52 ಜನರ ಅನಧಿಕೃತ ನೇಮಕಕ್ಕೆ ಖಂಡನೆ

ಕವಿವಿ ಆಡಳಿತ ಕಚೇರಿ ಎದುರು ಕೆಲ ಅಭ್ಯರ್ಥಿಗಳ ಹೋರಾಟ

Team Udayavani, Jun 20, 2019, 3:48 PM IST

ಧಾರವಾಡ: ನಗರದ ಕವಿವಿ ಆಡಳಿತ ಕಚೇರಿ ಎದುರು ಕೆಲ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.

ಧಾರವಾಡ: ಕವಿವಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ (ಡಿ) ದರ್ಜೆಯ 52 ಜನರನ್ನು ಅನಧಿಕೃತವಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ಕೆಲ ಅಭ್ಯರ್ಥಿಗಳು ಕವಿವಿ ಆಡಳಿತ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕವಿವಿಯಲ್ಲಿನ ಹೊರಗುತ್ತಿಗೆಯ 52 ಡಿ ದರ್ಜೆಯ ಅಭ್ಯರ್ಥಿಗಳ ನೇಮಕಾತಿಯಲ್ಲಿ ಕವಿವಿಯಲ್ಲಿ ಕೆಲಸ ಮಾಡುವ ನೌಕರರ ಸಂಬಂಧಿಗಳು, ಪ್ರಾಧ್ಯಾಪಕರ ಮಕ್ಕಳು ಹಾಗೂ ಅವರ ಸೊಸೆಯಂದಿರನ್ನು ಮಾತ್ರ ಪರಿಗಣಿಸಲಾಗಿದೆ. ಅವರು ಅರ್ಜಿ ಕೂಡ ಹಾಕಿಲ್ಲ. ಅವರ ಕಡೆಗೆ ಹಣ ಪಡೆದು ಆಯ್ಕೆ ಮಾಡಲಾಗಿದೆ. ಈ ಕುರಿತು ಹಲವು ದಾಖಲೆಗಳು ನಮ್ಮ ಬಳಿ ಇವೆ ಎಂದು ನೊಂದ ಅಭ್ಯರ್ಥಿ ರಾಜು ಗಿಡದಹುಬ್ಬಳ್ಳಿ ದೂರಿದ್ದಾರೆ.

ಟೆಂಡರ್‌ ಎಜೆನ್ಸಿ ಪಾವಟೆ ಎಂಬುವವರನ್ನು ಈ ಬಗ್ಗೆ ಪ್ರಶ್ನಿಸಿದರೆ ಅವರು, ಕುಲಪತಿಗಳ ಲಿಸ್ಟ್‌ ಪ್ರಕಾರ ನಾನು ನೇಮಕ ಮಾಡಿರುವೆ ಎಂದು ಹೇಳುತ್ತಾರೆ. ಈ ಮೂಲಕ ಅರ್ಜಿ ಸಲ್ಲಿಸಿದ ನಮ್ಮಂತಹ ಬಡ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆಯಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ನೂತನವಾಗಿ ಟೆಂಡರ್‌ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.

ನನ್ನ ಪತಿ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಲ್ಲಿ 20 ವರ್ಷಗಳ ಕಾಲ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ್ದಾರೆ. ಅವರ ನಿಧನವಾಗಿ ಒಂದು ವರ್ಷ ಕಳೆದಿದೆ. ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಅಲ್ಲದೇ ಪತಿಯ ನಿಧನದ ನಂತರ ಅವರ ಪಿಎಫ್‌ ಹಣ ಕೂಡ ನೀಡುತ್ತಿಲ್ಲ. ಕವಿವಿಯಿಂದ ಯಾರು ಹಣ ಕೇಳಿಲ್ಲ. ಆದರೂ ಹಣ ನೀಡಿದವರನ್ನು ಆಯ್ಕೆ ಮಾಡಲಾಗಿದೆ. ಪತಿಯ 20 ವರ್ಷದ ಸೇವೆ ಪರಿಗಣಿಸಿ ಜೀವನ ನಿರ್ವಹಣೆಗಾಗಿ ಮಗನ ವಿದ್ಯಾಭ್ಯಾಸಕ್ಕಾಗಿ ವಿವಿಯಲ್ಲಿ ಕೆಲಸ ನೀಡಬೇಕು ಎಂದು ನೊಂದ ಅಭ್ಯರ್ಥಿ ಸರೋಜಾ ಆಗ್ರಹಿಸಿದರು. ಈ ಕುರಿತಂತೆ ಕುಲಪತಿ, ಕುಲಸಚಿವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪಣಿರಾಜು, ಸಂತೋಷ ಬೈಲವಾಡ, ನವೀನ ಜಾಕೋಜಿ, ಗಣೇಶ ಬಾವಿ ಸೇರಿದಂತೆ ಹಲವರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅಳ್ನಾವರ: ತಾಲೂಕಿನ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಳ್ಳಗಳು ತುಂಬಿಕೊಂಡಿವೆ. ಪಟ್ಟಣದ ಜನರಿಗೆ ಕುಡಿಯುವ ನೀರನ್ನು ಪೂರೈಸುವ ಡೌಗಿ ಹಳ್ಳದ...

  • ಧಾರವಾಡ: ದಡ್ಡಿ ಕಮಲಾಪುರ ಬಳಿ ಇರುವ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರಕ್ಕೆ ಇರುವ ಏಕೈಕ ದಾರಿಯನ್ನು ಅಧಿಕಾರಿಗಳು ಸೋಮವಾರ ದಿಢೀರ್‌ ಬಂದ್‌ ಮಾಡಿದ್ದಾರೆ. ಬೆಳ್ಳಂಬೆಳಗ್ಗೆ...

  • ನರಗುಂದ: ಕುಡಿಯುವ ನೀರಿಗಾಗಿ ನಡೆಯುತ್ತಿರುವ ಮಹದಾಯಿ ಮತ್ತು ಕಳಸಾ-ಬಂಡೂರಿ ಚಳವಳಿ ನಾಲ್ಕು ವರ್ಷ ಪೂರೈಸಿದೆ. ನ್ಯಾಯಾಧೀಕರಣ ಹಂಚಿಕೆ ಮಾಡಿದರೂ ಮಲಪ್ರಭೆ ಒಡಲು...

  • ಹುಬ್ಬಳ್ಳಿ: ಬೇಂದ್ರೆ ಸಾರಿಗೆಗೆ ತಾತ್ಕಾಲಿಕ ರಿಲೀಫ್‌ ದೊರೆತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಮುಂದಿನ 15 ದಿನಗಳ ಕಾಲ ಯಥಾಸ್ಥಿತಿ (ಸ್ಟೆಟೆಸ್ಕೋ ) ಕಾಪಾಡುವಂತೆ...

  • ಹುಬ್ಬಳ್ಳಿ: ಕೇಶ್ವಾಪುರ ನಾಗಶೆಟ್ಟಿಕೊಪ್ಪ ಸರಕಾರಿ ಶಾಲೆಯಲ್ಲಿ ವಿ ಕೇರ್‌ ಫೌಂಡೇಶನ್‌ನಿಂದ ವಿದ್ಯಾರ್ಥಿಗಳಿಗೆ ಜಲಜಾಗೃತಿ ಕಾರ್ಯಕ್ರಮ ನಡೆಯಿತು. ಫೌಂಡೇಶನ್‌...

ಹೊಸ ಸೇರ್ಪಡೆ