ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌


Team Udayavani, Oct 19, 2021, 7:15 AM IST

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಹತ್ತಿ ಬಿತ್ತಿ ಬೆಳೆದ ರೈತರ ಕಥೆ ಆಗಾಗ ಲಾಭ-ನಷ್ಟದ ವಿಚಾರದಲ್ಲಿ ಚರ್ಚೆಗೆ ಬರುತ್ತಲೇ ಇರುತ್ತದೆ. ಬ್ರಿಟಿಷರಿಂದ “ಕಾಟನ್‌ ಕ್ಯಾಪಿಟಲ್‌’ ಎಂದೇ ಕರೆಯಿಸಿಕೊಂಡಿದ್ದ ಧಾರವಾಡ ಜಿಲ್ಲೆಯಲ್ಲಿ ಹತ್ತಿ ಬೆಳೆ ನೆಲೆಯೂರಿದ್ದು ಶತಮಾನಗಳ ಹಿಂದೆಯೇ ಆದರೂ ಹತ್ತಿ ಬೆಳೆಗೆ ವೇಗೋತ್ಕರ್ಷ ಸಿಕ್ಕಿದ್ದು ಸ್ವಾತಂತ್ರ್ಯ ಚಳವಳಿಯಲ್ಲಿನ ಖಾದಿ ಗ್ರಾಮೋದ್ಯೋಗದಿಂದಾಗಿ ಎಂದರೆ ತಪ್ಪಾಗಲಾರದು.

ಹುಬ್ಬಳ್ಳಿಯ ಬಸವೇಶ್ವರ ಎಪಿಎಂಸಿಯಲ್ಲಿ 2020ರಲ್ಲಿ 30 ಎಂಎಂ ನೂಲಿನ ಪ್ರತೀ ಕ್ವಿಂಟಾಲ್‌ ಹತ್ತಿಗೆ 5,875 ಹಾಗೂ 29 ಎಂಎಂ ನೂಲಿನ ಹತ್ತಿಗೆ 5,775 ರೂ., 28 ಎಂಎಂ ನೂಲಿನ ಹತ್ತಿಗೆ 5,775 ರೂ. ಬೆಲೆ ಲಭ್ಯವಾಗಿತ್ತು. ಇದೀಗ ಸರಕಾರಿ ಖರೀದಿ ಬೆಲೆ ಆರು ಸಾವಿರ ರೂ. ಆಸುಪಾಸಿದೆ. 2021ರಲ್ಲಿ ಎಲ್ಲ ಬಗೆಯ ಹತ್ತಿಯ ಬೆಲೆ ಖಾಸಗಿ ಮಾರುಕಟ್ಟೆಯಲ್ಲಿ 16 ಸಾವಿರ ರೂ.ಗೆ ಏರಿ, 10 ಸಾವಿ ರಕ್ಕೆ ಇಳಿ ದಿ ದೆ. ಹತ್ತಿ ಬೆಳೆದ ರೈತರಿಗೆ ಈ ಬೆಲೆ ಸಿಕ್ಕಿದ್ದು ಹೆಚ್ಚು ಕಡಿಮೆ ಇತಿಹಾಸದಲ್ಲಿಯೇ ಇದೇ ಮೊದಲು. 2018ರಲ್ಲಿ ಕ್ವಿಂಟಾಲ್‌ಗೆ ಗರಿಷ್ಠ 7 ಸಾವಿರ ರೂ.ಗೆ ಮಾರಾಟವಾಗಿದ್ದ ಹತ್ತಿ ಈವರೆಗಿನ ಸರಾಸರಿ ಗರಿಷ್ಠ ಬೆಲೆಯಾಗಿತ್ತು.

ರಾಜ್ಯದಲ್ಲಿಯೇ ಉತ್ತಮ ಗುಣಮಟ್ಟ ಮತ್ತು ಅಧಿಕ ಹತ್ತಿ ಉತ್ಪಾದನೆಯಲ್ಲಿ ಅಖಂಡ ಧಾರವಾಡ ಜಿಲ್ಲೆ ಶತಮಾನಗಳ ಹಿಂದಿನಿಂದಲೂ ಮೊದಲ ಸ್ಥಾನದಲ್ಲಿದೆ. ಬ್ರಿಟಿಷರು ಕೂಡ ಹುಬ್ಬಳ್ಳಿಯನ್ನೇ ಕಾಟನ್‌ ಕ್ಯಾಪಿಟಲ್‌(ಹತ್ತಿ ರಾಜಧಾನಿ) ಮಾಡಿಕೊಂಡಿದ್ದರು. ಈಗಲೂ ಇಲ್ಲಿಂದ ಜಿನ್ನಿಂಗ್‌ ಮಾಡಿದ ಹತ್ತಿ ಗುಜರಾತ್‌, ಮುಂಬಯಿ ಸೇರಿ ವಿದೇಶಗಳಿಗೂ ರವಾನೆಯಾಗುತ್ತದೆ. 1992ರಲ್ಲಿ 1.97 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಉತ್ಪಾದನೆಯಾಗಿದ್ದು, ರಾಜ್ಯದ ಒಟ್ಟು ಹತ್ತಿ ಪಾಲಿನಲ್ಲಿ ಶೇ.33.73ರಷ್ಟಿದಿದ್ದು ದಾಖಲಾಗಿತ್ತು. ಆಗ ಕ್ವಿಂಟಾಲ್‌ಗೆ 3500 ರೂ.ನಷ್ಟು ಮಾರಾಟ ಬೆಲೆ ದಾಖಲಾಗಿತ್ತು. 2020ರಲ್ಲಿ 75,025 ಕ್ವಿಂಟಾಲ್‌ ಹತ್ತಿ ಹುಬ್ಬಳ್ಳಿಯ ಸರಕಾರಿ ಖರೀದಿ ಕೇಂದ್ರದ ಮೂಲಕ ಖರೀದಿಯಾಗಿದೆ. ಸದ್ಯಕ್ಕೆ ಸ್ಥಳೀಯ ಹತ್ತಿ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಕಳೆದ ವರ್ಷದ ಹತ್ತಿ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ:ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶಾನ್‌, ರಾಹುಲ್‌

