ಬೇಂದ್ರೆ ನಗರ ಸಾರಿಗೆ ನೇಪಥ್ಯಕ್ಕೆ?


Team Udayavani, Feb 25, 2020, 10:30 AM IST

huballi-tdy-1

ಹುಬ್ಬಳ್ಳಿ: ಹು-ಧಾ ನಡುವೆ ಖಾಸಗಿ ಸಮೂಹ ಸಾರಿಗೆ ರದ್ದುಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೊರಡಿಸಿದ್ದ ಕರಡು ಅಧಿಸೂಚನೆಗೆ ಒಂದು ವರ್ಷ ಗತಿಸುತ್ತಿರುವುದರಿಂದ ಮಾ. 7ರೊಳಗೆ ಅಂತಿಮ ಅಧಿಸೂಚನೆ ಹೊರಡಿಸಬೇಕಾಗಿದ್ದು, ಅಂತಿಮ ಅಧಿಸೂಚನೆ ಹೊರಬಿದ್ದರೆ ಕಾನೂನು ಹೋರಾಟದ ಮೂಲಕವೇ ತನ್ನ ಅಸ್ತಿತ್ವ ಉಳಿಸಿಕೊಂಡು ಮಹಾನಗರ ಜನರಿಗೆ ಸೇವೆ ನೀಡಿದ ಬೇಂದ್ರೆ ಸಾರಿಗೆ ನೇಪಥ್ಯಕ್ಕೆ ಸರಿಯಲಿದೆ!

ಮಹಾನಗರದ ಜನತೆಗೆ ತ್ವರಿತ ಹಾಗೂ ಮಾದರಿ ಸಾರಿಗೆ ಸೇವೆ ನೀಡಬೇಕು ಎನ್ನುವ ಕಾರಣದಿಂದ ವಿಶ್ವಸಂಸ್ಥೆ ಆರ್ಥಿಕ ನೆರವಿನಿಂದ ಬಿಆರ್‌ಟಿಎಸ್‌ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಈ ಯೋಜನೆಯ ಅಸ್ತಿತ್ವ, ಯಶಸ್ವಿ ಹಾಗೂ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಅವಳಿ ನಗರದ ನಡುವೆ ಖಾಸಗಿ ಸಮೂಹ ಸಾರಿಗೆ ರದ್ದುಗೊಳಿಸಬೇಕು ಎನ್ನುವ ನಿರ್ಧಾರ ಸರಕಾರದ್ದಾಗಿದೆ. 2019 ಮಾ. 8ರಂದು ರಾಜ್ಯ ಸರಕಾರ ಕರಡು ಅಧಿಸೂಚನೆ ಹೊರಡಿಸಿ, ಈಗಾಗಲೇ ಪರವಾನಗಿ ಪಡೆದು ಸಂಚರಿಸುತ್ತಿರುವ ಬೇಂದ್ರೆ ಸಾರಿಗೆಯ ರಹದಾರಿ ಪರವಾನಗಿ ಅವಧಿ ಮುಗಿಯುವ ವರೆಗೆ ಚಾಲ್ತಿಯಲ್ಲಿರತಕ್ಕದ್ದು. ಈ ರಹದಾರಿ ಪರವಾನಗಿಯನ್ನು ನವೀಕರಣಗೊಳಿಸತಕ್ಕದ್ದಲ್ಲ ಎಂದು ತಿಳಿಸಿತ್ತು.  ಕರಡು ಅಧಿಸೂಚನೆ ಕಾಲಾವಧಿ ಒಂದು ವರ್ಷದ್ದಾಗಿದ್ದು, 2020 ಮಾ. 7ರೊಳಗೆ ರಾಜ್ಯ ಸರಕಾರ ಅಂತಿಮ ಅಧಿಸೂಚನೆ ಹೊರಡಿಸಬೇಕಾಗಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಅಂತಿಮ ಅಧಿಸೂಚನೆ ಹೊರಡಿಸದಿದ್ದರೆ ಕರಡು ಅಧಿಸೂಚನೆ ಅರ್ಥ ಕಳೆದುಕೊಳ್ಳಲಿದೆ.

