Udayavni Special

ಮುದ್ರಣಾಲಯ ಮಾಲೀಕರಿಗೆ ನೀತಿಪಾಠ

Team Udayavani, Feb 23, 2019, 11:07 AM IST

23-february-16.jpg

ಧಾರವಾಡ: ಚುನಾವಣೆಗಾಗಿ ಮಾದರಿ ನೀತಿ ಸಂಹಿತೆ ಜಾರಿಯಾದ ಮೇಲೆ ಯಾವುದೇ ಅಭ್ಯರ್ಥಿ, ಪಕ್ಷಗಳ ಕುರಿತು ಪ್ರಚಾರ ಸಾಮಗ್ರಿಗಳನ್ನು ಮುದ್ರಿಸುವ ಮೊದಲು ಮುದ್ರಣಾಲಯ ಮಾಲೀಕರಿಗೆ ಮಾದರಿ ನೀತಿ ಸಂಹಿತೆ ಬಗ್ಗೆ ಎಚ್ಚರವಿರಬೇಕು ಎಂದು ಡಿಸಿ ದೀಪಾ ಚೋಳನ್‌ ಹೇಳಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣಗಳ ಬಗ್ಗೆ ತಿಳಿವಳಿಕೆ ನೀಡಲು ಆಯೋಜಿಸಿದ್ದ ಜಿಲ್ಲೆಯ ಮುದ್ರಣಾಲಯಗಳ ಮಾಲೀಕರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುದ್ರಿಸಿದ ಬಗ್ಗೆ ಪ್ರತಿನಿತ್ಯ ತಪ್ಪದೇ ಅನುಬಂಧ “ಎ’ ಮತ್ತು “ಬಿ’ಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ನೋಡಲ್‌ ಅಧಿಕಾರಿಗೆ ಮಾಹಿತಿ ಸಲ್ಲಿಸಬೇಕು. ಮುದ್ರಣಾಲಯದಲ್ಲಿ ಚುನಾವಣೆಗೆ ಸಂಬಂ ಧಿಸಿದಂತೆ ಮುದ್ರಿಸುವ ಪ್ರತಿಯೊಂದು ಪ್ರಚಾರ ಸಾಮಗ್ರಿಯಲ್ಲಿ ಮುದ್ರಕರ ಹಾಗೂ ಪ್ರಕಾಶಕರ ಹೆಸರು, ವಿಳಾಸ ಮತ್ತು ಮುದ್ರಿಸಿದ ಪ್ರತಿಗಳ ಸಂಖ್ಯೆ ಕಡ್ಡಾಯವಾಗಿ ನಮೂದಿಸಿರಬೇಕು ಎಂದು ಸೂಚಿಸಿದರು.

ತಪ್ಪು ಮಾಹಿತಿ ಕೊಟ್ಟರೆ ಜೋಕೆ: ಮಾದರಿ ನೀತಿ ಸಂಹಿತೆ ನೋಡಲ್‌ ಅಧಿಕಾರಿಯಾಗಿರುವ ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಮುದ್ರಣಾಲಯಗಳ ಮಾಲೀಕರು ಪ್ರಚಾರ ಸಾಮಗ್ರಿ ಮುದ್ರಿಸಿದ ಬಗ್ಗೆ ತಪ್ಪು ಮಾಹಿತಿ ನೀಡಿದರೆ ಶಿಕ್ಷೆ ಮತ್ತು ದಂಡ ಎರಡೂ ಆಗುತ್ತದೆ ಎಂದರು.

ಮುದ್ರಣದ ಬಗ್ಗೆ ಮಾರುಕಟ್ಟೆ ದರಗಳನ್ನು ಶೀಘ್ರದಲ್ಲಿ ಜಿಲ್ಲಾ ಚುನಾವಣಾ ಧಿಕಾರಿಗಳು ನೀಡುತ್ತಾರೆ. ಆ ದರಗಳಿಗೆ ಅನುಗುಣವಾಗಿ ಅಭ್ಯರ್ಥಿ, ಪಕ್ಷಗಳಿಗೆ ಬಿಲ್‌ ನೀಡಬೇಕು. ಅಭ್ಯರ್ಥಿಗಳು ಪಡೆಯುವ ಬಿಲ್‌ಗ‌ಳಿಗೆ ಅವರು
ಚುನಾವಣೆಗಾಗಿ ನಾಮಪತ್ರದೊಂದಿಗೆ ಪ್ರತ್ಯೇಕ ಬ್ಯಾಂಕ್‌ ಖಾತೆ ವಿವರ ಸಲ್ಲಿಸಿರುತ್ತಾರೆ. ಆ ಖಾತೆ ಮೂಲಕವೇ ಹಣ ಪಡೆಯಬೇಕು. 20 ಸಾವಿರ ರೂ.ಗಿಂತ ಹೆಚ್ಚು ಬಿಲ್‌ಗ‌ಳಿದ್ದರೆ ಚೆಕ್‌ ಅಥವಾ ಡಿಡಿ ಮುಖಾಂತರ ಭರಿಸಿಕೊಳ್ಳಬೇಕು. ಚುನಾವಣೆಗೆ ಸಂಬಂಧಿತ ಖರ್ಚುಗಳೆಲ್ಲ ಅಭ್ಯರ್ಥಿಯು ಇದೇ ಉದ್ದೇಶಕ್ಕಾಗಿ ತೆಗೆದಿರುವ ಖಾತೆಯಿಂದ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.

ಮಾದರಿ ನೀತಿ ಸಂಹಿತೆ ಹಾಗೂ ಮುದ್ರಣಾಲಯಗಳು ಎಚ್ಚರ ವಹಿಸಬೇಕಾದ ಅಂಶಗಳ ಕುರಿತು ಮಾಹಿತಿ ಪ್ರತಿ ಮತ್ತು ಪ್ರತಿದಿನ ಮುದ್ರಣಾಲಯಗಳು ವರದಿ ಸಲ್ಲಿಸಬೇಕಾದ ನಮೂನೆ “ಎ’ ಮತ್ತು “ಬಿ ಪ್ರತಿಗಳನ್ನು ಸಭೆಯಲ್ಲಿ ನೀಡಲಾಯಿತು.

ಪ್ರಚಾರ ಸಾಮಗ್ರಿಯಲ್ಲಿ ಮುದ್ರಿಸುವ ವಿಷಯವು ಮಾದರಿ ನೀತಿ ಸಂಹಿತೆ ಉಲ್ಲಂಘಿಸುವುದಿಲ್ಲ ಎಂಬುದನ್ನು ಸ್ವತಃ ದೃಢೀಕರಿಸಿಕೊಳ್ಳಬೇಕು. ಯಾವುದೇ ಧರ್ಮ, ಜಾತಿ, ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಮತ್ತು ವೈಷಮ್ಯ ಉಂಟು ಮಾಡುವ ವಿಷಯ ಮುದ್ರಿಸಬಾರದು. ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ಅಂತಹ ಮುದ್ರಣಾಲಯ ಸೀಜ್‌ ಮಾಡಲಾಗುವುದು.
ದೀಪಾ ಚೋಳನ್‌, ಜಿಲ್ಲಾಧಿಕಾರಿ

ಮುದ್ರಣಾಲಯಗಳ ಮಾಲೀಕರು ಚುನಾವಣಾ ಪ್ರಚಾರ ಸಾಮಗ್ರಿಗಳ ಹೆಚ್ಚು ಪ್ರತಿ ಮುದ್ರಿಸಿ ಕಡಿಮೆ ತೋರಿಸುವ, ಬೇರೆಯವರ ಹೆಸರಿನಿಂದ ಮುದ್ರಿಸುವ ಅಥವಾ ಮರು ಮುದ್ರಿಸುವ ಕಾರ್ಯಕ್ಕೆ ಕೈಹಾಕಬಾರದು. ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಜಾಗೃತದಳ, ಸಮಿತಿ ರಚಿಸಿರುವುದರಿಂದ ಪ್ರತಿದಿನ ಅವಲೋಕನ ನಡೆಯುತ್ತದೆ.
ಸುರೇಶ್‌ ಇಟ್ನಾಳ, ಅಪರ ಜಿಲ್ಲಾಧಿಕಾರಿ

