ಕಲಘಟಗಿ ಕೈ ಭದ್ರಕೋಟೆಯಲ್ಲಿ ಅರಳಿತು ಕಮಲ

Team Udayavani, Jun 1, 2019, 11:43 AM IST

hubali-tdy-2..

ಕಲಘಟಗಿ: ಸ್ಥಳೀಯ ಪಟ್ಟಣ ಪಂಚಾಯ್ತಿಯ 17 ವಾರ್ಡ್‌ಗಳ ಪೈಕಿ 9ರಲ್ಲಿ ಬಿಜೆಪಿ ಜಯ ದಾಖಲಿಸುವುದರೊಂದಿಗೆ ಕಾಂಗ್ರೆಸ್‌ ಭದ್ರಕೋಟೆ ಛಿದ್ರಗೊಳಿಸಿ ಗೆಲುವಿನ ನಗೆ ಬೀರಿದೆ. ಉಳಿದಂತೆ ಕಾಂಗ್ರೆಸ್‌ 3, ಜೆಡಿಎಸ್‌ 2 ಹಾಗೂ ಪಕ್ಷೇತರ ಅಭ್ಯರ್ಥಿಗಳು 3 ವಾರ್ಡ್‌ಗಳಲ್ಲಿ ವಿಜಯದ ಮಾಲೆ ಧರಿಸಿದ್ದಾರೆ.

ತಹಶೀಲ್ದಾರ್‌ ಕಚೇರಿಯಲ್ಲಿ ಶುಕ್ರವಾರ ಮತ ಎಣಿಕೆ ನಡೆಯಿತು. ಈ ಸಂದರ್ಭದಲ್ಲಿ ಅಭ್ಯರ್ಥಿಗಳು ಪಡೆದ ಮತಗಳನ್ನು ಧ್ವನಿ ವರ್ಧಕದ ಮೂಲಕ ಘೋಷಿಸುತ್ತಿದ್ದಂತೆ ಅಭ್ಯರ್ಥಿಗಳ ಬೆಂಬಲಿಗರು ಸಿಹಿ ಹಂಚಿ, ಬಣ್ಣವನ್ನು ಎರಚಿಕೊಂಡರಲ್ಲದೇ ಕುಣಿದು ಕುಪ್ಪಳಿಸಿದರು.ಸರಳ ಬಹುಮತವನ್ನು ಬಿಜೆಪಿ ಪಡೆದುಕೊಂಡಿದ್ದು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಯಾವುದೇ ಕುದುರೆ ವ್ಯಾಪಾರಕ್ಕೆ ಅವಕಾಶವಿಲ್ಲದಂತಾಗಿದೆ. ಬಿಜೆಪಿ ಶಾಸಕ ಸಿ.ಎಂ. ನಿಂಬಣ್ಣವರ ಸ್ಥಳಿಕರೇ ಆಗಿರುವುದರಿಂದ ಈ ಚುನಾವಣೆಯು ಅವರಿಗೆ ಪ್ರತಿಷ್ಠೆಯ ಕಣವಾಗಿತ್ತು. ಮಾಜಿ ಸಚಿವ ಸಂತೋಷ ಲಾಡ್‌ ಚುನಾವಣಾ ಪ್ರಚಾರಕ್ಕೆ ಒಂದು ಬಾರಿ ಬಂದು ಹೋಗಿದ್ದನ್ನು ಬಿಟ್ಟರೆ ಅವರು ಈ ಚುನಾವಣೆಯಲ್ಲಿ ಹೆಚ್ಚು ಉತ್ಸುಕರಾಗಿರಲಿಲ್ಲ. ಸ್ಥಳೀಯ ಕಾಂಗ್ರೆಸ್‌ ಪದಾಧಿಕಾರಿಗಳೇ ಗೆಲುವು ಸಾಧಿಸಲು ಹೆಚ್ಚಿನ ಶ್ರಮ ವಹಿಸಿದ್ದರು. 16ನೇ ವಾರ್ಡ್‌ನಲ್ಲಿ ಮತದಾನಕ್ಕೂ ಮುನ್ನವೇ ಪಕ್ಷೇತರ ಅಭ್ಯರ್ಥಿ ಮಾಲಾ ಲಮಾಣಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