ಶೆಟ್ಟರ ಮೇಲೆ ಹೊಣೆಗಾರಿಕೆ: ಮಾ. 7ರೊಳಗೆ ಅಂತಿಮ ಅಧಿಸೂಚನೆ ಹೊರಡಿಸಬೇಕಾಗಿರುವುದರಿಂದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹಾಗೂ ಬೇಂದ್ರೆ ನಗರ ಸಾರಿಗೆ ಸಂಸ್ಥೆಯ ಮನವಿ ಆಲಿಸಲು ಸರಕಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರ ನೇತೃತ್ವದಲ್ಲಿ ವಿಚಾರಣಾ ಪ್ರಾಧಿಕಾರ ರಚಿಸಿದ್ದು, ಅವರು ನೀಡುವ ವರದಿ ಮೇಲೆ ಅಂತಿಮ ಅಧಿಸೂಚನೆ ರೂಪುಗೊಳ್ಳಲಿದೆ. ಈಗಾಗಲೇ ಬೇಂದ್ರೆ ಸಾರಿಗೆ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ಪರವಾಗಿ ಅಧಿಕಾರಿಗಳು ಹಾಗೂ ವಕೀಲರು ತಮ್ಮ ವಾದ ಮಂಡಿಸಿದ್ದು, ಸಚಿವ ಜಗದೀಶ ಶೆಟ್ಟರ ಅವರು ಸರಕಾರಕ್ಕೆ ವರದಿ ನೀಡಿದ್ದಾರೆ ಎಂದು ಹೇಳಲಾಗಿದೆ. ಬಿಆರ್‌ಟಿಎಸ್‌ ರೂವಾರಿಯಾಗಿರುವ ಜಗದೀಶ ಶೆಟ್ಟರ ಈ ನಿಟ್ಟಿನಲ್ಲಿ ಯಾವ ಹೆಜ್ಜೆ ಇಡಲಿದ್ದಾರೆ ಎನ್ನುವುದು ಪ್ರಶ್ನೆಯಾಗಿದೆ.

ಬೇಂದ್ರೆ ಸಾರಿಗೆ ವಾದ ಏನು? : ಕಳೆದ 18 ವರ್ಷಗಳಿಂದ ಮಹಾನಗರ ವ್ಯಾಪ್ತಿಯಲ್ಲಿ ಉತ್ತಮ ಸಾರಿಗೆ ಸೇವೆ ನೀಡಿದ್ದೇವೆ. ಬೇಂದ್ರೆ ಸಾರಿಗೆ ನೆಚ್ಚಿಕೊಂಡು ನೂರಾರು ಕುಟುಂಬಗಳು ಬದುಕುತ್ತಿವೆ. ವಾಯವ್ಯ ಸಾರಿಗೆ ಸಂಸ್ಥೆಗಿಂತ ಉತ್ತಮ ಹಾಗೂ ತ್ವರಿತ ಸಾರಿಗೆ ಇಲ್ಲಿನ ಜನರಿಗೆ ದೊರೆತಿದೆ. ಏಕಾಏಕಿ ಸಂಸ್ಥೆ ಮುಚ್ಚುವಂತೆ ಮಾಡುವುದು ಸರಿಯಲ್ಲ. ಇರುವ ಮಾರ್ಗದಲ್ಲಿ ಸಂಚರಿಸಲುಅವಕಾಶ ನೀಡಬೇಕು. ಇದಾಗದಿದ್ದರೆ ಪರ್ಯಾಯ ಮಾರ್ಗವನ್ನಾದರೂ ಕಲ್ಪಿಸಬೇಕು ಎಂಬುವುದು ಬೇಂದ್ರೆ ಸಾರಿಗೆ ವಾದ.

ವಾಯವ್ಯ ಸಾರಿಗೆ ವಾದ ಏನು? : 2003 ಡಿ. 31ರಂದು ಹೊರಡಿಸಿದ್ದ ಅಧಿಸೂಚನೆಯನ್ನು 2006ರ ಅಧಿಸೂಚನೆಯ ಮೂಲಕ ಸರಕಾರ ಹಿಂಪಡೆದಿದ್ದು, ಹೀಗಾಗಿ ಬೇಂದ್ರೆ ಸಾರಿಗೆಯ ರಹದಾರಿ

ಪರವಾನಗಿ ರದ್ದಾಗುತ್ತವೆ. 2009ರಲ್ಲಿ ರಹದಾರಿ ನವೀಕರಣ ಅರ್ಜಿಯನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಅಪಾರ ಹಣ ಖರ್ಚು ಮಾಡಿ ಬಿಆರ್‌ಟಿಎಸ್‌ ಯೋಜನೆ ಅನುಷ್ಠಾನಕ್ಕೆ ತಂದಿದ್ದು, ಕಡಿಮೆ ದರದಲ್ಲಿ ಐಷಾರಾಮಿ ಸಾರಿಗೆ ದೊರೆಯುತ್ತಿದೆ. ಹೀಗಾಗಿ ಬೇಂದ್ರೆ ಸಾರಿಗೆಯ ರಹದಾರಿ ಪರವಾನಗಿ ನವೀಕರಣಗೊಳಿಸಬಾರದು. ಮುಂದೆ ಹೊರಡಿಸಲಿರುವ ಅಂತಿಮ ಅಧಿಸೂಚನೆಯಲ್ಲಿ ಈ ವಿಷಯ ಪ್ರಸ್ತಾಪಿಸಬೇಕು ಎಂಬುದು ವಾಯವ್ಯ ಸಾರಿಗೆ ಸಂಸ್ಥೆ ವಾದ.

