ಕೋವಿಡ್, ಹಳದಿ ನೊಣಕ್ಕೆ ನಲುಗಿದ ಆಲ್ಪೋನ್ಸೋ


Team Udayavani, Jan 17, 2021, 12:07 PM IST

Covid, Alphonso, fluttering yellow

ಧಾರವಾಡ: ಸೀಮೆಗೆಲ್ಲ ಹರಡಿದ ಮಾವಿನ ಹೂ ಬಾಣದ ಕಂಪು, ಎಲೆಗಳು ಕಾಣದಷ್ಟು ಚಿಗಿರೊಡೆದ ಮಾವಿನ ಹೂವು ಮತ್ತು ಹೀಚು, ಸಂಕ್ರಾಂತಿ ಸಂಭ್ರಮಕ್ಕೆ ಭೂತಾಯಿ ಸೊಬಗು ಹೆಚ್ಚಿಸಿ ನಿಂತ ಮಾವಿನ ತೋಟಗಳು, 1.5 ಲಕ್ಷ ಟನ್‌ ಮಾವು ಉತ್ಪಾದನೆ ನಿರೀಕ್ಷೆ. ಆದರೆ ಕೋವಿಡ್ ಮಹಾಮಾರಿ ಮಾಡಿದ ಆಘಾತ ಮತ್ತು ಹಳದಿ ನೋಣದ ಕಾಟಕ್ಕೆ ಹೆದರಿದ ಮಾವು ದಲ್ಲಾಳಿಗಳು. ಹೌದು, ರಾಜ್ಯದಲ್ಲಿಯೇ ಅತೀ ಹೆಚ್ಚು ಆಲ್ಪೋನ್ಸೋ ಮಾವು ಬೆಳೆಯುವ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ಧಾರವಾಡ ಜಿಲ್ಲೆಯಲ್ಲಿ ಈ ವರ್ಷ ಮಾವು ಬೆಳೆ ಹುಲುಸಾಗಿ ಹೂವು ಹೀಚು ಬಿಡುತ್ತಿದ್ದು, ಬೆಳೆಗಾರರು ಸಂತಸದಲ್ಲಿದ್ದಾರೆ. ಸಂಕ್ರಾಂತಿ ಸಮಯಕ್ಕಾಗಲೇ ಎಲ್ಲಾ ತೋಟಗಳು ಹೂ ಬಿಟ್ಟಿದ್ದು, ಈ ವರ್ಷ ಪ್ರೋಲಾಂಗ್‌ ಪ್ರೊಸೆಸ್‌ ಅಂದರೆ ಸುದೀರ್ಘ‌ ಸುಗ್ಗಿಯ ಕಾಟ ಮಾವಿನ ತೋಪುಗಳಿಗೆ ಇಲ್ಲವಾಗಿದೆ. ಹಿಂದಾಗಿ ಹೂ ಬಿಡುವ ತೋಟಗಳು ಸಹ ಈ ವರ್ಷ ಈಗಲೇ ಹೂ ಹಿಡಿದಿದ್ದು, ಮಾರ್ಚ್‌ ಮತ್ತು ಎಪ್ರಿಲ್‌ ತಿಂಗಳಲ್ಲಿಯೇ ಉತ್ತಮ ಫಸಲಿನೊಂದಿಗೆ ರೈತರ ಕೈಗೆ ಲಭಿಸುವ ವಿಶ್ವಾಸ ಮೂಡಿದೆ.

ಆದರೆ ಕಳೆದ ವರ್ಷ ಮಾವಿನ ಹಣ್ಣುಗಳನ್ನು ಕೊಳೆಯುವಂತೆ ಮಾಡಿದ ಹಳದಿ ನೊಣ ಮತ್ತು ಕೋವಿಡ್ ಮಹಾಮಾರಿ ಲಾಕ್‌ಡೌನ್‌ನಿಂದಾಗಿ ಮಾವು ದಲ್ಲಾಳಿಗಳು ಸಂಪೂರ್ಣ ಸುಸ್ತಾಗಿ ಹೋಗಿದ್ದು, ಈ ವರ್ಷ ಮುಂಗಡವಾಗಿ ಹಣ ಬಿಚ್ಚಿ ಧೈರ್ಯದಿಂದ ಮಾವಿನ ತೋಪುಗಳನ್ನು ಗುತ್ತಿಗೆಗೆ ಕೊಳ್ಳಲು ಮಾತ್ರ ಹಿಂದೇಟು ಹಾಕುತ್ತಿದ್ದಾರೆ.

