ಬಸವರಾಜ ಹೊರಟ್ಟಿ ಸ್ವಾಗತ ಸಮಿತಿಗೆ ಗೌರವಾಧ್ಯಕ್ಷ
Team Udayavani, Nov 14, 2018, 6:56 AM IST
ಧಾರವಾಡ: 84ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗೌರವಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ. ದೇಶಪಾಂಡೆ ಅಧ್ಯಕ್ಷರು, ಜಿಲ್ಲಾಧಿಕಾರಿ ದೀಪಾ ಚೋಳನ್ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸಮ್ಮೇಳನದ ಆಯೋಜನೆಗೆ 15 ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ವಸತಿ ಮತ್ತು ಸಾರಿಗೆ ಸಮಿತಿಗೆ ಅಪರ ಜಿಲ್ಲಾಧಿಕಾರಿಗಳು ಕಾರ್ಯಾಧ್ಯಕ್ಷರಾಗಿದ್ದು, ಆಹಾರ ಸಮಿತಿಗೆ
ಕಾರ್ಯಾಧ್ಯಕ್ಷರಾಗಿ ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಸ್ವತ್ಛತಾ ಮತ್ತು ನೈರ್ಮಲ್ಯತೆ ಸಮಿತಿಗೆ
ಕಾರ್ಯಾಧ್ಯಕ್ಷರಾಗಿ ಉಪ ಆಯುಕ್ತರು, ಕಂದಾಯ ವಿಭಾಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೇಮಕಗೊಂಡಿದ್ದಾರೆ.
ಮೆರವಣಿಗೆ ಸಮಿತಿ ಕಾರ್ಯಾಧ್ಯಕ್ಷರಾಗಿ ಉಪ ಪೊಲೀಸ್ ಆಯುಕ್ತರು, ಸಾಂಸ್ಕೃತಿಕ ಕಾರ್ಯಕ್ರಮ ಕಾರ್ಯಕಾರಿ ಸಮಿತಿಗೆ ಕಾರ್ಯಾಧ್ಯಕ್ಷರಾಗಿ ಅಬಕಾರಿ ಅಧೀಕ್ಷಕರು ಹಾಗೂ ವೇದಿಕೆಯ ಕಾರ್ಯಕಾರಿ ಸಮಿತಿಗೆ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧೀಕ್ಷಕರು ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಆರೋಗ್ಯ ಸಮಿತಿ: ಕಾರ್ಯಾಧ್ಯಕ್ಷರು-ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಪ್ರಚಾರ ಸಮಿತಿ: ಕಾರ್ಯಾಧ್ಯಕ್ಷರು, ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆ. ನೋಂದಣಿ ಸಮಿತಿಗೆ ಕಾರ್ಯಾಧ್ಯಕ್ಷರು-ಅಪರ ಆಯುಕ್ತರು ನೇಮಕಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.