ಭವಿಷ್ಯದ ಪ್ರಶ್ನೆ ಉದ್ಭವ : ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರದ 20 ಕಿಮೀ ವ್ಯಾಪ್ತಿಯಲ್ಲಿ ಖಾಸಗಿ ಪ್ರವರ್ತಕರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ರಾಜ್ಯ ಸರಕಾರದ ಅಧಿಸೂಚನೆಯ ಪ್ರಯೋಜನ ಪಡೆದ ಏಕೈಕ ಸಂಸ್ಥೆ ಬೇಂದ್ರೆ ನಗರ ಸಾರಿಗೆ. ಆರಂಭದ ಪರವಾನಗಿ ಒಂದು ಬಿಟ್ಟರೆ ಅಲ್ಲಿಂದ ಇಲ್ಲಿಯವರೆಗೂ ಸರಕಾರದ ದ್ವಂದ್ವ ನೀತಿಗಳ ವಿರುದ್ಧ ಏಳು-ಬೀಳುಗಳನ್ನು ಕಂಡು ಕಾನೂನಾತ್ಮಕ ಹೋರಾಟದಿಂದಲೇ ತನ್ನ ಅಸ್ತಿತ್ವ ಉಳಿಸಿಕೊಂಡು ಮಹಾನಗರ ಜನತೆಗೆ ಉತ್ತಮ ಸಾರಿಗೆ ಸೇವೆ ನೀಡಿದೆ. ಈಗಲೂ ಕರಡು ಅಧಿಸೂಚನೆಯನ್ನು ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿ ಅಲ್ಲಿಂದ ಅನುಮತಿ ಪಡೆದು ಸಂಚಾರ ಮಾಡುತ್ತಿವೆ. ಹು-ಧಾ ನಡುವೆ ಖಾಸಗಿ ಬಸ್‌ಗಳ ಸಂಚರಿಸದಂತೆ ರಾಜ್ಯ ಸರಕಾರ ಅಂತಿಮ ಅಧಿಸೂಚನೆ ಹೊರಡಿಸಿದರೆ ಕಳೆದ 18 ವರ್ಷಗಳಿಂದ ಸಾರಿಗೆ ಸೇವೆ ನೀಡಿದ ಬೇಂದ್ರೆ ಸಾರಿಗೆ ಹಾಗೂ ಸಿಬ್ಬಂದಿಯ ಭವಿಷ್ಯದ ಪ್ರಶ್ನೆ ಉದ್ಭವವಾಗಲಿದೆ.

ಸರಕಾರವೇ ಸುಮಾರು 900 ಕೋಟಿ ರೂ. ಖರ್ಚು ಮಾಡಿ ಉತ್ತಮ ಬಸ್‌, ರಸ್ತೆ, ನಿಲ್ದಾಣ, ಕಡಿಮೆ ದರದಲ್ಲಿ ಐಷಾರಾಮಿ ವ್ಯವಸ್ಥೆ ಕಲ್ಪಿಸಿದೆ. ಮಿಶ್ರಪಥದಲ್ಲಿ ವಾಯವ್ಯ ಸಾರಿಗೆ ಹಾಗೂ ಬೇಂದ್ರೆ ಸಾರಿಗೆ ಬಸ್‌ ಓಡಾಡುವುದರಿಂದ ಯೋಜನೆ ಪ್ರಮುಖ ಗುರಿ ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯವಾಗುವುದಿಲ್ಲ. ಹೀಗಾಗಿ ಬೇಂದ್ರೆ ಸಾರಿಗೆ ಸ್ಥಗಿತಗೊಳಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದೇವೆ.  -ರಾಜೇಂದ್ರ ಚೋಳನ್‌, ವ್ಯವಸ್ಥಾಪಕ ನಿರ್ದೇಶಕ, ಬಿಆರ್‌ಟಿಎಸ್‌

ಬೇಂದ್ರೆ ನಗರ ಸಾರಿಗೆ ಉದ್ದೇಶ ಲಾಭದಾಯಕವಾಗಿ ನಡೆಸಬೇಕು ಎಂಬುದಲ್ಲ. ನಷ್ಟದಲ್ಲಿ ನಡೆಯುತ್ತಿದ್ದರೂ ಈ ಸಂಸ್ಥೆಯನ್ನೇ ನೆಚ್ಚಿಕೊಂಡಿರುವ ಸಿಬ್ಬಂದಿಗಾಗಿ ಸಂಸ್ಥೆ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಮಹಾನಗರದ ಜನತೆಗೆ ಇಷ್ಟೊಂದು ವರ್ಷ

ಉತ್ತಮ ಸಾರಿಗೆ ಸೇವೆ ನೀಡಿದ್ದೇವೆ. ಸಂಸ್ಥೆಯ ಅಸ್ತಿತ್ವಕ್ಕೆ ಧಕ್ಕೆ ಬಾರದಂತೆ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. – ಸುಧಾಕರ ಶೆಟ್ಟಿ, ವ್ಯವಸ್ಥಾಪಕ, ಬೇಂದ್ರೆ ಸಾರಿಗೆ

 

-ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

bs yediyurappa

Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

1-dasdas

Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

1-wqewqewq

Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

32

Politics: ಟಿಕೆಟ್‌ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.