17ನೇ ವಾರ್ಡ್‌ನಲ್ಲಿ ಬಿಜೆಪಿಯ ಅನಸೂಯಾ ಹೆಬ್ಬಳ್ಳಿಮಠ ಅವರು ಪಪಂ ಹಾಲಿ ಅಧ್ಯಕ್ಷ ಬೂದಪ್ಪ ಹುರಕಡ್ಲಿ ಅವರ ಪತ್ನಿ ಕಾಂಗ್ರೆಸ್‌ ಪಕ್ಷದ ನಿರ್ಮಲಾ ಹುರಕಡ್ಲಿ ಅವರನ್ನು 188 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ಬಿಜೆಪಿ ಬಲ 11ಕ್ಕೆ ಏರಿಕೆ: ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲುಳಿದು ಪಕ್ಷೇತರರಾಗಿ ಚುನಾಯಿತರಾದ 5ನೇ ವಾರ್ಡ್‌ನ ಬಸವರಾಜ ಕಡ್ಲಾಸ್ಕರ ಹಾಗೂ 16ನೇ ವಾರ್ಡ್‌ನಿಂದ ಅವಿರೋಧ ಆಯ್ಕೆಗೊಂಡ ಮಾಲಾ ಲಮಾಣಿ ಅವರು ಬಿಜೆಪಿ ಕಚೇರಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಪಾಲ್ಗೊಂಡು ಬಿಜೆಪಿಗೆ ತಮ್ಮ ಬೆಂಬಲ ಸೂಚಿಸಿದರು. ಇದರಿಂದಾಗಿ ಪಕ್ಷದ ಬಲವು 11 ಕ್ಕೇ ಏರಿದಂತಾಗಿದೆ.

ವಿಜಯೋತ್ಸವ: ಹೆಚ್ಚಿನ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಪಕ್ಷದ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ತಾಲೂಕಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಶಶಿಧರ ನಿಂಬಣ್ಣವರ, ಮಾಂತೇಶ ತಹಸೀಲ್ದಾರ, ರಾಜು ಚಿಕ್ಕಮಠ, ಸಾಯಿನಾಥ ಯಲ್ಲಾಪುರಕರ, ವಿಜಯ ಬೆಣ್ಣಿ, ಚಂದ್ರಗೌಡ ಪಾಟೀಲ, ಫಕ್ಕೀರೇಶ ನೆಸ್ರೇಕರ, ಎನ್‌.ಬಿ. ಕುರಿಯವರ, ಬಸವರಾಜ ಶೆರೇವಾಡ, ಶಶಿಧರ ಹುಲಿಕಟ್ಟಿ, ನರೇಶ ಮಲ್ಲಾಡದ, ಸುರೇಶ ಶೀಲವಂತರ ಮೊದಲಾದವರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಹೈದರಾಬಾದ್‌ಗೆ ದೂರದಲ್ಲಿ ಪ್ಲೇ ಆಫ್ ಆಸೆ; ಮುಂಬೈ ಇಂಡಿಯನ್ಸ್‌ ವಿರುದ್ಧ ರೋಚಕ ಗೆಲುವು

ಹೈದರಾಬಾದ್‌ಗೆ ದೂರದಲ್ಲಿ ಪ್ಲೇ ಆಫ್ ಆಸೆ; ಮುಂಬೈ ಇಂಡಿಯನ್ಸ್‌ ವಿರುದ್ಧ ರೋಚಕ ಗೆಲುವು

ಮೇ 28: ಮಂಗಳೂರು, ಸುಳ್ಯ, ಉಳ್ಳಾಲದಲ್ಲಿ”ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮ:  ಸುನಿಲ್‌

ಮೇ 28: ಮಂಗಳೂರು, ಸುಳ್ಯ, ಉಳ್ಳಾಲದಲ್ಲಿ”ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮ: ಸುನಿಲ್‌

ಸೆಪ್ಟಂಬರ್‌ ಅಂತ್ಯದೊಳಗೆ 1 ಸಾವಿರ ಚಾರ್ಜಿಂಗ್‌ ಸೆಂಟರ್‌: ಸಚಿವ ಸುನಿಲ್‌

ಸೆಪ್ಟಂಬರ್‌ ಅಂತ್ಯದೊಳಗೆ 1 ಸಾವಿರ ಚಾರ್ಜಿಂಗ್‌ ಸೆಂಟರ್‌: ಸಚಿವ ಸುನಿಲ್‌

ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌; ಮಳೆ ಸಾಧ್ಯತೆ

ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌; ಮಳೆ ಸಾಧ್ಯತೆ

ಕೋಡಿಕಲ್‌ ಕ್ರಾಸ್‌ ಬಳಿ ಹೆದ್ದಾರಿ ಬದಿ ಬಿರುಕು?

