ಕಡಲೆ ಖರೀದಿ ಕೇಂದ್ರಗಳಿಗೆ ಗ್ರಹಣ

13 ಕೇಂದ್ರಗಳಲ್ಲಿ ಖರೀದಿ ಆರಂಭ ಆಗೇ ಇಲ್ಲ | ಸಾಕಷ್ಟು ರೈತರು ನೋಂದಣಿ ಪ್ರಕ್ರಿಯೆಯಿಂದ ವಂಚಿತ

Team Udayavani, Apr 9, 2020, 11:25 AM IST

09-April-5

ಧಾರವಾಡ: ಹೊಸ ಎಪಿಎಂಸಿ ಆವರಣದಲ್ಲಿ ತೆರೆದಿರುವ ಕಡಲೆ ಖರೀದಿ ಕೇಂದ್ರ ಆರಂಭಗೊಳ್ಳದೇ ಮುಚ್ಚಿರುವುದು

ಧಾರವಾಡ: ಕೊರೋನಾ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಕಡಲೆ ಖರೀದಿಯನ್ನು ಮತ್ತೆ ಮುಂದುವರಿಸುವಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಆದೇಶ ಹೊರಡಿಸಿದ್ದರೂ ಸಹಕಾರಿ ಸಂಘಗಳು ಹಿಂದೇಟು ಹಾಕುತ್ತಿವೆ. ಏ.6ರಿಂದ ಖರೀದಿ ಮುಂದುವರಿಸುವಂತೆ ಏ.4ರಂದೇ ಆದೇಶಿಸಿದ್ದರೂ ಜಿಲ್ಲೆಯಲ್ಲಿ ತೆರೆದಿರುವ 13 ಕಡಲೆ ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗೇ ಇಲ್ಲ. ರೈತರಿಂದ ಕಡಲೇ ಖರೀದಿ ಪ್ರಕ್ರಿಯೆ ಆರಂಭವಾದ ಕೆಲವೇ ದಿನಗಳಲ್ಲೇ ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಿಂದ ಮಾ.31 ರವರೆಗೂ ಖರೀದಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸರಕಾರ ಆದೇಶ ನೀಡಲಾಗಿತ್ತು.

ಈ ಅವಧಿ ಮುಗಿದರೂ ಸಹ ಖರೀದಿ ಕೇಂದ್ರಗಳು ಆರಂಭವಾಗೇ ಇಲ್ಲ. ಏ.4ರಂದು ಆದೇಶ ಹೊರಡಿಸಿ ಏ.6ರಿಂದ ಖರೀದಿ ಪ್ರಕ್ರಿಯೆ ಮುಂದುವರಿಸುವಂತೆ ಸೂಚಿಸಿದ್ದರೂ ಆರಂಭವಾಗೇ ಆಗಿಲ್ಲ. ನೋಂದಣಿ ವಿಸ್ತರಣೆಗೆ ರೈತರ ಮನವಿ: ಫೆ.28ರಿಂದ ರೈತರ ನೋಂದಣಿ ಆರಂಭಗೊಳಿಸಿ ಮಾ.15ರವರೆಗೆ  ನೋಂದಣಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ರೈತರ ಹೊಲದ ಪಹಣಿಪತ್ರಗಳಲ್ಲಿ ತಾಂತ್ರಿಕ ದೋಷ ಪರಿಣಾಮ ಕಡಲೆ ಬೆಳೆ ನಮೂದು ಆಗದ ಕಾರಣ ಸಾಕಷ್ಟು ರೈತರ ನೋಂದಣಿ ಬಾಕಿ ಉಳಿದಿದೆ. ಹೀಗಾಗಿ ಮಾ.15ಕ್ಕೆ ಮುಗಿದಿದ್ದ ನೋಂದಣಿ ಪ್ರಕ್ರಿಯೆ ಏ.12ರವರೆಗೆ ವಿಸ್ತರಿಸಿ ಏ.24ರವರೆಗೆ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಆದರೆ ಕೊರೊನಾ ಎಫೆಕ್ಟ್ನಿಂದ ಮಾ.31 ರವರೆಗೆ ಖರೀದಿಗೆ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತಗೊಳಿಸಿದ್ದರಿಂದ ರೈತರ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಆದರೆ ಈಗ ಮತ್ತೆ ಖರೀದಿ ಕೇಂದ್ರ ಆರಂಭಿಸಲು ಸೂಚಿಸಿದೆ ಆದರೆ ನೋಂದಣಿಗೆ ಏ.12 ಕೊನೆಯ ದಿನವಾಗಿದೆ. ಇದರಿಂದ ಸಾಕಷ್ಟು ರೈತರು ನೋಂದಣಿ ಪ್ರಕ್ರಿಯೆಯಿಂದ ವಂಚಿತರಾಗುವ ಸಾಧ್ಯತೆ ಇದೆ. ನೋಂದಣಿ ಅವಧಿ ವಿಸ್ತರಿಸಬೇಕೆಂಬ ಬೇಡಿಕೆ ರೈತರಲ್ಲಿದೆ.

