ಕೊರೊನಾ ಸಂಕಷ್ಟದ ನಡುವೆ ಅಪರಾಧ ಲೋಕದ ಸದ್ದು

| ಕಳೆದ ವರ್ಷಕ್ಕೆ ಹೋಲಿಸಿದರೆ ತೀವ್ರ ಹೆಚ್ಚಳ | ಕಳ್ಳತನ, ವಂಚನೆ, ಅಪಹರಣ, ಸುಲಿಗೆ ಪ್ರಕರಣ ಸಂಖ್ಯೆ ವೃದ್ಧಿ

Team Udayavani, Jul 10, 2021, 4:44 PM IST

crime

ಹುಬ್ಬಳ್ಳಿ: ಕೊರೊನಾ ಮಹಾಮಾರಿ ಸಂಕಷ್ಟದ ನಡುವೆಯೂ ಅವಳಿನಗರ ವ್ಯಾಪ್ತಿಯಲ್ಲಿ ಅಪರಾಧ ಚುಟುವಟಿಕೆಗಳು, ಸೈಬರ್‌ ಅಪರಾಧ ಪ್ರಕರಣಗಳು ಸದ್ದು ಮಾಡತೊಡಗಿವೆ. ಕೊರೊನಾ ಮಹಾಮಾರಿ ಆರ್ಥಿಕ ಸಂಕಷ್ಟ, ಉದ್ಯೋಗ ನಷ್ಟ, ಉದ್ಯಮ-ವ್ಯಾಪಾರ ನಷ್ಟ, ವೈದ್ಯಕೀಯ ವೆಚ್ಚ ಹೆಚ್ಚಳಕ್ಕೆ ಕಾರಣವಾಗುವುದರ ಜತೆಗೆ ಕಳ್ಳತನ, ವಂಚನೆ, ಅಪಹರಣ, ದರೋಡೆ, ಸುಲಿಗೆ ಹಾಗೂ ಕೊಲೆಯಂತಹ ಪ್ರಕರಣಗಳಿಗೂ ಇಂಬು ನೀಡುತ್ತಿದೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಕಳೆದ ವರ್ಷದಲ್ಲಿ ನಡೆದಿರುವ ಅಪರಾಧ ಪ್ರಕರಣಗಳು ಹಾಗೂ ಈ ವರ್ಷ ಇಲ್ಲಿಯವರೆಗೆ ನಡೆದ ಅಪರಾಧ ಪ್ರಕರಣಗಳನ್ನು ಗಮನಿಸಿದರೆ ಇಂತಹ ಅನುಮಾನ ವ್ಯಕ್ತವಾಗುತ್ತಿದೆ. ಕೋವಿಡ್‌ ಸಂಕಷ್ಟದ ನಡುವೆಯೇ ಕಳ್ಳತನ, ವಂಚನೆ, ಸುಲಿಗೆ-ದರೋಡೆಯಂತಹ ಪ್ರಕರಣಗಳು, ಆರ್ಥಿಕ ಅಪರಾಧಗಳು ಹೆಚ್ಚಬಹುದು ಎಂಬ ಹಲವರ ನಿರೀಕ್ಷೆ ನಿಜವಾಗುತ್ತಿದೆ.

ಇತ್ತೀಚೆಗಿನ ದಿನಗಳಲ್ಲಿ ಸೈಬರ್‌ ವಂಚನೆ ಪ್ರಕರಣಗಳು ಸಹ ಹೆಚ್ಚತೊಡಗಿದ್ದು, ಕಳೆದ ವರ್ಷದಲ್ಲಿ ನಡೆದ ಸೈಬರ್‌ ಪ್ರಕರಣಗಳನ್ನು ಮೀರಿಸುವ ರೀತಿಯಲ್ಲಿ ಈ ವರ್ಷದಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ನಡೆದಿವೆ. ಅಪರಾಧ ಸಂಖ್ಯೆ ತುಲನೆ: ಹು-ಧಾ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ 2020ರಲ್ಲಿ 15 ಕೊಲೆಗಳು ನಡೆದಿದ್ದರೆ, 2021ರ ಜೂನ್‌ ಅಂತ್ಯದ ವರೆಗೆ 7 ಕೊಲೆಗಳಾಗಿವೆ. ಅದರಂತೆ ಕೊಲೆ ಯತ್ನ ಪ್ರಕರಣಗಳು 2020ರಲ್ಲಿ 42 ಆಗಿದ್ದರೆ, 2021ರ ಜೂನ್‌ ಅಂತ್ಯದ ವರೆಗೆ ಕೇವಲ ಆರು ತಿಂಗಳಲ್ಲಿ 30 ಆಗಿವೆ. 2021ರಲ್ಲಿ ಒಂದು ದರೋಡೆ ಪ್ರಕರಣ ದಾಖಲಾಗಿದೆ. ಸುಲಿಗೆ ಪ್ರಕರಣಗಳು 2020ರಲ್ಲಿ 31 ಆಗಿದ್ದರೆ, 2021ರಲ್ಲಿ ಆರು ತಿಂಗಳಲ್ಲಿ 23 ಆಗಿವೆ. 2020ರಲ್ಲಿ 102 ಮನೆಗಳ್ಳತನ ನಡೆದಿದ್ದರೆ, 2021ರ ಜೂನ್‌ ವರೆಗೆ ಅಂದರೆ ಆರು ತಿಂಗಳಲ್ಲಿ 83 ಮನೆಗಳು ಕಳ್ಳತನವಾಗಿವೆ. ಇದರಲ್ಲಿ 2020ರಲ್ಲಿ ಹಗಲು ಹೊತ್ತಿನಲ್ಲಿ 12 ಮನೆಗಳ ಕೀಲಿ ಮುರಿದು ಕಳ್ಳತನ ಮಾಡಿದ್ದರೆ, 2021ರಲ್ಲಿ ಐದು ಮನೆಗಳ ಕೀಲಿ ಮುರಿದು ಕಳ್ಳತನ ಮಾಡಲಾಗಿದೆ.

