- Sunday 15 Dec 2019
ಕನಕದಾಸರ ಸಂದೇಶ ದೇಶಕ್ಕೆ ತಲುಪಿಸಿ
Team Udayavani, Nov 16, 2019, 11:30 AM IST
ಧಾರವಾಡ: ಕನಕದಾಸರು ಸೇರಿದಂತೆ ಅನೇಕ ಕನ್ನಡದ ಮಹಾನ್ ಸಂತ ಕವಿಗಳ ತತ್ವ, ಸಾಮಾಜಿಕ ನಿಲುವುಗಳನ್ನು ಇಡಿ ದೇಶಕ್ಕೆ ಎಲ್ಲ ಭಾಷೆಗಳಿಂದ ತಲುಪಿಸಬೇಕಾಗಿದೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ|ಶ್ರೀರಾಮ ಇಟ್ಟಣ್ಣವರ ಹೇಳಿದರು. ಕವಿವಿ ಕನಕ ಅಧ್ಯಯನ ಪೀಠವು ಕನಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ 532ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನಕದಾಸರ ಕೀರ್ತನೆ, ಕಾವ್ಯ ಮತ್ತು ಸಾಹಿತ್ಯವು ವೈಚಾರಿಕ ಚಿಂತನೆ, ಸಾಮಾಜಿಕ ನಿಲುವುಗಳನ್ನು ಹೊಂದಿದೆ. ಕೆಳಸ್ತರದ ವರ್ಗಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಕನಕದಾಸರ ಸಾಹಿತ್ಯ ಇಂದಿಗೂ ಪ್ರಸ್ತುತ. ಕನಕದಾಸರು ತಳವರ್ಗದ ಪ್ರತಿನಿಧಿಯಾಗಿ ಬಿಂಬಿತವಾಗಿದ್ದು, ಇಂದು ಅವರ ಕೀರ್ತನೆ, ಕಾವ್ಯ, ಸಾಹಿತ್ಯ ಎಲ್ಲವೂ ಪ್ರಸ್ತುತವಾಗಿದೆ ಎಂದರು.
ಕನಕ ಅಧ್ಯಯನ ಪೀಠದಿಂದ ಹೊರತಂದ ಡಾ| ಪಿ.ಆರ್. ಪಂಚಮುಖೀ ಬರೆದಿರುವ “ತತ್ವ ವೇದ ಬೇಸ್ಡ್ ಇನ್ ದಾಸ್ ಸಾಹಿತ್ಯ ವಿಥ್ ಅ ಫೋಕಸ್ ಆನ್ ದಿ ಕಾಂಟ್ರಾಬ್ಯುಶನ್ ಆಫ್ ಕನಕದಾಸ’, ಡಾ| ಚಂದ್ರಶೇಕರ ರೊಟ್ಟಿಗವಾಡ ರಚಿತ “ದಾಸ ಪರಂಪರೆ ಮತ್ತು ಕನಕದಾಸರು’, ಡಾ| ಕೆ.ಕೇಶವಶರ್ಮ ಬರೆದಿರುವ “ಕಾವ್ಯತತ್ವಗಳು ಮತ್ತು ಕನಕರ ಕಾವ್ಯ’ ಹಾಗೂ ಡಾ| ಬಸು ಬೇವಿನಗಿಡದ ರಚಿಸಿದ “ಕನಕದಾಸರು ಮತ್ತು ಮಧುರ ಚೆನ್ನರು’ ಪುಸ್ತಕಗಳನ್ನು ಕವಿವಿ ಪ್ರಭಾರ ಕುಲಪತಿ ಪ್ರೊ| ಎ.ಎಸ್. ಶಿರಾಳಶೆಟ್ಟಿ ಲೋಕಾರ್ಪಣೆಗೊಳಿಸಿದರು.
ಕನಕ ಅಧ್ಯಯನ ಪೀಠದ ಸಂಯೋಜಕ ಡಾ| ಬಿ.ವಿ. ಯಕ್ಕುಂಡಿಮಠ ಮಾತನಾಡಿದರು. ಕವಿವಿ ಪ್ರಭಾರ ಕುಲಪತಿ ಪ್ರೊ|ಎ.ಎಸ್. ಶಿರಾಳಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಸಿ.ಬಿ. ಹೊನ್ನು ಸಿದ್ಧಾರ್ಥ, ಪ್ರೊ| ಎನ್. ಎಂ. ಸಾಲಿ, ಪ್ರೊ| ಮಲ್ಲಿಕಾರ್ಜುನ ಪಾಟೀಲ, ಪ್ರೊ| ಜಿ.ಎಂ. ಹೆಗಡೆ, ಡಾ| ಎಸ್.ಟಿ. ಬಾಗಲಕೋಟಿ, ಡಾ| ಬಿ.ವಿ. ಯಕ್ಕುಂಡಿಮಠ, ಡಾ| ಸುಭಾಶಚಂದ್ರ ನಾಟೀಕರ, ಡಾ| ಸಿ.ಎಂ. ಕುಂದಗೋಳ, ಡಾ| ಧನವಂತ ಹಾಜವಗೋಳ, ಡಾ| ರುದ್ರೇಶ ಮೇಟಿ, ಡಾ| ವಿಶ್ವನಾಥ ಚಿಂತಾಮಣಿ, ಪ್ರೊ| ವೇದಮೂರ್ತಿ ಇದ್ದರು.