ಕಡಿಮೆಯಾಗುತ್ತಿದೆ ಹತ್ತಿ ಬೆಳೆ: ಆದರೆ ವರ್ಷದಿಂದ ವರ್ಷಕ್ಕೆ ಹತ್ತಿ ಬೆಳೆ ಕಡಿಮೆಯಾಗುತ್ತಿದ್ದು, ಇಲ್ಲಿ ಗೋವಿನಜೋಳ, ಕಬ್ಬು, ಸೋಯಾ ಅವರೆ ಹತ್ತಿ ಬೆಳೆಯನ್ನು ನುಂಗಿ ಹಾಕುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಹತ್ತಿ ಬೆಳೆ ಶೇ.43ರಷ್ಟು ಕುಸಿತ ಕಂಡಿದೆ. ಕೃಷಿ ವಿವಿ ಮತ್ತು ಕೇಂದ್ರ ಸರಕಾರ ಇಲ್ಲಿ ನೆಲೆಯೂರಿಸಿದ ಜಯಧರ್‌, ವರಲಕ್ಷ್ಮೀ, ಜಯಲಕ್ಷ್ಮೀ, ಶಾರದಾ, ಅಜಂತಾ, ಅಭಾದಿತಾ, ಡಿಸಿಎಚ್‌-32, ತಳಿಗಳಿದ್ದವು. ಸದ್ಯಕ್ಕೆ ಡಿಸಿಎಚ್‌-32 ಮತ್ತು ಬಿಟಿ ಎರಡೇ ತಳಿಗಳು ಪ್ರಚಲಿತದಲ್ಲಿವೆ.

ರಾಷ್ಟ್ರಧ್ವಜಕ್ಕೆ ನೂಲು : ರಾಷ್ಟ್ರಧ್ವಜ ದೇಶಿ ಮಗ್ಗದಲ್ಲಿನ ಹತ್ತಿ ನೂಲಿನಿಂದ ಸಿದ್ಧಗೊಂಡ ಶುದ್ಧ ಖಾದಿಯದ್ದೇ ಆಗಿರಬೇಕು ಎಂಬ ಗಾಂಧೀಜಿ ಅವರ ಕಲ್ಪನೆಗೆ ತಕ್ಕಂತೆ ಧಾರವಾಡದಲ್ಲಿ ಇಡೀ ದೇಶಕ್ಕೆ ಬೇಕಾಗುವ ಅತ್ಯುತ್ತಮ ಗುಣಮಟ್ಟದ ಖಾದಿ ಬಟ್ಟೆಯ ರಾಷ್ಟ್ರಧ್ವಜಗಳು ಇಂದಿಗೂ ಸಿದ್ಧಗೊಳ್ಳುತ್ತಿವೆ.

-ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

kambala5

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

cm-bomm

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ: ರಾಜ್ಯ ಸರ್ಕಾರದ ವಿರೋಧ

yoga

ಎ ಮಂಜುಗೆ ಸೆಡ್ಡು : ಬಿಜೆಪಿಗೆ ಮರಳಿದ ಯೋಗ ರಮೇಶ್

1-ffdd

ಅವ್ಯವಸ್ಥೆಯ ಕುರಿತು ದೂರು : ದೆಹಲಿ ವಿಮಾನ ನಿಲ್ದಾಣದಲ್ಲಿ 20 ಪರೀಕ್ಷಾ ಕೌಂಟರ್‌

ಕೋಟಿ ರೂ.ಬಿಡುಗಡೆಯಾದರೂ ಬಿಳಿಗಿರಿರಂಗನ ದೇಗುಲದಲ್ಲಿ ಕಳಪೆ ನೆಲಹಾಸು

ಕೋಟಿ ರೂ.ಬಿಡುಗಡೆಯಾದರೂ ಬಿಳಿಗಿರಿರಂಗನ ದೇಗುಲದಲ್ಲಿ ಕಳಪೆ ನೆಲಹಾಸು

1-ffdfdf

ಖ್ಯಾತ ಪತ್ರಕರ್ತ, ಪದ್ಮಶ್ರೀ ವಿನೋದ್ ದುವಾ ವಿಧಿವಶ

ಮತ್ತೆ ಮಳೆ ಅರ್ಭಟ, ನೆಲಕಚ್ಚಿದ ಬೆಳೆ : ರಾಗಿ ತೆನೆ ಕೊಯ್ಲು ಮಾಡಲಾಗದೇ ರೈತರ ಪರದಾಟ

ಮತ್ತೆ ಮಳೆ ಅರ್ಭಟ, ನೆಲಕಚ್ಚಿದ ಬೆಳೆ : ರಾಗಿ ತೆನೆ ಕೊಯ್ಲು ಮಾಡಲಾಗದೇ ರೈತರ ಪರದಾಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಸ್ತೆ ಮಧ್ಯೆಯೇ ಮಕ್ಕಳ ಕುಳ್ಳಿರಿಸಿ ಪಾಠ

ರಸ್ತೆ ಮಧ್ಯೆಯೇ ಮಕ್ಕಳ ಕುಳ್ಳಿರಿಸಿ ಪಾಠ

ಕನೇರಿಯಲ್ಲಿ ಗರ್ಭಸಂಸ್ಕಾರ ಕೇಂದ್ರ ಲೋಕಾರ್ಪಣೆ : ದೇಶದ ಎರಡನೇ ಗರ್ಭ ಸಂಸ್ಕಾರ ಕೇಂದ್ರ

ಕನೇರಿಯಲ್ಲಿ ಗರ್ಭಸಂಸ್ಕಾರ ಕೇಂದ್ರ ಲೋಕಾರ್ಪಣೆ : ದೇಶದ ಎರಡನೇ ಗರ್ಭ ಸಂಸ್ಕಾರ ಕೇಂದ್ರ

ನಿಸರ್ಗ ಚಿಕಿತ್ಸೆ ದುಬಾರಿ ಅಲ್ಲವೇ ಅಲ್ಲ.. : ನಿಸರ್ಗ ಚಿಕಿತ್ಸೆ ಪಾರ್ಲರ್‌ ವೆಚ್ಚಕ್ಕಿಂತ ಕಡಿಮೆ

ನಿಸರ್ಗ ಚಿಕಿತ್ಸೆ ದುಬಾರಿ ಅಲ್ಲವೇ ಅಲ್ಲ.. ನಿಸರ್ಗ ಚಿಕಿತ್ಸೆ ಪಾರ್ಲರ್‌ ವೆಚ್ಚಕ್ಕಿಂತ ಕಡಿಮೆ

ಉತ್ತರದ ಮದುವೆಗೆ ದಕ್ಷಿಣದ ಸವಿರುಚಿ : ಸಹೋದರರ ತಂಡದಿಂದ ನವ ಖಾದ್ಯೋದ್ಯಮ

ಉತ್ತರದ ಮದುವೆಗೆ ದಕ್ಷಿಣದ ಸವಿರುಚಿ : ಸಹೋದರರ ತಂಡದಿಂದ ನವ ಖಾದ್ಯೋದ್ಯಮ

ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಅಂತರರಾಷ್ಟ್ರೀಯ ಪ್ರಯಾಣಿಕರ ತಪಾಸಣೆ : ಬೊಮ್ಮಾಯಿ

ಅಂತರರಾಷ್ಟ್ರೀಯ ವಿಮಾನದಲ್ಲಿ ಬರುವ ಎಲ್ಲ ಪ್ರಯಾಣಿಕರ ತಪಾಸಣೆ : ಬೊಮ್ಮಾಯಿ

MUST WATCH

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

udayavani youtube

ನೆರೆ ಪರಿಹಾರ ಸಿಗಲಿಲ್ಲ: ಅವಶೇಷಗಳ ಅಡಿಯಲ್ಲೇ ಸಾಗುತ್ತಿದೆ ಬದುಕು

ಹೊಸ ಸೇರ್ಪಡೆ

acb

ಚಾಮರಾಜನಗರ : ತೆರಿಗೆ ಇಲಾಖೆಯ ಇಬ್ಬರು ಇನ್‌ಸ್ಪೆಕ್ಟರ್‌ಗಳು ಎಸಿಬಿ ಬಲೆಗೆ

kambala5

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

cm-bomm

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ: ರಾಜ್ಯ ಸರ್ಕಾರದ ವಿರೋಧ

yoga

ಎ ಮಂಜುಗೆ ಸೆಡ್ಡು : ಬಿಜೆಪಿಗೆ ಮರಳಿದ ಯೋಗ ರಮೇಶ್

1-ffdd

ಅವ್ಯವಸ್ಥೆಯ ಕುರಿತು ದೂರು : ದೆಹಲಿ ವಿಮಾನ ನಿಲ್ದಾಣದಲ್ಲಿ 20 ಪರೀಕ್ಷಾ ಕೌಂಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.