ಪ್ರಾಥಮಿಕ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶುರು

Team Udayavani, Aug 2, 2019, 1:17 PM IST

ಧಾರವಾಡ: ಕಳೆದ ಮೂರು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಗುರುವಾರ ಚಾಲನೆ ದೊರೆತಿದೆ.

ಟಿಸಿಡಬ್ಲೂ ಶಾಲೆಯಲ್ಲಿ ಜಿಲ್ಲೆಯ ಒಳಗಿನ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಡಿಡಿಪಿಐ ಗಜಾನನ ಮನ್ನಿಕೇರಿ ನೇತೃತ್ವದಲ್ಲಿ ಬೆಳಗ್ಗೆಯಿಂದ ಸಂಜೆ 8 ಗಂಟೆವರೆಗೆ ಪ್ರಕ್ರಿಯೆ ಕೈಗೊಂಡು 300 ಜನ ಶಿಕ್ಷಕರಿಗೆ ವರ್ಗಾವಣೆ ಆದೇಶಗಳನ್ನು ನೀಡಲಾಯಿತು.

ಜಿಲ್ಲೆಯ 1957 ಶಿಕ್ಷಕರಿಂದ ಕೋರಿಕೆಯ ವರ್ಗಾವಣೆಗೆ ಅರ್ಜಿ ಬಂದಿದ್ದು, ಈ ಪೈಕಿ 20 ಶಿಕ್ಷಕರು ವೈದ್ಯಕೀಯ ಆಧಾರದ ಮೇಲೆ ಹಾಗೂ 50 ವಿಕಲಚೇತನ ಆಧಾರದ ಮೇಲೆ ಅರ್ಜಿ ಸಲ್ಲಿಸಿದ್ದಾರೆ. ಉಳಿದವರು ಸಾಮಾನ್ಯ ವರ್ಗಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮೂರು ದಿನಗಳ ಕಾಲ ಈ ಪ್ರಕ್ರಿಯೆ ನಡೆಯಲಿದ್ದು, ಆ. 12 ಹಾಗೂ 13ರಂದು ಕಡ್ಡಾಯ ವರ್ಗಾವಣೆ ನಡೆಯಲಿದೆ. ವರ್ಗಾವಣೆ ಮಾಹಿತಿಯನ್ನು ಶಿಕ್ಷಕರಿಗೆ ವೈಯಕ್ತಿಕವಾಗಿ ಮೊಬೈಲ್ಗೆ ನೀಡಲಾಗಿದೆ. ಜೊತೆಗೆ ವರ್ಗಾವಣೆ ಕೇಂದ್ರ ಹೊರಗಡೆಯೂ ಪ್ರದರ್ಶಿಸಲಾಗಿದೆ. ವರ್ಗಾವಣೆ ಪ್ರಕ್ರಿಯೆಯಲ್ಲಿ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ, ಎಸ್‌.ಎಂ. ಹುಡೇದಮನಿ, ಎಸ್‌.ಸಿ. ಕರಿಕಟ್ಟಿ, ವಿದ್ಯಾ ನಾಡಿಗೇರ, ಎ.ಎ. ಖಾಜಿ, ಯು.ಬಿ. ಬಸಾಪುರ ಹಾಗೂ ಜಿ.ಎನ್‌. ಮಠಪತಿ ಇದ್ದರು.

10 ವರ್ಷ ಮೇಲ್ಪಟ್ಟು ನಗರ ಪ್ರದೇಶದಲ್ಲಿ ಕೆಲಸ ಮಾಡಿದ ಶಿಕ್ಷಕರನ್ನು ಕಡ್ಡಾಯವಾಗಿ ಈ ಪ್ರಕ್ರಿಯೆಯಲ್ಲಿ ವರ್ಗ ಮಾಡಲಾಗುವುದು. ಎಲ್ಲವೂ ಪಾರದರ್ಶಕತೆಯಿಂದ ನಡೆಯುತ್ತಿದ್ದು, ವರ್ಗಾವಣೆ ಸ್ಥಳ ಪಡೆದ ಕೂಡಲೇ ಆದೇಶ ಪ್ರತಿ ನೀಡಲಾಗುವುದು. ಆದೇಶ ಪಡೆದು ಮೂರು ದಿನಗಳಲ್ಲಿ ಹಾಜರಾಗಲು ಸೂಚನೆ ನೀಡಲಾಗಿದೆ. • ಗಜಾನನ ಮನ್ನಿಕೇರಿ, ಡಿಡಿಪಿಐ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಧಾರವಾಡ: ಹನಿ ನೀರನ್ನು ಪರಿಪೂರ್ಣವಾಗಿ ಬಳಸಿ, ನಿಗದಿತ ಸಮಯದಲ್ಲಿ ಅದನ್ನು ಹಣವಾಗಿ ಪರಿವರ್ತಿಸುವ ಕೃಷಿ ವಿಧಾನವನ್ನು ಜಗತ್ತಿಗೆ ಮಾದರಿಯಾಗಿ ಕೊಟ್ಟಿದ್ದು ಇಸ್ರೇಲ್‌...

  • ಹುಬ್ಬಳ್ಳಿ: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ದಿನವಾದ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹುಬ್ಬಳ್ಳಿಯಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ...

  • ಧಾರವಾಡ: ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಜಾನುವಾರುಗಳ ಸಂಖ್ಯೆ ಕಡಿಮೆ ಇದ್ದು, ವೀಕ್ಷಕರ ಸಂಖ್ಯೆಯೂ ತೀರಾ ಕಡಿಮೆ ಇತ್ತು....

  • ಧಾರವಾಡ: ದ್ರಾಕ್ಷಾರಸ ಮದಿರೆಯಾಗಿ ಮತ್ತೇರಿಸುವುದು ಇತಿಹಾಸದಲ್ಲಿತ್ತು. ಅದೇ ದ್ರಾಕ್ಷಾರಸ ವೈನ್‌ ಎಂಬ ಹೆಸರಿನೊಂದಿಗೆ ಆಧುನಿಕ ಜಗತ್ತಿನಲ್ಲಿ ಹೆಸರಾಗಿದೆ. ಇದೀಗ...

  • ಧಾರವಾಡ: ಕೃಷಿ ವಿಶ್ವವಿದ್ಯಾಲಯಗಳು ರೈತರ ಜೊತೆ ಕೃಷಿ ಅಭಿವೃದ್ಧಿಗೆ ಜಂಟಿ ಪ್ರಯೋಗ ಮಾಡುವುದು ಹಾಗೂ ಕೃಷಿ ಪದವೀಧರರು ಹೊಲಗಳಿಗೆ ಮರಳಿ ಆಧುನಿಕ ಕೃಷಿ ಮಾಡಿದರೆ...

ಹೊಸ ಸೇರ್ಪಡೆ