇಶನಾಲಯ ನಿರ್ದೇಶಕಿ ಮೀನಾಕ್ಷಿ ನೇಗಿ ನೇತೃತ್ವದಲ್ಲಿ ಆಯುಷ್ ಇಲಾಖೆ ಪ್ರೊಜೆಕ್ಟ್ ನಿರ್ದೇಶಕರು, ಬಜೆಟ್‌ನ ಆಡಳಿತಾಧಿಕಾರಿ, ಬೆಂಗಳೂರಿನಲ್ಲಿರುವ ಆಯುರ್ವೇದ ಔಷಧಾಲಯ ಉಪ ನಿರ್ದೇಶಕರನ್ನೊಳಗೊಂಡ ಅಧಿಕಾರಿಗಳ ತಂಡ ವ್ಯಾಕ್ಸಿನ್ ಡಿಪೋಗೆ ತೆರಳಿ ಸುಮಾರು ಒಂದೂವರೆ ತಾಸಿನವರೆಗೆ ಪರಿಶೀಲನೆ ನಡೆಸಿದೆ ಎನ್ನಲಾಗಿದೆ.
ಸುಮಾರು 150 ಎಕರೆಯಷ್ಟು ವಿಸ್ತೀರ್ಣ ಹೊಂದಿರುವ ವ್ಯಾಕ್ಸಿನ್ ಡಿಪೋದಲ್ಲಿ ಈಗಾಗಲೇ ಹಲವು ಆಯುರ್ವೇದ ಔಷಧಿ ಸಸ್ಯಗಳು ಇದ್ದು, ಅವುಗಳ ಸಂರಕ್ಷಣೆ ಜತೆಗೆ ಇತರೆ ಔಷಧಿಯ ಸಸ್ಯಗಳನ್ನು ಬೆಳೆಸಿ ದೇಶಕ್ಕೆ ಮಾದರಿ ಘಟಕವಾಗಿಸುವ ಚಿಂತನೆ ಹೊಂದಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟ ಆದೇಶ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಬೆಳಗಾವಿಯಲ್ಲಿ ಘಟಕ ಸ್ಥಾಪನೆ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಮುಂದಾಗಿದ್ದು, ಘಟಕ ಸ್ಥಳಾಂತರಗೊಳ್ಳಲಿದೆ ಎಂಬ ಆಂತಕದ ಕಾರ್ಮೋಡ ಸರಿದಂತಾಗಿದೆ.
ಕೆಲ ಬದಲಾವಣೆಗೆ ಸೂಚನೆ: ಬೆಳಗಾವಿಯ ವ್ಯಾಕ್ಸಿನ್ ಘಟಕದಲ್ಲಿ ಸ್ಥಾಪನೆಗೊಳ್ಳಲಿರುವ ಆಯುರ್ವೇದ ಔಷಧಾಲಯ ಘಟಕ ಸ್ಥಾಪನೆಗೆ ಮೂಲಸೌಕರ್ಯ ಹಾಗೂ ವಿವಿಧ ಸಲಕರಣೆಗಳಿಗೆ 12.40 ಕೋಟಿ ಅಂದಾಜು ವೆಚ್ಚದೊಂದಿಗೆ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಂಜಿನಿಯರಿಂಗ್ ವಿಭಾಗ ಸಿದ್ಧಪಡಿಸಿದೆ. ಮೀನಾಕ್ಷಿ ನೇಗಿ ನೇತೃತ್ವದ ಅಧಿಕಾರಿಗಳ ತಂಡ ಯೋಜನೆ ಪರಿಶೀಲಿಸಿದ್ದು, ಕೆಲವೊಂದು ಬದಲಾವಣೆಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಆಯುರ್ವೇದ ವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸುಮಾರು 100-120 ವೈದ್ಯರು ಇದ್ದು, ಅವರ ಸಂಶೋಧನೆ, ಇನ್ನಿತರ ಕಾರ್ಯಗಳಿಗೆ ಸಮರ್ಪಕ ಸೌಲಭ್ಯ ಇಲ್ಲವಾಗಿದೆ. ಬೆಳಗಾವಿಯಲ್ಲಿ ಆಯುರ್ವೇದ ಔಷಧಾಲಯ ಘಟಕ ಸ್ಥಾಪನೆ ಮಾಡಿದರೆ ಸ್ನಾತಕೋತ್ತರ ಪದವೀಧರ ವೈದ್ಯರ ಸಂಶೋಧನೆಗೆ ಇನ್ನಷ್ಟು ಉತ್ತೇಜನ ಜತೆಗೆ, ಈ ಭಾಗದ ಜನರಿಗೆ ಆಯುರ್ವೇದ ಔಷಧಿಗಳನ್ನು ನೀಡಲು ಸಹಕಾರಿ ಆಗಲಿದೆ.
ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬೆಳಗಾವಿಯ ಆಯುರ್ವೇದ ಔಷಧಾಲಯ ಘಟಕಕ್ಕೆ 20 ಕೋಟಿ ಅಂದಾಜು ವೆಚ್ಚದೊಂದಿಗೆ ಅನುಮೋದನೆ ನೀಡಿದ್ದು, ಬಜೆಟ್‌ನಲ್ಲಿ 6 ಕೋಟಿ ಅನುದಾನ ನಿಗದಿ ಪಡಿಸಿದ್ದನ್ನು ಸ್ಮರಿಸಬಹುದಾಗಿದೆ.
ಸಿಎಂರಿಂದ ಶಂಕು ಸ್ಥಾಪನೆ?: ಬೆಳಗಾವಿಯಲ್ಲಿನ ಉದ್ದೇಶಿತ ಆಯುರ್ವೇದ ಔಷಧಾಲಯ ಘಟಕವನ್ನು ಬೆಂಗಳೂಗಿಗೆ ಸ್ಥಳಾಂತರಿಸುವ ಕೆಲ ಅಧಿಕಾರಿಗಳ ಯತ್ನಕ್ಕೆ ಮಹತ್ವದ ಬ್ರೇಕ್ ಹಾಕಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬೆಳಗಾವಿಯಲ್ಲಿಯೇ ಘಟಕ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಲಿಖೀತ ಆದೇಶ ನೀಡಿದ್ದರು.
ಮುಖ್ಯಮಂತ್ರಿಗಳ ಖಡಕ್ ಸೂಚನೆಯಿಂದ ಎಚ್ಚೆತ್ತ ಅಧಿಕಾರಿಗಳು ಬೆಳಗಾವಿಗೆ ದೌಡಾಯಿಸಿ ಸ್ಥಳ ಪರಿಶೀಲನೆಯೊಂದಿಗೆ ಮುಂದಿನ ಪ್ರಕ್ರಿಯೆಯ ಆಶಾಭಾವನೆ ಮೂಡಿಸಿದ್ದು, ಘಟಕ ಬೆಳಗಾವಿಯಲ್ಲಿ ಸ್ಥಾಪನೆಗೊಳ್ಳುವುದು ಬಹುತೇಕ ಖಚಿತಗೊಂಡಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನ ವೇಳೆ ಕುಮಾರಸ್ವಾಮಿಯವರು ಆಯುರ್ವೇದ ಔಷಧಾಲಯ ಘಟಕಕ್ಕೆ ಶಂಕು ಸ್ಥಾಪನೆ ನೆರವೇರಿಸುವರೇ ಎಂಬುದನ್ನು ಉತ್ತರ ಕರ್ನಾಟಕದ ಜನತೆ ಆಸೆಕಂಗಳಿಂದ ಕಾಯುತ್ತಿದ್ದಾರೆ.
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3
ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು
ಹೊಸ ಸೇರ್ಪಡೆ
ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ : 8ನೇ ಸ್ಥಾನಕ್ಕೆ ಏರಿದ ರೋಹಿತ್ ಶರ್ಮ
ಕ್ರೀಡಾಲೋಕದ ಮೇಲೆ ಮತ್ತೆ ಕೆಂಗಣ್ಣು ಬೀರಿದ ಕೋವಿಡ್
ಲಾಕ್ಡೌನ್ ಸಮಯದಲ್ಲಿ “ರಾಮಾಯಣ’ ರಚಿಸಿದ 10 ವರ್ಷದ ಬಾಲಕ !
ಉತ್ತರಾಖಂಡ ಕುಂಭಮೇಳಕ್ಕೆ “ಕೋವಿಡ್ ನೆಗೆಟಿವ್ ‘ ಪ್ರಮಾಣಪತ್ರ ಕಡ್ಡಾಯ
“ತೈಲ ಬೆಲೆ ಜಿಎಸ್ಟಿ ವ್ಯಾಪ್ತಿಗೆ ಬರಲಿ’ : ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣ್ಯನ್ ಬೆಂಬಲ