ಮಾಸ್ಕ್-ಸ್ಯಾನಿಟೈಸರ್‌ ಬಳಸಲು ಸೂಚನೆ: ಖರೀದಿ ಕೇಂದ್ರಗಳಲ್ಲಿ ಸಹಕಾರಿ ಸಂಘಗಳು ರೈತರಿಗೆ ನೀರು ಹಾಗೂ ಸ್ಯಾನಿಟೈಜರ್‌ ಬಳಸುವಿಕೆಯನ್ನು ಕಡ್ಡಾಯಗೊಳಿಸುವಂತೆ ಸೂಚಿಸಲಾಗಿದೆ. ಖರೀದಿ ಕೇಂದ್ರಗಳಲ್ಲಿ ಸಹಕಾರಿ ಸಂಘಗಳು ತಮ್ಮ ಅಧಿಕಾರಿ/ಸಿಬ್ಬಂದಿ ಮತ್ತು ಸಂಬಂಧಿಸಿದವರಿಗೆ ಸೋಪ್‌, ಗ್ಲೌಜ್‌, ಮಾಸ್ಕ್ ಸ್ಯಾನಿಟೈಸರ್‌ ಮತ್ತು ನೀರಿನ ವ್ಯವಸ್ಥೆ ಕಡ್ಡಾಯವಾಗಿ ಕಲ್ಪಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಸ್ಯಾನಿಟೈಜರ್‌ ಹಾಗೂ ಮಾಸ್ಕ್ಗಳ ಕೊರತೆ ಒಂದೆಡೆಯಾದರೆ ಅದಕ್ಕಾಗಿ ಮತ್ತಷ್ಟು ಹಣ ವ್ಯಯಿಸಬೇಕಾದ ಸ್ಥಿತಿಯಲ್ಲಿವೆ ಸಹಕಾರಿ ಸಂಘಗಳು. ಇದರ ಜತೆಗೆ ಖರೀದಿ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಫಲವಾದರೆ ಪೊಲೀಸ್‌ ಸಿಬ್ಬಂದಿ ವ್ಯವಸ್ಥೆ ಪಡೆಯಲು ತಿಳಿಸಲಾಗಿದೆ. ಒಂದು ವೇಳೆ ಖರೀದಿ ಕೇಂದ್ರದ ಸುತ್ತಮುತ್ತ ಕೊರೊನಾ ಪಾಸಿಟಿವ್‌ ಪ್ರಕರಣ ಕಂಡು ಬಂದರೆ ತಕ್ಷಣವೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಡ್ಡಾಯವಾಗಿ ಖರೀದಿ ಕೇಂದ್ರ ಸ್ಥಗಿತಗೊಳಿಸಲು ತಿಳಿಸಲಾಗಿದೆ.