ಧೈರ್ಯ ಮಾಡದ ಗುತ್ತಿಗೆದಾರರು: ಈ ಭಾಗದ ಮಾವಿನ ತೋಪುಗಳನ್ನು ಗೋವಾ, ಮುಂಬೈ, ಅಹ್ಮದಾಬಾದ್‌ ಗಳಿಂದ ಬಂದ ಮಾವು ವ್ಯಾಪಾರಿ ಗುತ್ತಿಗೆದಾರರು ಪ್ರತಿವರ್ಷ ಕೊಳ್ಳುತ್ತಾರೆ. ಸಂಕ್ರಾಂತಿ ಸಮಯಕ್ಕೆ ಗಿಡಗಳು ಹಿಡಿದ ಹೂವು ಮತ್ತು ಹೀಚಿನ ಮೇಲೆ ತೋಟಕ್ಕೆ ಬೆಲೆಕಟ್ಟುವ ವ್ಯಾಪಾರಿಗಳು ಅರ್ಧದಷ್ಟು ಮಾತ್ರ ಹಣ ಕೊಟ್ಟು, ಇನ್ನುಳಿದದ್ದನ್ನು ಮಾವಿನ ಫಸಲನ್ನು ಕೀಳುವಾಗ ಬೆಳೆಗಾರರಿಗೆ ಕೊಡುತ್ತಾರೆ. ಆದರೆ ಕೋವಿಡ್ ಮಹಾಮಾರಿ ಮಾಡಿದ ಆಘಾತದಿಂದಾಗಿ ಈ ವರ್ಷ ಹೆಚ್ಚು ತೋಟಗಳಿಗೆ ಮುಂಗಡ ಹಣ ಕೊಡುವ ದಲ್ಲಾಳಿಗೇ ಬರುತ್ತಿಲ್ಲ. ಬಂದರೂ, ಮುಂದೆ ಮಾರುಕಟ್ಟೆ ನೋಡಿಕೊಂಡು ಎಲ್ಲರೂ ಸರಿ ಇದ್ದರೆ ಮಾತ್ರವೇ ಹೆಚ್ಚಿನ ಹಣ ನೀಡುತ್ತೇವೆ ಎನ್ನುವ ಷರತ್ತುಗಳನ್ನು ಹಾಕಿ ತೋಟಗಳಿಗೆ ಮುಂಗಡ ಹಣ ಕೊಡುತ್ತಿದ್ದಾರೆ. ಪ್ರತಿವರ್ಷ ಇಷ್ಟೊತ್ತಿಗಾಗಲೇ ಶೇ.70 ರಷ್ಟು ತೋಟಗಳನ್ನು ದಲ್ಲಾಳಿಗಳು ಬುಕ್‌ ಮಾಡಿ ಬಿಡುತ್ತಿದ್ದರು.

ಆದರೆ ಈ ವರ್ಷ ಮಾವಿಗೆ ಹಣ ಹಾಕಲು ದಲ್ಲಾಳಿಗಳು ಹಿಂದೇಟು ಹಾಕುತ್ತಿದ್ದಾರೆ. ಕಳೆದ ವರ್ಷಗಳಿಗೆ ಹೊಲಿಸಿದರೆ ಈ ವರ್ಷ ಚೆನ್ನಾಗಿ ಬೆಳೆ ಬರುವ ನಿರೀಕ್ಷೆ ಈಗಲೂ ಇದೆ. ಆದರೆ ಜಿಗಿರೋಗ ಮತ್ತು ಇಬ್ಬನಿ ಕಾಟ ಹೆಚ್ಚಾಗಿರುವುದು ರೈತರಲ್ಲೂ ಆತಂಕ ಮೂಡಿಸಿದೆ.ಮೂಡಣ ಗಾಳಿ ಚೆನ್ನಾಗಿ ಬೀಸಿದರೆ, ಯಾವುದೇ ದೊಡ್ಡ ಗಾಳಿ ಮಳೆ ಫೆಬ್ರವರಿಅಥವಾ ಮಾರ್ಚ್‌ನಲ್ಲಿ ಕಾಣಿಸಿಕೊಳ್ಳದೆ ಹೋದರೆ ಸಾಕು ಎನ್ನುತ್ತಿದ್ದಾರೆ ತೋಟಗಾರಿಕೆ ಇಲಾಖೆ ಮಾವು ತಜ್ಞರು.