ರಾತ್ರಿ ಹೊತ್ತಿನಲ್ಲಿ 2020ರಲ್ಲಿ 79 ಮನೆಗಳ ಕೀಲಿ ಮುರಿದು ಕಳ್ಳತನ ಮಾಡಿದ್ದರೆ, 2021ರಲ್ಲಿ ಆರು ತಿಂಗಳಲ್ಲಿಯೇ 62 ಮನೆಗಳ ಕೀಲಿ ಮುರಿದು ಕಳವು ಮಾಡಲಾಗಿದೆ. 2020ರಲ್ಲಿ 11 ಮನೆಗಳ್ಳತನವಾಗಿದ್ದರೆ, 2021ರಲ್ಲಿ ಆಗಲೇ 16 ಮನೆಗಳ್ಳತನವಾಗಿವೆ. ಇನ್ನುಳಿದಂತೆ 2020ರಲ್ಲಿ 47 ಸಾಮಾನ್ಯ ಕಳ್ಳತನವಾಗಿದ್ದರೆ, 2021ರಲ್ಲಿ ಈಗಾಗಲೇ 53 ಕಳ್ಳತನವಾಗಿವೆ. 2020ರಲ್ಲಿ 184 ವಾಹನಗಳು ಕಳ್ಳತನವಾಗಿದ್ದರೆ, 2021ರಲ್ಲಿ 94 ವಾಹನಗಳು ಕಳವು ಆಗಿವೆ. 2020ರಲ್ಲಿ 57 ವಂಚನೆಗಳು ನಡೆದಿದ್ದರೆ, 2021ರಲ್ಲಿ ಈವರೆಗೆ 45 ವಂಚನೆ ಪ್ರಕರಣಗಳು ದಾಖಲಾಗಿವೆ. ಅದರಂತೆ 2020ರಲ್ಲಿ ಎರಡು ನಕಲು ಪ್ರಕರಣಗಳಾಗಿದ್ದರೆ, 2021ರ ಜೂನ್‌ ವರೆಗೆ 10 ಪ್ರಕರಣಗಳಾಗಿವೆ. ಅಪಹರಣ ಪ್ರಕರಣಗಳು 2020ರಲ್ಲಿ 26 ಆಗಿದ್ದರೆ, 2021ರಲ್ಲಿ 19 ಆಗಿವೆ.

2020ರಲ್ಲಿ ರೇಪ್‌ ಪ್ರಕರಣಗಳು 5 ಆಗಿದ್ದರೆ, 2021ರಲ್ಲಿ 10 ಆಗಿವೆ. ಮಾದಕ ವಸ್ತು (ಎನ್‌ ಡಿಪಿಎಸ್‌) ಪ್ರಕರಣಗಳು 2020ರಲ್ಲಿ 24 ಆಗಿದ್ದರೆ, 2021ರಲ್ಲಿ 34 ಆಗಿವೆ. ಸೈಬರ್‌ ಕ್ರೈಂ ಅಪರಾಧಗಳು 2020ರಲ್ಲಿ 120 ಆಗಿದ್ದರೆ, 2021ರಲ್ಲಿ ಜೂನ್‌ ಅಂತ್ಯದವರೆಗೆ 90 ಆಗಿವೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.