ದಿನಕ್ಕೆ ಗರಿಷ್ಠ 50 ರೈತರಿಂದ ಖರೀದಿ
ಪ್ರತಿ ದಿನ ಬೆಳಿಗ್ಗೆ 25 ಮತ್ತು ಮಧ್ಯಾಹ್ನ 25ರಂತೆ ಒಟ್ಟು ಗರಿಷ್ಠ 50 ರೈತರಿಂದ ಮಾತ್ರ ಖರೀದಿಸಲು ಅವಕಾಶ ನೀಡಲಾಗಿದೆ. ಈ ವೇಳೆ ಖರೀದಿ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸದೇ ಒಬ್ಬರಿಂದ ಮತ್ತೂಬ್ಬರ ಮಧ್ಯೆ ಒಂದು ಮೀಟರ್‌ ಅಂತರದಲ್ಲಿ ಗೆರೆ ಎಳೆದು ಸಾಮಾಜಿತ ಅಂತರ ಕಾಯ್ದುಕೊಳ್ಳುವಂತೆ ಕಡ್ಡಾಯವಾಗಿ ಸೂಚಿಸಲಾಗಿದೆ. ಖರೀದಿ ಕೇಂದ್ರಗಳಲ್ಲಿ ರೈತರು ಮಾರಾಟ ಮಾಡಿದ ತಕ್ಷಣವೇ ಅಲ್ಲಿಂದ ತೆರಳಲು ಸೂಚಿಸಬೇಕು. ಖರೀದಿ ಕೇಂದ್ರಗಳಲ್ಲಿನ ಸಿಬ್ಬಂದಿ, ರೈತರು ಹಾಗೂ ಹಮಾಲರು ತಪ್ಪದೇ ಮಾಸ್ಕ್ ಕಡ್ಡಾಯವಾಗಿ ಧರಿಸಲು ಸೂಚಿಸಲಾಗಿದೆ.

ಏ.6ರಿಂದಲೇ ಕಡಲೇ ಖರೀದಿ ಮುಂದುವರಿಸುವಂತೆ ಆದೇಶ ಬಂದಿದ್ದು, ಅದರಂತೆ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಎಲ್ಲ ಖರೀದಿ ಕೇಂದ್ರಗಳಿಗೆ ಸೂಚಿಸಲಾಗಿದೆ. ಕೆಲವು ಕಡೆ ಖರೀದಿ ಕೇಂದ್ರಗಳು ಇನ್ನೂ ಆರಂಭವಾಗಿಲ್ಲ. ಎಲ್ಲ ಖರೀದಿ ಕೇಂದ್ರ ಆರಂಭಿಸಲು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗುವುದು.
ಸಚಿನ್‌ ಪಾಟೀಲ,
ಮ್ಯಾನೇಜರ್‌, ರಾಜ್ಯ ಮಾರಾಟ ಮಹಾಮಂಡಳ

ಶಶಿಧರ್‌ ಬುದ್ನಿ

ಟಾಪ್ ನ್ಯೂಸ್

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ಘಟನೆ

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ನಡೆದ ಘಟನೆ

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಂದ್ರೆ ಕಾವ್ಯದಲ್ಲಿ ಮಹಿಳಾ ಅಂತಃಕರಣದ ಛಾಪು

ಬೇಂದ್ರೆ ಕಾವ್ಯದಲ್ಲಿ ಮಹಿಳಾ ಅಂತಃಕರಣದ ಛಾಪು

ಡಿ.ಕೆ.ಶಿವಕುಮಾರ್ ಆಪ್ತ ಯು.ಬಿ.ಶೆಟ್ಟಿ ಮನೆ ಮೇಲೆ ಐಟಿ ದಾಳಿ

ಡಿ.ಕೆ.ಶಿವಕುಮಾರ್ ಆಪ್ತ ಯು.ಬಿ.ಶೆಟ್ಟಿ ಮನೆ ಮೇಲೆ ಐಟಿ ದಾಳಿ

‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

ಧಾರವಾಡ: ಅಖಿಲ ಭಾರತೀಯ ಆರೆಸ್ಸೆಸ್ ಬೈಠಕ್ ಗೆ ಚಾಲನೆ

ಧಾರವಾಡ: ಅಖಿಲ ಭಾರತೀಯ ಆರೆಸ್ಸೆಸ್ ಬೈಠಕ್ ಗೆ ಚಾಲನೆ

siddaramaiah

ಜನತಾ ನ್ಯಾಯಾಲಯದ ಮುಂದೆ ಚರ್ಚೆಗೆ ಭಯವೇಕೆ : ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ

MUST WATCH

udayavani youtube

ಭತ್ತ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಅಧಿಕ ಆದಾಯಕ್ಕೊಂದು ದಾರಿ

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

ಹೊಸ ಸೇರ್ಪಡೆ

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.