Udayavni Special

ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದನೆ :ನಿರಾಣಿ


Team Udayavani, May 9, 2018, 5:24 PM IST

9-May-20.jpg

ಬಾಗಲಕೋಟೆ : ಬೀಳಗಿ ವಿಧಾನಸಭೆ ಕ್ಷೇತ್ರ ಹಲವು ಸಮಸ್ಯೆ ಎದುರಿಸುತ್ತಿದೆ. ಇಲ್ಲಿ ಸಂತ್ರಸ್ತರೇ ಹೆಚ್ಚಿದ್ದಾರೆ. ಅವರ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸಬೇಕು. ಇಡೀ ರಾಜ್ಯದಲ್ಲಿ ಬೀಳಗಿ ಕ್ಷೇತ್ರ ಬೇರೆ ವಿಷಯಗಳನ್ನು ಬಿಟ್ಟು ಅಭಿವೃದ್ಧಿ ವಿಷಯದಲ್ಲಿ ಗಮನ ಸೆಳೆಯಬೇಕು. ಇದು ನನ್ನ ಸಂಕಲ್ಪ. ಇದಕ್ಕೆ ಈ ಚುನಾವಣೆಯಲ್ಲಿ ಯಶಸ್ಸು ಸಿಗಲಿದೆ ಎಂದು ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಅವರು ‘ಉದಯವಾಣಿ’ ಜತೆ ಮಾತನಾಡಿದರು. ಬೀಳಗಿಯಲ್ಲಿ ಈಗ ಬದಲಾವಣೆಯ ಟ್ರೆಂಡ್‌ ಶುರುವಾಗಿದೆ. ಹೊಸ ಬೆಳಕಿಗಾಗಿ ಬೀಳಗಿ ಕಾಯುತ್ತಿದೆ. ಈ ಬದಲಾವಣೆಗಾಗಿ ಜನತೆ ತಮ್ಮನ್ನು ಬೆಂಬಲಿಸಲಿದ್ದಾರೆ. ನನ್ನ ಅಧಿಕಾರವಧಿಯಲ್ಲಿ ಜನಪರ ಯೋಜನೆಗಳಿಂದ ಅಭಿವೃದ್ಧಿಯ ದಾಪುಗಾಲು ಇಟ್ಟಿದ್ದೆ. ಸಾಧನೆಯ ಹಲವು ಪ್ರಥಮಗಳಿಗೆ ಬೀಳಗಿ ಕ್ಷೇತ್ರ ನಾಂದಿ ಹಾಡಿತ್ತು. ಆದರೆ, ಕಾಂಗ್ರೆಸ್‌ ಆಡಳಿತದಲ್ಲಿ ಜೆ.ಟಿ.ಪಾಟೀಲ ಅವರಿಂದ ಯಾವುದೇ ಅಭಿವೃದ್ಧಿ ಸಾಧ್ಯವಾಗಿಲ್ಲ. ಪರಿಣಾಮ
ಸದ್ಯದ ಸ್ಥಿತಿಯಲ್ಲಿ ಬೀಳಗಿ ಕ್ಷೇತ್ರ ಮತ್ತೆ 10 ವರ್ಷ ಹಿಂದೆ ಉಳಿದಿದೆ. ಇದರಿಂದ ಜನ ಬೇಸತ್ತಿದ್ದಾರೆ ಎಂದು ತಿಳಿಸಿದರು.

ಪ್ರಮುಖ ಸಾಧನೆಗಳೇನು?: ಈ ಹಿಂದೆ ನನ್ನ ಅಧಿಕಾರವಧಿಯಲ್ಲಿ ಬೀಳಗಿ ಕ್ಷೇತ್ರದಾದ್ಯಂತ ದಾರಿ, ನೀರು, ನೆರಳು, ಬೆಳಕು, ಶಿಕ್ಷಣ, ಕೃಷಿ, ಆರೋಗ್ಯ, ಸಂಪರ್ಕ ಕ್ಷೇತ್ರಗಳಲ್ಲಿ ಅಮೂಲಾಗ್ರ ಸೌಕರ್ಯ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಮೊದಲ ಮಿನಿ ವಿಧಾನಸೌಧ, ಉತ್ತರ ಕರ್ನಾಟಕದಲ್ಲಿ ಮೊದಲ ಹೈಟೆಕ್‌ ಬಸ್‌ ನಿಲ್ದಾಣ, ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ, ಏತನೀರಾವರಿ ಯೋಜನೆ, ಸುಸಜ್ಜಿತ ಆಸ್ಪತ್ರೆ, ವಸತಿ ಶಾಲೆಗಳು, ಪಿಯು ಕಾಲೇಜುಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಭೂದಾನ…ಹೀಗೆ 1500 ಕೋಟಿಗೂ ಅಧಿಕ ಅನುದಾನ ತಂದು ಮಾಡಿದ ಕೆಲಸಗಳು ಕ್ಷೇತ್ರದಲ್ಲಿ ಇನ್ನೂ ಅಚ್ಚಳಿಯದೇ ಉಳಿದಿವೆ ಎಂದರು.

ಬೀಳಗಿ ಕ್ಷೇತ್ರದ ರೈತ ಸಮುದಾಯಕ್ಕೆ ಅನುಕೂಲವಾಗುವಂತೆ ಸಮಗ್ರ ನೀರಾವರಿ ಯೋಜನೆ ರೂಪಿಸುವುದು, ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ಸಮಸ್ಯೆ ಪರಿಹರಿಸುವುದು, ಅವರ ಬಂಗಾರದ ಭೂಮಿಗೆ ಯೋಗ್ಯ ಬೆಲೆ ಕೊಡಿಸುವುದು, ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ಸಮರ್ಪಕಗೊಳಿಸಿ, ಶುದ್ಧ ನೀರು ಒದಗಿಸುವುದು. ಯುವ ಜನತೆಗೆ ಉದ್ಯೋಗಾವಕಾಶ ಸೃಷ್ಟಿಸುವುದು. ಸ್ವ ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿ ಜೀವನಕ್ಕೆ ಅವಕಾಶ ಮಾಡಿಕೊಡುವುದು. ಬೀಳಗಿ ನಗರವನ್ನು ಹೈಟೆಕ್‌ ಸಿಟಿಯನ್ನಾಗಿಸಿ ಇಡೀ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಬೆಳೆಸುವುದು ನನ್ನ ಗುರಿ ಎಂದು ತಿಳಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

brobed

ಯಾದಗಿರಿ: ಲಂಚ ಪಡೆಯುತ್ತಿದ್ದ ವೇಳೆ ಲೆಕ್ಕ ಪರಿಶೋಧನ ಅಧಿಕಾರಿ ಎಸಿಬಿ ಬಲೆಗೆ

ತನ್ನ ಅಂಗಡಿ ಮುಂದೆ ಉಗುಳಿದ ಎಂಬ ಕ್ಷುಲ್ಲಕ ಕಾರಣಕ್ಕೆ ಇರಿದು ವ್ಯಕ್ತಿಯ ಕೊಲೆ

ತನ್ನ ಅಂಗಡಿ ಮುಂದೆ ಉಗುಳಿದ ಎಂಬ ಕ್ಷುಲ್ಲಕ ಕಾರಣಕ್ಕೆ ಇರಿದು ವ್ಯಕ್ತಿಯ ಕೊಲೆ

ದಟ್ಟ ಕಾಡಿನಲ್ಲಿ ತಡರಾತ್ರಿ ಕಾರಿನೊಳಗೆ 6 ತಾಸು ಕಳೆದ ಮೂವರನ್ನು ರಕ್ಷಿಸಿದ ಪೊಲೀಸ್‍ ಅಧಿಕಾರಿ

ತಡರಾತ್ರಿ ದಟ್ಟ ಕಾಡಿನಲ್ಲಿ ಕಾರಿನೊಳಗೆ 6 ತಾಸು ಕಳೆದ ಮೂವರನ್ನು ರಕ್ಷಿಸಿದ ಪೊಲೀಸ್‍ ಅಧಿಕಾರಿ

ಹೊಸ ಶಿಕ್ಷಣ ನೀತಿ ಯಶಸ್ವಿ ಅನುಷ್ಠಾನದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖ

ಹೊಸ ಶಿಕ್ಷಣ ನೀತಿ ಯಶಸ್ವಿ ಅನುಷ್ಠಾನದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖ

ರಸ್ತೆ ದುರಸ್ತಿಗೆ ಆಗ್ರಹಿಸಿ ಪಟ್ಟಣ ಪಂಚಾಯತ್ ಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ರಸ್ತೆ ದುರಸ್ತಿಗೆ ಆಗ್ರಹಿಸಿ ಪಟ್ಟಣ ಪಂಚಾಯತ್ ಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಬಿಲ್ ಪಾವತಿಸಿ ಕೋವಿಡ್ ಸೋಂಕಿತನ ಶವ ಪಡೆಯಲು ಆಸ್ಪತ್ರೆ ತಾಕೀತು! ಸಂಬಂಧಿಕರ ಪ್ರತಿಭಟನೆ