ಕೋಡಿಕಲ್‌ ಕ್ರಾಸ್‌ ಬಳಿ ಹೆದ್ದಾರಿ ಬದಿ ಬಿರುಕು?

ಭಾಲ್ಕಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿದು ಬಡಿದು ಮಹಿಳೆ ಸಾವು

ಭಾಲ್ಕಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿದು ಬಡಿದು ಮಹಿಳೆ ಸಾವು

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಳೆಹುಬ್ಬಳ್ಳಿ ಗಲಭೆ ಪ್ರಕರಣ : 11 ಪ್ರಕರಣಗಳಿಗೆ ಮಧ್ಯಂತರ ತಡೆಯಾಜ್ಞೆ

ಹಳೆಹುಬ್ಬಳ್ಳಿ ಗಲಭೆ ಪ್ರಕರಣ : 11 ಪ್ರಕರಣಗಳಿಗೆ ಮಧ್ಯಂತರ ತಡೆಯಾಜ್ಞೆ

5

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

4

ಧರ್ಮ ಪ್ರವೃತ್ತಿ ಅಳವಡಿಸಿಕೊಳ್ಳಲು ಸಲಹೆ

3

ಜಾಹೀರಾತು ಪ್ರಕಟಣೆ ಮುನ್ನ ಪೂರ್ವಾನುಮತಿ ಕಡ್ಡಾಯ

2

ವಿಶ್ವಶ್ರಮ ನೆಲದಲ್ಲಿ ಬೇಂದ್ರೆ ಕಂಡ ಬೆನಕ

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

ಹೊಸ ಸೇರ್ಪಡೆ

ಹೈದರಾಬಾದ್‌ಗೆ ದೂರದಲ್ಲಿ ಪ್ಲೇ ಆಫ್ ಆಸೆ; ಮುಂಬೈ ಇಂಡಿಯನ್ಸ್‌ ವಿರುದ್ಧ ರೋಚಕ ಗೆಲುವು

ಹೈದರಾಬಾದ್‌ಗೆ ದೂರದಲ್ಲಿ ಪ್ಲೇ ಆಫ್ ಆಸೆ; ಮುಂಬೈ ಇಂಡಿಯನ್ಸ್‌ ವಿರುದ್ಧ ರೋಚಕ ಗೆಲುವು

ಮೇ 28: ಮಂಗಳೂರು, ಸುಳ್ಯ, ಉಳ್ಳಾಲದಲ್ಲಿ”ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮ:  ಸುನಿಲ್‌

ಮೇ 28: ಮಂಗಳೂರು, ಸುಳ್ಯ, ಉಳ್ಳಾಲದಲ್ಲಿ”ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮ: ಸುನಿಲ್‌

ಸೆಪ್ಟಂಬರ್‌ ಅಂತ್ಯದೊಳಗೆ 1 ಸಾವಿರ ಚಾರ್ಜಿಂಗ್‌ ಸೆಂಟರ್‌: ಸಚಿವ ಸುನಿಲ್‌

ಸೆಪ್ಟಂಬರ್‌ ಅಂತ್ಯದೊಳಗೆ 1 ಸಾವಿರ ಚಾರ್ಜಿಂಗ್‌ ಸೆಂಟರ್‌: ಸಚಿವ ಸುನಿಲ್‌

ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌; ಮಳೆ ಸಾಧ್ಯತೆ

ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌; ಮಳೆ ಸಾಧ್ಯತೆ

ಕೋಡಿಕಲ್‌ ಕ್ರಾಸ್‌ ಬಳಿ ಹೆದ್ದಾರಿ ಬದಿ ಬಿರುಕು?

ಕೋಡಿಕಲ್‌ ಕ್ರಾಸ್‌ ಬಳಿ ಹೆದ್ದಾರಿ ಬದಿ ಬಿರುಕು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.