“ದಾವಣಗೆರೆ ಆನ್ ಮ್ಯಾಪ್’ ಆ್ಯಪ್ ಬಿಡುಗಡೆ
ಮೊಬೈಲ್‌ನಲ್ಲೇ ಸಿಗಲಿದೆ ಜಿಲ್ಲೆಯ ಸಂಪೂರ್ಣ ಮಾಹಿತಿ
Team Udayavani, Mar 26, 2021, 8:06 PM IST
ದಾವಣಗೆರೆ: ಸರ್ಕಾರಿ ಕಚೇರಿ, ಆಸ್ಪತ್ರೆ, ಯಾತ್ರಾಸ್ಥಳ, ಜನೌಷಧಿ ಕೇಂದ್ರ, ಇತ್ಯಾದಿ ಸ್ಥಳ, ವಿಳಾಸ ಮತ್ತು ಇತರ ಮಾಹಿತಿಯನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವ ಉದ್ದೇಶದಿಂದ ಜಿಲ್ಲಾಡಳಿತ ರಾಜ್ಯದಲ್ಲಿಯೇ ಮೊದಲ ಬಾರಿಗೆ “ದಾವಣಗೆರೆ ಆನ್ ಮ್ಯಾಪ್’ ಎಂಬ ಹೊಸ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.
“ದಾವಣಗೆರೆ ಆನ್ ಮ್ಯಾಪ್’ ವಿಶಿಷ್ಟವಾದ ಮೊಬೈಲ್ ಆ್ಯಪ್ ಆಗಿದ್ದು, ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯ ನ್ಯಾಷನಲ್ ಇನ್‌ಫರ್ಮಾಟಿಕ್ಸ್ ಸೆಂಟರ್(ಎನ್‌ಐಸಿ) ಅಧಿಕಾರಿಗಳು ಕೇವಲ 15 ರಿಂದ 20ದಿನಗಳಲ್ಲಿ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಜಿಲ್ಲೆಯ ಆಸ್ಪತ್ರೆಗಳು, ಜನೌಷಧ ಕೇಂದ್ರಗಳು, ಪೊಲೀಸ್ ಸ್ಟೇಷನ್‌ಗಳು, ಪೆಟ್ರೋಲ್ ಬಂಕ್‌ಗಳು, ಗ್ರಾಮ ಒನ್ ಕೇಂದ್ರಗಳು ಮತ್ತು ಯಾತ್ರಾ ಸ್ಥಳಗಳು ಸೇರಿದಂತೆ ಜಿಲ್ಲೆಯ ಆರು ಪ್ರಮುಖ ಮಾಹಿತಿಗಳನ್ನು ಆ್ಯಪ್‌ನಲ್ಲಿ ಅಳವಡಿಸಲಾಗಿದೆ.
ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಪುಟ ತೆರೆದಾಗ ಮಾಹಿತಿ ಕಿಟಕಿ ಕಾಣಿಸುತ್ತದೆ. ಬೇಕಾದ ಮಾಹಿತಿಯ ವಿಂಡೋ ಮೇಲೆ ಡಬಲ್ ಕ್ಲಿಕ್ ಮಾಡಿದಾಗ ಅದರಲ್ಲಿರುವ ದೂರವಾಣಿ ಸಂಖ್ಯೆಗೆ ನೇರವಾಗಿ ಫೋನ್ ಕಾಲ್ ಹೋಗುತ್ತದೆ. ಇನ್ನೂ ಹೆಚ್ಚುವರಿಯಾಗಿ ನಾವು ಇರುವ ಸ್ಥಳದಿಂದ ರಸ್ತೆ ಮಾರ್ಗ, ದೂರ ಮತ್ತು ಅಲ್ಲಿಗೆ ತಲುಪುವ ಸಮಯ ಸಹ ಕಾಣಿಸುತ್ತದೆ. ಇದೇ ರೀತಿ ಮೇಲ್ಕಂಡ ಉಳಿದ ಇಲಾಖೆಗಳ ಮಾಹಿತಿಯನ್ನು ಪಡೆಯಬಹುದು. ಇದರಲ್ಲಿಯೇ ದಾವಣಗೆರೆ ಜಿಲ್ಲೆಯ ವೆಬ್‌ಸೈಟ್ ಸಹ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಈ ಮೊಬೈಲ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಸಾರ್ವಜನಿಕರು ಇದನ್ನು ಡೌನ್ ಲೋಡ್ ಮಾಡಿಕೊಂಡು ಉಪಯೋಗಿಸಬಹುದು.
ಪ್ಲೇಸ್ಟೋರ್ ಲಿಂಕ್ avanagere.kar.nic.in.testmap1. ಮತ್ತು davanagre.nic.in ವೆಬ್‌ಸೈಟ್ ಮುಖಾಂತರ ಸಹ ಆ್ಯಪ್ ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರೋಗ ಪತ್ತೆ ಹಚ್ಚುವ ವಿಚಾರದಲ್ಲಿ ಸರ್ಕಾರ ಜನರ ಜೊತೆ ಚೆಲ್ಲಾಟವಾಡುತ್ತಿದೆ : ಡಿ.ಕೆ.ಸುರೇಶ್
ಅಧಿಕ ಬೆಲೆಗೆ ರೆಮ್ಡಿಸಿವಿಯರ್ ಮಾರಾಟ: ಸಿಸಿಬಿಯಿಂದ ಮೂವರ ಬಂಧನ
ಕೋವಿಡ್ 2ನೇ ಅಲೆ ಅಬ್ಬರ : ರಾಷ್ಟ್ರೀಯ ವಿಪತ್ತು ಘೋಷಣೆಗೆ ಈಶ್ವರ್ ಖಂಡ್ರೆ ಆಗ್ರಹ
ಕೋವಿಡ್ ನಿಯಂತ್ರಣ ವಿಷಯದಲ್ಲಿ ಸಚಿವ ಅಶೋಕ್, ಸುಧಾಕರ್ ನಡುವೆ ಶೀತಲ ಸಮರ
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಹಾವಳಿ : 8 ಜನರನ್ನು ಬಂಧಿಸಿದ ವಿಜಯಪುರ ಪೊಲೀಸ್