ಬಾಕಿ ಬಿಲ್ ಪಾವತಿಸಿ ಕೋವಿಡ್ ಸೋಂಕಿತನ ಶವ ಪಡೆಯಲು ಆಸ್ಪತ್ರೆ ತಾಕೀತು! ಸಂಬಂಧಿಕರ ಪ್ರತಿಭಟನೆ

ಸೆ.28 ರಂದು ಕರ್ನಾಟಕ ಬಂದ್ ವಿಚಾರ: ಪರಿಸ್ಥಿತಿ ನೋಡಿ ಬಂದ್ ಗ್ಗೆ ನಿರ್ಧಾರ : ಶಾಂತಕುಮಾರ್

ಕರ್ನಾಟಕ ಬಂದ್ ಗೆ ರೈತ ಸಂಘಗಳ ನಡುವೆ ಮೂಡದ ಒಮ್ಮತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೀರಾವರಿ ಕಚೇರಿ ಸ್ಥಳಾಂತರ ರದ್ದು

ನೀರಾವರಿ ಕಚೇರಿ ಸ್ಥಳಾಂತರ ರದ್ದು

Avalanche

ಅಮೆಜಾನ್‌ನಲ್ಲಿ ಹುಬ್ಬಳ್ಳಿ ಅವಲಕ್ಕಿ ಟ್ರೆಂಡ್‌

ಪ್ರವಾಹ ಕೊಚ್ಚಿ ಹೋದ ಇಬ್ಬರು ವ್ಯಕ್ತಿಗಳ ಕುಟುಂಬಗಳಿಗೆ ತಲಾ5 ಲಕ್ಷ ರೂ.ಪರಿಹಾರ

ಪ್ರವಾಹದಲ್ಲಿ ಮೃತಪಟ್ಟ ಇಬ್ಬರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಪರಿಹಾರ

assument

ಧಾರವಾಡ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಓರ್ವ ಬಂಧನ

ಕೋವಿಡ್ ವಾರಿಯರ್ಸ್ ಗೆ ಅನಿಲ್‌ ಶ್ರೀರಕ್ಷೆ

Covid ವಾರಿಯರ್ಸ್ ಗೆ ಅನಿಲ್‌ ಶ್ರೀರಕ್ಷೆ; Covid‌ ಆಸ್ಪತ್ರೆಗೆ ಬಯೋ ಪ್ಯೂರಿಫೈಯರ್‌ ಕೊಡುಗೆ

MUST WATCH

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeeshಹೊಸ ಸೇರ್ಪಡೆ

ಲಾಕ್‌ಡೌನ್‌ನಲ್ಲೇ 37 ಬಾಲ್ಯವಿವಾಹಕ್ಕೆ ತಯಾರಿ ! ಸಂಬಂಧಿಕರಲ್ಲಿಯೇ ಹೆಚ್ಚು ನಡೆಯುತ್ತಿವೆ

ಲಾಕ್‌ಡೌನ್‌ನಲ್ಲೇ 37 ಬಾಲ್ಯವಿವಾಹಕ್ಕೆ ತಯಾರಿ ! ಸಂಬಂಧಿಕರಲ್ಲಿಯೇ ಹೆಚ್ಚು ನಡೆಯುತ್ತಿವೆ

ಬೂತ್‌ಮಟ್ಟದಿಂದ ಕಾಂಗ್ರೆಸ್‌ ಸಂಘಟಿಸಲು ಸೂಚನೆ

ಬೂತ್‌ಮಟ್ಟದಿಂದ ಕಾಂಗ್ರೆಸ್‌ ಸಂಘಟಿಸಲು ಸೂಚನೆ

brobed

ಯಾದಗಿರಿ: ಲಂಚ ಪಡೆಯುತ್ತಿದ್ದ ವೇಳೆ ಲೆಕ್ಕ ಪರಿಶೋಧನ ಅಧಿಕಾರಿ ಎಸಿಬಿ ಬಲೆಗೆ

ಸಿಎಂ ಸ್ಥಾನದಲ್ಲಿರಲು ಅನಂತ್‌ ಕಾರಣ

ಸಿಎಂ ಸ್ಥಾನದಲ್ಲಿರಲು ಅನಂತ್‌ ಕಾರಣ

ರೌಡಿ ಫೆಲೋ ಜೊತೆ ಪ್ರೇಮ್‌

ರೌಡಿ ಫೆಲೋ ಜೊತೆ ಪ್ರೇಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.