ಬೂತ್‌ವಾರು ಮನೆ ಮನೆ ಭೇಟಿಗೆ ಕೈ ರಣತಂತ್ರ


Team Udayavani, May 11, 2019, 10:36 AM IST

hubali-tdy-7..

ಹುಬ್ಬಳ್ಳಿ:ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪ್ರಮುಖರ ಸಭೆ ನಡೆಯಿತು.

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಹಾಲಿ-ಮಾಜಿ ಸಚಿವರು, ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಜೆಡಿಎಸ್‌ ಪ್ರಮುಖರ ಮಹತ್ವದ ಸಭೆ ಶುಕ್ರವಾರ ಇಲ್ಲಿನ ಕಾಟನ್‌ ಕೌಂಟಿ ಕ್ಲಬ್‌ನಲ್ಲಿ ನಡೆಯಿತು. ಕ್ಷೇತ್ರದ ನಾಡಿ ಮಿಡಿತ ಹಾಗೂ ಗೆಲುವಿನ ಕಾರ್ಯತಂತ್ರ ಬಗ್ಗೆ ಚರ್ಚಿಸಲಾಯಿತು.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌, ಸಚಿವ ಡಿ.ಕೆ.ಶಿವಕುಮಾರ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಇನ್ನಿತರ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕುಂದಗೋಳ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಗೆಲುವಿನ ನಿಟ್ಟಿನಲ್ಲಿ ಜಿಪಂ, ಗ್ರಾಪಂವಾರು ಹಂಚಿಕೆ ಮಾಡಿದ ಜವಾಬ್ದಾರಿ ನಿರ್ವಹಣೆ, ಪ್ರಚಾರ, ಮಾಹಿತಿ ಸಂಗ್ರಹ ಕುರಿತಾಗಿ ಚರ್ಚಿಸಲಾಯಿತು ಎಂದು ಹೇಳಲಾಗುತ್ತಿದೆ.

ಮನೆ, ಮನೆ ಭೇಟಿ ಕಡ್ಡಾಯ: ಕ್ಷೇತ್ರದಲ್ಲಿ ರೋಡ್‌ ಶೋ ಹಾಗೂ ಸಾರ್ವಜನಿಕ ಸಭೆಗಳನ್ನು ಮಾಡುವುದು ಬೇಡ. ಬದಲಾಗಿ ಸಚಿವರು, ಶಾಸಕರು ಯಾರೇ ಇರಲಿ ಮನೆ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಬೇಕು. ನಿಮ್ಮ ಕುಟುಂಬ ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ ನೀಡಲು ಯಾವ ರೀತಿ ಹೋಗುತ್ತೀರೋ ಅದೇ ರೀತಿ ನಗುಮೊಗದೊಂದಿಗೆ ಹೋಗಿ ಮತದಾರರ ಮನವೊಲಿಸಬೇಕೆಂದು ಸೂಚಿಸಲಾಯಿತು ಎನ್ನಲಾಗಿದೆ.

ಬೂತ್‌ವಾರು ಮನೆ, ಮನೆ ಭೇಟಿ ವೇಳೆ ಮನೆಗಳಲ್ಲಿರುವ ಮತದಾರರ ಸಂಖ್ಯೆ, ಮೊಬೈಲ್ ಸಂಖ್ಯೆ, ಮತದಾರ ಪಟ್ಟಿಯಲ್ಲಿ ಅವರ ಹೆಸರು ಇದೆಯೋ ಇಲ್ಲವೋ ಎಂಬುದರ ಮಾಹಿತಿ ಸಂಗ್ರಹಿಸಬೇಕು. ಪ್ರತಿ ದಿನದ ಪ್ರಚಾರದ ಮಾಹಿತಿ ವರದಿಯನ್ನು ಕಡ್ಡಾಯವಾಗಿ ನೀಡಬೇಕು. ಪ್ರತಿದಿನ ಬೆಳಿಗ್ಗೆ 7:30ಗಂಟೆಗೆ ಹೊರಟು, ಬೆಳಿಗ್ಗೆ 8:00ರಿಂದ ರಾತ್ರಿ 8:00ಗಂಟೆವರೆಗೂ ಕ್ಷೇತ್ರದಲ್ಲಿ ನಿಗದಿ ಪಡಿಸಿದ ಬೂತ್‌ಗಳಲ್ಲಿ ಮನೆ, ಮನೆ ಪ್ರಚಾರ ಕೈಗೊಳ್ಳಬೇಕೆಂದು ಸೂಚಸಲಾಗಿದೆ ಎಂದು ಹೇಳಲಾಗುತ್ತಿದೆ.

ತಮ್ಮ ತಮ್ಮ ಬೂತ್‌ನಲ್ಲಿ ಕೈಗೊಂಡ ಪ್ರಚಾರ ಕಾರ್ಯ, ಸಂಗ್ರಹಿಸಿದ ಮಾಹಿತಿ, ಪಡೆಯಬಹುದಾದ ಲೀಡ್‌ ನಿರೀಕ್ಷೆ ಕುರಿತಾಗಿ ಅನೇಕರು ಮಾಹಿತಿ ನೀಡಿದರು ಎನ್ನಲಾಗುತಿದೆ.

ಕಾಂಗ್ರೆಸ್‌ ಮುಖಂಡರಾದ ಆರ್‌.ಬಿ.ತಿಮ್ಮಾಪುರ, ಶಿವಾನಂದ ಪಾಟೀಲ, ಡಾ|ಪುಷ್ಪಾ ಅಮರನಾಥ, ವೀರಕುಮಾರ ಪಾಟೀಲ, ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಲಕ್ಷ್ಮೀ ಹೆಬ್ಟಾಳಕರ, ಅಂಜಲಿ ನಿಂಬಾಳ್ಕರ್‌, ಕಿಮ್ಮನೆ ರತ್ನಾಕರ, ಬಸವರಾಜ ಶಿವಣ್ಣವರ, ಬಿ.ಆರ್‌.ಯಾವಗಲ್ಲ, ಡಿ.ಆರ್‌.ಪಾಟೀಲ, ಬಿ.ಸಿ. ಪಾಟೀಲ, ರುದ್ರಪ್ಪ ಲಮಾಣಿ, ಜೆ.ಟಿ.ಪಾಟೀಲ, ಸಂತೋಷ ಲಾಡ್‌, ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ, ಎಸ್‌.ಜಿ.ನಂಜಯ್ಯನಮಠ, ವೀರಣ್ಣ ಮತ್ತಿಕಟ್ಟಿ, ಜೆಡಿಎಸ್‌ ಮುಖಂಡರಾದ ಎನ್‌.ಎಚ್.ಕೋನರಡ್ಡಿ, ಎಂ.ಎಸ್‌.ಅಕ್ಕಿ ಇನ್ನಿತರರು ಇದ್ದರು.

ಟಾಪ್ ನ್ಯೂಸ್

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌; ಎಂಟು ಸೋಲಿನ ನಂಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌; ಎಂಟು ಸೋಲಿನ ನಂಟು

ಉತ್ತರ ಕೊರಿಯಾದ ಮತ್ತೊಂದು ಕ್ಷಿಪಣಿ ಪರೀಕ್ಷೆ

ಉತ್ತರ ಕೊರಿಯಾದ ಮತ್ತೊಂದು ಕ್ಷಿಪಣಿ ಪರೀಕ್ಷೆ

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌

ಬ್ಯಾಂಕಿಂಗ್‌ ಬಡ್ಡಿ ದರಕ್ಕೆ ಡ್ರ್ಯಾಗನ್‌ ಕತ್ತರಿ;ಮಂದಗತಿಗೆ ಹೊರಳಿದ ಚೀನ ಆರ್ಥಿಕತೆಯ ಪರಿಣಾಮ

ಬ್ಯಾಂಕಿಂಗ್‌ ಬಡ್ಡಿ ದರಕ್ಕೆ ಡ್ರ್ಯಾಗನ್‌ ಕತ್ತರಿ;ಮಂದಗತಿಗೆ ಹೊರಳಿದ ಚೀನ ಆರ್ಥಿಕತೆಯ ಪರಿಣಾಮ

ಹೈಕೋರ್ಟ್‌ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ

ಹೈಕೋರ್ಟ್‌ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದತೆಹಜಬವಚಷಱ

ವೀಕೆಂಡ್‌ ಕರ್ಫ್ಯೂ 2ನೇ ದಿನವೂ ಯಶಸ್ವಿ

ಸದರತಯುಇಒಇಕಮನಬವಚ

ಗ್ರಾಮೀಣ ಭಾಗದಲ್ಲಿ ಕಳೆಗಟ್ಟಿದ ಸಂಕ್ರಾಂತಿ ಹಬ್ಬ

ರತಯುಇಉಜಹದಸ

ಸೊಪ್ಪಿನ ಎಎಪಿ ಗ್ರಾಮೀಣ ಜಿಲ್ಲಾಧ್ಯಕ್ಷ

ಸದ್ತಗಯುಇಒಲಕಜಹಬವಚಷಱ

ವೀಕೆಂಡ್‌ ಕರ್ಫ್ಯೂಗೆ ದೊರೆಯದ ಹೆಚ್ಚಿನ ಬೆಂಬಲ

ದ್ಗಹಜಿಒಪೊಇಉಯತರೆಸಡ

ವರ್ಷಾಂತ್ಯಕ್ಕೆ ಪೂರ್ವ ಆರ್‌ ಟಿ ಒಗೆ ಸ್ವತ ಕಟ್ಟಡ 

MUST WATCH

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

udayavani youtube

ವಾಹನ ನಿಲುಗಡೆ ಜಗಳ ತರಕಾರಿ ಮಾರುತ್ತಿದ್ದ ಮಹಿಳೆಗೆ ‘ ಡಾಕ್ಟರ್’ ನಿಂದ ಥಳಿತ

udayavani youtube

ಜನರ ಕಲ್ಯಾಣವಾಗಬೇಕು, ಉಪದ್ರವವಾಗಬಾರದು :ಕೃಷ್ಣಾಪುರ ಮಠದ ಶ್ರೀಪಾದರ ಸಂದೇಶ

ಹೊಸ ಸೇರ್ಪಡೆ

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

್ತಯುಕಮನಬವಚಷ

ಚುನಾವಣೆಯಲ್ಲಿ ನಿರೀಕ್ಷೆ ಗಿಂತ ಹೆಚ್ಚು ಮತ

ರತಯುಇಕಜಹಗಷ

ಮಲಕಂಬ-ರೋಪ್‌ ಮಲ್ಲಕಂಬ ಸರ್ಧೆಗೆ  ಚಾಲನೆ

ದರತಯುಜಹಗ್ದ

ಅಜ್ಜನ ಜಾತ್ರೆಗೆ 72 ಕಿ.ಮೀ. ನಡೆದು ಬಂದ ಭಕ್ತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.