ಹೊರ ರಾಜ್ಯ, ದೇಶಕ್ಕೂ ಸೈ: ಉತ್ತರ ಕರ್ನಾಟಕ ಸೇರಿದಂತೆ, ಗೋವಾ, ಮಹಾರಾಷ್ಟ್ರ, ಗುಜರಾತ್‌, ಆಂಧ್ರಪ್ರದೇಶಗಳಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಆಲ್ಪೋನ್ಸೋ ಮಾವಿನ ಹಣ್ಣಿನ ಖಣಜಗಳೇ ಧಾರವಾಡ ಮತ್ತು ಬೆಳಗಾವಿ ಜಿಲ್ಲೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಒಂದು ಜಿಲ್ಲೆ ಒಂದು ಉತ್ಪನ್ನದಡಿ ಧಾರವಾಡ ಜಿಲ್ಲೆಯ ಆಲ್ಪೋನ್ಸೋ ಮಾವು ಸ್ಥಾನ ಪಡೆದುಕೊಂಡಿದೆ. ಸರ್ಕಾರ ಇದರ ಮೌಲ್ಯವರ್ಧನೆಗೆ ಶ್ರಮಿಸುತ್ತಿದೆಯಾದರೂ ಇನ್ನೂ ಅಚ್ಚುಕಟ್ಟು ವ್ಯವಸ್ಥೆ ಜಾರಿಯಾಗಿಲ್ಲ. ಮಾವು ಬೆಳೆಗಾರರು ಆಲ್ಪೋನ್ಸೋ ಮಾವು ರಪ್ತಿಗೆ ಬೇಕಾಗುವ ತಂತ್ರಜ್ಞಾನ, ಪ್ಯಾಕಿಂಗ್‌, ಸಂಸ್ಕರಣೆಗೆ ಆದ್ಯತೆ ಸಿಗಬೇಕು ಎನ್ನುತ್ತಲೇ ಇದ್ದಾರೆ. ಆದರೆ ಅದಕ್ಕೆ ಪೂರಕವಾದ ವಾತಾವರಣ ಕಾಣುತ್ತಲೇ ಇಲ್ಲ.

ಇದನ್ನೂ ಓದಿ:ಸಿಡಿ ಬ್ಲ್ಯಾಕ್ ಮೆಲ್ ಆರೋಪದ ಬಗ್ಗೆ ಸಿಬಿಐ ತನಿಖೆ ಆಗಲಿ: ಶರಣಪ್ರಕಾಶ ಪಾಟೀಲ

1.5 ಲಕ್ಷ ಟನ್‌ ಮಾವು ಉತ್ಪಾದನೆ ನಿರೀಕ್ಷೆ

ಧಾರವಾಡ ಜಿಲ್ಲೆ ರಾಜ್ಯದಲ್ಲಿಯೇ ಅತೀ ಹೆಚ್ಚು ಆಲ್ಪೋನ್ಸೋ ಮಾವಿನ ಹಣ್ಣನ್ನು ಉತ್ಪಾದಿಸುವ ಜಿಲ್ಲೆ. ಇಲ್ಲಿ 11 ಸಾವಿರಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಉತ್ತಮ ಫಸಲು ಬಂದರೆ 2021ರಲ್ಲಿ 87 ರಿಂದ 98 ಸಾವಿರ ಟನ್‌ ಮಾವು ಉತ್ಪಾದನೆಯಾಗುತ್ತದೆ. ಇನ್ನು ಬೆಳಗಾವಿ ಜಿಲ್ಲೆಯಲ್ಲಿ 5465 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, 67,680 ಟನ್‌ ಉತ್ಪಾದನೆ ನಿರೀಕ್ಷೆ ಇದೆ ಎನ್ನುತ್ತಿದೆ ತೋಟಗಾರಿಕೆ ಇಲಾಖೆ. ರಾಜ್ಯದ ಲೆಕ್ಕದಲ್ಲಿ ಶೇ.50ರಷ್ಟು ಮಾವು ಈ ಎರಡೇ ಜಿಲ್ಲೆಗಳಲ್ಲಿ ಉತ್ಪಾದನೆಯಾಗುತ್ತಿದೆ. ಆದರೆ ಕೋವಿಡ್ ಮಹಾಮಾರಿ ಮತ್ತು ಹಳದಿ ನೋಣ ಆಲ್ಪೋನ್ಸೋ ಮಾವು ಬೆಳೆಗಾರರಿಗೆ ಮತ್ತು ದಲ್ಲಾಳಿಗಳಿಗೆ ಸಂಕಷ್ಟ ತೊಂಡಿದ್ದು,ಇಬ್ಬರೂ ಆತಂಕದಲ್ಲಿದ್ದಾರೆ.

 

ಟಾಪ್ ನ್ಯೂಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

MONEY (2)

Hubli ಅಪಾರ್ಟಮೆಂಟ್‌ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ

8-

Hubli: ದಿಂಗಾಲೇಶ್ವರರು ಸ್ಪರ್ಧಿಸುತ್ತಿರುವ ಸಮಯ, ಜಾಗ ಸರಿಯಿಲ್ಲ: ಗುಣಧರನಂದಿ ಮಹಾರಾಜ

L.S Polls: ನಮ್ಮದು ಧರ್ಮ ಯುದ್ಧ, ಧರ್ಮದ ಹಾದಿಯಲ್ಲೇ ಸಾಗುತ್ತೇವೆ: ದಿಂಗಾಲೇಶ್ವರ ಶ್ರೀ

L.S Polls: ನಮ್ಮದು ಧರ್ಮ ಯುದ್ಧ, ಧರ್ಮದ ಹಾದಿಯಲ್ಲೇ ಸಾಗುತ್ತೇವೆ: ದಿಂಗಾಲೇಶ್ವರ ಶ್ರೀ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.