ಈ ವಿಭಾಗದಿಂದ ಇನ್ನಷ್ಟು
-
ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸತತ ಅಧ್ಯಯನ ಅಗತ್ಯ ಎಂದು ಎಸಿಪಿ ಎಂ.ಎನ್. ರುದ್ರಪ್ಪ ಹೇಳಿದರು. ಕ್ಲಾಸಿಕ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ...
-
ಧಾರವಾಡ: ಜಿಲ್ಲಾ ನ್ಯಾಯಾಲಯದ ಅಧೀನದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ಈಶಪ್ಪ ಕೆ. ಭೂತೆ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ...
-
ಧಾರವಾಡ: ಸಾರ್ವಜನಿಕರು ತಮಗೆ ಅಗತ್ಯವಿರುವ ಜಾತಿ, ಆದಾಯ ಮತ್ತು ರಹವಾಸಿ ಪ್ರಮಾಣಪತ್ರವನ್ನು ತಕ್ಷಣ ಪಡೆಯಲು ಅನುಕೂಲವಾಗುವಂತೆ ಸಾರ್ವಜನಿಕರಿಂದ ದಾಖಲೆ ಸಂಗ್ರಹಿಸಿ...
-
ಹುಬ್ಬಳ್ಳಿ: ಹೆಚ್ಚಿನ ಪ್ರಮಾಣದಲ್ಲಿ ಆಹಾರ ತ್ಯಾಜ್ಯ ಉತ್ಪತ್ತಿ ಮಾಡುವ ಹೋಟೆಲ್ಗಳು ಜೈವಿಕ ಅನಿಲ (ಬಯೋಗ್ಯಾಸ್) ಉತ್ಪಾದನಾ ಘಟಕ ಹೊಂದಬೇಕು ಎನ್ನುವ ಮಹಾನಗರ...
-
ಧಾರವಾಡ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರೈತಾಪಿ ಸಮದಾಯದ ಜೀವನಾಡಿ ಜಾನುವಾರುಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು...
ಹೊಸ ಸೇರ್ಪಡೆ
-
ಸುರತ್ಕಲ್: ಕೇಂದ್ರ ಸರಕಾರ ಫಾಸ್ಟ್ ಟ್ಯಾಗ್ ಕಡ್ಡಾಯ ಮುಂದೂಡಿದ್ದು ಶೇ 60ಕ್ಕೂ ಅ ಕ ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿಲ್ಲ. ಹೀಗಾಗಿ ಸುರತ್ಕಲ್ ಟೋಲ್ಕೇಂದ್ರದಲ್ಲಿ...
-
ಮಡಿಕೇರಿ: ರಾಷ್ಟ್ರದಲ್ಲಿ ಶೇ.35 ರಷ್ಟು ಯುವಜನರಿದ್ದು, ಯುವ ಜನರಿಂದ ದೇಶದ ಅಭಿವೃದ್ಧಿ ಸಾಧ್ಯ. ಜೊತೆಗೆ ರಾಷ್ಟ್ರದ ಚಿತ್ರಣವನ್ನು ಬದಲಾಯಿಸುವ ಶಕ್ತಿ ಯುವಜನರಿಗಿದೆ...
-
ಗ್ವಾಲಿಯರ್: ನಿಮಗೆ ಗನ್ ಲೈಸೆನ್ಸ್ ಬೇಕೇ? ಹಾಗಿದ್ದರೆ, ಗೋಶಾಲೆಯಲ್ಲಿರುವ ಹಸುಗಳಿಗೆ 10 ಹೊದಿಕೆಗಳನ್ನು ದೇಣಿಗೆ ನೀಡಿ! ಇಂಥದ್ದೊಂದು ನಿಯಮ ಮಧ್ಯಪ್ರದೇಶದ...
-
ಟೋಕಿಯೋ: ತಾಯಿ ಕಾಣದಾದ ತತ್ಕ್ಷಣ ಮಗು ಅಳಲು ಶುರುಮಾಡುತ್ತದೆ. ಒಂದು ನಿಮಿಷವೂ ಬಿಟ್ಟಿರುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ತಾಯಿಗೆ ಏನು ಮಾಡಲೂ ಸಾಧ್ಯವಾಗುವುದಿಲ್ಲ....
-
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿರುವುದನ್ನು ವಿರೋಧಿಸಿ ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಲ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ...