Udayavni Special

ಓದಲು ಬಂದವರ ಕನಸಿಗೆ ಕೊಳ್ಳಿ ಇಟ್ಟ ಮಹಾಮಾರಿ

Team Udayavani, Mar 24, 2020, 3:37 PM IST

ಓದಲು ಬಂದವರ ಕನಸಿಗೆ ಕೊಳ್ಳಿ ಇಟ್ಟ ಮಹಾಮಾರಿ

ಧಾರವಾಡ: ಬಳಪವೇ ಮೂಡದ ಕ್ಲಾಸಿನ ಫಲಕಗಳು, ಬೋಧನೆಯ ಸದ್ದೇ ಇಲ್ಲದೆ ನೀರವ ಮೌನಕ್ಕೆ ಶರಣಾಗಿರುವ ಕೋಚಿಂಗ್‌ ಸೆಂಟರ್‌ಗಳು, ಬೀಕೋ ಎನ್ನುತ್ತಿರುವ ಟ್ಯೂಶನ್‌ ಕ್ಲಾಸುಗಳು, ಒಂದೆಡೆ ಕಟ್ಟಿಕೊಂಡ ಕನಸು, ಇನ್ನೊಂದೆಡೆ ಆತಂಕ. ಒಟ್ಟಿನಲ್ಲಿ ಐಎಎಸ್‌, ಕೆಎಎಸ್‌ ಕನಸು ಹೊತ್ತು ಬಂದವರನ್ನು ಮಂಡಿಯೂರಿಸಿ ಮನೆಗೆ ಕಳುಹಿಸಿದ ಕೋವಿಡ್ 19 ಭಯ.

ಹೌದು…, ವಿದ್ಯಾಕಾಶಿ ಧಾರವಾಡಕ್ಕೆ ವಿದ್ಯಾಭ್ಯಾಸಕ್ಕಾಗಿ ಹೊರಗಿನ ಜಿಲ್ಲೆಗಳಿಂದ ಬಂದಿದ್ದ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕೊನೆಗೂ ಕೊರೊನಾ ಮುನ್ನೆಚ್ಚರಿಕೆ ಪಾಲಿಸಲು ಅನಿವಾರ್ಯವಾಗಿ ತಮ್ಮ ಊರುಗಳಿಗೆ ತೆರಳಿದ್ದಾರೆ. ಇಲ್ಲಿನ ಸಪ್ತಾಪುರ, ಜಯನಗರ, ಶಿವಗಿರಿ, ಬಾರಾಕುಟ್ರಿ, ಮಾಳಮಡ್ಡಿ, ಉಳವಿ ಚೆನ್ನಬಸವೇಶ್ವರ ನಗರ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಪಿಜಿಗಳಲ್ಲಿ ವಾಸವಾಗಿರುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಇದೀಗ ತೀವ್ರ ಆತಂಕಕ್ಕೆ ಒಳಗಾಗಿ ಕೊನೆಗೆ ತಮ್ಮ ಕ್ಲಾಸುಗಳನ್ನೇ ಮೊಟಕುಗೊಳಿಸಿ ಊರುಗಳತ್ತ ಸಾಗಿದ್ದಾರೆ.

50 ಸಾವಿರ ವಿದ್ಯಾರ್ಥಿಗಳು ಒಂದೆಡೆ: ಕರ್ನಾಟಕ ವಿಶ್ವವಿದ್ಯಾಲಯದಿಂದ ಹಿಡಿದು ಹಿಂದಿ ಪ್ರಚಾರ ಸಭಾ ವರೆಗಿನ ಎರಡುಚದುರ ಕಿಮೀ ಪ್ರದೇಶದಲ್ಲಿ ಸುಮಾರು 150 ಪಿಜಿಗಳಿವೆ. ಇಲ್ಲಿ 23 ಸಾವಿರದಷ್ಟು ವಿದ್ಯಾರ್ಥಿನಿಯರಿದ್ದು ಅವರೆಲ್ಲರೂಐಎಎಸ್‌, ಕೆಎಎಸ್‌ ಮತ್ತು ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ಹುದ್ದೆಗಳ ಪರೀಕ್ಷೆಗಳಿಗೆ ತರಬೇತಿ ಮತ್ತು ಕೋಚಿಂಗ್‌ ಪಡೆದುಕೊಳ್ಳುತ್ತಿದ್ದಾರೆ. ಕೋಚಿಂಗ್‌ ಕ್ಲಾಸ್‌ಗಳು ಸಪ್ತಾಪುರದಲ್ಲಿ ಮಾತ್ರ ಇದ್ದು, ದಿನದ 12 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದವು. ಅವು ಕೂಡ ವರ್ಗೀಕರಿಸಿದ ಸಮಯಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಇಲ್ಲಿ ತರಬೇತಿಗೆ ಬರುತ್ತಿದ್ದು, ಕೋವಿಡ್19 ವೈರಸ್‌ಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಅಗತ್ಯ ಎನ್ನುವ ಸರ್ಕಾರದ ಮುಂಜಾಗೃತಾ ಕ್ರಮಕ್ಕೆ ಎಲ್ಲರೂ ಒಪ್ಪಿಕೊಂಡು ನಿನ್ನೆಯಿಂದಲೇ ಕೋಚಿಂಗ್‌ ಕ್ಲಾಸ್‌ಗಳಿಗೆ ಬೀಗ ಜಡಿದಿದ್ದಾರೆ.

ಥ್ರಿಬಲ್‌ಬೆಡ್‌ ಪಿಜಿಗಳು: ಇನ್ನು ಜನತಾ ಕರ್ಫ್ಯೂ ನಂತರ ಮತ್ತೆ ಕ್ಲಾಸುಗಳು ಪುನರಾರಂಭಗೊಳ್ಳುತ್ತವೆ ಎಂದು ನಂಬಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಅವರೆಲ್ಲರೂ ಕೂಡ ಇದೀಗ ತಮ್ಮ ಊರುಗಳಿಗೆ ಮರಳಬೇಕಿದೆ. ಕಳೆದ ಎರಡು ದಿನಗಳಿಂದ ಅವರೆಲ್ಲ ಪಿಜಿಯಲ್ಲಿಯೇ ಕುಳಿತುಕೊಂಡಿದ್ದಾರೆ. ಪಿಜಿ ಮಾಲೀಕರಿಗೂ ಆತಂಕವಿದ್ದು, ಕೋವಿಡ್ 19 ವೈರಸ್‌ಗೆ ಸಾಮಾಜಿಕ ಅಂತರ ಅತ್ಯಂತ ಅಗತ್ಯವಾಗಿದೆ. ಆದರೆ ಇಲ್ಲಿ ಒಂದೊಂದು ಪಿಜಿ ಮನೆಗಳಲ್ಲಿ 40-50 ವಿದ್ಯಾರ್ಥಿಗಳು ಇರುವ ಉದಾಹರಣೆ ಯೂ ಉಂಟು.

ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪಿಜಿಗಳಲ್ಲಿ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಎರಡೆರಡು ಅಡಿ ಅಂತರದಲ್ಲಿ ರೈಲ್ವೆ ಸ್ಲಿಪರ್‌ ಕೋಚ್‌ ಮಾದರಿಯಲ್ಲಿಯೇ ಪಿಜಿಗಳಲ್ಲಿ ಬೆಡ್‌ಗಳಿದ್ದು, ವೈರಸ್‌ ಸೊಂಕು ತಗುಲಿದರೆ ದೊಡ್ಡ ಅನಾಹುತ ಸಂಭವಿಸುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಹೆದರಿ ಕಂಗಾಲಾಗಿರುವ ಪಿಜಿ ಮಾಲೀಕರು ವಿದ್ಯಾರ್ಥಿನಿಯರ ಪೋಷಕರಿಗೆ ಕರೆ ಮಾಡಿ ಅವರನ್ನು ಊರುಗಳಿಗ ಮರಳಿ ಕರೆದುಕೊಂಡು ಹೋಗುವಂತೆ ಕೇಳಿದ್ದಾರೆ.

ಮನೆಗೆ ಮರಳಲು ಹರಸಾಹಸ: ಈಗಾಗಲೇ ಕೋಚಿಂಗ್‌ ಕ್ಲಾಸ್‌ಗಳಿಗೆ ಹಣ ತುಂಬಿ ಪಿಜಿಗಳಲ್ಲಿ ವಾಸವಾಗಿರುವ ವಿದ್ಯಾರ್ಥಿಗಳು ಕೋವಿಡ್ 19 ಜನತಾ ಕರ್ಫ್ಯೂನಿಂದಾಗಿ ಕಂಗಾಲಾಗಿದ್ದಾರೆ. ಓದಲು ಬಂದ ವಿದ್ಯಾರ್ಥಿಗಳ ಪೈಕಿ 28 ಸಾವಿರದಷ್ಟು ಜನ ಉತ್ತರ ಕರ್ನಾಟಕದ ಬೀದರ್‌, ಕಲಬುರಗಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ, ಹಾವೇರಿ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗೆ ಸೇರಿದವರಾಗಿದ್ದಾರೆ.

ಕಲಬುರಗಿ ಮತ್ತು ವಿಜಯಪುರದಲ್ಲಿ ಕೋವಿಡ್ 19 ಪ್ರಕರಣಗಳು ಪತ್ತೆಯಾದಾಗ ತಾವು ಧಾರವಾಡದಲ್ಲಿಯೇ ಇರುವುದು ಸೂಕ್ತ ಎಂದುಕೊಂಡಿದ್ದ ವಿದ್ಯಾರ್ಥಿಗಳಿಗೆ ಇದೀಗ ಧಾರವಾಡದಲ್ಲಿಯೂ ಕೋವಿಡ್ 19 ಸೊಂಕಿರುವುದು ಪತ್ತೆಯಾಯಾಗಿದ್ದರಿಂದ ಆತಂಕಕ್ಕೆ ಒಳಗಾಗಿ ಮರಳಿ ತಮ್ಮ ಊರುಗಳಿಗೆ ತೆರಳಲು ಸಜ್ಜಾಗಿದ್ದಾರೆ. ಆದರೆ ಸಾರಿಗೆ ವ್ಯವಸ್ಥೆ ಸಂಪೂರ್ಣ ಬಂದ್‌ ಆಗಿದ್ದರಿಂದ ವಿದ್ಯಾರ್ಥಿಗಳು ಬಾಡಿಗೆ ಕೊಣೆಗಳಲ್ಲಿಯೇ ಅನಿವಾರ್ಯವಾಗಿ ಉಳಿದುಕೊಂಡಿದ್ದಾರೆ.

ಕೋವಿಡ್ 19 ವೈರಸ್‌ನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಜಿಲ್ಲಾಡಳಿತ ಮಾಡಿದ ಮನವಿಗೆ ನಾವು ಸ್ಪಂದಿಸಿದ್ದೇವೆ. ಹೀಗಾಗಿ ನಮ್ಮ ಕೋಚಿಂಗ್‌ ಸೆಂಟರ್‌ ಗಳನ್ನು ಮುಚ್ಚಿದ್ದು, ಸರ್ಕಾರದ ಮುಂದಿನ ಆದೇಶ ಬರುವ ವರೆಗೂ ಕ್ಲಾಸ್‌ಗಳನ್ನು ನಡೆಸುತ್ತಿಲ್ಲ. ಬಸವರಾಜ ಅಳಗವಾಡಿ, ಕೋಚಿಂಗ್‌ ಸೆಂಟರ್‌ ಮುಖ್ಯಸ

­ಬಸವರಾಜ ಹೊಂಗಲ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬೆನ್ ‘ಧಮ್’ ಪವರ್!: ಸೂಪರ್‌ ಓವರಿಗೂ ಮೊದಲು ‘ಸಿಗರೇಟ್‌ ಬ್ರೇಕ್‌’ ಪಡೆದಿದ್ದ ಸ್ಟೋಕ್ಸ್‌!

ಬೆನ್ ‘ಧಮ್’ ಪವರ್!: ಸೂಪರ್‌ ಓವರಿಗೂ ಮೊದಲು ‘ಸಿಗರೇಟ್‌ ಬ್ರೇಕ್‌’ ಪಡೆದಿದ್ದ ಸ್ಟೋಕ್ಸ್‌!

ಉಜಿರೆ: ರೆಸಾರ್ಟ್‌ನಲ್ಲಿ ಹೊಡೆದಾಟ, ಇತ್ತಂಡಗಳ ವಿರುದ್ಧ ದೂರು

ಉಜಿರೆ: ರೆಸಾರ್ಟ್‌ನಲ್ಲಿ ಹೊಡೆದಾಟ, ಇತ್ತಂಡಗಳ ವಿರುದ್ಧ ದೂರು

ಸುಬ್ರಹ್ಮಣ್ಯ: ಎಂಡೋ ಪೀಡಿತ ವಿದ್ಯಾರ್ಥಿಯ ಅಂಕ ಸಾಧನೆ

ಸುಬ್ರಹ್ಮಣ್ಯ: ಎಂಡೋ ಪೀಡಿತ ವಿದ್ಯಾರ್ಥಿಯ ಅಂಕ ಸಾಧನೆ

ಮಂಕಿ: 7 ಸೆಂ.ಮೀ. ಮಳೆ: ಕರಾವಳಿಯಲ್ಲಿ ಜು.15ರಿಂದ 18ರವರೆಗೆ ಎಲ್ಲೊ ಅಲರ್ಟ್

ಮಂಕಿ: 7 ಸೆಂ.ಮೀ. ಮಳೆ: ಕರಾವಳಿಯಲ್ಲಿ ಜು.15ರಿಂದ 18ರವರೆಗೆ ಎಲ್ಲೊ ಅಲರ್ಟ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 91 ಮಂದಿಗೆ ಕೋವಿಡ್ 19 ಸೋಂಕು ದೃಢ; 3 ಸಾವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 91 ಮಂದಿಗೆ ಕೋವಿಡ್ 19 ಸೋಂಕು ದೃಢ; 3 ಸಾವು

ಪೈಲಟ್ ಶ್ರಮದ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ಸಂಜಯ್ ಜಾ ಕಾಂಗ್ರೆಸ್ ಪಕ್ಷದಿಂದ ಅಮಾನತು!

ಪೈಲಟ್ ಶ್ರಮದ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ಸಂಜಯ್ ಜಾ ಕಾಂಗ್ರೆಸ್ ಪಕ್ಷದಿಂದ ಅಮಾನತು!

ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಾರ್ವಜನಿಕರೊಂದಿಗೆ ಬೆರೆತ ವ್ಯಕ್ತಿಯ ವಿರುದ್ಧ ಪ್ರಕರಣ

ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಾರ್ವಜನಿಕರೊಂದಿಗೆ ಬೆರೆತ ವ್ಯಕ್ತಿಯ ವಿರುದ್ಧ ಪ್ರಕರಣ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಡೆಗಳ ಮೇಲೆ ಕೋವಿಡ್ ಜಾಗೃತಿ ಚಿತ್ತಾರ

ಗೋಡೆಗಳ ಮೇಲೆ ಕೋವಿಡ್ ಜಾಗೃತಿ ಚಿತ್ತಾರ

ಮಿಷನ್‌ ಹಂಗರ್‌ ಸಾಮಾಜಿಕ ಸೇವೆ

ಮಿಷನ್‌ ಹಂಗರ್‌ ಸಾಮಾಜಿಕ ಸೇವೆ

ಸಿಎಂ ಜತೆ ಶೆಟ್ಟರ್‌ ವಿಡಿಯೋ ಸಂವಾದ

ಸಿಎಂ ಜತೆ ಶೆಟ್ಟರ್‌ ವಿಡಿಯೋ ಸಂವಾದ

ಧಾರವಾಡ : 71 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆ

ಧಾರವಾಡ : 71 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆ

ಜು.15 ರಿಂದ ಹತ್ತು ದಿನ ಧಾರವಾಡ ಜಿಲ್ಲೆ ಲಾಕ್ ಡೌನ್

ಜು.15 ರಿಂದ ಹತ್ತು ದಿನ ಧಾರವಾಡ ಜಿಲ್ಲೆ ಲಾಕ್ ಡೌನ್

MUST WATCH

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

ಹೊಸ ಸೇರ್ಪಡೆ

ಬೆನ್ ‘ಧಮ್’ ಪವರ್!: ಸೂಪರ್‌ ಓವರಿಗೂ ಮೊದಲು ‘ಸಿಗರೇಟ್‌ ಬ್ರೇಕ್‌’ ಪಡೆದಿದ್ದ ಸ್ಟೋಕ್ಸ್‌!

ಬೆನ್ ‘ಧಮ್’ ಪವರ್!: ಸೂಪರ್‌ ಓವರಿಗೂ ಮೊದಲು ‘ಸಿಗರೇಟ್‌ ಬ್ರೇಕ್‌’ ಪಡೆದಿದ್ದ ಸ್ಟೋಕ್ಸ್‌!

ಉಜಿರೆ: ರೆಸಾರ್ಟ್‌ನಲ್ಲಿ ಹೊಡೆದಾಟ, ಇತ್ತಂಡಗಳ ವಿರುದ್ಧ ದೂರು

ಉಜಿರೆ: ರೆಸಾರ್ಟ್‌ನಲ್ಲಿ ಹೊಡೆದಾಟ, ಇತ್ತಂಡಗಳ ವಿರುದ್ಧ ದೂರು

ಸುಬ್ರಹ್ಮಣ್ಯ: ಎಂಡೋ ಪೀಡಿತ ವಿದ್ಯಾರ್ಥಿಯ ಅಂಕ ಸಾಧನೆ

ಸುಬ್ರಹ್ಮಣ್ಯ: ಎಂಡೋ ಪೀಡಿತ ವಿದ್ಯಾರ್ಥಿಯ ಅಂಕ ಸಾಧನೆ

ಮಂಕಿ: 7 ಸೆಂ.ಮೀ. ಮಳೆ: ಕರಾವಳಿಯಲ್ಲಿ ಜು.15ರಿಂದ 18ರವರೆಗೆ ಎಲ್ಲೊ ಅಲರ್ಟ್

ಮಂಕಿ: 7 ಸೆಂ.ಮೀ. ಮಳೆ: ಕರಾವಳಿಯಲ್ಲಿ ಜು.15ರಿಂದ 18ರವರೆಗೆ ಎಲ್ಲೊ ಅಲರ್ಟ್

ಪಿಯುಸಿ ಫ‌ಲಿತಾಂಶ ಗುಣಾತ್ಮಕ ಮನಸ್ಥಿತಿ ಮುಖ್ಯ

ಪಿಯುಸಿ ಫ‌ಲಿತಾಂಶ ಗುಣಾತ್ಮಕ ಮನಸ್ಥಿತಿ ಮುಖ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.