ಟಾಪ್ ನ್ಯೂಸ್

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತದ ಮೊದಲ ಎದುರಾಳಿ ಫ್ರಾನ್ಸ್‌

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತದ ಮೊದಲ ಎದುರಾಳಿ ಫ್ರಾನ್ಸ್‌

ಇಂದಿನಿಂದ ಶಿಕ್ಷಕರ ಕಪ್ಪುಪಟ್ಟಿ ಪ್ರತಿಭಟನೆ; ಶಾಲೆ, ತರಗತಿ ಬಹಿಷ್ಕಾರದ ಎಚ್ಚರಿಕೆ

ಇಂದಿನಿಂದ ಶಿಕ್ಷಕರ ಕಪ್ಪುಪಟ್ಟಿ ಪ್ರತಿಭಟನೆ; ಶಾಲೆ, ತರಗತಿ ಬಹಿಷ್ಕಾರದ ಎಚ್ಚರಿಕೆ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜಕೀಯದಲ್ಲಿ ನಶೆ ಗಲಾಟೆ!

ರಾಜಕೀಯದಲ್ಲಿ ನಶೆ ಗಲಾಟೆ!

ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ನಳಿನ್ ಕುಮಾರ್ ಕಟೀಲ್

ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ನಳಿನ್ ಕುಮಾರ್ ಕಟೀಲ್

ಆರ್ ಎಸ್ಎಸ್ ಏನು ಮಾಡುತ್ತಿದೆ ಎಂದು ತಿಳಿಯಲು ಎಚ್ ಡಿಕೆ ಶಾಖೆಗೆ ಬರಲಿ: ನಳಿನ್ ಕಟೀಲ್

ಆರ್ ಎಸ್ಎಸ್ ಏನು ಮಾಡುತ್ತಿದೆ ಎಂದು ತಿಳಿಯಲು ಎಚ್ ಡಿಕೆ ಶಾಖೆಗೆ ಬರಲಿ: ನಳಿನ್ ಕಟೀಲ್

cgcftgt

ಮತಾಂತರಕ್ಕೆ ಪ್ರಯತ್ನ ಆರೋಪ | ಭೈರಿದೇವರಕೊಪ್ಪ ಚರ್ಚ್‌ನ ಪಾಸ್ಟರ್‌ ಸೋಮು ಬಂಧನ 

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತದ ಮೊದಲ ಎದುರಾಳಿ ಫ್ರಾನ್ಸ್‌

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತದ ಮೊದಲ ಎದುರಾಳಿ ಫ್ರಾನ್ಸ್‌

ವಿಶ್ವ ಬಾಕ್ಸಿಂಗ್‌ ಕೂಟಕ್ಕೆ ತೆರಳಿದ ಭಾರತ

ವಿಶ್ವ ಬಾಕ್ಸಿಂಗ್‌ ಕೂಟಕ್ಕೆ ತೆರಳಿದ ಭಾರತ

ಇಂದಿನಿಂದ ಶಿಕ್ಷಕರ ಕಪ್ಪುಪಟ್ಟಿ ಪ್ರತಿಭಟನೆ; ಶಾಲೆ, ತರಗತಿ ಬಹಿಷ್ಕಾರದ ಎಚ್ಚರಿಕೆ

ಇಂದಿನಿಂದ ಶಿಕ್ಷಕರ ಕಪ್ಪುಪಟ್ಟಿ ಪ್ರತಿಭಟನೆ; ಶಾಲೆ, ತರಗತಿ ಬಹಿಷ್ಕಾರದ ಎಚ್ಚರಿಕೆ

ಆಸ್ಟ್ರೇಲಿಯದ ವೇಗಿ ಜೇಮ್ಸ್‌ ಪ್ಯಾಟಿನ್ಸನ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ

ಆಸ್ಟ್ರೇಲಿಯದ ವೇಗಿ ಜೇಮ್ಸ್‌ ಪ್ಯಾಟಿನ್ಸನ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.